Chandrayaan 2 Landing Live: ಬೆಂಗಳೂರಿಗೆ ಪ್ರಧಾನಿ ಮೋದಿ ಆಗಮನ

Chandrayaan 2 Landing Live Updates: ವಿಶ್ವದ ಕೆಲವೇ ದೇಶಗಳು ಮಾತ್ರ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡಿವೆ. ಈ ಪೈಕಿ ರಷ್ಯಾ, ಅಮೆರಿಕ, ಚೀನಾ ದೇಶಗಳು ಈ ಹೆಗ್ಗಳಿಕೆಗೆ ಪಾತ್ರವಾಗಿವೆ.

ಪ್ರಧಾನಿ ಮೋದಿ

ಪ್ರಧಾನಿ ಮೋದಿ

  • News18
  • Last Updated :
  • Share this:
    ಬೆಂಗಳೂರು: ಭಾರತದ ಬಹುನಿರೀಕ್ಷಿತ ಯೋಜನೆ ಚಂದ್ರಯಾನ-2 (ಲ್ಯಾಂಡರ್-ವಿಕ್ರಮ್) ಚಂದ್ರನ ಮೇಲೆ ಇಳಿಯಲು ಕ್ಷಣಗಣನೆ ಶುರುವಾಗಿದೆ. ಇಲ್ಲಿಯತನಕ ವಿಶ್ವದ ಯಾವುದೇ ಮುಂದುವರೆದ ದೇಶವೂ ತಲುಪದ ಚಂದ್ರನ ದಕ್ಷಿಣ ಧ್ರುವ ಪ್ರದೇಶತ್ತ ಭಾರತವೂ ಮುಖ ಮಾಡಲಿದೆ. ಇದೇ ಪ್ರದೇಶದಲ್ಲಿ ಸೆಪ್ಟೆಂಬರ್ 7ರ ಮಧ್ಯರಾತ್ರಿ 1:30ರಿಂದ 2:30ರ ನಡುವೆ ಇಳಿಯಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಘೋಷಿಸಿದೆ.

    ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಸಾಕ್ಷಿಯಾಗಲಿದ್ದಾರೆ. ಖುದ್ದ ಪ್ರಧಾನಿಯವರೇ ಚಂದ್ರಯಾನ-2 ಚಂದ್ರನ ದಕ್ಷಿಣ ಧ್ರುವ ಪ್ರದೇಶದ ಮೇಲೆ ಇಳಿಯುವುದನ್ನು ನೋಡಲಿದ್ದಾರೆ ಎಂಬುದು ವಿಶೇಷ. ವಿಶ್ವದ ಕೆಲವೇ ದೇಶಗಳು ಮಾತ್ರ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡಿವೆ. ಈ ಪೈಕಿ ರಷ್ಯಾ, ಅಮೆರಿಕ, ಚೀನಾ ದೇಶಗಳು ಈ ಹೆಗ್ಗಳಿಕೆಗೆ ಪಾತ್ರವಾಗಿವೆ.

    ಚಂದ್ರನ ದಕ್ಷಿಣ ಧ್ರುವ ಪ್ರದೇಶವನ್ನು ಯಾವುದೇ ದೇಶ ತಲುಪಿಲ್ಲ. ಈ ಪ್ರದೇಶದಲ್ಲಿ ಭಾರತದ ಲ್ಯಾಂಡರ್​ ಇನ್ನೇನು ಕೆಲವೇ ಗಂಟೆಗಳಲ್ಲಿ ಇಳಿಯುವ ಮೂಲಕ ಜಾಗತಿಕ ಬಾಹ್ಯಾಕಾಶದಲ್ಲಿ ಭಾರತ ಹೊಸ ಮೈಲಿಗಲ್ಲು ಸೃಷ್ಟಿಸಲಿದೆ. ಈ ಮೂಲಕ ಚಂದ್ರನ ದಕ್ಷಿಣ ಧ್ರುವ ಪ್ರದೇಶ ತಲುಪಿದ ವಿಶ್ವದ ಮೊದಲ ದೇಶ ಭಾರತವಾಗಲಿದೆ.







    First published: