ನವದೆಹಲಿ(ಜ.18): ಉತ್ತರ ಭಾರತ ಮತ್ತು ರಾಜಧಾನಿ (North India and Delhi) ದೆಹಲಿ ನಿರಂತರ ಚಳಿಯ (Cold) ಹಿಡಿತದಲ್ಲಿದೆ. ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ, ಸಕ್ರಿಯ ಪಾಶ್ಚಿಮಾತ್ಯ ಅಡಚಣೆಯು ಜನವರಿ 21 ಮತ್ತು 25 ರ ನಡುವೆ ವಾಯುವ್ಯ ಭಾರತದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಇದರಿಂದಾಗಿ 21ರ ಮುಂಜಾನೆ ಹಿಮಾಲಯದ ಪಶ್ಚಿಮ ಭಾಗದಲ್ಲಿ ಮಳೆ (Rain)ಮತ್ತು ಹಿಮಪಾತ ಮುಂದುವರಿಯಲಿದೆ. ಇದು ಜನವರಿ 23 ಮತ್ತು 25 ರ ವೇಳೆಗೆ ಮತ್ತಷ್ಟು ತೀವ್ರಗೊಳ್ಳುವ ನಿರೀಕ್ಷೆಯಿದೆ.
ಇದಲ್ಲದೆ ಜನವರಿ 23 ಮತ್ತು 25 ರಂದು ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಮತ್ತು ಉತ್ತರ ರಾಜಸ್ಥಾನ ಸೇರಿದಂತೆ ವಾಯುವ್ಯ ಭಾರತದ ಬಯಲು ಪ್ರದೇಶಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಇದರೊಂದಿಗೆ ಗಂಟೆಗೆ 50 ಕಿ.ಮೀ ವೇಗದಲ್ಲಿ ತಣ್ಣನೆಯ ಗಾಳಿ ಬೀಸುವುದರಿಂದ ಜನರ ಸಮಸ್ಯೆ ಮತ್ತಷ್ಟು ಹೆಚ್ಚಲಿದೆ. ಆದಾಗ್ಯೂ, ಇದು ಮಾಲಿನ್ಯ ಮತ್ತು ಶುಷ್ಕ ಶೀತದಿಂದ ಜನರಿಗೆ ಪರಿಹಾರವನ್ನು ನೀಡಲಿದೆ.
ಇದನ್ನೂ ಓದಿ: Winter Season: ಶೀತ,ಕೆಮ್ಮಿನಿಂದ ಚಳಿಗಾಲದಲ್ಲಿ ಬಳಲುತ್ತಾ ಇದ್ದೀರಾ? ಹಾಗಾದ್ರೆ ಈ ಮನೆಮದ್ದುಗಳನ್ನು ಫಾಲೋ ಮಾಡಿ
ರಾಜಧಾನಿ ದೆಹಲಿಯ ಸ್ಥಿತಿ
ದೆಹಲಿಯ ಬಗ್ಗೆ ಮಾತನಾಡುವುದಾದರೆ, ಇಲ್ಲಿ ಜನರು ಚಳಿ ತಪ್ಪಿಸಲು ಬೆಂಕಿಯ ಮೊರೆ ಹೋಗುತ್ತಿದ್ದಾರೆ. ಅನೇಕ ನಿರಾಶ್ರಿತ ದೆಹಲಿ ನಿವಾಸಿಗಳು ಅಧಿಕಾರಿಗಳಿಂದ ಹೆಚ್ಚಿನ ಸಹಾಯ ಸಿಗುತ್ತಿಲ್ಲ ಎಂದು ದೂರುತ್ತಿದ್ದಾರೆ. ಸರ್ಕಾರದಿಂದ ಯಾವುದೇ ಸಹಾಯವಿಲ್ಲ, ಹೀಗಾಗಿ ಚಳಿಯಿಂದ ರಕ್ಷಿಸಿಕೊಳ್ಳಲು ಬೆಂಕಿಯ ಶಾಖವನ್ನು ಆಶ್ರಯಿಸಬೇಕಾಗಿದೆ ಎಂದು ಮಿಂಟೋ ರಸ್ತೆಯ ಜನರು ಹೇಳುತ್ತಾರೆ.
6 trains running late in the Northern Railway region due to fog: Indian Railways pic.twitter.com/7gZiMlYLFq
— ANI (@ANI) January 18, 2023
ಮಂಜು ಮುಸುಕಿದ ಕಾರಣ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಮಂಜಿನಿಂದಾಗಿ ಉತ್ತರ ರೈಲ್ವೆ ವಲಯದಲ್ಲಿ 6 ರೈಲುಗಳು ತಡವಾಗಿ ಓಡುತ್ತಿವೆ ಎಂದು ಭಾರತೀಯ ರೈಲ್ವೆ ತಿಳಿಸಿದೆ.
ಕಾಶ್ಮೀರದ ಬಗ್ಗೆ ಮಾತನಾಡುತ್ತಾ, ಮೇಲಿನ ಪ್ರದೇಶಗಳಲ್ಲಿ ನಿರಂತರವಾಗಿ ಭಾರೀ ಹಿಮಪಾತವಿದೆ. ಆದರೆ, ಮುಂದಿನ ದಿನಗಳಲ್ಲಿ ಮಂಜು ಮತ್ತು ಚಳಿಯಿಂದ ಮುಕ್ತಿ ದೊರೆಯಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ