• Home
  • »
  • News
  • »
  • national-international
  • »
  • ಕಾವೇರುತ್ತಿರುವ ತಮಿಳುನಾಡು ಚುನಾವಣಾ ಕಣ; ಡಿಎಂಕೆ ಪಕ್ಷದ ನಾಯಕ ಸ್ಟಾಲಿನ್ ಪುತ್ರ ಉದಯನಿಧಿ ಬಂಧನ ಬಿಡುಗಡೆ

ಕಾವೇರುತ್ತಿರುವ ತಮಿಳುನಾಡು ಚುನಾವಣಾ ಕಣ; ಡಿಎಂಕೆ ಪಕ್ಷದ ನಾಯಕ ಸ್ಟಾಲಿನ್ ಪುತ್ರ ಉದಯನಿಧಿ ಬಂಧನ ಬಿಡುಗಡೆ

ಉದಯನಿಧಿ ಸ್ಟಾಲಿನ್​ ಅವರನ್ನು ಬಂಧಿಸುತ್ತಿರುವುದು.

ಉದಯನಿಧಿ ಸ್ಟಾಲಿನ್​ ಅವರನ್ನು ಬಂಧಿಸುತ್ತಿರುವುದು.

ಈ ನಡುವೆ ದ್ರಾವಿಡ ಮುನ್ನೇಟ್ರ ಕಳಗಂ (ಡಿಎಂಕೆ) ಪಕ್ಷದ 15 ಹಿರಿಯ ನಾಯಕರು ತಮಿಳುನಾಡಿನ ಎಲ್ಲಾ 234 ಕ್ಷೇತ್ರಗಳಲ್ಲಿ ಮುಂದಿನ 75 ದಿನಗಳಲ್ಲಿ 1,500 ಸಭೆಗಳನ್ನು ಆಯೋಜಿಸಿ ಮಾತನಾಡಲಿದ್ದಾರೆ ಎಂದು ಡಿಎಂಕೆ ಪ್ರಧಾನ ಕಾರ್ಯದರ್ಶಿ ಕೆ.ಎನ್.ನೆಹರು ಮಾಹಿತಿ ನೀಡಿದ್ದಾರೆ.

  • Share this:

    ಚೆನ್ನೈ (ನವೆಂಬರ್​ 20); ಬಹುನಿರೀಕ್ಷಿತ ತಮಿಳುನಾಡು ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಮುಂದಿನ ವರ್ಷ ತಮಿಳುನಾಡಿನಲ್ಲಿ ಚುನಾವಣೆ ನಡೆಯಲಿದೆ. ಆಡಳಿತರೂಢ ಎಡಿಎಂಕೆ (ಅನ್ನಾ ದ್ರಾವಿಡ ಮುನ್ನೇಟ್ರ ಕಳಗಂ) ಪಕ್ಷ ಬಿಜೆಪಿ ಜೊತೆಗೆ ಮೈತ್ರಿ ಸಾಧಿಸಿದ್ದು ಮತ್ತೊಂದು ಅವಧಿಗೆ ಅಧಿಕಾರವನ್ನು ಉಳಿಸಿಕೊಳ್ಳುವ ತವಕದಲ್ಲಿದೆ. ಈ ನಡುವೆ ಪ್ರಬಲ ವಿರೋಧ ಪಕ್ಷವಾದ ಡಿಎಂಕೆ (ದ್ರಾವಿಡ ಮುನ್ನೇಟ್ರ ಕಳಗಂ) ಸಹ ಚುನಾವಣಾ ಅಖಾಡಕ್ಕೆ ಸಿದ್ದವಾಗಿದ್ದು ಈಗಾಗಲೇ ಚುನಾವಣಾ ಅಭಿಯಾನವನ್ನು ಆರಂಭಿಸಿದೆ. ಆದರೆ, ಇಂದು ತಮಿಳುನಾಡಿನ ಕರಾವಳಿ ಭಾಗವಾದ ನಾಗಪಟ್ಟಿನಂ ಜಿಲ್ಲೆಯಲ್ಲಿ ಚುನಾವಣಾ ಅಭಿಯಾನದಲ್ಲಿ ಭಾಗವಹಿಸಿದ್ದ ವಿರೋಧ ಪಕ್ಷದ ನಾಯಕ ಎಂ.ಕೆ. ಸ್ಟಾಲಿನ್ ಅವರ ಪುತ್ರ ಉದಯನಿಧಿ ಸ್ಟಾಲಿನ್ ಅವರನ್ನು ಸರ್ಕಾರ ಬಂಧಿಸಿ ಬಿಡುಗಡೆ ಮಾಡಿರುವ ಪ್ರಸಂಗ ನಡೆದಿದೆ.


    ದಿವಂಗತ ಸಿಎಂ ಜಯಲಲಿತ ಸಾವಿನ ನಂತರ ಎಡಿಎಂಕೆ ವರ್ಚಸ್ಸು ದ್ರಾವಿಡ ನಾಡಿನಲ್ಲಿ ಕಳೆಗುಂದಿದೆ. ಇದರ ಲಾಭ ಪಡೆಯುವ ಸಲುವಾಗಿ ಎಐಎಡಿಎಂಕೆ ಸರ್ಕಾರದ ಆಡಳಿತದ ತಪ್ಪುಗಳನ್ನು ಬೆಟ್ಟುಮಾಡುತ್ತಾ ಡಿಎಂಕೆ ಯುವ ವಿಭಾಗದ ನಾಯಕ ಉದಯನಿಧಿ ಸ್ಟಾಲಿನ್, ಪಕ್ಷದ ಹಿರಿಯ ನಾಯಕರೊಂದಿಗೆ 75 ದಿನಗಳ ಪ್ರಚಾರ ಅಭಿಯಾನವನ್ನು ಇಂದು ಪ್ರಾರಂಭಿಸಿದರು.


    ಆದರೆ, ಇಂದು ಅವರ ಮೊದಲ ಸಭೆಗೆ ದಿಢೀರ್​ ದಾಳಿ ನಡೆಸಿರುವ ಪೊಲೀಸ್​ ಅಧಿಕಾರಿಗಳು "ರಾಜಕೀಯ ಸಭೆಗಳನ್ನು ನಡೆಸಲು ಇಲ್ಲಿ ಯಾವುದೇ ಅನುಮತಿಗಳಿಲ್ಲ ಹಾಗಾಗಿ ಉದಯನಿಧಿ ಸ್ಟಾಲಿನ್ ಅವರನ್ನು ಬಂಧಿಸುತ್ತಿದ್ದೇವೆ" ಎಂದು ತಿಳಿಸಿ ಪಕ್ಷದ ಕಾರ್ಯಕರ್ತರ ಪ್ರಬಲ ವಿರೋಧದ ನಡುವೆಯೂ ಅವರನ್ನು ಖೈದು ಮಾಡಿದ್ದಾರೆ. ಅಲ್ಲದೆ, ಬಂಧಿಸಿದ ಕೆಲವೇ ನಿಮಿಷಗಳಲ್ಲಿ ಅವರನ್ನು ಬಿಡುಗಡೆ ಮಾಡಲಾಗಿದೆ.


    ಈ ನಡುವೆ ದ್ರಾವಿಡ ಮುನ್ನೇಟ್ರ ಕಳಗಂ (ಡಿಎಂಕೆ) ಪಕ್ಷದ 15 ಹಿರಿಯ ನಾಯಕರು ತಮಿಳುನಾಡಿನ ಎಲ್ಲಾ 234 ಕ್ಷೇತ್ರಗಳಲ್ಲಿ ಮುಂದಿನ 75 ದಿನಗಳಲ್ಲಿ 1,500 ಸಭೆಗಳನ್ನು ಆಯೋಜಿಸಿ ಮಾತನಾಡಲಿದ್ದಾರೆ ಎಂದು ಡಿಎಂಕೆ ಪ್ರಧಾನ ಕಾರ್ಯದರ್ಶಿ ಕೆ.ಎನ್.ನೆಹರು ಮಾಹಿತಿ ನೀಡಿದ್ದಾರೆ.



    ಬಂಧನದ ಚಿತ್ರಗಳನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿರುವ ಉದಯಾನಿಧಿ ಸ್ಟಾಲಿನ್ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.


    ಇದನ್ನೂ ಓದಿ : ಮೊದಲ ಸೋದರ ಸಂಬಂಧಿಯೊಂದಿಗಿನ ಮದುವೆ ಕಾನೂನು ಬಾಹಿರ ಎಂದ ನ್ಯಾಯಾಲಯ


    "ಪಕ್ಷದ ಮೊದಲ ದಿನದ ಅಭಿಯಾನವನ್ನು ಸಹಿಸದ ಕಾರಣ ಗುಲಾಮ ಎಐಎಡಿಎಂಕೆ ಸರ್ಕಾರವು ನನ್ನನ್ನು ಬಂಧಿಸಿತ್ತು. ನನ್ನ ಬಂಧನದ ವಿರುದ್ಧ ತಮಿಳುನಾಡಿನಲ್ಲಿ ಅಶಾಂತಿ ಉಂಟಾಗುವ ಭಯದಿಂದ ಈಗ ನನ್ನ ಬಿಡುಗಡೆಯಾಗಿದೆ. ನಾನು ಯೋಜಿಸಿದಂತೆ ನನ್ನ ಪ್ರಚಾರ ಪ್ರಯಾಣವನ್ನು ಮುಂದುವರಿಸುತ್ತೇನೆ" ಎಂದು ಉದಯನಿಧಿ ಸ್ಟಾಲಿನ್ ತಮ್ಮ ಟ್ವಿಟರ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.


    ಈ ಹಿಂದೆ, ಪಕ್ಷದ ಮಾಜಿ ಮುಖ್ಯಸ್ಥ ಎಂ.ಕರುಣಾನಿಧಿಯವರ ಜನ್ಮಸ್ಥಳವಾದ ತಿರುವರೂರು ಜಿಲ್ಲೆಯ ತಿರುಕ್ಕುವಲೈನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ, "ಆವರಿಸಿರುವ ಕತ್ತಲೆಯನ್ನು ಕೊನೆಗೊಳಿಸಲು ತನ್ನ ತಂದೆಯ ಸಂದೇಶವನ್ನು ತಮಿಳುನಾಡು ರಾಜ್ಯದ ವಿವಿಧ ಭಾಗಗಳಿಗೆ ಕೊಂಡೊಯ್ಯುವ ಅಭಿಯಾನಕ್ಕೆ ಹೊರಟಿದ್ದೇನೆ" ಎಂದು ಅವರು ಹೇಳಿದ್ದರು.

    Published by:MAshok Kumar
    First published: