1 ಕೋಟಿ ಸರ್ಕಾರಿ ನೌಕರರಿಗೆ ಮೋದಿ ಸರ್ಕಾರದಿಂದ ಬಂಪರ್​ ಗಿಫ್ಟ್​: ಹೆಚ್ಚಳವಾಯ್ತು ವೇತನ!


Updated:August 29, 2018, 3:05 PM IST
1 ಕೋಟಿ ಸರ್ಕಾರಿ ನೌಕರರಿಗೆ ಮೋದಿ ಸರ್ಕಾರದಿಂದ ಬಂಪರ್​ ಗಿಫ್ಟ್​: ಹೆಚ್ಚಳವಾಯ್ತು ವೇತನ!

Updated: August 29, 2018, 3:05 PM IST
ನ್ಯೂಸ್​ 18 ಕನ್ನಡ

ನವದೆಹಲಿ(ಆ.29): ಕೇಂದ್ರ ಸರ್ಕಾರದ ನೌಕರರಿಗೆ ಹಾಗೂ ಪಿಂಚಣಿದಾರರಿಗೆ ಮೋದಿ ಸರ್ಕಾರವು ಬಂಪರ್​ ಗಿಫ್ಟ್​ ಘೋಷಿಸಿದೆ. ಬುಧವಾರದಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ನೌಕರರ ತುಟ್ಟಿ ಭತ್ಯೆಯನ್ನು ಶೇ. 2 ರಷ್ಟು ಹೆಚ್ಚಿಸಲು ನಿರ್ಧರಿಸಲಾಗಿದೆ. ಈ ವೇತನ ಹೆಚ್ಚಳ ಬಳಿಕ ಡಿಎ ಶೇ. 9 ರಷ್ಟಾಗಿದೆ. ಲಭ್ಯವಾದ ಮಾಹಿತಿಗಳನ್ವಯ ಇದು 2018ರ ಜುಲೈ 1ರಿಂದಲೇ ಅನ್ವಯವಾಗುತ್ತದೆ ಎಂದು ತಿಳಿದು ಬಂದಿದೆ. ಇನ್ನು ಈ ಹೆಜ್ಜೆಯಿಂದ ಸುಮಾರು 1.1 ಕೋಟಿ ಸರ್ಕಾರಿ ನೌಕರರಿಗೆ ಹಾಗೂ ಪಿಂಚಣಿದಾರರಿಗೆ ಲಾಭವಾಗಲಿದೆ ಎಂಬುವುದು ಗಮನಾರ್ಹ.

ಸಭೆಯಲ್ಲಿ ನಿರ್ಧಾರ:

ಈ ಕುರಿತಾಗಿ ನೀಡಲಾದ ಹೇಳಿಕೆಯಲ್ಲಿ ಕೇಂದ್ರ ಮಂತ್ರಿ ಮಂಡಲವು 2018ರ ಜುಲೈ 1 ರಿಂದ ಕೇಂದ್ರದ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆಯೊಂದಿಗೆ ಪಿಂಚಣಿದಾರರಿಗೆ ಹೆಚ್ಚುವರಿ ಪರಿಹಾರವನ್ನು ನೀಡಲು ಸಭೆಯಲ್ಲಿ ಅನುಮೋದನೆ ಸಿಕ್ಕಿದೆ ಎಂದು ತಿಳಿದು ಬಂದಿದೆ. ಈ ಮೂಲಕ ಮೂಲ ವೇತನ ಹಾಗೂ ಪಿಂಚಣಿ ಮೇಲೆ ಸದ್ಯಕ್ಕಿರುವ 7 ಶೇಕಡಾದ ಮೇಲೆ ಮತ್ತೆರಡು ಶೇಕಡಾ ಹೆಚ್ಚಾದಂತಾಗಿದೆ.

ಏನಿದು ತುಟ್ಟಿ ಭತ್ಯೆ?

ತುಟ್ಟಿ ಭತ್ಯೆ ಎಂಬುವುದು ಸರ್ಕಾರಿ ನೌಕರರು, ಸಾರ್ವಜನಿಕ ವಲಯದ ನೌಕರರು ಹಾಗೂ ಪಿಂಚಣಿದಾರರರಿಗೆ ನೀಡುವ ಭತ್ಯೆಯಾಗಿದೆ. ಇದು ನೌಕರರ ಮೂಲ ವೇತನದ ಮೇಲೆ ನಿರ್ಧಾರವಾಗುತ್ತದೆ.
Loading...

ಸರ್ಕಾರದ ಭೊಕ್ಕಸಕ್ಕೆ ಹೊರೆ:

ಮತ್ತೊಂದು ಮೂಲದಿಂದ ಲಭ್ಯವಾದ ಮಾಹಿತಿ ಅನ್ವಯ ಡಿಎ ಹಾಗೂ ಡಿಆರ್​ನಲ್ಲಿ ಹೆಚ್ಚಳ ಮಾಡಿರುವುದರಿಂದ ಸರ್ಕಾರದ ಭೊಕ್ಕಸಕ್ಕೆ ವಾರ್ಷಕ 6112.20 ಕೋಟಿ ರೂಪಾಯಿ ಹೆಚ್ಚುವರಿ ಹೊರೆ ಬೀಳುತ್ತದೆ ಎಂದು ತಿಳಿದು ಬಂದಿದೆ. 2018-19ನೇ ಹಣಕಾಸು ವರ್ಷದಲ್ಲಿ 8 ತಿಂಗಳು(ಜುಲೈ 2018 ರಿಂದ ಫೆಬ್ರವರಿ 2019)ರವರೆಗೆ 4,074.80 ಕೋಟಿ ಹೊರೆಯಾಗಲಿದೆ.
First published:August 29, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626