ಲೈಂಗಿಕ ಉದ್ರೇಕಕಾರಿ ಮಾತ್ರೆ ನೀಡಿ ಸಹೋದ್ಯೋಗಿ ಮೇಲೆ ಸಾಮೂಹಿಕ ಅತ್ಯಾಚಾರ

Seema.R | news18
Updated:October 15, 2018, 2:05 PM IST
ಲೈಂಗಿಕ ಉದ್ರೇಕಕಾರಿ ಮಾತ್ರೆ ನೀಡಿ ಸಹೋದ್ಯೋಗಿ ಮೇಲೆ ಸಾಮೂಹಿಕ ಅತ್ಯಾಚಾರ
Seema.R | news18
Updated: October 15, 2018, 2:05 PM IST
ನ್ಯೂಸ್​ 18 ಕನ್ನಡ

ನವದೆಹಲಿ(ಅ.15): ಬಹು ಅಂತರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಮೇಲೆ ಸಹೋದ್ಯೋಗಿಗಳೆ ಆಕೆಗೆ ಲೈಂಗಿಕ ಉದ್ರೇಕದ ಮಾತ್ರೆ ನೀಡಿ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.

ಬಿರ್ಜು(25), ವಿನೋದ್​ ಕುಮಾರ್​ (31) ಎಂಬುವವರು ಸಹೋದ್ಯೋಗಿ ಯುವತಿಗೆ ಮನೆಗೆ ಡ್ರಾಪ್​ ನೀಡುವುದಾಗಿ ಹೇಳಿ ಈ ಕೃತ್ಯವನ್ನು ಎಸಗಿದ್ದಾರೆ. ಶನಿವಾರ ರಾತ್ರಿ ಮನೆಗೆ ಡ್ರಾಪ್​ ಮಾಡುವ ಮುನ್ನ ಪಾನೀಯದಲ್ಲಿ ಲೈಂಗಿಕ ಉದ್ರೇಕದ ಮಾತ್ರೆಗಳನ್ನು  ಸೇರಿಸಿ ಯುವತಿಗೆ ನೀಡಿದ್ದಾರೆ.

ಯುವತಿ ಪ್ರಜ್ಞೆ ತಪ್ಪಿದಾಗ ಆಕೆಯನ್ನು ಫ್ಲಾಟ್​ಗೆ ಕರೆದೊಯ್ದು, ಅತ್ಯಾಚಾರ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನು ಓದಿ: #MeToo: ನನ್ನ ಮೇಲಿನ ಆರೋಪ ಸುಳ್ಳು; ರಾಜೀನಾಮೆ ಕೊಡುವುದಿಲ್ಲ: ಎಂ.ಜೆ. ಅಕ್ಬರ್ ಸ್ಪಷ್ಟನೆ

ಸಂತ್ರಸ್ತ್ರ ಯುವತಿ ಈ ಬಗ್ಗೆ ತನ್ನ ಕುಟುಂಬಕ್ಕೆ ತಿಳಿಸಿದ್ದು, ಭಾನುವಾರ ರಾತ್ರಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ,

ಯುವತಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಆಕೆ ಮೇಲೆ ಅತ್ಯಾಚಾರವಾಗಿರುವುದು ದೃಢಪಟ್ಟಿದೆ. ಘಟನೆ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
Loading...

 
First published:October 15, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...