ಅಮೆರಿಕದ ಸಮಾಧಾನಕ್ಕೆ ಭಾರತ ಯತ್ನ; ಕೋಳಿ, ಹಾಲು ಉತ್ಪನ್ನ ಆಮದಿಗೆ ನಿರ್ಬಂಧ ಸಡಿಲಿಸಲು ಚಿಂತನೆ

ಅಮೆರಿಕದ ಚಿಕನ್ ಲೆಗ್, ಟರ್ಕಿ ಕೋಳಿಗಳ ಆಮದಿಗೆ ಭಾರತ ನೂರು ಪ್ರತಿಶತದಷ್ಟು ಸುಂಕ ವಿಧಿಸುತ್ತದೆ. ಈಗ ಅದನ್ನು ಶೇ. 25ಕ್ಕೆ ಇಳಿಸಲು ಭಾರತ ಸಿದ್ಧವಿದೆ. ಆದರೆ, ಅಮೆರಿಕದವರು ಈ ಸುಂಕವನ್ನು ಶೇ. 10ಕ್ಕೆ ಇಳಿಸಬೇಕು ಎಂದು ಒತ್ತಾಯಿಸುತ್ತಿದ್ಧಾರೆ. ಅಂತಿಮವಾಗಿ ಇದು ಶೇ. 20ಕ್ಕೆ ಬಂದು ನಿಲ್ಲಲೂ ಬಹುದು.

news18
Updated:February 14, 2020, 4:28 PM IST
ಅಮೆರಿಕದ ಸಮಾಧಾನಕ್ಕೆ ಭಾರತ ಯತ್ನ; ಕೋಳಿ, ಹಾಲು ಉತ್ಪನ್ನ ಆಮದಿಗೆ ನಿರ್ಬಂಧ ಸಡಿಲಿಸಲು ಚಿಂತನೆ
ನರೇಂದ್ರ ಮೋದಿ ಮತ್ತು ಡೊನಾಲ್ಡ್ ಟ್ರಂಪ್
  • News18
  • Last Updated: February 14, 2020, 4:28 PM IST
  • Share this:
ನವದೆಹಲಿ(ಫೆ. 14): ಇದೇ ತಿಂಗಳು ಭಾರತಕ್ಕೆ ಮೊದಲ ಬಾರಿ ಬರುತ್ತಿರುವ ಡೊನಾಲ್ಡ್ ಟ್ರಂಪ್ ಅವರಿಗೆ ಪ್ರಿಯವೆನಿಸುವ ಕೆಲ ವ್ಯವಹಾರ ಕ್ರಮಗಳನ್ನು ಕೈಗೊಳ್ಳಲು ಭಾರತ ಮುಂದಾಗಿದೆ. ಅಮೆರಿಕದೊಂದಿಗೆ ಕೆಲ ಪ್ರಮುಖ ಒಪ್ಪಂದಗಳ ನಿರೀಕ್ಷೆಯಲ್ಲಿರುವ ಭಾರತ, ಇದಕ್ಕಾಗಿ ತನ್ನ ಕೆಲವೊಂದಿಷ್ಟು ಕ್ಷೇತ್ರಗಳಲ್ಲಿರುವ ಬಿಗಿನಿಯಮಗಳನ್ನು ಸಡಿಲಿಸುವ ಸಾಧ್ಯತೆ ಇದೆ. ಕೆಲ ಮೂಲಗಳ ಪ್ರಕಾರ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಹೆಚ್ಚು ತೆರೆದುಕೊಳ್ಳದ ಹಾಲೋತ್ಪನ್ನ ಕ್ಷೇತ್ರದಲ್ಲಿ ಅಮೆರಿಕಕ್ಕೆ ಕೆಲ ನಿರ್ಬಂಧಗಳನ್ನ ಸಡಿಲಿಸಬಹುದು. ಹಾಗೆಯೇ, ಭಾರತದ ಪೌಲ್ಟ್ರಿ (ಕುಕ್ಕಟೋದ್ಯಮ) ಕ್ಷೇತ್ರವೂ ಕೂಡ ಅಮೆರಿಕಕ್ಕೋಸ್ಕರ ಸ್ವಲ್ಪ ತೆರೆದುಕೊಳ್ಳುವ ನಿರೀಕ್ಷೆ ಇದೆ.

ಡೊನಾಲ್ಡ್ ಟ್ರಂಪ್ ಅವರು ಫೆಬ್ರವರಿ 24-25 ಭಾರತಕ್ಕೆ ಬರುತ್ತಿದ್ಧಾರೆ. ವಿಶ್ವದ ಬಹುತೇಕ ರಾಷ್ಟ್ರಗಳಿಗೂ ಅಮೆರಿಕ ವಿನಾಯಿತಿ ನೀಡಬೇಕು. ಆದರೆ, ಅಮೆರಿಕಕ್ಕೆ ಯಾರೂ ವಿನಾಯಿತಿ ತೋರುವುದಿಲ್ಲ. ಅಮೆರಿಕ ಯಾವುದೇ ಚಾರಿಟಿ ಮಾಡುತ್ತಿಲ್ಲ. ಯಾವುದೇ ದೇಶದೊಂದಿಗೆ ಏಕಮುಖ ವ್ಯವಹಾರಕ್ಕೆ ಅಮೆರಿಕ ಸಿದ್ಧವಿಲ್ಲ ಎಂಬುದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಭಿಮತ. ಭಾರತ ಮತ್ತು ಚೀನಾವನ್ನೇ ಅವರು ಗಮನದಲ್ಲಿಟ್ಟುಕೊಂಡು ಈ ಮಾತುಗಳನ್ನ ಹೇಳಿದ್ದರು. ಜಾಗತಿಕ ವ್ಯವಹಾರಕ್ಕೆ ಅಮೆರಿಕದ ಮಾರುಕಟ್ಟೆ ಬಹುತೇಕ ಮುಕ್ತವಾಗಿ ತೆರೆದಿದೆ. ಆದರೆ, ಭಾರತ, ಚೀನಾದಂಥ ದೇಶಗಳು ಅಮೆರಿಕದ ಉತ್ಪನ್ನಗಳಿಗೆ ದೊಡ್ಡ ಪ್ರಮಾಣದಲ್ಲಿ ಆಮದು ಶುಲ್ಕ ವಿಧಿಸುತ್ತವೆ. ಇದು ಟ್ರಂಪ್ ಅವರಿಗೆ ಕೆಂಗಣ್ಣು ತರಿಸಿದೆ.

ಇದನ್ನೂ ಓದಿ: ವರ್ಷವೇ ಕಾದಿದ್ದೀರಿ, ಇನ್ನೂ 15 ದಿನದಲ್ಲಿ ಏನೂ ಆಗಲ್ಲ: ಓಮರ್​ ಅಬ್ದುಲ್ಲಾ ಬಂಧನ ಪ್ರಶ್ನಿಸಿದ ಅರ್ಜಿಗೆ ಸುಪ್ರೀಂ ಕೋರ್ಟ್​​

ಭಾರತ ಸರ್ಕಾರ ಹೃದಯದ ಸ್ಟೆಂಟ್, ಕೃತಕ ಮಂಡಿಚಿಪ್ಪು ಇತ್ಯಾದಿ ವೈದ್ಯಕೀಯ ಸಾಧನಗಳಿಗೆ ಬೆಲೆ ನಿಯಂತ್ರಣ ಹೇರಿದೆ. ಹಾಗೆಯೇ, ಇ-ಕಾಮರ್ಸ್ ಕ್ಷೇತ್ರದಲ್ಲಿ ಒಂದಷ್ಟು ನಿರ್ಬಂಧಗಳನ್ನ ವಿಧಿಸಲು ಹೊರಟಿದೆ. ಇದರಿಂದ ಅಮೆರಿಕದ ಕಂಪನಿಗಳ ವ್ಯವಹಾರಕ್ಕೆ ಒಂದಷ್ಟು ಹಿನ್ನಡೆಯಾಗಿದೆ. ಇದರಿಂದ ಕೋಪಗೊಂಡ ಅಮೆರಿಕ ಅಧ್ಯಕ್ಷರು ಕಳೆದ ನಾಲ್ಕು ದಶಕದಿಂದ ಭಾರತಕ್ಕೆ ನೀಡಿದ್ದ ವಿಶೇಷ ವ್ಯವಹಾರ ಆದ್ಯತೆಯ ಸೌಲಭ್ಯವನ್ನು ರದ್ದುಗೊಳಿಸಿದರು. ಇದರಿಂದ ಭಾರತದ ರಫ್ತಿಗೆ ಸಾಕಷ್ಟು ಹೊಡೆತ ಬಿದ್ದಿದೆ ಎನ್ನಲಾಗುತ್ತಿದೆ. ಈ ಸೌಲಭ್ಯವನ್ನು ಮರುಪಡೆಯುವ ಗುರಿಯಲ್ಲಿರುವ ಭಾರತ ಈಗ ಟ್ರಂಪ್ ಅವರಿಗೆ ಸಮಾಧಾನ ತರುವ ಕೆಲ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಿದೆ. ಅದಕ್ಕೆ ಭಾರತದ ಕೋಳಿ ಮತ್ತು ಹಾಲಿನ ಮಾರುಕಟ್ಟೆಯನ್ನು ಅಮೆರಿಕಕ್ಕೆ ಹೆಚ್ಚು ತೆರೆದಿಡುವುದು ಅಂಥ ಒಂದು ಕ್ರಮ ಎನ್ನಲಾಗಿದೆ.

ಅಮೆರಿಕದ ಚಿಕನ್ ಲೆಗ್, ಟರ್ಕಿ ಕೋಳಿಗಳ ಆಮದಿಗೆ ಭಾರತ ನೂರು ಪ್ರತಿಶತದಷ್ಟು ಸುಂಕ ವಿಧಿಸುತ್ತದೆ. ಈಗ ಅದನ್ನು ಶೇ. 25ಕ್ಕೆ ಇಳಿಸಲು ಭಾರತ ಸಿದ್ಧವಿದೆ. ಆದರೆ, ಅಮೆರಿಕದವರು ಈ ಸುಂಕವನ್ನು ಶೇ. 10ಕ್ಕೆ ಇಳಿಸಬೇಕು ಎಂದು ಒತ್ತಾಯಿಸುತ್ತಿದ್ಧಾರೆ. ಅಂತಿಮವಾಗಿ ಇದು ಶೇ. 20ಕ್ಕೆ ಬಂದು ನಿಲ್ಲಲೂ ಬಹುದು.

ಇದನ್ನೂ ಓದಿ: ಕೋರ್ಟ್​ ಆದೇಶಕ್ಕೆ ಒಂದು ಬೆಲೆ ಬೇಡವೇ?: ಟಿಲಿಕಾಂ ಕಂಪನಿಗಳ ಮೇಲೆ ಸುಪ್ರೀಂ ಕೆಂಡಾಮಂಡಲ

ಕೆಲ ಷರುತ್ತುಗಳ ಮೇಲೆ ಅಮೆರಿಕದ ಹಾಲಿನ ಉತ್ಪನ್ನಗಳಿಗೆ ಭಾರತ ಅವಕಾಶ ಮಾಡಿಕೊಡುವ ಸಾಧ್ಯತೆ ಇದೆ. ಶೇ. 5ರಷ್ಟು ಸುಂಕ ವಿಧಿಸಬಹುದು. ಅದಕ್ಕಿಂತ ಮುಖ್ಯವಾಗಿ ಅಮೆರಿಕದ ಹಾಲಿನ ಉತ್ಪನ್ನಗಳಿಗೆ ಮೂಲವಾಗಿರುವ ಪ್ರಾಣಿಗಳು ಮಾಂಸಾಹಾರ ಸೇವಿಸಿಲ್ಲದಿರುವುದನ್ನು ಖಾತ್ರಿಪಡಿಸುವ ಪ್ರಮಾಣಪತ್ರ ನೀಡಬೇಕೆಂಬುದು ಒಂದು ಪ್ರಮುಖ ಷರತ್ತಿದೆ. ಇದಕ್ಕೆ ಅಮೆರಿಕ ಒಪ್ಪಿಕೊಳ್ಳುತ್ತಾ ಎಂದು ನೋಡಬೇಕು.ಟ್ರಂಪ್ ಅವರು ಫೆ. 24 ಮತ್ತು 25ರಂದು ಭಾರತಕ್ಕೆ ಬರುತ್ತಿದ್ದಾರೆ. ಅದಕ್ಕೆ ಮುಂಚೆ ಅಮೆರಿಕದ ವ್ಯವಹಾರ ಪ್ರತಿನಿಧಿ ರಾಬರ್ಟ್ ಲೈಟಿಜರ್ ಅವರು ಭಾರತಕ್ಕೆ ಬರಬೇಕಿದೆ. ಅವರು ನಿನ್ನೆಯೇ ಬರಬೇಕಿತ್ತು. ಕಾರಣಾಂತರಗಳಿಂದ ಪ್ರವಾಸ ದಿಢೀರ್ ರದ್ದಾಗಿದೆ. ದೂರವಾಣಿ ಮೂಲಕವಷ್ಟೇ ಅವರು ಭಾರತದ ವಾಣಿಜ್ಯ ಸಚಿವ ಪೀಯೂಶ್ ಗೋಯಲ್ ಜೊತೆ ಮಾತುಕತೆ ನಡೆಸಿದ್ಧಾರೆ. ಟ್ರಂಪ್ ಭೇಟಿಯ ದಿನಕ್ಕೆ ಮುಂಚಿತವಾಗಿಯೇ ಅವರು ಭಾರತಕ್ಕೆ ಬಂದು ಕೆಲ ವ್ಯವಹಾರಗಳ ಮಾತುಕತೆ ನಡೆಸಿ ಅಂತಿಮಗೊಳಿಸುವ ನಿರೀಕ್ಷೆ ಇದೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published:February 14, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ