ಅನಾರೋಗ್ಯ (Unhealth) ಎಂದು ಆಸ್ಪತ್ರೆಗೆ (Hospital) ಹೋದಾಗ ಯಾವುದೋ ಒಂದು ಕಾರಣದಿಂದ (Causes) ಅಲ್ಲಿ ಗಂಟೆಗಟ್ಟಲೇ ಕಾಯುವ (Waiting) ಸ್ಥಿತಿ ನಿರ್ಮಾಣವಾಗುತ್ತದೆ. ನಮಗಿಂತ ಮೊದಲೇ ಬಂದವರು, ರೋಗಿಗಳ (Patients) ಸಂಖ್ಯೆ ಹೆಚ್ಚಿರುವುದು, ಚೆಕಪ್ ವೇಳೆ ಸಮಯ ತೆಗೆದುಕೊಳ್ಳುವ ವೈದ್ಯರು ಹೀಗೆ ಹಲವು ಕಾರಣಗಳಿಂದ ರೋಗಿಗಳು ತಾಳ್ಮೆಯಿಂದ ಕುಳಿತು ಕಾಯುತ್ತಾರೆ. ಅದರಲ್ಲೂ ಕೊರೊನಾ ನಂತರದ ಇತ್ತೀಚಿನ ದಿನಗಳಲ್ಲಿ ಇದು ಸಾಮಾನ್ಯವಾಗಿದೆ. ಯಾಕೆಂದ್ರೆ ಇನ್ನೆಲ್ಲೋ ರೋಗಿಗಳ ಚೆಕಪ್ ನಲ್ಲಿ ವೈದ್ಯರು ಬ್ಯುಸಿಯಾಗಿರುತ್ತಾರೆ. ಹೀಗಾಗಿ ತಮ್ಮ ತಮ್ಮ ಕ್ಲಿನಿಕ್ ಗಳಿಗೆ ಅವರು ಬೇಗ ಬರೋಕೆ ಸಾಧ್ಯ ಆಗಲ್ಲ. ಇನ್ನು ಹಲವು ಸಂಗತಿಗಳು ಜನರನ್ನು ರೊಚ್ಚಿಗೇಳುವಂತೆ ಮಾಡುತ್ತವೆ.
ಮಹಾರಾಷ್ಟ್ರದ ಬಾರಾಮತಿಯಲ್ಲಿ ವೈದ್ಯ ಮತ್ತು ಮಗನನ್ನು ಥಳಿಸಿದ ಗುಂಪು
ಹಾಗೆಯೇ ಇಲ್ಲೊಂದು ಜನರ ಗುಂಪು ವೈದ್ಯರ ಮೇಲೆ ಕೆಂಗಣ್ಣು ಬೀರಿದೆ. ಏನಪ್ಪಾ ಇದು ಇಷ್ಟುದ್ದ ಪೀಠಿಕೆ ಅಂದ್ರಾ? ಯಾಕೆಂದ್ರೆ ಇಲ್ಲೊಂದು ಊರಲ್ಲಿ ವೈದ್ಯರು ಕ್ಲಿನಿಕ್ ಗೆ ಬೇಗ ಬರಲಿಲ್ಲ ಎಂಬ ಕಾರಣಕ್ಕೆ ಜನರ ಗುಂಪು ಅವರನ್ನು ಚೆನ್ನಾಗಿ ಥಳಿಸಿದೆ. ಸೆ
ಪ್ಟೆಂಬರ್ 6 ರಂದು ಮಹಾರಾಷ್ಟ್ರದ ಬಾರಾಮತಿಯಲ್ಲಿರುವ ಮಾಲೆಗಾಂವ್ ನ ಸಂಗಾವಿಯಲ್ಲಿ ಆಯುರ್ವೇದ ವೈದ್ಯರನ್ನು ಗುಂಪೊಂದು ಚೆನ್ನಾಗಿ ಥಳಿಸಿದೆ.
ಇದನ್ನೂ ಓದಿ: ಭಾರತಕ್ಕೆ ದುರ್ಬಲ ಪ್ರಧಾನಿ ಸಿಗಲಿ ಎಂದ ಅಸಾದುದ್ದೀನ್ ಓವೈಸಿ
ಮಹಾರಾಷ್ಟ್ರದ ಬಾರಾಮತಿಯಲ್ಲಿರುವ ಮಾಲೆಗಾಂವ್ ನ ಸಂಗಾವಿಯಲ್ಲಿ ಆಯುರ್ವೇದ ವೈದ್ಯರು ತಡವಾಗಿ ಕ್ಲಿನಿಕ್ ಬಾಗಿಲು ತೆರೆದಿದ್ದಾರೆ. ಕ್ಲಿನಿಕ್ ಬಾಗಿಲನ್ನು ತಡವಾಗಿ ತೆರೆದಿದ್ದಾರೆ. ನಮ್ಮನ್ನು ಒಳಗೆ ಬಿಡಲು ತಡವಾಗಿದೆ ಎಂದು ಆರೋಪಿಸಿ, ರೋಗಿಯ ಸಂಬಂಧಿಕರು ವೈದ್ಯರ ಮೇಲೆ ಹಲ್ಲೆ ಮಾಡಿದ್ದಾರೆ.
ಇನ್ನು ವೈದ್ಯ ತಂದೆಯ ಮೇಲೆ ನಡೆಯುತ್ತಿದ್ದ ಹಲ್ಲೆಯನ್ನು ಬಿಡಿಸಲು ಹೋಗಿದ್ದ ಮಗನ ಮೇಲೂ ರೋಗಿಯ ಸಂಬಂಧಿಕರ ಗುಂಪು ಹಲ್ಲೆ ಮಾಡಿದೆ. ನಂತರ ಕ್ಲಿನಿಕ್ ಬಾಗಿಲು ತಡವಾಗಿ ತೆರೆದರು ಎಂದು ಆರೋಪಿಸಲಾಗಿದೆ. ರೋಗಿಯ ಸಂಬಂಧಿಕರ ಗುಂಪು ವೈದ್ಯರ ಮಗನ ಮೇಲೂ ಹಲ್ಲೆ ನಡೆಸಿದ್ದಾರೆ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ ಆಗಿದೆ.
कैसे- कैसे लोग...!?
बारामती के सांगवी में एक आयुर्वेदिक #Doctor ने देर से दरवाजा खोला तो मरीज के साथ आए लोगों ने डॉक्टर और उनके बेटे की जमकर पिटाई कर दी!
मालेगांव पुलिस #FIR दर्ज कर जांच कर रही है। @ndtvvideos@ndtvindia pic.twitter.com/9deiLBsopZ
— sunilkumar singh (@sunilcredible) September 11, 2022
ರೋಗಿಯ ಸಂಬಂಧಿಕರ ಗುಂಪು ವೈದ್ಯ ಮತ್ತು ಆತನ ಮಗನ ಮೇಲೆ ನಡೆಸಿದ ಹಲ್ಲೆಯ ದೃಶ್ಯ ಸಂಪೂರ್ಣವಾಗಿ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಯುವರಾಜ್ ಗಾಯಕ್ವಾಡ್ ಅವರ ಮನೆಯಿಂದ ಹೊರಗಿರುವ ಸಂಗಾವಿಯಲ್ಲಿರುವ ಕ್ಲಿನಿಕ್‌ನಲ್ಲಿ ಈ ಘಟನೆ ನಡೆದಿದೆ.
ಯುವರಾಜ್ ಗಾಯಕ್ವಾಡ್ ಅವರು ನೀಡಿರುವ ದೂರಿನ ಪ್ರಕಾರ, ಶ್ರೀ ಗಾಯಕ್ವಾಡ್ ಅವರು ತಮ್ಮ ಕುಟುಂಬದೊಂದಿಗೆ ರಾತ್ರಿ ಊಟ ಮಾಡುತ್ತಿದ್ದರು. ಆಗ ಯಾರೋಜೋರಾಗಿ ಬಾಗಿಲು ಬಡಿಯುವ ಶಬ್ಧ ಕೇಳಿದೆ. ನಂತರ ಬಾಗಿಲು ತೆರೆಯಲು ತಡವಾಗಿದೆ. ಆಗ ರೋಗಿಯ ಸಂಬಂಧಿಕರು ಕಿಟಕಿಯ ಗಾಜು ಒಡೆದಿದ್ದಾರೆ.
ವೈದ್ಯರು ಬಾಗಿಲು ತೆರೆದಿದ್ದಾರೆ. ಆನಂದ್ ಅಲಿಯಾಸ್ ಅನಿಲ್ ಜಗತಾಪ್, ವಿಶ್ವಜೀತ್ ಜಗತಾಪ್, ಅಶೋಕ್ ಜಗತಾಪ್ ಮತ್ತು ಭೂಷಣ್ ಜಗತಾಪ್, ಬಾಗಿಲ ಬಳಿಯಲ್ಲಿ ಮಾತಿನ ಚಕಮಕಿ ನಡೆಸಿದ್ದಾರೆ. ಮತ್ತು ಸ್ವಲ್ಪ ಸಮಯದ ನಂತರ ಮನೆಯೊಳಗೆ ನುಗ್ಗಿ ಅವರನ್ನು ಥಳಿಸಿದ್ದಾರೆ.
ಇನ್ನು ಸಿಸಿಟಿವಿ ಕ್ಯಾಮೆರಾದಲ್ಲಿ ಒಬ್ಬ ವ್ಯಕ್ತಿ ಕ್ಲಿನಿಕ್‌ನ ಒಳಗೆ ಹೋಗುತ್ತಾನೆ. ಮತ್ತು ಬಾಗಿಲು ತೆರೆದು ಶ್ರೀ ಗಾಯಕ್‌ವಾಡ್ ರನ್ನು ಎಳೆದು ಹಲ್ಲೆ ನಡೆಸುತ್ತಾನೆ. ಇದನ್ನು ತಡೆಯಲು ಬಂದ ಮಗನ ಮೇಲೂ ಶರ್ಟ್ ಹಿಡಿದು ಎಳೆದು ಹಲ್ಲೆ ನಡೆಸಿದ್ದಾರೆ. ಮುಂದಿನ ಕೋಣೆಯಲ್ಲಿ ಇಬ್ಬರು ಮಹಿಳೆಯರು ಘಟನೆ ನಡೆಯುತ್ತಿರುವುದನ್ನು ವೀಕ್ಷಿಸುತ್ತಿದ್ದಾರೆ. ಇನ್ನೊಬ್ಬ ವ್ಯಕ್ತಿ ಘಟನೆಯ ಫೋಟೋ ತೆಗೆದುಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಮದುವೆ ಪ್ರಸ್ತಾಪ!
ಇತ್ತ ಮಾಲೆಗಾಂವ್ ಪೊಲೀಸರು, ವೈದ್ಯರ ಮೇಲೆ ಹಲ್ಲೆ ನಡೆಸಿದ ನಾಲ್ವರ ವಿರುದ್ಧ ಎಫ್ ಐಆರ್ ಪ್ರಕರಣ ದಾಖಲಿಸಿದ್ದಾರೆ. ದೂರಿನ ಅನ್ವಯ ತನಿಖೆ ನಡೆಯುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ