Tamil Nadu CM ಎಂ.ಕೆ ಸ್ಟಾಲಿನ್ ಹಾಕಿರೋ ಜಾಕೆಟ್​ ಬೆಲೆ 17 ಕೋಟಿ ಅಂತೆ! ಬಿಜೆಪಿ ಯುವ ಘಟಕದ ಸದಸ್ಯನಿಂದ ಟ್ವೀಟ್​

ಎಂ.ಕೆ.ಸ್ಟಾಲಿನ್ ಅವರ ಬಗ್ಗೆ ಮಾನಹಾನಿಕರ ಮಾಹಿತಿ ಹರಡಿದ್ದಕ್ಕಾಗಿ ಭಾರತೀಯ ಜನತಾ ಯುವ ಮೋರ್ಚಾ (ಬಿಜೆವೈಎಂ) ಕಾರ್ಯಕರ್ತ ಅರುಲ್ ಪ್ರಸಾದ್ ಅವರನ್ನು ತಮಿಳುನಾಡಿನ ಸೇಲಂ ನಗರದಲ್ಲಿ ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್

ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್

  • Share this:
ಈಗಂತೂ ಸಾಮಾಜಿಕ ಮಾಧ್ಯಮಗಳನ್ನು (Social Media) ಜನರು ತಮಗೆ ಹೇಗೆ ಬೇಕೋ ಹಾಗೆ ಬಳಸಿಕೊಳ್ಳುತ್ತಿದ್ದಾರೆ ಎಂದು ಹೇಳಬಹುದು. ಒಳ್ಳೆಯ ಸಾಮಾಜಿಕ ಕೆಲಸಗಳಿಗೆ  ಮತ್ತು ಜನರ ನಡುವೆ ಉತ್ತಮ ಸಾಮರಸ್ಯದ ಬಂಧ ಏರ್ಪಡಿಸುವುದಕ್ಕಿಂತಲೂ ಹೆಚ್ಚಾಗಿ ಒಬ್ಬರ ಬಗ್ಗೆ ಅವಹೇಳನಕಾರಿಯಾಗಿ (Derogatory) ಸುದ್ದಿಯನ್ನು ಹರಡಿಸುವುದಕ್ಕೆ ತುಂಬಾನೇ ಬಳಸುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಎಷ್ಟೋ ಬಾರಿ ಈ ರೀತಿಯ ತಪ್ಪು ಮತ್ತು ಒಬ್ಬರ ವ್ಯಕ್ತಿತ್ವಕ್ಕೆ (Personality)  ಧಕ್ಕೆ ಆಗುವಂತೆ ಹರಡಿಸುವ ಸುದ್ದಿಗಳು ನಿಮ್ಮನ್ನು ಭಾರಿ ಅವಾಂತರಕ್ಕೆ ತಳ್ಳುತ್ತವೆ ಎಂದು ಗೊತ್ತಿದ್ದರೂ ಸಹ ಈ ಕೃತ್ಯಗಳಿಗೆ ಕಿಡಿಗೇಡಿಗಳು ಕೈ ಹಾಕಿ ಕೊನೆಗೆ ಪೊಲೀಸರ (Police) ಅತಿಥಿಗಳಾಗಿರುವ ಅನೇಕ ಘಟನೆಗಳನ್ನು ನೋಡಿದ್ದೇವೆ.

ಇಲ್ಲಿಯೂ ಸಹ ಇದೇ ರೀತಿಯಾದ ಒಂದು ಘಟನೆ ನಡೆದಿದ್ದು, ಈ ವ್ಯಕ್ತಿ ಯಾರ ಬಗ್ಗೆ ತಪ್ಪು ಮಾಹಿತಿಯನ್ನು ಹರಡಿದ್ದಾನೆ ಒಮ್ಮೆ ನೋಡಿ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ಬಗ್ಗೆ 'ಮಾನಹಾನಿಕರ ಮಾಹಿತಿ' ಹರಡಿದ್ದಕ್ಕಾಗಿ ಭಾರತೀಯ ಜನತಾ ಯುವ ಮೋರ್ಚಾ (ಬಿಜೆವೈಎಂ) ಕಾರ್ಯಕರ್ತ ಅರುಲ್ ಪ್ರಸಾದ್ ಅವರನ್ನು ತಮಿಳುನಾಡಿನ ಸೇಲಂ ನಗರದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಬಿಜೆಪಿ ಯುವ ಘಟಕದ ಸದಸ್ಯರು ಇತ್ತೀಚೆಗೆ ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಅವರು ಜಾಕೆಟ್ ಧರಿಸಿರುವ ಫೋಟೋವನ್ನು ಟ್ವೀಟ್ ಮಾಡಿದ್ದರು. ಅವರು ಧರಿಸಿರುವ ಆ ಜಾಕೆಟ್‌ನ ಬೆಲೆ ಸುಮಾರು 17 ಕೋಟಿ ರೂಪಾಯಿ ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ಆರೋಪಿಸಿದ್ದಾರೆ. ಅರುಲ್ ಪ್ರಸಾದ್ ಅವರು ನಂತರ ಈ ಜಾಕೆಟ್‌ನ ವೆಚ್ಚದ ಬಗ್ಗೆ ಹಣಕಾಸು ಸಚಿವ ತ್ಯಾಗ ರಾಜನ್ ಅವರಿಗೆ ಗೊತ್ತು ಎಂದು ಹೇಳಿದರು.

ನಂತರ ಹಣಕಾಸು ಸಚಿವರು ಈ ಟ್ವೀಟ್ ಅನ್ನು ನೋಡಿ, ತಮ್ಮ ಪರಿಶೀಲಿಸಿದ ಟ್ವಿಟ್ಟರ್ ಪುಟದಲ್ಲಿ ಈ ಪೋಸ್ಟ್ ಅನ್ನು ಫ್ಲ್ಯಾಗ್ ಮಾಡಿ, ಇದು ತಮಿಳುನಾಡು ಪೊಲೀಸರ ಸಾಮಾಜಿಕ ಮಾಧ್ಯಮ ಘಟಕದಿಂದ ಭೇದಿಸಲ್ಪಟ್ಟ ಮೊದಲ ಪ್ರಕರಣಗಳಲ್ಲಿ ಒಂದಾಗಿದೆ ಎಂದು ಹೇಳಿದರು. ಸುಳ್ಳು ಸುದ್ದಿಗಳನ್ನು ಈ ರೀತಿಯಾಗಿ ಹರಡುವುದರಿಂದ ಹೆಚ್ಚುತ್ತಿರುವ ಅಪರಾಧಗಳನ್ನು ತಡೆಯಲು ವಿಶೇಷ ಸಾಮಾಜಿಕ ಮಾಧ್ಯಮ ಕೇಂದ್ರವನ್ನು ಸ್ಥಾಪಿಸುವ ಯೋಜನೆಯನ್ನು ಡಿಎಂಕೆ ಸರ್ಕಾರ ತನ್ನ ಬಜೆಟ್‌ನಲ್ಲಿ ಬಹಿರಂಗಪಡಿಸಿತ್ತು.

ಇದನ್ನೂ ಓದಿ: ಕಾಶ್ಮೀರಿ ಪಂಡಿತರ ಕುರಿತು Kejriwal​​​ ಹೇಳಿಕೆ; ತೇಜಸ್ವಿ ಸೂರ್ಯ ನೇತೃತ್ವದಲ್ಲಿ Delhi CM ಮನೆ ಮುಂದೆ BJP ಪ್ರತಿಭಟನೆ

ಡಿಎಂಕೆಯ ಸೇಲಂ ಘಟಕವು ನೀಡಿದ ದೂರಿನ ಆಧಾರದ ಮೇಲೆ, ಪೊಲೀಸರು ಅರುಲ್ ಪ್ರಸಾದ್ ಅವರನ್ನು ಐಪಿಸಿ ಸೆಕ್ಷನ್ 153 ಎ, 504, 505 (2) ಐಪಿಸಿ ಅಡಿಯಲ್ಲಿ ಬಂಧಿಸಿದ್ದಾರೆ.

ಸ್ಟಾಲಿನ್ ವಿರುದ್ಧ "ಸುಳ್ಳು, ಕ್ಷುಲ್ಲಕ, ನೀಚ ಮತ್ತು ಮಾನಹಾನಿಕರ" ಹೇಳಿಕೆಗಳನ್ನು ನೀಡಿದ ಆರೋಪದ ಮೇಲೆ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರಿಗೆ ತಕ್ಷಣವೇ ಬೇಷರತ್ ಸಾರ್ವಜನಿಕ ಕ್ಷಮೆಯಾಚಿಸಬೇಕು ಮತ್ತು ಮುಖ್ಯಮಂತ್ರಿ ಪರಿಹಾರ ನಿಧಿಗೆ 100 ಕೋಟಿ ರೂಪಾಯಿಗಳ ಪರಿಹಾರವನ್ನು ಪಾವತಿಸಬೇಕು ಎಂದು ಡಿಎಂಕೆ ಅವರು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾದ ಕೆ. ಅಣ್ಣಾಮಲೈ ಅವರನ್ನು ಒತ್ತಾಯಿಸಿತ್ತು.

ಇನ್ನು, ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರ ಬಗ್ಗೆ ತಪ್ಪು ಮಾಹಿತಿ ಹರಡಿರುವುದು ಇದು ಮೊದಲನೆಯ ಘಟನೆ ಏನಲ್ಲ. ತಮಿಳುನಾಡಿನ ವಿರೋಧ ಪಕ್ಷದ ನಾಯಕರಾಗಿದ್ದಾಗ ಮತ್ತು ಡಿಎಂಕೆ ಕಾರ್ಯಾಧ್ಯಕ್ಷರಾಗಿದ್ದಾಗ ಎಂ.ಕೆ.ಸ್ಟಾಲಿನ್ ಅವರು ಚೆನ್ನೈ ಪೊಲೀಸ್ ಆಯುಕ್ತರಿಗೆ ಈ ನಕಲಿ ಟ್ವೀಟ್‌ಗಳ ಬಗ್ಗೆ ಪೊಲೀಸರ ಬಳಿ ದೂರು ದಾಖಲಿಸಿದ್ದರು.

ಇದನ್ನೂ ಓದಿ: ಸ್ವಲ್ಪ ಭಾಗದಲ್ಲಿ ಮಳೆ, ಇನ್ನೊಂದು ಕಡೆ ಉರಿ ಬಿಸಿಲು, ರಾಜಕೀಯದಂತೆ ಬಂಗಾಳದ ಹವಾಮಾನವೂ ವಿಚಿತ್ರ

ಆಗ ಸ್ಟಾಲಿನ್ ಅವರು ನೀಡಿದಂತಹ ತಮ್ಮ ದೂರಿನಲ್ಲಿ "ಇತ್ತೀಚೆಗೆ, ಸಮಾಜಘಾತುಕ ಶಕ್ತಿಗಳು ನನ್ನ ಟ್ವಿಟ್ಟರ್‌ ಖಾತೆಯಂತೆಯೇ ಕಾಣುವ ನಕಲಿ ಖಾತೆಯನ್ನು ಸೃಷ್ಟಿಸಿವೆ. ತಮಿಳು ಸಮಾಜದಲ್ಲಿ ವಿಭಜನೆಯನ್ನು ಬಿತ್ತುವ ರೀತಿಯಲ್ಲಿ ನಾನು ನೀಡದಿರುವ ಅಭಿಪ್ರಾಯಗಳನ್ನು ನಾನು ನೀಡಿದ್ದೇನೆ ಎಂದು ಅವರು ತೋರುವಂತೆ ಮಾಡಿದ್ದಾರೆ. ಅವರು ನಕಲಿ ಪೋಸ್ಟ್ ಗಳನ್ನು ರಚಿಸಿದ್ದಾರೆ ಮತ್ತು ಅದನ್ನು ವಾಟ್ಸ್‌ಆ್ಯಪ್‌, ಫೇಸ್‌ಬುಕ್ ಮತ್ತು ಇತರ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ” ಎಂದು ತಿಳಿಸಿದ್ದರು.
Published by:Pavana HS
First published: