ಕಾಶ್ಮೀರ ಕಂಪನ: ದಿಲ್ಲಿ ಸೇರಿದಂತೆ ಹಲವೆಡೆ ಕಂಪಿಸಿದ ಭೂಮಿ, ಭಯಭೀತರಾದ ಜನರು!

ಕೆಲ ದಿನಗಳ ಹಿಂದೆ ತೀರ್ಥಹಳ್ಳಿ, ಹೊಸನಗರ ತಾಲೂಕಿನ ವರಾಹಿ ಜಲ ವಿದ್ಯುತ್ ಯೋಜನಾ ಪ್ರದೇಶದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಭೂಕಂಪನದ ಅನುಭವವಾಗಿತ್ತು.

zahir | news18
Updated:February 6, 2019, 9:02 AM IST
ಕಾಶ್ಮೀರ ಕಂಪನ: ದಿಲ್ಲಿ ಸೇರಿದಂತೆ ಹಲವೆಡೆ ಕಂಪಿಸಿದ ಭೂಮಿ, ಭಯಭೀತರಾದ ಜನರು!
ಸಾಂದರ್ಭಿಕ ಚಿತ್ರ
  • News18
  • Last Updated: February 6, 2019, 9:02 AM IST
  • Share this:
ನವದೆಹಲಿ: ದಿಲ್ಲಿ ಸೇರಿದಂತೆ ಉತ್ತರ ಭಾರತದಲ್ಲಿ ಭೂಕಂಪಿಸಿದ ಬೆನ್ನಲ್ಲೇ ಜಮ್ಮು-ಕಾಶ್ಮೀರದಲ್ಲಿ ಭೂಕಂಪನದ ಅನುಭವ ಆಗಿದೆ. ರಾತ್ರಿ 10: 20 ಕ್ಕೆ ಭೂಮಿಕಂಪಿಸಿದ ಬಗ್ಗೆ ಯುರೋಪಿಯನ್‌-ಮೆಡಿಟೇರಿಯನ್‌ ಭೂಕಂಪನಾಶಾಸ್ತ್ರ ಕೇಂದ್ರವು ದೃಢಪಡಿಸಿದೆ. ರಿಕ್ಟರ್​ ಮಾಪಕದಲ್ಲಿ 5.6 ರಷ್ಟು ತೀವ್ರತೆ ಹೊಂದಿದ್ದ ಈ ಕಂಪನವು ಶ್ರೀನಗರದ ವಾಯುವ್ಯ ಭಾಗದಲ್ಲಿ ಉಂಟಾಗಿದೆ.

118 ಕಿಲೋ ಮೀಟರ್‌ನಷ್ಟು ವ್ಯಾಪ್ತಿಯಲ್ಲಿ ಭೂಮಿ ಕಂಪಿಸಿದ್ದರಿಂದ, ಜನರು ಭಯಭೀತರಾಗಿದ್ದರು. ಇದರಿಂದ ಕೆಲ ಪ್ರದೇಶದ ಜನರು ಮನೆಯಿಂದ ಹೊರಗೆ ಓಡಿ ಬಂದಿದ್ದರು. ಲಘು ಭೂಕಂಪನವಾಗಿದ್ದರಿಂದ ಯಾವುದೇ ಹಾನಿಯುಂಟಾಗಿಲ್ಲ. ಎಂದು ವರದಿಯಲ್ಲಿ ತಿಳಿಸಲಾಗಿದೆ.

ಅದೇ ರೀತಿ ಕಾಶ್ಮೀರಕ್ಕೆ ಹೊಂದಿ ಕೊಂಡಿರುವ ದೆಹಲಿ ಕೆಲ ಭಾಗದಲ್ಲೂ ಹಾಗೂ ಪಾಕಿಸ್ತಾನದ ಕೆಲ ಪ್ರದೇಶಗಳಲ್ಲಿ ಕಂಪನ ಉಂಟಾಗಿದೆ ಎಂದು ಹೇಳಲಾಗಿದೆ. ಭೂಮಕಂಪನದ ಉಂಟಾಗಿರುವ ಬಗ್ಗೆ ಟೀಂ ಇಂಡಿಯಾದ ಆಟಗಾರ ಇರ್ಫಾನ್​ ಪಠಾಣ್ ಕೂಡ ತಮ್ಮ ಟ್ವಿಟರ್​ ಖಾತೆಯಲ್ಲಿ ಹೇಳಿಕೊಂಡಿದ್ದಾರೆ. ಇದ್ದಕ್ಕಿದಂತೆ ಮಂಚವನ್ನು ಅಲುಗಾಡಿಸಿದಂತಹ ಅನುಭವವಾಯಿತು ಎಂದು ಪಠಾಣ್​ ತಿಳಿಸಿದ್ದಾರೆ.

ಕೆಲ ದಿನಗಳ ಹಿಂದೆ ತೀರ್ಥಹಳ್ಳಿ, ಹೊಸನಗರ ತಾಲೂಕಿನ ವರಾಹಿ ಜಲ ವಿದ್ಯುತ್ ಯೋಜನಾ ಪ್ರದೇಶದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಭೂಕಂಪನದ ಅನುಭವವಾಗಿತ್ತು. ವರಾಹಿ ಜಲವಿದ್ಯುತ್ ಯೋಜನಾ ಪ್ರದೇಶದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಧ್ಯರಾತ್ರಿಯಲ್ಲಿ ಬರೋಬ್ಬರಿ 30 ಸೆಕೆಂಡ್ ಗಳ ಕಾಲ ಭೂಮಿ ಕಂಪಿಸಿದ ಅನುಭವವಾಗಿತ್ತು.
First published: February 6, 2019, 8:54 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading