• Home
  • »
  • News
  • »
  • national-international
  • »
  • Alert: ಚಾಲಕರ ಗಮನಕ್ಕೆ: ವಾಹನ ಚಲಾಯಿಸುವಾಗ ಮೊಬೈಲ್ ಬಳಸಿ 1,040 ಜನರ ಸಾವು

Alert: ಚಾಲಕರ ಗಮನಕ್ಕೆ: ವಾಹನ ಚಲಾಯಿಸುವಾಗ ಮೊಬೈಲ್ ಬಳಸಿ 1,040 ಜನರ ಸಾವು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

2021 ರಲ್ಲಿ ಚಾಲಕರು ವಾಹನ ಚಲಾಯಿಸುವಾಗ ಮೊಬೈಲ್ ಫೋನ್ ಗಳನ್ನು ಬಳಸಿರುವುದರಿಂದ ಒಟ್ಟು 1,997 ರಸ್ತೆ ಅಪಘಾತಗಳು ಸಂಭವಿಸಿವೆ.

  • News18 Kannada
  • Last Updated :
  • Karnataka, India
  • Share this:

ರಸ್ತೆಯಲ್ಲಿ ಹೋಗುವಾಗ ಕಾರಿನ ಚಾಲಕರು ಮತ್ತು ಬೈಕ್ ಮೇಲೆ ಹೋಗುವವರು ತಮ್ಮ ಕಿವಿಗೆ ಮೊಬೈಲ್ ಇಟ್ಟುಕೊಂಡು ಮಾತನಾಡುತ್ತಾ ಡ್ರೈವಿಂಗ್‌ ಮೇಲೆ ಅಲ್ಪಸ್ವಲ್ಪ ಲಕ್ಷ್ಯ ಇಟ್ಟುಕೊಂಡು ಹೋಗುವುದನ್ನು ನಾವು ನೋಡಿರುತ್ತೇವೆ. ಹೀಗೆ ವಾಹನ ಚಲಾಯಿಸುವಾಗ ಮೊಬೈಲ್ ಫೋನ್​ನಲ್ಲಿ (Mobile Phone) ಮಾತಾಡಬೇಡಿ, ಇದು ಅಪಾಯಕ್ಕೆ (Road Accident) ದಾರಿ ಮಾಡಿಕೊಡುತ್ತದೆ ಅಂತ ಅನೇಕ ಬಾರಿ ಸಂಚಾರಿ ಪೊಲೀಸರು ರಸ್ತೆ ಬದಿಗಳಲ್ಲಿ ದೊಡ್ಡ ದೊಡ್ಡ ಎಚ್ಚರಿಕೆಯ ಸಂದೇಶವಿರುವ ಬ್ಯಾನರ್ ಗಳನ್ನು ಹಾಕಿದ್ದರೂ, ಸಂಚಾರಿ ಪೊಲೀಸರು (Traffic Police) ಚಾಲಕರನ್ನು ಹಿಡಿದು ದೊಡ್ಡ ಮೊತ್ತದ ದಂಡ  (Traffic Fine) ಹಾಕಿದರೂ ಸಹ ಅವರಿಗೆ ಬುದ್ದಿ ಬಂದಂತಿಲ್ಲ ಅಂತ ಹೇಳಬಹುದು.


ಎಷ್ಟೋ ಬಾರಿ ಈ ರೀತಿಯಾಗಿ ಮೊಬೈಲ್ ನಲ್ಲಿ ಮಾತಾಡುತ್ತಾ ವಾಹನ ಚಲಾಯಿಸಿದ್ದರಿಂದ ಅಪಘಾತಗಳು ಸಹ ಸಂಭವಿಸಿವೆ ಅಂತ ಹೇಳಬಹುದು. ಈ ರೀತಿಯಾಗಿ ಮೊಬೈಲ್ ನಲ್ಲಿ ಮಾತಾಡುತ್ತಾ ವಾಹನ ಚಲಾಯಿಸಿ ತಾವು ಮಾಡಿದ ತಪ್ಪಿಗೆ ಮತ್ತು ಅಜಾಗರೂಕತೆಗೆ ತಮ್ಮ ಪ್ರಾಣವನ್ನು ಕೈಚೆಲ್ಲುವುದರ ಜೊತೆಗೆ ರಸ್ತೆ ಮೇಲೆ ಹೋಗುತ್ತಿರುವ ಬೇರೆ ಅಮಾಯಕರ ಪ್ರಾಣವನ್ನು ಸಹ ಬಲಿ ತೆಗೆದುಕೊಳ್ಳುತ್ತಾರೆ.


ಮೊಬೈಲ್ ಫೋನ್ ಬಳಕೆಯಿಂದಾಗಿ 1,997 ರಸ್ತೆ ಅಪಘಾತಗಳು ಸಂಭವ
ಚಾಲಕರಲ್ಲಿ ಮೊಬೈಲ್ ಫೋನ್ ಬಳಕೆಯು ಕಳೆದ ಕೆಲವು ವರ್ಷಗಳಲ್ಲಿ ಸಂಚಾರ ಸುರಕ್ಷತೆಗೆ ದೊಡ್ಡ ಅಪಾಯವಾಗಿ ಪರಿಣಮಿಸಿದೆ. ಡ್ರೈವಿಂಗ್ ಸಮಯದಲ್ಲಿ ಮೊಬೈಲ್ ಫೋನ್ ಗಳನ್ನು ಬಳಸುವುದು ಜೀವಗಳನ್ನು ಬಲಿ ತೆಗೆದುಕೊಳ್ಳುತ್ತಲೇ ಇದೆ.


1,040 ಜನರು ಬಲಿ
ಸುದ್ದಿಸಂಸ್ಥೆ ಪಿಟಿಐ ವರದಿಯ ಪ್ರಕಾರ, 2021 ರಲ್ಲಿ ಚಾಲಕರು ವಾಹನ ಚಲಾಯಿಸುವಾಗ ಮೊಬೈಲ್ ಫೋನ್ ಗಳನ್ನು ಬಳಸಿರುವುದರಿಂದ ಒಟ್ಟು 1,997 ರಸ್ತೆ ಅಪಘಾತಗಳು ಸಂಭವಿಸಿವೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ವರದಿಯ ಪ್ರಕಾರ, ಈ ಅಪಘಾತಗಳು 1,040 ಜನರನ್ನು ಬಲಿ ತೆಗೆದುಕೊಂಡಿವೆ.


'ಭಾರತದಲ್ಲಿ ರಸ್ತೆ ಅಪಘಾತಗಳು - 2021' ಎಂಬ ಶೀರ್ಷಿಕೆಯ ವರದಿಯಲ್ಲಿ, 2021 ರಲ್ಲಿ ರಸ್ತೆಯ ಮೇಲೆ ಸಿಗ್ನಲ್​ನಲ್ಲಿ ಕೆಂಪು ದೀಪ ಇದ್ದರೂ ಸಹ ನಿಲ್ಲದೆ ಹಾಗೆಯೇ ಮುನ್ನುಗ್ಗಿ ಹೋಗಿದ್ದರಿಂದ 555 ರಸ್ತೆ ಅಪಘಾತಗಳು ಸಂಭವಿಸಿವೆ, ಇದು 2021 ರಲ್ಲಿ ಒಟ್ಟು 222 ಜನರನ್ನು ಬಲಿ ತೆಗೆದುಕೊಂಡಿದೆ ಎಂದು ಹೇಳಿದೆ. 2021 ರಲ್ಲಿ ಒಟ್ಟು 4,12,432 ರಸ್ತೆ ಅಪಘಾತಗಳು ಸಂಭವಿಸಿದ್ದು, 1,53,972 ಜನರನ್ನು ಬಲಿ ತೆಗೆದುಕೊಂಡಿದೆ ಮತ್ತು 3,84,448 ಜನರು ಗಾಯಗೊಂಡಿದ್ದಾರೆ.


ಡ್ರೈವಿಂಗ್ ಮಾಡುವಾಗ ಮೊಬೈಲ್ ಬಳಸಿದರೆ ಬಿಳುತ್ತೇ ಭಾರಿ ದಂಡ
ವಾಹನ ಚಾಲನೆ ಮಾಡುವಾಗ ಮೊಬೈಲ್ ಫೋನ್ ಗಳನ್ನು ಬಳಸುವುದು ಶಿಕ್ಷಾರ್ಹ ಅಪರಾಧವಾಗಿದೆ. ಮೋಟಾರು ವಾಹನ ಕಾಯ್ದೆಯ ಪ್ರಕಾರ, ವಾಹನ ಚಾಲನೆ ಮಾಡುವಾಗ ಮೊಬೈಲ್ ಫೋನ್ ನಲ್ಲಿ ಮಾತನಾಡುವಾಗ ಯಾರಾದರೂ ಸಿಕ್ಕಿಬಿದ್ದರೆ, ಅದಕ್ಕೆ 5000 ರೂಪಾಯಿ ದಂಡ ವಿಧಿಸಲಾಗುವುದು. ಇದು ಮೊದಲು 1000 ರೂಪಾಯಿಗಳಷ್ಟಿತ್ತು. ಇದನ್ನು 2020 ರಲ್ಲಿ ಐದು ಪಟ್ಟು ಹೆಚ್ಚಿಸಲಾಯಿತು. ಮೋಟಾರು ವಾಹನ (ತಿದ್ದುಪಡಿ) ಕಾಯ್ದೆಯ ಭಾಗವಾಗಿ ಈ ನಿಯಮಗಳನ್ನು ಜಾರಿಗೆ ತರಲಾಗಿದೆ. ಡ್ರೈವಿಂಗ್ ಮಾಡುವಾಗ ಚಾಲಕರು ಮೊಬೈಲ್ ಫೋನ್ ಗಳನ್ನು ಬಳಸುವುದನ್ನು ಸಂಪೂರ್ಣವಾಗಿ ತಡೆಯುವ ಉದ್ದೇಶದಿಂದ ಇದನ್ನು ಜಾರಿಗೆ ತರಲಾಯಿತು.


ಇದನ್ನೂ ಓದಿ:  Supreme Court On Note Ban: ಕೇಂದ್ರ ಸರ್ಕಾರದ ನೋಟ್ ಬ್ಯಾನ್ ನಿರ್ಧಾರ, ಮಹತ್ವದ ಆದೇಶ ನೀಡಿದ ಸುಪ್ರೀಂ


ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಪ್ರಕಾರ, ರೂಟ್ ನ್ಯಾವಿಗೇಶನ್ ಗಾಗಿ ಮಾತ್ರ ಚಾಲನೆ ಮಾಡುವಾಗ ಮೊಬೈಲ್ ಫೋನ್ ಗಳನ್ನು ಬಳಸಬಹುದು. ಇದು ಕೂಡ 'ಡ್ರೈವಿಂಗ್ ಮಾಡುವಾಗ ಚಾಲಕನ ಏಕಾಗ್ರತೆಗೆ' ತೊಂದರೆಯಾಗದಂತೆ ಬಳಸಬೇಕು.


ಇದನ್ನೂ ಓದಿ: Crime News: ಪ್ರೀತಿಗೆ ಒಪ್ಪದ ಅಮ್ಮನಿಗೆ ಮುಹೂರ್ತವಿಟ್ಟ ಮಗಳು, ಪ್ರಿಯಕರನ ಜೊತೆ ಸೇರಿ ತಾಯಿಯನ್ನೇ ಕೊಂದಳು!


ವರದಿಯ ಪ್ರಕಾರ 2021 ರಲ್ಲಿ ರಸ್ತೆಯಲ್ಲಿರುವ ಗುಂಡಿಗಳಿಂದಾಗಿ ಸಂಭವಿಸಿದ ಒಟ್ಟು ಅಪಘಾತಗಳು ಮತ್ತು ಸಾವುಗಳ ಸಂಖ್ಯೆ ಕ್ರಮವಾಗಿ 3,625 ಮತ್ತು 1,481 ಇವೆ. ರಸ್ತೆ ಅಪಘಾತಗಳು ಸಂಭವಿಸಿರುವುದಕ್ಕೆ ಅನೇಕ ರೀತಿಯ ಕಾರಣಗಳಿದ್ದು, ಎಲ್ಲಾ ಏಜೆನ್ಸಿಗಳ ಸಂಘಟಿತ ಪ್ರಯತ್ನಗಳ ಮೂಲಕ ಸಮಸ್ಯೆಗಳನ್ನು ಕಡಿಮೆ ಮಾಡಲು ಬಹು-ಆಯಾಮದ ಕ್ರಮಗಳ ಅಗತ್ಯವಿದೆ ಎಂದು ಸಚಿವಾಲಯದ ವರದಿ ಹೇಳಿದೆ.

Published by:ಗುರುಗಣೇಶ ಡಬ್ಗುಳಿ
First published: