ಅಬ್ಬಾ..! ತಿಂಡಿ ತಿನ್ನುತ್ತಿದ್ದಾತನ ಕಿಸೆಯಲ್ಲಿದ್ದ ಮೊಬೈಲ್​ ಬ್ಲಾಸ್ಟ್​: ಮುಂದೆ ನಡೆದದ್ದೇನು?


Updated:June 6, 2018, 11:22 AM IST
ಅಬ್ಬಾ..! ತಿಂಡಿ ತಿನ್ನುತ್ತಿದ್ದಾತನ ಕಿಸೆಯಲ್ಲಿದ್ದ ಮೊಬೈಲ್​ ಬ್ಲಾಸ್ಟ್​: ಮುಂದೆ ನಡೆದದ್ದೇನು?

Updated: June 6, 2018, 11:22 AM IST
ನ್ಯೂಸ್ 18 ಕನ್ನಡ

ಮುಂಬೈ(ಜೂ.06): ಮುಂಬೈನಲ್ಲಿ ಮೊಬೈಲ್​ ಸ್ಪೋಟಗೊಂಡ ಬೆಚ್ಚಿ ಬೀಳಿಸುವ ವಿಡಿಯೋ ಒಂದು ವೈರಲ್​ ಆಗಿದೆ. ಇಲ್ಲಿನ ಭಾಂಡಪ್​ ಪ್ರದೇಶದಲ್ಲಿದ್ದ ರೆಸ್ಟೋರೆಂಟ್​ ಒಂದರಲ್ಲಿ ತಿಂಡಿ ತಿನ್ನುತ್ತಿದ್ದ ವ್ಯಕ್ತಿಯೊಬ್ಬನ ಕಿಸೆಯಲ್ಲಿದ್ದ ಮೊಬೈಲ್​ ಫೋನ್​ ನೋಡ ನೋಡುತ್ತಿದ್ದಂತೆ ಬ್ಲಾಸ್ಟ್​ ಆಗಿದೆ. ಇನ್ನು ಮೊಬೈಲ್​ ಸಿಡಿಯುತ್ತಿದ್ದಂತೆಯೇ ಮೊಬೈಲ್​ ದೂರ ಎಸೆದು ಅಲ್ಲಿಂದ ದೂರ ಹೋಗಿ ನಿಂತಿದ್ದಾನೆ. ಈ ಘಟನೆಯು ಜೂನ್​ 4 ರಂದು ನಡೆದ ಈ ಶಾಕಿಂಗ್​ ಘಟನೆಯ ದೃಶ್ಯಾವಳಿಗಳು ರೆಸ್ಟೋರೆಂಟ್​ನಲ್ಲಿ ಅಳವಡಿಸಿರುವ ಸಿಸಿಟಿವಿಯಲ್ಲಿ ದಾಖಲಾಗಿವೆ.

ಸಿಸಿಟಿವಿಯಲ್ಲಿ ಮೊಬೈಲ್​ ಬ್ಲಾಸ್ಟ್​ ಆಗುತ್ತಿದ್ದಂತೆಯೇ ಯಾವ ರೀತಿ ಆ ವ್ಯಕ್ತಿ ತನ್ನ ಸೀಟಿನಿಂದ ಎದ್ದು ತನ್ನ ಕಿಸೆಯಲ್ಲಿದ್ದ ಮೊಬೈಲ್ ತೆಗೆದೆಸೆಯುತ್ತಾನೆ ಎಂಬುವುದು ಸ್ಪಷ್ಟವಾಗಿ ದಾಖಲಾಗಿದೆ. ಇನ್ನು ಮೊಬೈಲ್​ ಬ್ಲಾಸ್ಟ್​ ಆಗುತ್ತಿದ್ದಂತೆಯೇ ರೆಸ್ಟೋರೆಂಟ್​ನೊಳಗೆ ಹೊಗೆ ತುಂಬಿಕೊಂಡಿರುವುದು ಮತ್ತಷ್ಟು ಗಾಬರಿ ಹುಟ್ಟಿಸುವಂತಿದೆ.

ಇನ್ನು ಬೆಚ್ಚಿ ಬೀಳಿಸುವ ಘಟನೆ ಕಂಡು ಅಲ್ಲದ್ದ ಜನರು ಕೂಡಾ ರೆಸ್ಟೋರೆಂಟ್​ನಿಂದ ಓಡಿ ಹೋಗಿದ್ದಾರೆ. ಇನ್ನು ಮೊಬೈಲ್​ ಬ್ಲಾದಸ್ಟ್​ನಿಂದ ವ್ಯಕ್ತಿಗೆ ಗಾಯಗಳಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನ್ಯೂಸ್​ ಏಜೆನ್ಸಿ ಎಎನ್​ಐ ಈ ಘಟನೆಯ ವಿಡಿಯೋವನ್ನು ಟ್ವೀಟ್​ ಮಾಡಿದೆ.


Loading...


ಮೊಬೈಲ್​ ಬ್ಲಾಸ್ಟ್​ ಆಗಿದ್ದು ಇದು ಮೊದಲ ಬಾರಿಯಲ್ಲ. ಈ ಹಿಂದೆ ಮಾರ್ಚ್​​ನಲ್ಲಿ ಮೊಬೈಲ್​ ಸ್ಪೋಟಗೊಂಡ ಪ್ರಕರಣ ವರದಿಯಾಗಿತ್ತು. ಒಡಿಶಾದಲ್ಲಿ ಮೊಬೈಲ್​ ಬಳಸುತ್ತಿದ್ದ ಸಂದರ್ಭದಲ್ಲಿ ಸ್ಟೋಟಗೊಂಡು ವ್ಯಕ್ತಿ ಸಾವನ್ನಪ್ಪದ್ದ. ಹೀಗೆ ಇನ್ನೂ ಇತರ ಘಟನೆಗಳು ಸಂಭವಿಸಿವೆ.
First published:June 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ