• Home
 • »
 • News
 • »
 • national-international
 • »
 • 2021 Govt Scheme: ಗರೀಬ್​ ಕಲ್ಯಾಣದಿಂದ ಇ ಶ್ರಮದವರೆಗೆ: 2021ರಲ್ಲಿ ಕೇಂದ್ರ ಜಾರಿಗೆ ತಂದ ಜನಪ್ರಿಯ ಯೋಜನೆಗಳಿವು

2021 Govt Scheme: ಗರೀಬ್​ ಕಲ್ಯಾಣದಿಂದ ಇ ಶ್ರಮದವರೆಗೆ: 2021ರಲ್ಲಿ ಕೇಂದ್ರ ಜಾರಿಗೆ ತಂದ ಜನಪ್ರಿಯ ಯೋಜನೆಗಳಿವು

ನರೇಂದ್ರ ಮೋದಿ

ನರೇಂದ್ರ ಮೋದಿ

ಈ ವರ್ಷ ಅಂದರೆ 2021ರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಯಾವೆಲ್ಲಾ ಯೋಜನೆ (Govt Scheme) ಜಾರಿಗೆ ತಂದಿದೆ ಎಂಬ ಮಾಹಿತಿ ಇಲ್ಲಿದೆ.

 • Share this:

  ನರೇಂದ್ರ ಮೋದಿ (Narendra Modi) ಅವರು ಪ್ರಧಾನ ಮಂತ್ರಿಯಾಗಿ 2014ರಿಂದ ಅಧಿಕಾರಕ್ಕೆ ಬಂದಾಗಿನಿಂದಲೂ ಹಲವಾರು ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅದರಲ್ಲೂ ಕೋವಿಡ್​ ಬಿಕ್ಕಟ್ಟಿನ ಬಳಿಕ ಬಡ ಜನರಿಗೆ ಅನುಕೂಲವಾಗುವ ಅನೇಕ ಜನಪ್ರಿಯ ಯೋಜನೆಗಳನ್ನು ಅವರು ಜಾರಿಗೆ ತಂದು ಸಂಕಷ್ಟದಲ್ಲಿದ್ದ ಜನರಿಗೆ ನೆರವಾಗಿದ್ದಾರೆ. ಇನ್ನು ಈ ವರ್ಷ ಅಂದರೆ 2021ರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಯಾವೆಲ್ಲಾ ಯೋಜನೆ (Govt Scheme) ಜಾರಿಗೆ ತಂದಿದೆ ಎಂಬ ಮಾಹಿತಿ ಇಲ್ಲಿದೆ.


  ಪ್ರಧಾನ ಮಂತ್ರಿ ಗರೀಬ್​ ಕಲ್ಯಾಣ ಪ್ಯಾಕೇಜ್ ವಿಮಾ ಯೋಜನೆ (pm garib kalyan yojana): ಜೂನ್​ನಲ್ಲಿ ಜಾರಿಗೆ ಬಂದ ಈ ಯೋಜನೆ ಕೋವಿಡ್ -19 ವಿರುದ್ದ ಹೋರಾಡುತ್ತಿರುವ ಆರೋಗ್ಯ ಸಿಬ್ಬಂದಿಗೆ ವಿಮಾ ಯೋಜನೆ. ಸಮುದಾಯ ಆರೋಗ್ಯ ಸಿಬ್ಬಂದಿ ಸಹಿತ 22.12 ಲಕ್ಷ ಸಾರ್ವಜನಿಕ ಆರೋಗ್ಯ ರಕ್ಷಣಾ ಸೇವಾ ಪೂರೈಕೆದಾರರಿಗೆ ಅವರು ಕೋವಿಡ್-19 ರೋಗಿಗಳ ನೇರ ಸಂಪರ್ಕದಲ್ಲಿದ್ದರೆ ಅಥವಾ ಆವರಿಗೆ ಶ್ರುಶ್ರೂಶೆ ಒದಗಿಸುತ್ತಿದ್ದರೆ ಮತ್ತು ಆ ರೋಗದ ಪರಿಣಾಮವನ್ನು ಎದುರಿಸುವ ಅಪಾಯದಲ್ಲಿದ್ದರೆ ಅವರಿಗೆ 90 ದಿನಗಳ ಅವಧಿಗೆ 50 ಲಕ್ಷ ರೂಪಾಯಿಗಳ ವಿಮಾ ರಕ್ಷಣೆಯನ್ನು ಒದಗಿಸಲಾಗುತ್ತದೆ. ಕೋವಿಡ್ -19 ರ ಸಂಪರ್ಕದಿಂದ ಆಗುವ ಆಕಸ್ಮಿಕ ಜೀವಹಾನಿಯನ್ನು ಇದು ಒಳಗೊಂಡಿರುತ್ತದೆ.


  ಪಿಎಂ ಮಾರ್ಗದರ್ಶನ ಯುವ ಯೋಜನೆ (PM Mentoring Yuva Scheme) : ಆಗಸ್ಟನಲ್ಲಿ ಜಾರಿಗೆ ತಂದ ಈ ಯೋಜನೆ ಯುವ ಲೇಖಕರಿಗೆ ತರಬೇತಿ ನೀಡುವ ಮಾರ್ಗದರ್ಶನ ಕಾರ್ಯಕ್ರಮವಾಗಿದೆ. ಯುವಕರಿಗೆ ತಮ್ಮ ಬರವಣಿಗೆಯ ಕೌಶಲ್ಯವನ್ನು ಬಳಸಿಕೊಳ್ಳಲು ಮತ್ತು ಭಾರತದ ಬೌದ್ಧಿಕ ಪ್ರವಚನೆಯುವಕರಿಗೆ ತಮ್ಮ ಬರವಣಿಗೆಯ ಕೌಶಲ್ಯವನ್ನು ಬಳಸಿಕೊಳ್ಳಲು ಮತ್ತು ಭಾರತದ ಬೌದ್ಧಿಕ ಪ್ರವಚನೆ ಈ ಯೋಜನೆ ಜಾರಿಗೆ ತರಲಾಗಿದೆ


  ಇ ಶ್ರಮ ಪೋರ್ಟಲ್ (E Shram Portal): ಕಳೆದ ಆಗಸಟ್​ 26ರಂದು ಈ ಯೋಜನೆ ಜಾರಿಗೆ ತರಲಾಯಿತು. ಅಸಂಘಟಿತ ವಲಯದ ಸುಮಾರು 38 ಕೋಟಿ ಕಾರ್ಮಿಕರಿಗಾಗಿ 12-ಅಂಕಿಯ ಯುನಿವರ್ಸಲ್ ಅಕೌಂಟ್ ನಂಬರ್ (ಯುಎಎನ್) ಮತ್ತು ಇ-ಶ್ರಮ್ ಕಾರ್ಡ್ ಅನ್ನು ನೀಡಲಿದೆ, ಇದು ದೇಶಾದ್ಯಂತ ಮಾನ್ಯವಾಗಿರುತ್ತದೆ. ಇ-ಶ್ರಮ್ ಕಾರ್ಡ್ ದೇಶದ ಕೋಟ್ಯಂತರ ಅಸಂಘಟಿತ ಕಾರ್ಮಿಕರಿಗೆ ಹೊಸ ಗುರುತನ್ನು ನೀಡುತ್ತದೆ. ಭವಿಷ್ಯದಲ್ಲಿ ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಗಳ ಲಾಭ ಪಡೆಯಲು ಈ ಕಾರ್ಮಿಕ ಕಾರ್ಡ್ ಅವರಿಗೆ ಸಹಾಯ ಮಾಡುತ್ತದೆ. ಕಟ್ಟಡ ಕಾರ್ಮಿಕರು, ವಲಸೆ ಕಾರ್ಮಿಕರು, ಬೀದಿ ವ್ಯಾಪಾರಿಗಳು ತಮ್ಮನ್ನು ಈ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬಹುದು.​


  ಇದನ್ನು ಓದಿ: ಬಟ್ಟೆ, ಟ್ರೆಂಡಿ ಮಾಸ್ಕ್​ಗೆ ಬಗ್ಗಲ್ಲ Omicron​; ಮಾಸ್ಕ್ ಆಯ್ಕೆಯಲ್ಲಿ ಇರಲಿ ಎಚ್ಚರ


  ಅಕಾಡೆಮಿಕ್​ ಬ್ಯಾಂಕ್ ಆಫ್​ ಕ್ರೆಡಿಟ್ಸ್ (ABC) ಯೋಜನೆ: ಅರ್ಥಿಕ ವ್ಯವಹಾರಗಳಿಗಾಗಿ ವಾಣಿಜ್ಯ ಬ್ಯಾಂಕುಗಳು ಕೆಲಸ ಮಾಡುವಂತೆ ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳ ಪದವಿಗಾಗಿ ಈ ಎಬಿಸಿ ಯೋಜನೆ ಜಾರಿಗೆ ತರಲಾಗಿದೆ.


  ಇದನ್ನು ಓದಿ: ಲೈಂಗಿಕ ದೌರ್ಜನ್ಯ ವಿರೋಧಿಸಿದ ಅಪ್ರಾಪ್ತೆ; ನಡುರಸ್ತೆಯಲ್ಲಿ 8 ಬಾರಿ ಚುಚ್ಚಿದ ಪಾಪಿ


  ಗ್ರಾಮ ಉಜಾಲ ಯೋಜನೆ (Gram Ujala Scheme): ಗ್ರಾಮೀಣ ಜನರಿಗೆ ವಿದ್ಯುತ್ ನೀಡುವ ಯೋಜನೆ ಇದಾಗಿದೆ. ಈ ಯೋಜನೆ ಅಡಿ ದೇಶದ ರಾಜ್ಯಗಳಲ್ಲಿ ಗ್ರಾಮೀಣ ಜನರು 10 ರೂ ರಿಯಾಯ್ತಿ ದರದಲ್ಲಿ ಎಲ್​ಇಡಿ ಬಲ್ಬ್​ ಪಡೆಯಬಹುದಾಗಿದೆ


  ಪಿಎಂ ಉಮ್ಮಿದ್​​ ಯೋಜನೆ (PM Umeed Scheme): ಕಳೆದ ಏಪ್ರಿಲ್​ 2021 ಜಾರಿಗೆ ತರಲಾಯಿತು. ಈ ಯೋಜನೆ ಅಡಿ 2025-26 ರವರೆಗೆ 3 ಲಕ್ಷ ಯುವಕರಿಗೆ ಉದ್ಯಮಿಗಳಾಗಲು ಕೌಶಲ್ಯ ತರಬೇತಿಯನ್ನು ನೀಡಲಿದೆ. ಅಲ್ಲದೇ ಈ ಯೋಜನೆಯು ಯುವಕರಿಗೆ ಸಾಲವನ್ನು ಸುಲಭಗೊಳಿಸಲು ಮತ್ತು ಅವುಗಳನ್ನು ಸೂಕ್ತ ಮಾರುಕಟ್ಟೆಗಳಲ್ಲಿ ಸಂಪರ್ಕಿಸಲು ನೆರವು ನೀಡುತ್ತದೆ.

  Published by:Seema R
  First published: