#MeToo ಆರೋಪಕ್ಕೆ ಕೇಂದ್ರ ಸಚಿವರ ಮೊದಲ ತಲೆದಂಡ; ಇ-ಮೇಲ್​ ಮೂಲಕ ರಾಜೀನಾಮೆ ಸಲ್ಲಿಸಿದ ಎಂ.ಜೆ.ಅಕ್ಬರ್

HR Ramesh | news18
Updated:October 14, 2018, 12:27 PM IST
#MeToo ಆರೋಪಕ್ಕೆ ಕೇಂದ್ರ ಸಚಿವರ ಮೊದಲ ತಲೆದಂಡ; ಇ-ಮೇಲ್​ ಮೂಲಕ ರಾಜೀನಾಮೆ ಸಲ್ಲಿಸಿದ ಎಂ.ಜೆ.ಅಕ್ಬರ್
  • Advertorial
  • Last Updated: October 14, 2018, 12:27 PM IST
  • Share this:
ನ್ಯೂಸ್ 18 ಕನ್ನಡ

ನವದೆಹಲಿ (ಅ.14): #MeToo ಅಭಿಯಾನಕ್ಕೆ ಕೇಂದ್ರ ಸರ್ಕಾರದ ಮೊದಲ ಸಚಿವರ ತಲೆದಂಡವಾಗಿದೆ. ಹತ್ತು ಮಂದಿ ಪತ್ರಕರ್ತೆಯರ ಲೈಂಗಿಕ ಕಿರುಕುಳ ಆರೋಪ ಎದುರಿಸಿದ್ದ ವಿದೇಶಾಂಗ ರಾಜ್ಯ ಖಾತೆ ಸಚಿವ ಎಂ.ಜೆ. ಅಕ್ಬರ್​ ಅವರಿಗೆ ರಾಜೀನಾಮೆ ನೀಡುವಂತೆ ಪಕ್ಷ ಸೂಚನೆ ನೀಡಿದೆ. ಅದರಂತೆ ಅಕ್ಬರ್​ ಅವರು ಇ-ಮೇಲ್​ ಮೂಲಕ ರಾಜೀನಾಮೆಯನ್ನು ಕಳುಹಿಸಿಕೊಟ್ಟಿದ್ದಾರೆ.

ಲೈಂಗಿಕ ಆರೋಪ ಕೇಳಿಬಂದ ನಂತರ ದಿನಗಳಿಂದಲೂ ನೈಜೀರಿಯಾದಲ್ಲಿದ್ದ ಎಂ.ಜೆ. ಅಕ್ಬರ್​ ಭಾನುವಾರ ಬೆಳಗ್ಗೆ ಭಾರತಕ್ಕೆ ಬಂದರು. ಆರೋಪ ಕೇಳಿಬಂದ ವಾರದವರೆಗೂ ಯಾವುದೇ ಕ್ರಮಕ್ಕೂ ಮುಂದಾಗಿರದ ಬಿಜೆಪಿ, ಈ ವಿಷಯದಲ್ಲಿ ಅಕ್ಬರ್​ ಅವರಿಂದ ವಿವರಣೆ ಪಡೆದು, ನಂತರ ಕ್ರಮ ಜರುಗಿಸಲು ನಿರ್ಧರಿಸಿತ್ತು. ಅದರಂತೆ ಅಕ್ಬರ್​ ಭಾರತಕ್ಕೆ ಬಂದಾಕ್ಷಣವೇ ರಾಜೀನಾಮೆ ನೀಡುವಂತೆ ಪಕ್ಷ ಅಕ್ಬರ್​ ಅವರಿಗೆ ಸೂಚನೆ ನೀಡಿತು. ಅದರಂತೆ ರಾಜೀನಾಮೆಯನ್ನು ಪ್ರಿನ್ಸಿಪಲ್ ಕಾರ್ಯದರ್ಶಿ ನೃಪೇಂದ್ರ ಮಿಶ್ರಾ ಅವರಿಗೆ ಕಳುಹಿಸಿಕೊಟ್ಟಿದ್ದಾರೆ. ಮತ್ತು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಭೇಟಿ ಮಾಡಲು ಸಮಯವನ್ನು ಕೋರಿದ್ದಾರೆ.

ಭಾರತೀಯ ಜನತಾ ಪಕ್ಷವೂ ಈ ವಿಷಯದಲ್ಲಿ ಹಲವು ದಿನಗಳಿಂದ ಮೌನ ವಹಿಸಿದೆ. ಪಕ್ಷದ ಮೂಲಗಳ ಪ್ರಕಾರ, ಅಕ್ಬರ್​ ವಿರುದ್ಧ ಪಕ್ಷವೂ ಗಂಭೀರ ಕ್ರಮ ತೆಗೆದುಕೊಳ್ಳಲಿದೆ. ಅವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸುವ ಸಾಧ್ಯತೆಯೂ ಇದೆ. ಅಂತಿಮವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಅಕ್ಬರ್​ ಮಂತ್ರಿಯಾದ ನಂತರ ಅವರ ವಿರುದ್ಧ ಯಾವುದೇ ಪ್ರಕರಣಗಳು ದಾಖಲಾಗಿಲ್ಲ. ಮತ್ತು ಈಗ ಕೇಳಿ ಬಂದಿರುವ ಆರೋಪ ಅವರು ಮಂತ್ರಿಯಾಗುವ ಮುಂಚೆಯೇ ನಡೆದಿರುವಂತಹದ್ದು ಎಂಬ ದೃಷ್ಟಿಕೋನದಲ್ಲೂ ಪಕ್ಷ ಯೋಚನೆ ಮಾಡಲಿದೆ ಎಂದು ಈ ಮೊದಲು ಹೇಳಲಾಗಿತ್ತು. ಆದರೆ, ಮೊದಲು ರಾಜೀನಾಮೆ ನೀಡಿ, ಆನಂತರ ಮುಂದಿನದನ್ನು ನೋಡೋಣ ಎಂದು ಹೇಳುವ ಮೂಲಕ ಸಚಿವರ ರಾಜೀನಾಮೆಗೆ ಪಕ್ಷ ಸೂಚಿಸಿತು.

ಆರೋಪದಲ್ಲಿ ಸತ್ಯಾಸತ್ಯತೆ ಈಗ ಮುಖ್ಯವಲ್ಲ. ಈ ಸಮಯದಲ್ಲಿ ರಾಜೀನಾಮೆ ಅಷ್ಟೇ ಮುಖ್ಯ ವಿಷಯವಾಗಿದೆ. ಯಾವುದೇ ವಿವರಣೆ, ಸ್ಪಷ್ಟನೆ ಬೇಡ, ಮೊದಲು ರಾಜೀನಾಮೆ ನೀಡಿ ಎಂದು ಪಕ್ಷವೂ ಎಂ.ಜೆ.ಅಕ್ಬರ್​ಗೆ ಹೇಳಿದೆ ಎಂದು ಸರ್ಕಾರ ಮೂಲಗಳು ತಿಳಿಸಿದೆ.
ಅಕ್ಬರ್​ ಅವರು ಸಂಪಾದಕರಾಗಿದ್ದ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಆರೋಪಿಸಿ ಹಲವು ಮಹಿಳೆಯರು #MeToo ಅಭಿಯಾನದಡಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಈ ಅಭಿಯಾನ ಬೆಂಬಲಿಸಿ ಕೇಂದ್ರದ ಸಚಿವೆ, ಆರೋಪ ಕೇಳಿಬಂದಿರುವ ಮಂತ್ರಿ ವಿರುದ್ಧ ಪಕ್ಷ ಕ್ರಮ ತೆಗೆದುಕೊಳ್ಳಲಿದೆ ಎಂದು ಹೇಳಿದ್ದರು.

ಆರೋಪ ಕೇಳಿಬಂದಿರುವ ಅಕ್ಬರ್  ಅವರನ್ನು ಮಂತ್ರಿ ಸ್ಥಾನದಿಂದ ವಜಾ ಮಾಡಿ ಎಂದು ವಿರೋಧ ಪಕ್ಷವಾದ ಕಾಂಗ್ರೆಸ್​ ಆಗ್ರಹಿಸಿತ್ತು.

Loading...


ಹಿರಿಯ ಪತ್ರಕರ್ತರಾದ ಎಂ.ಜೆ. ಅಕ್ಬರ್​ ಕಿರಿಯ ವಿದೇಶಾಂಗ ವ್ಯವಹಾರ ಖಾತೆ ಸಚಿವರಾಗಿದ್ದಾರೆ. ತಮ್ಮ ಅಧೀನ ಸಚಿವರ ಮೇಲೆ ಕೇಳಿಬಂದಿರುವ ಆರೋಪಕ್ಕೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರೂ ಕೂಡ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಎಂ.ಜೆ. ಅಕ್ಬರ್​ ಪ್ರಮುಖ ಸುದ್ದಿಪತ್ರಿಕೆಗಳಾದ ಟೆಲಿಗ್ರಾಫ್, ಏಷ್ಯನ್ ಏಜ್ ಮತ್ತು ಸಂಡೆ ಗಾರ್ಡಿಯನ್​ ಸಂಪಾಕರಾಗಿ ಕಾರ್ಯನಿರ್ವಹಿಸಿದ್ದರು. ನಂತರ ಬಿಜೆಪಿಯಿಂದ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದರು.

ಎಂ.ಜೆ. ಅಕ್ಬರ್ ವಿರುದ್ಧ ಹಲವು ಮಹಿಳೆಯರು ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ. ಪತ್ರಕರ್ತೆ ಪ್ರಿಯಾ ರಮಣಿ ಎಂಬುವವರು ಮೊದಲಿಗೆ ಅಕ್ಬರ್​ ವಿರುದ್ಧ ಆರೋಪ ಮಾಡಿದರು. ಕಳೆದ ವರ್ಷ ಇವರು ಅಕ್ಬರ್​ ಅಸಭ್ಯ ವರ್ತನೆ ಬಗ್ಗೆ ಮ್ಯಾಗಝಿನ್​ ಒಂದಕ್ಕೆ ಅಕ್ಬರ್​ ಹೆಸರು ಉಲ್ಲೇಖಿಸದೆ ಲೇಖನ ಬರೆದಿದ್ದರು. ಕಳೆದ ವಾರ ಅಸಭ್ಯ ವರ್ತನೆ ತೋರಿದ ವ್ಯಕ್ತಿ ಯಾರು ಎಂಬುದನ್ನು ಹೇಳಿದ್ದರು.


ರಮಣಿ ಅವರ ನಂತರ ಹಲವು ಪತ್ರಕರ್ತೆಯರು ಅಕ್ಬರ್​ ವಿರುದ್ಧ ಆರೋಪಗಳನ್ನು ಮಾಡಿದರು. ಪತ್ರಕರ್ತೆ ಶುಮಾ ರಾಹ ಹಾಗೂ ಪ್ರೇರ್ನಾ ಸಿಂಗ್ ಬಿಂದ್ರಾ ಅವರು ಅಕ್ಬರ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದರು.





First published:October 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...