Narendra Modi: ತೊಂದರೆಗೀಡಾದ ಜನರ ಸಹಾಯಕ್ಕೆ ಪ್ರಧಾನಿ ಮೋದಿ ಎಂದೂ ಮುಂದು!

ಈ ಮೂಲಕ ಪ್ರಧಾನಿ ಮೋದಿ ಆಕ್ರಮಣಕಾರಿ ರಾಜಕಾರಣಿ ಮಾತ್ರವಲ್ಲದೆ ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುವ ಮನಸ್ಸನ್ನು ಹೊಂದಿದ್ದಾರೆ ಎಂಬುದು ತಿಳಿಯುತ್ತದೆ. ಅಲ್ಲದೆ, ಈ ಕೆಲವು ಕಥೆಗಳು ಅವರ ಮನಸ್ಥಿತಿಯನ್ನು ಪ್ರತಿನಿಧಿಸುತ್ತವೆ.

ನರೇಂದ್ರ ಮೋದಿ.

ನರೇಂದ್ರ ಮೋದಿ.

  • Share this:
ಪ್ರಧಾನಿ ನರೇಂದ್ರ ಮೋದಿ ಅವರ ರಾಜಕೀಯ ಶತ್ರುಗಳು ಹಾಗೂ ವಿಮರ್ಶಕರು ಅವರಿಗೆ ಜನರ ಮೇಲೆ ಪ್ರೀತಿ ಇಲ್ಲ..ಅವರಿಗೆ ಹೃದಯವಿಲ್ಲ...ಬಡಜನರ ಬಗ್ಗೆ ಅಂತಃಕರಣ ಇಲ್ಲ ಎಂಬಂತಹ ಚಿತ್ರಣವನ್ನು ಸೃಷ್ಟಿ ಮಾಡಿದ್ದಾರೆ. ಆದರೆ, ವಾಸ್ತವದಲ್ಲಿ ಪ್ರಧಾನಿ ಮೋದಿ ಯಾರ ಮೇಲೂ ಪ್ರೀತಿಯನ್ನು ಕಳೆದುಕೊಂಡಿಲ್ಲ ಎಂಬುದೇ ವಾಸ್ತವ. ಮೋದಿಯ ನಿಜವಾದ ಚಿತ್ರಣವು ಅವರ ಕಣ್ಣೀರಿನಲ್ಲಿಯೂ ರಾಜಕೀಯವನ್ನು ನೋಡುವ ಅವರ ವಿಮರ್ಶಕರು ರಚಿಸಿದ್ದಕ್ಕಿಂತ ದೂರವಿದೆ. ಅಧಿಕೃತವಾಗಿ ಮತ್ತು ವೈಯಕ್ತಿಕ ಮಟ್ಟದಲ್ಲಿಯೂ ಲಕ್ಷಾಂತರ ಜನರಿಗೆ ಮೋದಿ ಸಹಾಯಕವಾಗಿದ್ದಾರೆ. ಜನರ ದುಃಖದ ಸಮಯದಲ್ಲಿ ಮೋದಿ ಜನರ ಜೊತೆಗೆ ಇದ್ದಾರೆ. ಹೀಗೆ ಪ್ರಧಾನಿ ಮೋದಿ ಜನರ ಕಷ್ಟಕ್ಕೆ ಸ್ಪಂದಿಸಿದ ಸಾವಿರ ಕಥೆಗಳಿವೆ. ಆದರೆ, ಅವು ಸಾರ್ವಜನಿಕ ವಲಯದಲ್ಲಿ ಕಾಣಿಸಿಕೊಳ್ಳುವುದು ವಿರಳ. ಅಂತಹ ವಿಷಯಗಳಿಗೆ ಯಾವುದೇ ಪ್ರಚಾರವನ್ನು ನೀಡಲು ಮೋದಿ ಅವರೇ ಬಯಸುವುದಿಲ್ಲ. ಅವರ ಪ್ರೀತಿಯ ಮತ್ತು ಸಹಾಯದ ಫಲಾನುಭವಿಗಳಾದವರು ಸಹ ಹಾಗೆ ಮಾಡುವುದಿಲ್ಲ ಏಕೆಂದರೆ ಜಗತ್ತು ಅದಕ್ಕೆ ಹೇಗೆ ಪ್ರತಿಕ್ರಿಯಿಸುತ್ತದೆ ಮತ್ತು ಪ್ರಧಾನಿ ಮೋದಿ ಅದನ್ನು ಹೇಗೆ ತೆಗೆದುಕೊಳ್ಳುತ್ತಾರೆ ಎಂಬ ಭಯದಿಂದ.

ಇತ್ತೀಚೆಗೆ ಟಿವಿ ನಿರೂಪಕಿ ಮತ್ತು ಪತ್ರಕರ್ತೆ ರುಬಿಕಾ ಲಿಯಾಕತ್ ಅವರು ಟ್ವೀಟ್ ಮಾಡಿದ್ದು, ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಬರೆದ ಪತ್ರವೊಂದನ್ನು ಉಲ್ಲೇಖಿಸಲಾಗಿದೆ ಮತ್ತು ಅವರು ತೊಂದರೆಗೀಡಾದಾಗ ಪ್ರಧಾನಿ ಮೋದಿ ಅವರೊಂದಿಗೆ ನಿಂತಿದ್ದಕ್ಕಾಗಿ ಅವರಿಗೆ ಧನ್ಯವಾದ ಅರ್ಪಿಸಿದ್ದರು. ರುಬಿಕಾ ಅವರ ತಾಯಿ ಡಾ. ಫಾತ್ಮಾ ಲಿಯಾಕತ್ ಅವರು ಮೇ 28 ರಂದು ನಿಧನರಾಗಿದ್ದರು. ಈ ವೇಳೆ ಪ್ರಧಾನಿ ಅವರಿಗೆ ಕಳುಹಿಸಿದ ಸಂತಾಪ ಸಂದೇಶವು ಕೇವಲ ಔಪಚಾರಿಕವಲ್ಲ. ಏಕೆಂದರೆ ಮೋದಿ ಡಾ ಫಾತಿಮಾ ಅವರ ವ್ಯಕ್ತಿತ್ವದ ಬಗ್ಗೆ ಪ್ರಸ್ತಾಪಿಸಿದ್ದರು.

ರುಬಿಕಾ ಅವರನ್ನು ನಾನು ಬಹಳ ದಿನಗಳಿಂದ ಬಲ್ಲೆ. ನಾವು ಒಂದೇ ಮಾಧ್ಯಮ ಸಂಸ್ಥೆಯ ವಿಭಿನ್ನ ಚಾನೆಲ್‌ಗಳಿಗಾಗಿ ಕೆಲಸ ಮಾಡುತ್ತಿದ್ದೇವೆ. ನಾನು ಆಗಾಗ್ಗೆ ಲಿಫ್ಟ್​ನಲ್ಲಿ ಅವರ ಜೊತೆ ಮಾತನಾಡಿದ್ದೇನೆ. ಅವರ ತಾಯಿ ತೀರಿಕೊಂಡಾಗ, ನಾನು ರುಬಿಕಾಳಿಗೆ ಕರೆ ಮಾಡಬೇಕು ಎಂದು ಯೋಚಿಸಿದ್ದೆ. ಆಕೆ ತಾಯಿಯ ಸಾವು ಆಕೆಗೆ ನಿಜಕ್ಕೂ ದೊಡ್ಡ ವ್ಯಯಕ್ತಿಕ ನಷ್ಟ.

ಪತ್ರಕರ್ತ ರುಬಿಕಾ ಅವರ ತಾಯಿ ತೀವ್ರ ಅಸ್ವಸ್ಥರಾಗಿದ್ದ ಸಂದರ್ಭದಲ್ಲಿ ಪ್ರಧಾನಿ ಮೋದಿ, ಅವರಿಗೆ ಸಹಾಯ ಮಾಡಲು ಮುಂದೆ ಬಂದರು. ನಾನು ರುಬಿಕಾ ಅವರಿಗೆ ಕರೆ ಮಾಡಿದ್ದಾಗ ಪಿಎಂ ಮೋದಿ ಅವರಿಗೆ ಬರೆದ ಪತ್ರದ ಹಿಂದಿನ ಕಥೆಯ ಬಗ್ಗೆಯೂ ನನಗೆ ತಿಳಿಯಿತು. ಮೇ 2 ರಂದು, ರುಬಿಕಾ ಅವರ ತಾಯಿ ಇದ್ದಕ್ಕಿದ್ದಂತೆ ತೀವ್ರ ಅಸ್ವಸ್ಥರಾದರು. ರುಬಿಕಾ ಇದರ ಬಗ್ಗೆ ತಿಳಿದಾಗ, ಅವಳು ತನ್ನ ಕುಟುಂಬ ವಾಸಿಸುತ್ತಿದ್ದ ಉದಯಪುರವನ್ನು ತಲುಪಿದ್ದರು. ತಾಯಿ ಜೈವಿಕ ವಿಜ್ಞಾನದಲ್ಲಿ ಪಿಎಚ್‌ಡಿ ಪಡೆದಿದ್ದಾರೆ ಮತ್ತು ಜಲವಾಸಿ ಪ್ರಾಣಿಗಳ ಮೇಲೆ ಹಾನಿಕಾರಕ ಲೋಹಗಳ ಪರಿಣಾಮವನ್ನು ಸಂಶೋಧಿಸುತ್ತಿದ್ದಾರೆ.

ಆರಂಭದಲ್ಲಿ, ರುಬಿಕಾ ಅವರು ರಂಜಾನ್ ತಿಂಗಳ ಉಪವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಅವರ ತಾಯಿ ಜಠರದ ಉರಿತದಿಂದ ಬಳಲುತ್ತಿದ್ದಾರೆ ಮತ್ತು ವಾಂತಿ ಸಾಮಾನ್ಯ ಲಕ್ಷಣವಾಗಿದೆ ಎಂದು ಭಾವಿಸಿದ್ದರು. ಆದರೆ ಆಕೆಯ ಸ್ಥಿತಿ ಹದಗೆಡುತ್ತಲೇ ಇತ್ತು ಮತ್ತು ಆಕೆಯ ಮೂತ್ರಪಿಂಡ, ಪಿತ್ತಜನಕಾಂಗ ಹಾಗೂ ಹೃದಯವು ಸೋಂಕಿನಿಂದ ಬಾಧಿಸಿ ಬಹು ಅಂಗಾಂಗ ವೈಫಲ್ಯದ ಪ್ರಕರಣದಂತೆ ಕಂಡಿತ್ತು.

ಕೊರೋನಾ ಸಾಂಕ್ರಾಮಿಕ ಉತ್ತುಂಗದಲ್ಲಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿರುವುದರಿಂದ ಕೊರೋನಾ ಸೋಂಕು ತಗುಲಿರುವ ಸಾಧ್ಯತೆಯನ್ನೂ ಸಹ ತಳ್ಳಿಹಾಕುವಂತಿಲ್ಲ. ಈ ವೇಳೆ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ವೈದ್ಯರು ಮೇದೋಜ್ಜೀರಕ ಗ್ರಂಥಿಯ ಉರಿಯೂತದಿಂದ ಬಳಲುತ್ತಿದ್ದಾರೆ ಎಂದು ಹೇಳಿದ್ದಾರೆ. ಅಂದರೆ ಮೇದೋಜ್ಜೀರಕ ಗ್ರಂಥಿಯು ಕೆಟ್ಟ ಪರಿಣಾಮ ಬೀರುತ್ತದೆ.

ರುಬಿಕಾ ಅವಳ ತಂಗಿ ಅಂಜುಮ್ ಮತ್ತು ಜೈವಿಕ ವಿಜ್ಞಾನದ ವಿದ್ವಾಂಸರಾದ ತಾಯಿ ಕೂಡ ಈ ರೋಗದ ಬಗ್ಗೆ ಏನೆಂದು ತಿಳಿದಿದ್ದರು. ಇಬ್ಬರು ಸಹೋದರಿಯರು ತಮ್ಮ ತಂದೆ ಲಿಯಾಕತ್ ಅಮರ್ ಅವರನ್ನು ಮನೆಯಲ್ಲಿಯೇ ಇರಬೇಕೆಂದು ಕೇಳಿದ್ದರು ಮತ್ತು ಸಹೋದರಿಯರಿಬ್ಬರೂ ತಮ್ಮ ತಾಯಿಯೊಂದಿಗೆ ಉದಯಪುರದ ಪ್ಯಾರಾಸ್ ಜೆಕೆ ಆಸ್ಪತ್ರೆಯ ಐಸಿಯುನಲ್ಲಿದ್ದರು.

ಇದು 20 ಮೇ 2021 ರ ಶುಕ್ರವಾರ ಈದ್ ಆಗಿತ್ತು. ಆದರೆ, ಈದ್‌ನ ಸಂತೋಷವನ್ನು ಅನುಭವಿಸುವ ಮನಸ್ಥಿಯಲ್ಲಿ ಇಬ್ಬರೂ ಸಹೋದರಿಯರೂ ಇರಲಿಲ್ಲ. ಈ ವೇಳೆ ರುಬಿಕಾ ಮೊಬೈಲ್​ಗೆ ಅಪರಿಚಿತ ನಂಬರ್​ನಿಂದ ಕರೆ ಬಂದಿತ್ತು. ಹೀಗಾಗಿ ಆಕೆ ಅದನ್ನು ಸ್ವೀಕರಿಸಬೇಕೆ? ಅಥವಾ ಬೇಡಬೇ? ಎಂದು ಗೊಂದಲಕ್ಕೆ ಈಡಾಗಿದ್ದರು. ಕರೆ ಮಾಡಿದ ನಂತರ ಪ್ರಧಾನಿ ನರೇಂದ್ರ ಮೋದಿ ರುಬಿಕಾಳ ಜೊತೆ ಮಾತನಾಡಲು ಭಯಸಿದ್ದಾರೆ ಎಂದು ತಿಳಿಸಲಾಯಿತು.

ಪಿಎಂ ಮೋದಿ ರುಬಿಕಾ ಅವರಿಗೆ ನೇರವಾಗಿ ಕರೆ ಮಾಡುತ್ತಾರೆ ಎಂದು ಆಕೆ ಊಹಿಸಿರಲಿಲ್ಲ. ಆದರೆ, ಆ ಕಡೆಯಿಂದ ಮಾತನಾಡಿದ್ದ ಮೋದಿ ಆಕೆಯಲ್ಲಿ ಧೈರ್ಯ ಮತ್ತು ಭರವಸೆ ತುಂಬಿದ್ದರು. ಅಲ್ಲದೆ, ಆಕೆಯ ತಾಯಿಯ ಚಿಕಿತ್ಸೆಗೆ ಎಲ್ಲಾ ಸಹಾಯಗಳನ್ನೂ ನೀಡುವ ಆಶ್ವಾಸನೆ ನೀಡಿದ್ದರು. ಅದರಂತೆ  ರುಬಿಕಾ ಅವರ ತಾಯಿಗೆ ಮೋದಿ ಉತ್ತಮ ಚಿಕಿತ್ಸೆ ದೊರಕುವಂತೆ ನೋಡಿಕೊಂಡರು. ಎಲ್ಲಾ ಅಗತ್ಯ ಔಷಧಿಗಳು ಮತ್ತು ಅತ್ಯುತ್ತಮ ವೈದ್ಯರ ಸಲಹೆಯನ್ನು ಅವಳ ತಾಯಿ ಫಾತ್ಮಾ ಅವರಿಗೆ ಲಭ್ಯವಾಗುವಂತೆ ಮಾಡಲಾಯಿತು.

ಫಾತ್ಮಾ ದಾಖಲಾದ ಉದಯಪುರ ಆಸ್ಪತ್ರೆಯ ವೈದ್ಯರೊಂದಿಗೆ ಏಮ್ಸ್ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ಮತ್ತು ಪಿತ್ತಜನಕಾಂಗ ಮತ್ತು ಪಿತ್ತರಸ ವಿಜ್ಞಾನ ಸಂಸ್ಥೆಯ ವೈದ್ಯರು ಸಹಾಯಕ್ಕೆ ಬಂದರು. ಅವರಿಗೆ ಅಗತ್ಯವಿರುವ ಯಾವುದೇ ಔಷಧಿಯನ್ನು ಪೂರೈಸಲು ಭಾರತದ ಡ್ರಗ್ಸ್ ಕಂಟ್ರೋಲರ್ ಜನರಲ್ ಕಚೇರಿ ಸಿದ್ಧವಾಗಿತ್ತು. ಫಾತ್ಮಾ ಲಿಯಾಕತ್ 26 ದಿನಗಳ ಕಾಲ ಜೀವಂತವಾಗಿದ್ದರು. ಆದರೆ ಅಂತಿಮವಾಗಿ ಮೇ 28 ರಂದು ಏರ್ ಆಂಬುಲೆನ್ಸ್ ಮೂಲಕ ದೆಹಲಿಗೆ ಕರೆತರಲು ಬಹುತೇಕ ಸಿದ್ಧತೆ ನಡೆದಾಗ ಅವರು ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಸಾವನ್ನಪ್ಪಿದ್ದರು.

ಫಾತ್ಮಾ ಲಿಯಾಕತ್ ಅವರ ಸಾವು ಕುಟುಂಬಕ್ಕೆ ದೊಡ್ಡ ಹೊಡೆತವಾಗಿದೆ ನಿಜ. ಆದರೆ, ಇಂತಹ ಕಷ್ಟದ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರ ಸಹಾಯಕ್ಕೆ ನಿಂತದ್ದನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಹೀಗಾಗಿ ಮೋದಿಯ ಬಗ್ಗೆ ರುಬಿಕಾ ಅವರ ಅನುಭವ ಇತರ ಮುಸ್ಲಿಮರಿಗಿಂತ ಭಿನ್ನವಾಗಿತ್ತು

ಮುಸ್ಲಿಂ ಸಮುದಾಯಕ್ಕೆ ಖಳನಾಯಕನೆಂದು ಹೇಳಲಾಗುವ ಪಿಎಂ ಮೋದಿಯ ಹೊಸ ಮುಖವನ್ನು ರುಬಿಕಾ ಮತ್ತು ಅವರ ಕುಟುಂಬ ನೋಡಬೇಕಾಯಿತು. ಮುಸ್ಲಿಮರು ಮೋದಿಗೆ ಭಯಪಡುತ್ತಾರೆ ಎಂದು ಹೇಳಲಾಗುತ್ತದೆ. ಆದರೆ ಈ ಎಲ್ಲದಕ್ಕೂ ವಿರುದ್ಧವಾಗಿ, ಅವರ ಕುಟುಂಬಗಳು ತೀವ್ರ ಸಂಕಷ್ಟದಲ್ಲಿದ್ದಾಗ, ಅವರಿಗೆ ಸಹಾಯ ಮಾಡಲು ಪಿಎಂ ಮೋದಿ ಮುಂದೆ ಬಂದರು. ಮುಸ್ಲಿಂ ಮತಗಳ ದಲ್ಲಾಳಿಗಳಿಂದ ಖಳನಾಯಕನಾಗಿ ಪ್ರಕ್ಷೇಪಿಸಲ್ಪಟ್ಟಿರುವ ಫಾತ್ಮಾ ಮತ್ತು ಕುಟುಂಬಕ್ಕೆ ಸಹಾಯ ಮಾಡಿದ್ದರು.

ಪ್ರಸ್ತುತ ದೇಶದ ಮಾಹಿತಿ ಆಯುಕ್ತರಾಗಿ ಕೆಲಸ ಮಾಡುತ್ತಿರುವ ಉದಯ್ ಮಹೂರ್ಕರ್ ಕೂಡ ಇದೇ ರೀತಿಯ ಅನುಭವವನ್ನು ಅನುಭವಿಸಿದ್ದಾರೆ. ಮಹೂರ್ಕರ್ ಅವರು ಮೂರು ದಶಕಗಳಿಂದ ಮೋದಿಯನ್ನು ಬಲ್ಲವರು. ದೇಶದಲ್ಲಿ ಕೊರೋನಾ ಎರಡನೇ ಅಲೆ ಉಲ್ಭಣವಾಗುತ್ತಿದ್ದ ಸಂದರ್ಭದಲ್ಲಿ ಉದಯ್ ಅವರ ಪತ್ನಿ ಸ್ಮಿತಾ ಮಾಹುರ್ಕರ್ ಅವರು ಏಪ್ರಿಲ್​ನಲ್ಲಿ ಕೊರೋನಾಗೆ ತುತ್ತಾಗಿದ್ದರು. ಈ ವೇಳೆ ಅವರ ದೇಹದಲ್ಲಿ ಆಮ್ಲಜನಕದ ಮಟ್ಟ 95 ರಿಂದ 55ಕ್ಕೆ ಇಳಿದಿತ್ತು. ದೆಹಲಿಯಲ್ಲೂ ಆಸ್ಪತ್ರೆಗಳ ಸ್ಥಿತಿ ಹೇಳತೀರದ್ದಾಗಿತ್ತು.

ಇದನ್ನೂ ಓದಿ : HD Kumaraswamy| ಪೆಟ್ರೋಲ್ ಅನ್ನು GSTಗೆ ಸೇರಿಸಿದರೆ ರಾಜ್ಯದ ಆದಾಯಕ್ಕೆ ಕುತ್ತು; ಕಾಂಗ್ರೆಸ್-ಬಿಜೆಪಿ ವಿರುದ್ಧ ಕುಮಾರಸ್ವಾಮಿ ಕಿಡಿ

ತೊಂದರೆಗೀಡಾಗಿದ್ದ ಉದಯ್ ಕೂಡಲೇ ಪಿಎಂ ಮೋದಿ ವೈಯಕ್ತಿಕ ಸಹಾಯಕರಿಗೆ ಮಾಹಿತಿ ನೀಡಿದರು ಮತ್ತು ಅವರ ಹೆಂಡತಿಯ ಸ್ಥಿತಿಯ ಬಗ್ಗೆ ವಿವರಿಸಿದರು. ಈ ಬಗ್ಗೆ ತಕ್ಷಣವೇ ಪಿಎಂ ಮೋದಿಗೆ ಮಾಹಿತಿ ನೀಡಲಾಯಿತು. ಹಿರಿಯ ಪತ್ರಕರ್ತ ಉದಯ್ ಮಹೂರ್ಕರ್ ಅವರ ಪತ್ನಿಯ ಪ್ರಾಣ ಉಳಿಸಲು ಮೋದಿ ಮುಂದೆ ಬಂದರು.

ಮುಂದಿನ ಐದು ನಿಮಿಷಗಳಲ್ಲಿ ಉದಯ್ ಮಹೂರ್ಕರ್ ಅವರಿಗೆ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಮತ್ತು ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯ ಅಧೀಕ್ಷಕ ಎ.ಕೆ.ಸಿಂಗ್ ರಾಣಾ ಅವರಿಂದ ಕರೆ ಬಂತು. ಏಪ್ರಿಲ್ 7 ರಂದು, ಸ್ಮಿತಾ ಮಾಹುರ್ಕರ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಮತ್ತು ಏಪ್ರಿಲ್ 26 ರಂದು ಅವರು ಕೊರೋನಾದಿಂದ ಗುಣಮುಖರಾಗಿ ತಮ್ಮ ಮನೆಗೆ ಮರಳಿದರು. ಅವರು 19 ದಿನಗಳ ಕಾಲ ಆಸ್ಪತ್ರೆಯಲ್ಲಿಯೇ ಇದ್ದರು. ಈ ಮಧ್ಯೆ, ಪಿಎಂ ಮೋದಿ ಅವರ ಸ್ಥಿತಿಯನ್ನು ತಿಳಿದುಕೊಳ್ಳಲು ಎರಡು ಬಾರಿ ಕರೆ ಮಾಡಿದರು ಮತ್ತು ಅವರೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿದ್ದರು.

ಇದನ್ನೂ ಓದಿ: Corona Vaccine: ಲಸಿಕೆ ಹಾಕಿಸಿಕೊಂಡರೆ 20 ಕೆ.ಜಿ. ಅಕ್ಕಿ ಫ್ರೀ..!; ವ್ಯಾಕ್ಸಿನ್​ಗಾಗಿ ಮುಗಿಬಿದ್ದ ಜನರು

ಮೋದಿ ತಮ್ಮ ವಿಮರ್ಶಕರ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸುತ್ತಾರೆ ಎಂಬುದಕ್ಕೂ ಕೊರೋನಾ ಕಾಲ ನಿದರ್ಶನವಾಗಿದೆ. ದೆಹಲಿಯ ಹಿರಿಯ ಪತ್ರಕರ್ತರೊಬ್ಬರು ಇದೇ ಅನುಭವವನ್ನು ಹಂಚಿಕೊಂಡಿದ್ದಾರೆ. ಕೇಂದ್ರದ ಜನರನ್ನು ವಿರೋಧಿಸುವ ಇಂಗ್ಲಿಷ್ ಡೈಲಿಯ ರೆಸಿಡೆಂಟ್ ಎಡಿಟರ್ ಈ ಪತ್ರಕರ್ತ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಪಿಎಂ ಮೋದಿ ಅವರ ಅನಾರೋಗ್ಯದ ಬಗ್ಗೆ ಸಹ ಪತ್ರಕರ್ತರ ಮೂಲಕ ತಿಳಿದುಕೊಂಡರು. ಈ ವೇಳೆ ಸ್ವತಃ ಪ್ರಧಾನಿ ಮೋದಿ ಅವರಿಗೆ ಕರೆ ಮಾಡಿ ಅಗತ್ಯ ಸೌಲಭ್ಯಗಳನ್ನು ಒದಗಿಸಿಕೊಟ್ಟಿದ್ದರು.

ಬಡ ಮಕ್ಕಳ ಆರೋಗ್ಯದ ಬಗ್ಗೆಯೂ ಮೋದಿ ಕಾಳಜಿ ವಹಿಸುತ್ತಾರೆ. ಕೊರೋನಾ ಸಂದರ್ಭದಲ್ಲಿ ನೂರಾರು ಜನರಿಗೆ ಸ್ವತಃ ಮೋದಿ ಕರೆ ಮಾಡಿ ಅವರಿಗೆ ಸಹಾಯ ಹಸ್ತ ಚಾಚಿದ್ದಾರೆ. ಆದರೆ, ಇದು ಎಲ್ಲಿಯೂ ಸುದ್ದಿಯಾಗಿಲ್ಲ. ಪ್ರಧಾನಿ ಮೋದಿ ಇಂತಹ ವಿಚಾರಗಳಿಂದ ಪ್ರಚಾರ ಭಯಸಿಲ್ಲ ಮತ್ತು ಸಂಷಕ್ಟದಲ್ಲಿದ್ದವರಿಗೆ ಸಹಾಯ ಹಸ್ತ ಚಾಚಿದ್ದಾರೆ ಎಂಬುದಕ್ಕೆ ಈ ಘಟನೆಗಳು ಸಾಕ್ಷಿ ನುಡಿಯುತ್ತವೆ. ಈ ಮೂಲಕ ಪ್ರಧಾನಿ ಮೋದಿ ಆಕ್ರಮಣಕಾರಿ ರಾಜಕಾರಣಿ ಮಾತ್ರವಲ್ಲದೆ ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುವ ಮನಸ್ಸನ್ನು ಹೊಂದಿದ್ದಾರೆ ಎಂಬುದು ತಿಳಿಯುತ್ತದೆ. ಅಲ್ಲದೆ, ಈ ಕೆಲವು ಕಥೆಗಳು ಅವರ ಮನಸ್ಥಿತಿಯನ್ನು ಪ್ರತಿನಿಧಿಸುತ್ತವೆ.

(ಲೇಖಕರು-ಬ್ರಜೇಶ್ ಕುಮಾರ್​ ಸಿಂಗ್)
Published by:MAshok Kumar
First published: