ಕೊನೆಗೂ ಮೌನ ಮುರಿದ ಮೋದಿ; ಗಾಂಧಿ ವಿರುದ್ಧ ಹೇಳಿಕೆಗೆ ಸಾಧ್ವಿ ಪ್ರಗ್ಯಾಸಿಂಗ್​ರನ್ನು ಕ್ಷಮಿಸಲಾರೆ ಎಂದ ಪ್ರಧಾನಿ

ಮಹಾತ್ಮ ಗಾಂಧೀಯನ್ನು ಹತ್ಯೆಗೈದ ನಾಥೂರಾಮ ಗೋಡ್ಸೆಯನ್ನು ದೇಶಭಕ್ತ ಎಂದು ಕೊಂಡಾಡಿದ ಸಾಧ್ವಿ ಹೇಳಿಕೆಗೆ ಇಡೀ ದೇಶದಾದ್ಯಂತ ಕಟು ಟೀಕೆಗಳು ವ್ಯಕ್ತವಾಗಿದ್ದರೂ ಸಹ ಪ್ರಧಾನಿ ನರೇಂದ್ರ ಮೋದಿ ಮಾತ್ರ ಈ ಕುರಿತು ತುಟಿ ಬಿಚ್ಚಿರಲಿಲ್ಲ. ಆದರೆ, ಈಗ ಕೊನೆಗೂ ಅವರು ಮೌನ ಮುರಿದು ಸಾಧ್ವಿ ಪ್ರಜ್ಞಾ ಸಿಂಗ್ ವಿರುದ್ಧ ಗುಡುಗಿದ್ದಾರೆ.

MAshok Kumar | news18
Updated:May 17, 2019, 7:38 PM IST
ಕೊನೆಗೂ ಮೌನ ಮುರಿದ ಮೋದಿ; ಗಾಂಧಿ ವಿರುದ್ಧ ಹೇಳಿಕೆಗೆ ಸಾಧ್ವಿ ಪ್ರಗ್ಯಾಸಿಂಗ್​ರನ್ನು ಕ್ಷಮಿಸಲಾರೆ ಎಂದ ಪ್ರಧಾನಿ
ನರೇಂದ್ರ ಮೋದಿ
MAshok Kumar | news18
Updated: May 17, 2019, 7:38 PM IST

ನವ ದೆಹಲಿ (ಮೇ.17); ಬಾಪೂಜಿ ಮಹಾತ್ಮಾ ಗಾಂಧಿ ವಿರುದ್ಧ ಹೇಳಿಕೆ ನೀಡುವ ಮೂಲಕ ಅವರನ್ನು ಅಪಮಾನಕ್ಕೊಳಪಡಿಸಿದ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್​ರನ್ನು ನಾನು ಕ್ಷಮಿಸಲಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.


 ಬುಧವಾರ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ್ದ ಸಾಧ್ವಿ ಪ್ರಗ್ಯಾ ಸಿಂಗ್, “ಮಹಾತ್ಮಾ ಗಾಂಧೀಜಿಯವರನ್ನು ಹತ್ಯೆಗೈದ ನಾಥೂರಾಮ ಗೋಡ್ಸೆಯನ್ನು ದೇಶಭಕ್ತ,” ಎಂದು ಕೊಂಡಾಡಿದ್ದರು. ಇವರ ಈ ಹೇಳಿಕೆಗೆ ದೇಶದಾದ್ಯಂತ ಕಟು ಟೀಕೆಗಳು ವ್ಯಕ್ತವಾಗಿದ್ದರೂ ಸಹ ಪ್ರಧಾನಿ ನರೇಂದ್ರ ಮೋದಿ ಮಾತ್ರ ಈ ಕುರಿತು ತುಟಿ ಬಿಚ್ಚಿರಲಿಲ್ಲ. ಆದರೆ, ಈಗ ಕೊನೆಗೂ ಅವರು ಮೌನ ಮುರಿದಿದ್ದಾರೆ.ಶುಕ್ರವಾರ ಸಾಧ್ವಿ ಹೇಳಿಕೆಯ ಕುರಿತು ಪ್ರತಿಕ್ರಿಯೆ ನೀಡಿರುವ ಮೋದಿ, “ಮಹಾತ್ಮ ಗಾಂಧೀಜಿ ಈ ದೇಶದ ಹೆಮ್ಮೆ. ಜವಾಬ್ದಾರಿಯುತ ಸ್ಥಾನದಲ್ಲಿದ್ದು ಬಾಪೂಜಿಯನ್ನು ಅವಮಾನಿಸುವ ಇಂತಹ ಹೇಳಿಕೆ ನೀಡಿದ್ದು ಅಕ್ಷಮ್ಯ ಅಪರಾಧ. ಈ ಕೃತ್ಯವೆಸಗಿದ ಸಾಧ್ವಿ ಪ್ರಗ್ಯಾ ಸಿಂಗ್​ರನ್ನು ಯಾವುದೇ ಕಾರಣಕ್ಕೂ ನಾನು ಕ್ಷಮಿಸುವುದಿಲ್ಲ,” ಎಂದು ಗುಡುಗಿದ್ದಾರೆ.ಇದನ್ನೂ ಓದಿ : ಗಾಂಧಿ-ಗೋಡ್ಸೆ ವಿವಾದಕ್ಕೆ ಕಿಡಿ ಹೊತ್ತಿಸಿದ ಅನಂತ್ ಕುಮಾರ್ ಟ್ವೀಟ್​ ಡಿಲೀಟ್; ಶಿಸ್ತು ಕ್ರಮಕ್ಕೆ ಮುಂದಾದ ಬಿಜೆಪಿ

ಭೋಪಾಲ್ ಲೋಕಸಭೆ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಗ್ಯಾ ಸಿಂಗ್, ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತಕುಮಾರ್​ ಹೆಗಡೆ ಹಾಗೂ ದಕ್ಷಿಣ ಕನ್ನಡ ಸಂಸದ ನಳಿನ್​ ಕುಮಾರ್ ಕಟೀಲ್​ ಕಳೆದ ಮೂರು ದಿನಗಳಿಂದ ಮಹಾತ್ಮಾ ಗಾಂಧೀಜಿ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ಆದರೆ ಇಷ್ಟು ದಿನ ಸುಮ್ಮನಿದ್ದ ಬಿಜೆಪಿ ಈಗ ಎಚ್ಚೆತ್ತಿದೆ. ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಈ ಮೂವರಿಗೂ ಎಚ್ಚರಿಕೆ ನೀಡಿದ್ದು ಶಿಸ್ತು ಕ್ರಮದ ಚಾಟಿ ಬೀಸಿದ್ದಾರೆ. ಅಲ್ಲದೆ ತಮ್ಮ ಹೇಳಿಕೆ ಕುರಿತು ಮುಂದಿನ 10 ದಿನಗಳಲ್ಲಿ ವಿವರಣೆ  ನೀಡಬೇಕು ಎಂದು ತಾಕೀತು ಮಾಡಿದ್ದಾರೆ.

ಇದನ್ನೂ ಓದಿ : ಮುಗಿಯದ ಗಾಂಧಿ-ಗೋಡ್ಸೆ ವಿವಾದ; ಸಂಸದರ ಬಾಲಿಶ ಟ್ವೀಟ್​; ನಳಿನ್​ಗಿಂತ ಸಾಧ್ವಿಯೇ ಬೆಟರ್ ಎಂದು ಜರಿದ ಟ್ವೀಟಿಗರು.!

ಗಾಂಧಿ ವಿರೋಧಿ ಹೇಳಿಕೆ ಅನಿಲ್ ಸೌಮಿತ್ರ ಉಚ್ಚಾಟನೆ :


ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುವ ಮೂಲಕ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದ ಮಧ್ಯಪ್ರದೇಶದ ಬಿಜೆಪಿ ನಾಯಕ ಅನಿಲ್​ ಸೌಮಿತ್ರಾ ಅವರನ್ನು ಇಂದು ಪಕ್ಷದಿಂದ ಶಾಶ್ವತವಾಗಿ ಉಚ್ಚಾಟಿಸಲಾಗಿದೆ.


ಸಾರ್ವಜನಿಕ ಸಭೆಯೊಂದರಲ್ಲಿ ಗಾಂಧಿ ವಿರುದ್ಧ ಅವಹೇಳನ ಮಾಡಿದ್ದ ಅನಿಲ್ ಸೌಮಿತ್ರಾ “ಗಾಂಧಿ ಮಹಾತ್ಮನೂ ಅಲ್ಲ, ದೇಶಕ್ಕೆ ರಾಷ್ಟ್ರಪಿತನೂ ಅಲ್ಲ. ಆತ ಪಾಕಿಸ್ತಾನದ ರಾಷ್ಟ್ರಪಿತ,” ಎಂದು ಜರಿದಿದ್ದರು. ಇವರ ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಬಿಜೆಪಿ ಪಕ್ಷದಿಂದಲೇ ಉಚ್ಚಾಟಿಸಿದೆ.


'ನಿಮ್ಮ ನ್ಯೂಸ್ 18 ಕನ್ನಡವನ್ನು ಹಲೋ-ಆ್ಯಪ್ ನಲ್ಲೂ ಹಿಂಬಾಲಿಸಿ'

 

First published:May 17, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ