83 ತೇಜಸ್​ ಲಘು ಯುದ್ಧ ವಿಮಾನ ಖರೀದಿಗೆ ಮೋದಿ ಸಂಪುಟ ಒಪ್ಪಿಗೆ

ಹಿಂದೂಸ್ತಾನ್​ ಏರೋನಾಟಿಕ್ಸ್​ ಲಿಮಿಟೆಡ್​ (ಎಚ್​ಎಎಲ್​)ನಿಂದ ಈ ಯುದ್ಧ ವಿಮಾನಗಳನ್ನು 48 ಕೋಟಿ ರೂಗಳಿಗೆ ಕೊಳ್ಳಲಾಗುವುದು

ತೇಜಸ್​ ಲಘು ಯುದ್ಧ ವಿಮಾನ

ತೇಜಸ್​ ಲಘು ಯುದ್ಧ ವಿಮಾನ

 • Share this:
  ನವದೆಹಲಿ (ಜ. 13): 83 ತೇಜಸ್​​ ಲಘು ಯುದ್ಧ ವಿಮಾನ ಖರೀದಿಸಲು ಪ್ರಧಾನಿ ಮೋದಿ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಹಿಂದೂಸ್ತಾನ್​ ಏರೋನಾಟಿಕ್ಸ್​ ಲಿಮಿಟೆಡ್​ (ಎಚ್​ಎಎಲ್​)ನಿಂದ ಈ ಯುದ್ಧ ವಿಮಾನಗಳನ್ನು 48 ಕೋಟಿ ರೂಗಳಿಗೆ ಕೊಳ್ಳಲಾಗುವುದು. ಇದು ಸ್ಥಳೀಯ ಮಟ್ಟದಲ್ಲಿ ವಾಯುಸೇವೆಯಲ್ಲಿ ನಡೆದ ಅತಿ ದೊಡ್ಡ ಒಪ್ಪಂದವಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ತಿಳಿಸಿದ್ದಾರೆ. ಈ ಕುರಿತು ಟ್ವೀಟ್​ ಮಾಡಿರುವ ಸಚಿವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕ್ಯಾಬಿನೆಟ್​ ಈ ಖರೀದಿ ಒಪ್ಪಂದಕ್ಕೆ ಅನುಮೋದನೆ ನೀಡಿದೆ. ಸುಧಾರಿತ ಮಾರ್ಕ್​1 ಎ ವರ್ಷನ್​ನ ಲಘು ಯುದ್ಧ ವಿಮಾನ ಖರೀದಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.  ಈ ತೇಜಸ್​ ಲಘು ಯುದ್ಧ ವಿಮಾನ ಮುಂದಿನ ವರ್ಷ ಭಾರತೀಯ ವಾಯು ಪಡೆ ಸೇರಲಿದೆ. 83 ಲಘು ಯುದ್ಧ ವಿಮಾನವು ಭಾರತೀಯ ವಾಯುಪಡೆಯ ಕಾರ್ಯಾಚರಣೆಯ ಅಗತ್ಯತೆಗಳನ್ನು ಪೂರೈಸುವ ಪ್ರಬಲ ವೇದಿಕೆಯಾಗಲಿದೆ ಎಂದು ಕೂಡ ಇದೇ ವೇಳೆ ತಿಳಿಸಿದ್ದಾರೆ.

  ಇನ್ನು ಇದೇ ವೇಳೆ ವಿಮಾನದ ದುರಸ್ತಿ, ಸೇವೆ ಸಕ್ರಿಯಗೊಳಿಸುವ ವಾಯುಪಡೆಯ ಮೂಲ ಸೌಕರ್ಯ ಅಭಿವೃದ್ಧಿಗೂ ಸಂಪುಟ ಒಪ್ಪಿಗೆ ನೀಡಿದೆ.
  Published by:Seema R
  First published: