HOME » NEWS » National-international » MNS CHIEF RAJ THACKERAY WARNS BEFITTING REPLY TO RALLIES AGAINST CAA AND NRC SNVS

‘ಕಲ್ಲಿಗೆ ಕಲ್ಲು, ಕತ್ತಿಗೆ ಕತ್ತಿ’ – ಸಿಎಎ ಪ್ರತಿಭಟನಾಕಾರರಿಗೆ ಎಚ್ಚರಿಕೆ ನೀಡಿದ ರಾಜ್ ಠಾಕ್ರೆ

ಸಿಎಎ ಮತ್ತು ಎನ್​ಆರ್​ಸಿ ವಿರುದ್ಧ ಮುಸ್ಲಿಮರು ಯಾಕೆ ಪ್ರತಿಭಟಿಸುತ್ತಿದ್ಧಾರೆಂದು ನನಗೆ ಅರ್ಥ ಆಗುತ್ತಿಲ್ಲ. ಹುಟ್ಟಿದಾಗಿನಿಂದ ಭಾರತದಲ್ಲೇ ಇರುವವರನ್ನು ಯಾರು ಹೊರಕಳುಹಿಸುತ್ತಾರೆಂದು ಹೇಳಿದ್ದು ಎಂದು ಪ್ರಶ್ನೆ ಮಾಡಿದ್ದಾರೆ.

Vijayasarthy SN | news18
Updated:February 10, 2020, 7:10 AM IST
‘ಕಲ್ಲಿಗೆ ಕಲ್ಲು, ಕತ್ತಿಗೆ ಕತ್ತಿ’ – ಸಿಎಎ ಪ್ರತಿಭಟನಾಕಾರರಿಗೆ ಎಚ್ಚರಿಕೆ ನೀಡಿದ ರಾಜ್ ಠಾಕ್ರೆ
ರಾಜ್ ಠಾಕ್ರೆ
  • News18
  • Last Updated: February 10, 2020, 7:10 AM IST
  • Share this:
ಮುಂಬೈ: ಉದ್ಧವ್ ಠಾಕ್ರೆ ಕಾಂಗ್ರೆಸ್-ಎನ್​ಸಿಪಿ ಜೊತೆ ಸೇರಿ ಸರ್ಕಾರ ರಚನೆ ಮಾಡಿದ ಬಳಿಕ ಶಿವಸೇನೆಯ ಕಟ್ಟರ್ ಹಿಂದುತ್ವವಾದದ ಸ್ಥಾನ ಆಕ್ರಮಿಸುವ ಸನ್ನಾಹದಲ್ಲಿರುವ ಮಹಾರಾಷ್ಟ್ರ ನವನಿರ್ಮಾಣ ಸೇನೆ ಈಗ ಸಿಎಎ, ಎನ್​ಆರ್​ಸಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತಿದೆ. ಇವತ್ತು ನಡೆದ ಎಂಎನ್​ಎಸ್ ಸಮಾವೇಶದಲ್ಲಿ ರಾಜ್ ಠಾಕ್ರೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸಿಎಎ ಪ್ರತಿಭಟನಾಕಾರರಿಗೆ ಏಟಿಗೆ ಎದಿರೇಟು ಕೊಡುವುದಾಗಿ ಎಚ್ಚರಿಕೆ ನೀಡಿದ್ಧಾರೆ.

ಅಕ್ರಮ ಪಾಕಿಸ್ತಾನೀ ಮತ್ತು ಬಾಂಗ್ಲಾದೇಶೀ ನುಸುಳುಕೋರರನ್ನು ದೇಶದಿಂದ ಹೊರಗೋಡಿಸಬೇಕು ಎಂದು ಒತ್ತಾಯಿಸಿ ಮಹಾರಾಷ್ಟ್ರ ನವನಿರ್ಮಾಣ ಸೇನೆ ಪಕ್ಷ ಗಿರ್ಗಾಮ್ ಚೌಪಟ್ಟಿಯಿಂದ ಆಜಾದ್ ಮೈದಾನದವರೆಗೆ ರ್ಯಾಲಿ ನಡೆಸಿತು. ಆಜಾದ್ ಮೈದಾನದಲ್ಲಿ ನೆರೆದ ಸಾವಿರಾರು ಜನರನ್ನುದ್ದೇಶಿಸಿ ಮಾತನಾಡಿದ ರಾಜ್ ಠಾಕ್ರೆ, “ಇನ್ಮುಂದೆ ಕಲ್ಲಿಗೆ ಕಲ್ಲು, ಕತ್ತಿಗೆ ಕತ್ತಿಯಿಂದ ಉತ್ತರ ಕೊಡಲಾಗುವುದು” ಎಂದು ಪಣತೊಟ್ಟಿದ್ದಾರೆ.

ಇದನ್ನೂ ಓದಿ: ದೆಹಲಿ ಚುನಾವಣೆಯಲ್ಲಿ ಶೇ. 62.59 ಮತದಾನ: ಸಾಕಷ್ಟು ವಿಳಂಬದ ಬಳಿಕ ಚುನಾವಣಾ ಆಯೋಗ ಅಧಿಕೃತ ಘೋಷಣೆ

“ಇವತ್ತು ಈ ಸಮಾವೇಶದ ಮೂಲಕ ಸಿಎಎ ವಿರೋಧಿ ಪ್ರತಿಭಟನೆಗಳಿಗೆ ಇವತ್ತು ತಕ್ಕ ಉತ್ತರ ಕೊಟ್ಟಿದ್ದೇವೆ. ಮುಂದಿನ ದಿನಗಳಲ್ಲಿ ನಿಮ್ಮ ಪ್ರತಿಭಟನೆಗಳಿಗೆ ಪ್ರತಿಯಾಗಿ ನಮ್ಮ ಪ್ರತಿಭಟನೆಗಳು ನಡೆಯುತ್ತವೆ. ನಿಮ್ಮ ನಾಟಕ ಇನ್ನೂ ಮುಂದುವರಿದರೆ ಕಲ್ಲಿಗೆ ಕಲ್ಲೇ ಉತ್ತರವಾಗುತ್ತದೆ. ಕತ್ತಿಗೆ ಕತ್ತಿಯೇ ಉತ್ತರವಾಗುತ್ತದೆ” ಎಂದು ರಾಜ್ ಠಾಕ್ರೆ ಅಬ್ಬರಿಸಿದ್ದಾರೆ.

ಸಿಎಎ ಮತ್ತು ಎನ್​ಆರ್​ಸಿಗೆ ಬೆಂಬಲ ನೀಡಿದ ರಾಜ್ ಠಾಕ್ರೆ, ಮುಸ್ಲಿಮರಿಂದ ವಿರೋಧ ವ್ಯಕ್ತವಾಗುತ್ತಿರುವುದಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. “ಸಿಎಎ ಮತ್ತು ಎನ್​ಆರ್​ಸಿ ವಿರುದ್ಧ ಮುಸ್ಲಿಮರು ಯಾಕೆ ಪ್ರತಿಭಟಿಸುತ್ತಿದ್ಧಾರೆಂದು ನನಗೆ ಅರ್ಥ ಆಗುತ್ತಿಲ್ಲ. ಹುಟ್ಟಿದಾಗಿನಿಂದ ಭಾರತದಲ್ಲೇ ಇರುವವರನ್ನು ಯಾರು ಹೊರಕಳುಹಿಸುತ್ತಾರೆಂದು ಹೇಳಿದ್ದು? ನೀವು ಯಾರಿಗೆ ಶಕ್ತಿ ಪ್ರದರ್ಶನ ತೋರಿಸುತ್ತಿದ್ದೀರಿ?” ಎಂದು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ಇನ್ನಷ್ಟು ಬ್ಯಾಂಕುಗಳ ವಿಲೀನ? ಸುಳಿವು ನೀಡಿದ ಕೇಂದ್ರ ಸಚಿವ ಅನುರಾಗ್ ಠಾಕೂರ್

“ನೆರೆ ರಾಷ್ಟ್ರಗಳಲ್ಲಿ ಧಾರ್ಮಿಕವಾಗಿ ದೌರ್ಜನ್ಯಕ್ಕೊಳಗಾದ ಹಿಂದೂಗಳಿಗೆ ಸಿಎಎ ಪೌರತ್ವ ನೀಡುತ್ತದೆ. ನೀವು ನನ್ನ ದೇಶವನ್ನು ಧರ್ಮಶಾಲೆ ಎಂದು ಪರಿಗಣಿಸಿದ್ದೀರಾ?” ಎಂದು ಅಕ್ರಮ ಪಾಕಿಸ್ತಾನೀ ಮತ್ತು ಬಾಂಗ್ಲಾ ವಲಸಿಗರನ್ನು ತರಾಟೆಗೆ ತೆಗೆದುಕೊಂಡಿದ್ಧಾರೆ.ಸಿಎಎ ಪರವಾಗಿ ಇಷ್ಟೆಲ್ಲಾ ಆರ್ಭಟ ಮಾಡಿದ ರಾಜ್ ಠಾಕ್ರೆ ಕೇಂದ್ರ ಸರ್ಕಾರದ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿದ್ಧಾರೆ. ದೇಶದಲ್ಲಿ ಹಣಕಾಸು ಬಿಕ್ಕಟ್ಟು ಇರುವಾಗ ಜನರ ಗಮನ ಬೇರೆಡೆ ಸೆಳೆಯಲು ಸಿಎಎ ಜಾರಿಗೆ ತರಲಾಗಿದೆಯಾ ಎಂದು ಸಂದೇಹ ಪಟ್ಟಿದ್ದಾರೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published: February 10, 2020, 7:10 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading