• Home
  • »
  • News
  • »
  • national-international
  • »
  • Rajasthan: ಇಲ್ಲಿ ನ್ಯಾಯ ನಿರ್ಣಯದ ಸಂಪೂರ್ಣ ಹಕ್ಕು ಮಹಿಳೆಯರದ್ದೇ!

Rajasthan: ಇಲ್ಲಿ ನ್ಯಾಯ ನಿರ್ಣಯದ ಸಂಪೂರ್ಣ ಹಕ್ಕು ಮಹಿಳೆಯರದ್ದೇ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನ್ಯಾಯಾಧಿಕಾರಿಯಾಗಿ ಕೆಲಸ ಮಾಡುವ ಮಹಿಳೆಯರು ಸ್ವತಂತ್ರವಾಗಿ ಆಡಳಿತ ನಡೆಸುವುದರಿಂದ ಹಿಡಿದು ನ್ಯಾಯಾಧೀಶರಾಗಿ ಕರ್ತವ್ಯ ಪೂರೈಸುವವರೆಗೆ ಬಹಳಷ್ಟು ಕಲಿಯಬಹುದು ಎಂಬುದಾಗಿ ತಿಳಿಸಿದ್ದು, ನ್ಯಾಯ ನಿರ್ಣಯದ ಸಂಪೂರ್ಣ ಹಕ್ಕು ಮಹಿಳಾ ನ್ಯಾಯಾಧಿಕಾರಿಗಿರುತ್ತದೆ ಎಂದು ತಿಳಿಸಿದ್ದಾರೆ.

  • Share this:

ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಮಂಧನ್ ಗ್ರಾಮದಲ್ಲಿನ ಮೊಬೈಲ್ ಕೋರ್ಟ್ (Mobile court) ಅಂದರೆ ಗ್ರಾಮ ನ್ಯಾಯಾಲಯ ಭಾರತೀಯ ನ್ಯಾಯ (Indian Law) ವ್ಯವಸ್ಥೆಯ ಸುಪರ್ದಿಯಲ್ಲಿಯೇ ಕಾರ್ಯನಿರ್ವಹಿಸುವ ನ್ಯಾಯಾಲಯ ಎಂದೆನಿಸಿದೆ. ರಾಜಸ್ಥಾನದ ಗ್ರಾಮ (Village) ನ್ಯಾಯಾಲಯಗಳಲ್ಲಿ 70% ಕ್ಕೂ ಹೆಚ್ಚಿನ ನ್ಯಾಯಾಧೀಶರು ಮಹಿಳೆಯರೇ ಆಗಿದ್ದು ಹಲವಾರು ಸವಾಲುಗಳನ್ನು (Challenge) ಮೆಟ್ಟಿನಿಂತು ನ್ಯಾಯವನ್ನು ಒದಗಿಸುವ ಅಭೂತಪೂರ್ವ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.


ನ್ಯಾಯಾಧಿಕಾರಿಯಾಗಿ ಕೆಲಸ ಮಾಡುವ ಮಹಿಳೆಯರು ಸ್ವತಂತ್ರವಾಗಿ ಆಡಳಿತ ನಡೆಸುವುದರಿಂದ ಹಿಡಿದು ನ್ಯಾಯಾಧೀಶರಾಗಿ ಕರ್ತವ್ಯ ಪೂರೈಸುವವರೆಗೆ ಬಹಳಷ್ಟು ಕಲಿಯಬಹುದು ಎಂಬುದಾಗಿ ತಿಳಿಸಿದ್ದು, ನ್ಯಾಯ ನಿರ್ಣಯದ ಸಂಪೂರ್ಣ ಹಕ್ಕು ಮಹಿಳಾ ನ್ಯಾಯಾಧಿಕಾರಿಗಿರುತ್ತದೆ ಎಂದು ತಿಳಿಸಿದ್ದಾರೆ. ಗ್ರಾಮೀಣ ನ್ಯಾಯಾಲಯಕ್ಕೆ ಬರುವ ಪ್ರತಿಯೊಬ್ಬ ಅಸಹಾಯಕ ಹೆಣ್ಣುಮಕ್ಕಳು ತಮಗೆ ಸೂಕ್ತ ನ್ಯಾಯ ದೊರಕುತ್ತದೆ ಹಾಗೂ ತಮಗಾದ ಅನ್ಯಾಯವನ್ನು ಆಲಿಸುವವರಿರುತ್ತಾರೆ ಎಂಬ ಆಶಾಭಾವನೆಯನ್ನು ಹೊಂದಿರುತ್ತಾರೆ ಎಂಬುದು ಇಲ್ಲಿನ ಮಹಿಳಾ ನ್ಯಾಯಾಧಿಕಾರಿಗಳ ಮಾತಾಗಿದೆ. ಇಲ್ಲಿನ ಪಂಚಾಯತ್ ಭವನವೇ ನ್ಯಾಯಸ್ಥಳದಂತೆ ಮಾರ್ಪಟ್ಟಿದೆ.


ಸಮಾನ ನ್ಯಾಯತೀರ್ಮಾನ
ಮಧ್ಯಾಹ್ನ 12 ಗಂಟೆಗೆ ಗ್ರಾಮೀಣ ನ್ಯಾಯಾಲಯದ ಕಚೇರಿಯನ್ನು ಪ್ರವೇಶಿಸುವ ಮ್ಯಾಜಿಸ್ಟ್ರೇಟ್ ಸರೋಜ್ ಚೌಧರಿ ಖಡಕ್ ವೃತ್ತಿಪರತೆಗೆ ಹೆಸರುವಾಸಿಯಾಗಿದ್ದಾರೆ. ಕ್ರಿಮಿನಲ್ ಮೇಜರ್ ಆ್ಯಕ್ಟ್ ಪುಸ್ತಕವನ್ನು ಒಂದು ಕೈಯಲ್ಲಿ ಹಿಡಿದುಕೊಂಡು ಕೋಣೆಯನ್ನು ಪ್ರವೇಶಿಸುತ್ತಿದ್ದಂತೆಯೇ ಒಬ್ಬೊಬ್ಬರು ಸರದಿಯಂತೆ ಬಂದು ತಮ್ಮ ತಮ್ಮ ಆಪಾದನೆಗಳನ್ನು ಆಕೆಯ ಮುಂದೆ ಹೇಳುತ್ತಾರೆ.


ನೆರೆ ಹೊರೆಯವರ ವಿವಾದ
ನೆರೆಹೊರೆಯ ವಿವಾಹದಲ್ಲಿ ಭಾಗವಹಿಸಿದ್ದಕ್ಕಾಗಿ ಪತಿಯ ಸಹೋದರನಿಂದ ಹಲ್ಲೆಗೊಳಗಾದ ಬೀನಾ, ಸರೋಜ್ ಚೌಧರಿ ಮುಂದೆ ತಮ್ಮ ದಾರುಣ ಘಟನೆಯನ್ನು ವಿವರಿಸುತ್ತಾರೆ ಹಾಗೂ ತನ್ನ ಪತಿಯೇ ಕೇಸ್ ಅನ್ನು ಹಿಂಪಡೆದುಕೊಳ್ಳುವಂತೆ ಒತ್ತಡ ಹೇರಿರುವುದಾಗಿ ಆಕೆ ನ್ಯಾಯಾಲಯದಲ್ಲಿ ಅಳಲು ತೋಡಿಕೊಳ್ಳುತ್ತಾರೆ.


ಈ ಸಮಯದಲ್ಲಿ ಬೀನಾಗೆ ಬೆಂಬಲವಾಗಿ ಮಾತನಾಡುವ ಚೌಧರಿ, ಮಹಿಳೆಯರು ನ್ಯಾಯಾಲಯದಲ್ಲಿ ಪ್ರಸ್ತಾವಿಸುವ ಪ್ರಕರಣಗಳಲ್ಲಿ ಹೆಚ್ಚಾಗಿ ಅವರು ರಾಜಿಮಾಡಿಕೊಳ್ಳುವಂತೆ ಸೂಚಿಸಲಾಗುತ್ತದೆಯೇ ಹೊರತು ಮಹಿಳೆಯರ ಹಕ್ಕುಗಳ ಬಗ್ಗೆ ಅರಿವು ಏಕಿಲ್ಲ ಎಂದು ಪ್ರಶ್ನಿಸಿದ್ದಾರೆ.


45 ಗ್ರಾಮ ನ್ಯಾಯಾಲಯಗಳು
ಮಹಿಳಾ ಹಕ್ಕುಗಳು ಹಾಗೂ ಮಹಿಳೆಯ ಮೇಲೆ ನಡೆಯುವ ಅನ್ಯಾಯದ ವಿರುದ್ಧ ದನಿಯಾಗುವ ಇಂತಹ 45 ಗ್ರಾಮ ನ್ಯಾಯಾಲಯಗಳನ್ನು ರಾಜಸ್ಥಾನ ಹೊಂದಿದೆ ಹಾಗೂ ಇಲ್ಲಿ ಕಾರ್ಯನಿರ್ವಹಿಸುವ ಹೆಚ್ಚಿನ ಮಹಿಳಾ ನ್ಯಾಯಾಧೀಶರು ತಮ್ಮ ಚತುರತೆಯಿಂದ ತೀರ್ಪು ನೀಡುತ್ತಾರೆ. ಇಲ್ಲಿ ಚೌಧುರಿಯವರ ತೀರ್ಪು ಕೂಡ ಇದಕ್ಕೆ ಒಂದು ಉದಾಹರಣೆಯಾಗಿದೆ.


ಗ್ರಾಮೀಣ ಭಾಗಗಳಲ್ಲಿ ನ್ಯಾಯ ತೀರ್ಮಾನ ಎಂಬುದು ಸವಾಲಿನಿಂದ ಕೂಡಿದ ಪ್ರಕ್ರಿಯೆಯಾಗಿರುತ್ತದೆ. ಇಲ್ಲಿ ಜಾತಿ ಹಾಗೂ ಲಿಂಗ ಸಮಾನತೆ ಎರಡನ್ನೂ ಗಮನದಲ್ಲಿಟ್ಟುಕೊಂಡು ನ್ಯಾಯ ತೀರ್ಮಾನ ಮಾಡಬೇಕಾಗುತ್ತದೆ. ಕಾನೂನು ಬದ್ಧತೆಯು ಗ್ರಾಮಸ್ಥರ ನೈತಿಕತೆಯೊಂದಿಗೆ ಘರ್ಷಣೆಯಾಗುತ್ತದೆ. ಹಾಗಾಗಿ ತುಂಬಾ ಸೂಕ್ಷ್ಮವಾಗಿ ನ್ಯಾಯ ತೀರ್ಮಾನವನ್ನು ಮಾಡಬೇಕಾಗುತ್ತದೆ ಎಂಬುದು ಸೇವಾ ಮಹಿಳಾ ನ್ಯಾಯಾಧೀಶರ ಹೇಳಿಕೆಯಾಗಿದೆ.


ವಿಕಸನಗೊಳ್ಳುತ್ತಿರುವ ಗ್ರಾಮೀಣ ನ್ಯಾಯಾಲಯದ ಪರಿಕಲ್ಪನೆ
2016ರ ಆರ್‌ಜೆಎಸ್ ಬ್ಯಾಚ್‌ನ ಮ್ಯಾಜಿಸ್ಟ್ರೇಟ್ ಮೂವತ್ತೈದು ವರ್ಷದ ಸರೋಜ್ ಚೌಧರಿ ಅಷ್ಟೊಂದು ನುರಿತರಲ್ಲ. ಮಾರ್ಚ್ 2020 ರಿಂದ ಅವರು ಅಲ್ವಾರ್‌ನ ನೀಮ್ರಾನಾ ತಹಸಿಲ್‌ನಲ್ಲಿ ನ್ಯಾಯಾಧಿಕಾರಿಯಾಗಿ ನೇಮಕಗೊಂಡಾಗಿನಿಂದ ಕನಿಷ್ಠ ನೂರು ಮೊಬೈಲ್ ನ್ಯಾಯಾಲಯಗಳನ್ನು ನಡೆಸಿದ್ದಾರೆ.


ಮಂಧನ್ ನಿವಾಸಿಗಳು ಕೂಡ ಮಹಿಳಾ ನ್ಯಾಯಾಧೀಶರನ್ನು ಸ್ವೀಕರಿಸಿದ್ದಾರೆ. ಪಿತೃಪ್ರಭುತ್ವ ಸಮಾಜದ ವ್ಯವಸ್ಥೆಯಲ್ಲಿ ಕಾನೂನು ಪಾಲನೆಯನ್ನು ಚೌಧರಿ ಚತುರತೆಯಿಂದ ನಿಭಾಯಿಸುತ್ತಿದ್ದಾರೆ. ಚೌಧರಿ ಅಲ್ಲಿನ ನಾಲ್ಕನೇ ಮಹಿಳಾ ನ್ಯಾಯಾಧೀಶೆಯಾಗಿದ್ದು ಗ್ರಾಮಸ್ಥರ ನೋವನ್ನು ಅರಿತುಕೊಂಡು ಸರಿಯಾದ ರೀತಿಯಲ್ಲಿಯೇ ನ್ಯಾಯವನ್ನು ಒದಗಿಸುತ್ತಾರೆ ಎಂಬುದು ಅಲ್ಲಿನ ಸರ್‌ಪಂಚ್ ಸುರೇಂದರ್ ಯಾದವ್ ಮಾತಾಗಿದೆ.


ಇದನ್ನೂ ಓದಿ: ಅಪ್ಪ, ಅಮ್ಮ, ಅಕ್ಕ, ಅಜ್ಜಿಯನ್ನು ಕೊಂದ 'ಕುಲಪುತ್ರ': ಮತ್ತೊಂದು ಕೊಲೆ ಪ್ರಕರಣಕ್ಕೆ ತತ್ತರಿಸಿದ ದೆಹಲಿ!


ಇಂತಹ ನ್ಯಾಯಾಲಯಗಳನ್ನು ಸ್ಥಾಪಿಸುವ ಹೊಣೆಗಾರಿಕೆಯನ್ನು ನೀಡುವ ಗ್ರಾಮ ನ್ಯಾಯಾಲಯ ಕಾಯಿದೆಯು 2008 ರಲ್ಲಿ ಅಸ್ತಿತ್ವಕ್ಕೆ ಬಂದಿತು. ಭಾರತದಲ್ಲಿ ಅದೆಷ್ಟೋ ಪರಿಹಾರವಾಗದೇ ಉಳಿದಿರುವ ನ್ಯಾಯ ಸಮಸ್ಯೆಗಳಿಗೆ ಇಂತಹ ಗ್ರಾಮ ನ್ಯಾಯಾಲಯ ಉತ್ತರವಾಗಿದೆ. ಪ್ರಸ್ತುತ ಸುಮಾರು 4.5 ಕೋಟಿ ಬಾಕಿ ಪ್ರಕರಣಗಳಿದ್ದು, ಅದರಲ್ಲಿ ಶೇ.87.6ರಷ್ಟು ಪ್ರಕರಣಗಳು ಕೆಳ ನ್ಯಾಯಾಲಯಗಳಲ್ಲಿವೆ.


ಗ್ರಾಮೀಣ ನ್ಯಾಯಾಲಯ
ಕಾಯಿದೆ ಜಾರಿಯಲ್ಲಿದ್ದರೂ, ಗ್ರಾಮೀಣ ನ್ಯಾಯಾಲಯದ ಪರಿಕಲ್ಪನೆ ಇನ್ನೂ ವಿಕಸನಗೊಳ್ಳುತ್ತಿದೆ. ಪ್ರಸ್ತುತ, 10 ರಾಜ್ಯಗಳಲ್ಲಿ ಕೇವಲ 258 ಕ್ರಿಯಾತ್ಮಕ ಗ್ರಾಮೀಣ ನ್ಯಾಯಾಲಯಗಳಿವೆ. ಅವುಗಳಲ್ಲಿ ಒಂದು ನೀಮ್ರಾಣ ಗ್ರಾಮ ನ್ಯಾಯಾಲಯ, ಇದನ್ನು 2011 ರಲ್ಲಿ ಸ್ಥಾಪಿಸಲಾಯಿತು.


ಕೇಂದ್ರ ಸರ್ಕಾರ 476 ಗ್ರಾಮ ನ್ಯಾಯಲಯಗಳನ್ನು ಸ್ಥಾಪಿಸಲು ನೋಟಿಸ್ ಜಾರಿ ಮಾಡಿದ್ದು, ಅದಕ್ಕಾಗಿ 50 ಕೋಟಿ ರೂ. ಮಂಜೂರ್ ಮಾಡಿದೆ. ಈ ಗ್ರಾಮೀಣ ನ್ಯಾಯಾಲಯಗಳು ಸಿವಿಲ್ ಮತ್ತು ಕ್ರಿಮಿನಲ್ ವಿಷಯಗಳೆರಡರಲ್ಲೂ ತೀರ್ಪು ನೀಡುತ್ತವೆ ಆದರೆ ಅಪರಾಧವು ಎರಡು ವರ್ಷಗಳಿಗಿಂತ ಕಡಿಮೆ ಜೈಲು ಶಿಕ್ಷೆಗೆ ಗುರಿಯಾಗುವ ಪ್ರಕರಣಗಳಿಗೆ ಸೀಮಿತವಾಗಿದೆ.


ದಾಖಲಾಗುವ ಹೊಸ ಪ್ರಕರಣಗಳ ಸಂಖ್ಯೆ
ಪ್ರತಿ 1,000 ಜನಸಂಖ್ಯೆಗೆ ವರ್ಷದಲ್ಲಿ ದಾಖಲಾಗುವ ಹೊಸ ಪ್ರಕರಣಗಳ ಅನುಪಾತವು ನ್ಯಾಯದ ಅಂತರವನ್ನು ನಿರ್ಧರಿಸಲು ಉಪಯುಕ್ತವಾಗಿದೆ ಎಂಬುದು ಮೋಹನ್ ಅವರ ಮಾತಾಗಿದೆ. ಈ ಅನುಪಾತವು ಬಿಹಾರದಲ್ಲಿ 1,000 ಅನುಪಾತ, ಜನಸಂಖ್ಯೆಗೆ ಸುಮಾರು 5 ಹೊಸ ಪ್ರಕರಣಗಳು; ತಮಿಳುನಾಡಿನಲ್ಲಿ 8; ಉತ್ತರ ಪ್ರದೇಶದಲ್ಲಿ 16; ಒಟ್ಟಾರೆ ಭಾರತದಲ್ಲಿ ಸುಮಾರು 18 ಹೊಸ ಪ್ರಕರಣಗಳು ದಾಖಲಾಗಿವೆ. ದೆಹಲಿಯಲ್ಲಿ ಸುಮಾರು 20 ಹೊಸ ಪ್ರಕರಣಗಳು ಮತ್ತು ಕೇರಳದಲ್ಲಿ ಸುಮಾರು 22 ಹೊಸ ಪ್ರಕರಣಗಳು ದಾಖಲಾಗಿವೆ ಎಂಬುದು ಮೋಹನ್ ಹೇಳಿಕೆಯಾಗಿದೆ.


ಇದಕ್ಕೆ ವ್ಯತಿರಿಕ್ತವಾಗಿ, ಸಿಂಗಾಪುರದಲ್ಲಿ ಸುಮಾರು 52 ಹೊಸ ಪ್ರಕರಣಗಳು (2019), ಯುಕೆಯಲ್ಲಿ 62 ಹೊಸ ಪ್ರಕರಣಗಳು (2019) ಮತ್ತು ಯುಎಸ್‌ನಲ್ಲಿ 1,000 ಜನಸಂಖ್ಯೆಗೆ ಸುಮಾರು 300 ಹೊಸ ಪ್ರಕರಣಗಳಿವೆ. ಕೇರಳಕ್ಕಿಂತ ಬಿಹಾರದಲ್ಲಿ ಕಡಿಮೆ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದಲ್ಲ. ಇಲ್ಲಿ ನ್ಯಾಯಾಕ್ಕೆ ಜನಸಾಮಾನ್ಯರ ಪ್ರವೇಶ ಸೀಮಿತವಾಗಿದೆ ಎಂದು ಗೋಪಾಲ್ ವಿವರಿಸಿದ್ದಾರೆ.


ನ್ಯಾಯದ ಅಂತರಕ್ಕೆ ನಿರ್ಬಂಧವಾಗಿರುವ ಈ ವ್ಯವಸ್ಥೆಯನ್ನು ನಿವಾರಿಸುವಲ್ಲಿ ಗ್ರಾಮ ನ್ಯಾಯಾಲಯಗಳು ಪ್ರಮುಖ ಪಾತ್ರ ವಹಿಸುತ್ತವೆ. ಪ್ರಮುಖವಾಗಿ ಬಡವರಿಗೆ ನ್ಯಾಯ ಒದಗಿಸುವಲ್ಲಿ ಇಂತಹ ನ್ಯಾಯಾಲಯಗಳು ಮಹತ್ವವವಾಗಿವೆ ಎಂಬುದು ಗೋಪಾಲ್ ಅಭಿಪ್ರಾಯವಾಗಿದೆ.


ಸರಿಯಾದ ಮೂಲಸೌಕರ್ಯಗಳ ಕೊರತೆ
ಅಲ್ವಾರ್ ಜಿಲ್ಲೆಯ ಮತ್ತೊಬ್ಬ ಮ್ಯಾಜಿಸ್ಟ್ರೇಟ್ ಸಾಕ್ಷಿ ಚೌಧರಿ ಅವರು ಸರೋಜ್ ಚೌಧರಿ ಕೆಲಸ ಮಾಡುವ ನೀಮ್ರಾನಾದಿಂದ 65 ಕಿಲೋಮೀಟರ್ ದೂರದಲ್ಲಿರುವ ತಿಜಾರಾದಲ್ಲಿ ಗ್ರಾಮ ನ್ಯಾಯಾಲಯವನ್ನು ನಡೆಸಲು ಸಿದ್ಧರಾಗಿದ್ದಾರೆ. ಇಬ್ಬರೂ ಚೌಧರಿ ಮಹಿಳೆಯರು ಆರು ವರ್ಷಗಳ ಹಿಂದೆ ಒಂದೇ ಬ್ಯಾಚ್‌ನಿಂದ ಪದವಿ ಪಡೆದರು ಮತ್ತು ತಮ್ಮ ತಮ್ಮ ಗ್ರಾಮಗಳಲ್ಲಿ ಮೊದಲ ಮಹಿಳಾ ಅಧಿಕಾರಿಯಾಗಿ ತಮ್ಮ ವೃತ್ತಿಪರ ವೃತ್ತಿಜೀವನವನ್ನು ಪ್ರಾರಂಭಿಸಿದರು.


ಆದರೆ ಇದೀಗ ಅವರು ಒಂದೇ ಜಿಲ್ಲೆಯಲ್ಲಿ ನೇಮಕಗೊಂಡಿದ್ದರೂ ವಿಭಿನ್ನ ಸವಾಲುಗಳನ್ನು ಎದುರಿಸುತ್ತಿದ್ದಾರೆ. ನೀಮ್ರಾನಾ ಗ್ರಾಮವು ಹೆಚ್ಚಾಗಿ ಕೈಗಾರಿಕಾ ಮತ್ತು ಮಹತ್ವಾಕಾಂಕ್ಷೆಯ ಕೊರತೆಯನ್ನೆದುರಿಸುತ್ತಿದ್ದರೆ, ತಿಜಾರಾ ಗ್ರಾಮವು ವ್ಯಾಪಕವಾದ ಅನಕ್ಷರತೆ ಮತ್ತು ಸರಿಯಾದ ಮೂಲಸೌಕರ್ಯದ ಕೊರತೆಯೊಂದಿಗೆ ಹೋರಾಡುತ್ತಿದೆ.


ಸಾಕ್ಷಿಯವರ ನ್ಯಾಯಾಲಯದಲ್ಲಿ ಮಹಿಳೆಯರೇ ಇಲ್ಲ. ಗ್ರಾಮ ನ್ಯಾಯಾಲಯದಲ್ಲಿ ಸಹ ಅನುಮತಿಸದ ಮಹಿಳಾ ದಾವೆದಾರರು ಮತ್ತು ಫಿರ್ಯಾದಿಗಳನ್ನು ಗ್ರಾಮದ ಹಿರಿಯರು ಸಕ್ರಿಯವಾಗಿ ನಿರುತ್ಸಾಹಗೊಳಿಸುತ್ತಾರೆ. ಸುರಕ್ಷತೆಯ ದೃಷ್ಟಿಯಿಂದ ಹಳ್ಳಿಗಳಲ್ಲಿ ನಿಯಮಿತ ಶಿಬಿರಗಳನ್ನು ನಡೆಸುವುದು ಸಾಕ್ಷಿಯವರಿಗೆ ಸವಾಲಾಗಿದೆ. ಮಹಿಳೆಯರನ್ನು ಶಿಬಿರಗಳಿಗೆ ಸೇರಲು ಅಲ್ಲಿನ ಗ್ರಾಮಸ್ಥರು ಅನುಮತಿಸುತ್ತಿಲ್ಲ ಎಂದು ನ್ಯಾಯಾಲಯದ ಹಿರಿಯ ಸಿಬ್ಬಂದಿ ತಿಳಿಸಿದ್ದಾರೆ.


ಪ್ರಕರಣಗಳನ್ನು ವಿಲೇವಾರಿ ಮಾಡುವುದು, ನಡವಳಿಕೆಯ ಬದಲಾವಣೆಗಳನ್ನು ಆರಂಭಿಸುವುದು
ಪ್ರತಿ ಎರಡನೇ ಶುಕ್ರವಾರ, ಗ್ರಾಮ ನ್ಯಾಯಾಲಯದಲ್ಲಿ ಪ್ರಕ್ರಿಯೆಯು ಐದು ಗಂಟೆಗಳವರೆಗೆ ಇರುತ್ತದೆ, ಒಮ್ಮೊಮ್ಮೆಇದು ದೀರ್ಘವಾಗಿರುತ್ತದೆ. ಸರೋಜ್ ಅವರು ತೀರ್ಪು ನೀಡಬೇಕಾಗಿರುವ ನೂರಾರು ಕೇಸ್‌ಗಳಿದ್ದು ಸವಾಲುಗಳನ್ನು ಎದುರಿಸುತ್ತಿದ್ದಾರೆ.


ಸಾಕ್ಷಿದಾರರು ಸರಿಯಾಗಿ ನ್ಯಾಯಾಲಯಕ್ಕೆ ಹಾಜರಾಗುತ್ತಿಲ್ಲ
ಪ್ರಕರಣಗಳಲ್ಲಿ ಸಾಕ್ಷಿದಾರರು ಸರಿಯಾಗಿ ನ್ಯಾಯಾಲಯಕ್ಕೆ ಹಾಜರಾಗುತ್ತಿಲ್ಲ ಎಂಬುದು ನ್ಯಾಯಾಲಯದ ಸಿಬ್ಬಂದಿಗಳ ಮಾತಾಗಿದೆ. ಪ್ರಕರಣಗಳ ವಿಚಾರಣೆ ನಡೆಸುವ ಸಂದರ್ಭದಲ್ಲಿ ಸಾಕ್ಷಿದಾರರು ಹಾಜರಾಗಿರುವುದಿಲ್ಲ ಈ ಸಮಯದಲ್ಲಿ ಕೇಸ್‌ಗಳನ್ನು ಅಲ್ಲಿಯೇ ಕೈಬಿಡಬೇಕಾದಂತಹ ಪರಿಸ್ಥಿತಿ ಎದುರಾಗುತ್ತದೆ ಎಂಬುದು ಇವರ ಹೇಳಿಕೆಯಾಗಿದೆ. ಕೆಲವೊಂದು ಪ್ರಕರಣಗಳು ಸರಳವಾಗಿ ಪರಿಹಾರವಾಗುತ್ತದೆ ಎಂದು ಹೇಳುವ ನ್ಯಾಯಾಧಿಕಾರಿಗಳು ಒಮ್ಮೊಮ್ಮೆ ಗ್ರಾಮಸ್ಥರು ನ್ಯಾಯಾಲಯದ ಪರಿಸರಕ್ಕೂ ಗೌರವ ನೀಡದೆ ನ್ಯಾಯಾಲಯದಲ್ಲಿ ಜಗಳಗಳನ್ನು ವಾಗ್ವಾದಗಳನ್ನು ನಡೆಸುವುದೂ ಇದೆ ಎಂದು ತಿಳಿಸಿದ್ದಾರೆ.


ಹೆಚ್ಚಿನ ಜನರು ಅನಕ್ಷರಸ್ಥರಾಗಿರುವುದರಿಂದ ಹಾಗೂ ಇನ್ನೂ ಕೆಲವು ಮೂಢನಂಬಿಕೆಗಳಿಂದ ಬಳಲುತ್ತಿರುವುದರಿಂದ ಈ ರೀತಿಯ ಸಮಸ್ಯೆಗಳಿವೆ ಎಂಬುದು ನ್ಯಾಯಾಧಿಕಾರಿಗಳ ಹೇಳಿಕೆಯಾಗಿದೆ.

First published: