Milari Chhangte Assaulted Doctor: ಡಾಕ್ಟರ್​ಗೆ ಕಪಾಳಮೋಕ್ಷ ಮಾಡಿದ ಸಿಎಂ ಮಗಳು; ಮುಖ್ಯಮಂತ್ರಿ ಕ್ಷಮೆಯಾಚನೆ

ಈ ಘಟನೆಯು ಮಿಜೋರಾಂ ರಾಜ್ಯದ ವೈದ್ಯಕೀಯ ಸಮುದಾಯದಲ್ಲಿ ಪ್ರತಿಭಟನೆ ಮತ್ತು ಆಕ್ರೋಶವನ್ನು ಹುಟ್ಟುಹಾಕಿದೆ. ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮಿಜೋರಾಂನ ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಸದಸ್ಯರು ಶನಿವಾರ ತಮ್ಮ ಕೆಲಸದ ಸ್ಥಳಗಳಿಗೆ ಕಪ್ಪು ಬ್ಯಾಡ್ಜ್ ಧರಿಸಿ ಪ್ರತಿಭಟನೆ ನಡೆಸಿದ್ದಾರೆ.

ಮಿಜೋರಾಂ ಮುಖ್ಯಮಂತ್ರಿ ಝೋರಂತಂಗ

ಮಿಜೋರಾಂ ಮುಖ್ಯಮಂತ್ರಿ ಝೋರಂತಂಗ

  • Share this:
    ವೈದ್ಯರ ಮೇಲೆ ಹಲ್ಲೆ ನಡೆಸುವ ಘಟನೆಗಳು ದೇಶದಲ್ಲಿ ಆಗಾಗ ಭಾರೀ ಸಂcಲನ ಮೂಡಿಸುತ್ತಲೇ ಇರುತ್ತದೆ. ಇದೀಗ ಮಿಜೋರಾಂ ಮುಖ್ಯಮಂತ್ರಿ ಝೋರಂತಂಗ ಅವರ (Mizoram Chief Minister Zoramthanga) ಮಗಳು ಕ್ಲಿನಿಕ್ ಒಂದರಲ್ಲಿ ವೈದ್ಯರ ಮೇಲೆ ಹಲ್ಲೆ ನಡೆಸಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ (Milari Chhangte Assaulted  Doctor) ಭಾರೀ ವೈರಲ್ ಆಗುತ್ತಿದೆ. ಇದರಿಂದ ಭಾರೀ ಮುಜುಗರ ಅನುಭವಿಸಿರುವ ಮಿಜೋರಾಂ ಮುಖ್ಯಮಂತ್ರಿ ಝೋರಂತಂಗ ತಮ್ಮ ಮಗಳು ಮಿಲಾರಿ ಚಾಂಗ್ಟೆ (Milari Chhangte) ಪರವಾಗಿ ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದ್ದಾರೆ. ಈ ಕೃತ್ಯವನ್ನು ತಾನು ಯಾವುದೇ ರೀತಿಯಲ್ಲಿ ಸಮರ್ಥಿಸುವುದಿಲ್ಲ ಎಂದು ಮಿಜೋರಾಂ ಮುಖ್ಯಮಂತ್ರಿ ಝೋರಂತಂಗ ಹೇಳಿದ್ದಾರೆ.

    ವೈದ್ಯರ ಬಗ್ಗೆ ನಮ್ಮ ಮಗಳ ವರ್ತನೆಯನ್ನು ಸಮರ್ಥಿಸಲು ಯಾವುದೇ ಕಾರಣವೂ ಇಲ್ಲ. ನಾವು ವೈದ್ಯರು ಮತ್ತು ಸಾರ್ವಜನಿಕರ ಬಳಿ ಕ್ಷಮೆ ಕೇಳುತ್ತೇವೆ ಎಂದು ಮಿಜೋರಾಂ ಮುಖ್ಯಮಂತ್ರಿ ಝೋರಂತಂಗ Instagram ನಲ್ಲಿ ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದ್ದಾರೆ.

    ಏನಿದು ಘಟನೆ?
    ಆಗಸ್ಟ್ 17 ರಂದು ಮಿಜೋರಾಂ ಮುಖ್ಯಮಂತ್ರಿ ಝೋರಂತಂಗ ಪುತ್ರಿ ಮಿಲಾರಿ ಚಾಂಗ್ಟೆ ಅವರು ಕ್ಲಿನಿಕ್‌ನಲ್ಲಿ ಐಜ್ವಾಲ್ ಮೂಲದ ಚರ್ಮರೋಗ ವೈದ್ಯರಿಗೆ ಕಪಾಳಮೋಕ್ಷ ಮಾಡಿದ್ದಾರೆ. ಅಪಾಯಿಂಟ್‌ಮೆಂಟ್ ಇಲ್ಲದೆ ವೈದ್ಯರು ಮಿಲಾರಿ ಚಾಂಗ್ಟೆಗೆ ಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆ.

    ವೈದ್ಯರಿಗೆ ಕಪಾಳಮೋಕ್ಷ ಮಾಡಿದ ಸಿಎಂ ಮಗಳು!
    ಇದರಿಂದ ಆಕ್ರೋಶಗೊಂಡ ಮಿಜೋರಾಂ ಮುಖ್ಯಮಂತ್ರಿ ಝೋರಂತಂಗ ಅವರ ಮಗಳು ಮಿಲಾರಿ ಚಾಂಗ್ಟೆ ಅಸಮಧಾನಗೊಂಡಿದ್ದಾರೆ. ಅಲ್ಲದೇ ವೈದ್ಯರ ಮೇಲೆ ಹಲ್ಲೆ ಎಸಗಿದ್ದಾರೆ. ಅವರು ವೈದ್ಯರಿಗೆ ಕಪಾಳಮೋಕ್ಷ ನಡೆಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.

    ಡಾ ಝೋನುನಾಸಂಗ ಎಂಬ ವೈದ್ಯರ ಮೇಲೆ ಮಿಜೋರಾಂ ಸಿಎಂ ಮಗಳು ಹಲ್ಲೆ ಮಾಡಿರುವುದು ಎಂದು ತಿಳಿದುಬಂದಿದೆ. ಡಾ ಝೋನುನಾಸಂಗ ನಡೆಸುತ್ತಿರುವ ಝೋನುಂಡರ್ಮಾಕೇರ್ ಕ್ಲಿನಿಕ್ ಮಿಜೋರಾಂನ ರಾಜಧಾನಿಯಲ್ಲಿ ಅತ್ಯಂತ ಜನಪ್ರಿಯ ಖಾಸಗಿ ಚರ್ಮದ ಚಿಕಿತ್ಸಾಲಯಗಳಲ್ಲಿ ಒಂದಾಗಿದೆ.

    ಇದನ್ನೂ ಓದಿ: Brain Eating Amoeba: ಮೆದುಳು ತಿನ್ನುವ ಅಮೀಬಾಗೆ ಮಗು ಬಲಿ; ಛೇ! ಇದೇನಿದು ಹೊಸ ಖಾಯಿಲೆ?

    ಭಾರತೀಯ ವೈದ್ಯಕೀಯ ಸಂಘ (ಐಎಂಎ) ಈ ಘಟನೆಯ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದು 800 ಕ್ಕೂ ಹೆಚ್ಚು ವೈದ್ಯರು ಶನಿವಾರ ಪ್ರತಿಭಟನೆ ನಡೆಸಿದ್ದಾರೆ.

    ಭಾರತೀಯ ವೈದ್ಯಕೀಯ ಸಂಘದಿಂದ ಭಾರೀ ಪ್ರತಿಭಟನೆ
    ಈ ಘಟನೆಯು ಮಿಜೋರಾಂ ರಾಜ್ಯದ ವೈದ್ಯಕೀಯ ಸಮುದಾಯದಲ್ಲಿ ಪ್ರತಿಭಟನೆ ಮತ್ತು ಆಕ್ರೋಶವನ್ನು ಹುಟ್ಟುಹಾಕಿದೆ. ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮಿಜೋರಾಂನ ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಸದಸ್ಯರು ಶನಿವಾರ ತಮ್ಮ ಕೆಲಸದ ಸ್ಥಳಗಳಿಗೆ ಕಪ್ಪು ಬ್ಯಾಡ್ಜ್ ಧರಿಸಿ ಪ್ರತಿಭಟನೆ ನಡೆಸಿದ್ದಾರೆ.

    ಇದನ್ನೂ ಓದಿ: Supreme Court: ಬಳ್ಳಾರಿಯ ಬಾಲಕಿಗೆ 53 ಲಕ್ಷ ಪರಿಹಾರ; ಸುಪ್ರೀಂ ಆದೇಶ

    ಮಿಜೋರಾಂ ಮುಖ್ಯಮಂತ್ರಿ ಝೋರಂತಂಗ ಅವರ ಮಗಳು ಮಿಲಾರಿ ಚಾಂಗ್ಟೆಗೆ ವಿರುದ್ಧ ಇನ್ನೂ ಹೆಚ್ಚಿನ ಕಠಿಣ ಕ್ರಮವನ್ನು ಕೈಗೊಳ್ಳದ ಭಾರತೀಯ ವೈದ್ಯಕೀಯ ಸಂಘಕ್ಕೆ (ಐಎಂಎ) ಮಿಜೋರಾಂ ಮುಖ್ಯಮಂತ್ರಿ ಝೋರಂತಂಗ ಧನ್ಯವಾದ ಅರ್ಪಿಸಿದ್ದಾರೆ.
    Published by:guruganesh bhat
    First published: