Assembly Election2021: ಬಂಗಾಳದ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ; ನಟ ಮಿಥುನ್ ಚಕ್ರವರ್ತಿಗೆ ಟಿಕೆಟ್ ನಿರಾಕರಣೆ!

ಈ ಹಿಂದೆ ಮಿಥುನ್ ಚಕ್ರವರ್ತಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದ ಸಂದರ್ಭದಲ್ಲಿ ಅವರು ರಾಶ್‌ಬೆಹರಿ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ ಎನ್ನಲಾಗುತ್ತಿತ್ತು. ಆದರೆ ಆ ಸ್ಥಾನಕ್ಕೆ ಕಾಶ್ಮೀರದ ಉಸ್ತುವಾರಿ ವಹಿಸಿಕೊಂಡಿದ್ದ ನಿವೃತ್ತ ಲೆಫ್ಟಿನೆಂಟ್ ಜನರಲ್ ಸುಬ್ರತಾ ಸಹಾ ಅವರನ್ನು ಬಿಜೆಪಿ  ಕಣಕ್ಕಿಳಿಸಿದೆ.

ನಟ ಮಿಥುನ್ ಚಕ್ರವರ್ತಿ.

ನಟ ಮಿಥುನ್ ಚಕ್ರವರ್ತಿ.

 • Share this:
  ಕೋಲ್ಕತ್ತಾ (ಮಾರ್ಚ್​ 23); ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ಸಮೀಕ್ಷೆಯೊಂದು ನಡೆಸಲಾಗಿತ್ತು. ಈ ಸಮೀಕ್ಷೆಯಲ್ಲಿ ಕ್ರಿಕೆಟಿಗ ಸೌರವ್ ಗಂಗೂಲಿ ಅಥವಾ ಖ್ಯಾತ ನಟ ಮಿಥುನ್ ಚಕ್ರವರ್ತಿ ಮುಖ್ಯಮಂತ್ರಿ ಆಗುವುದನ್ನು ಹಲವರು ಭಯಸಿದ್ದರು. ಇದೇ ಕಾರಣಕ್ಕೆ ನಟ ಮಿಥುನ್​ ಚಕ್ರವರ್ತಿ ಟಿಎಂಸಿ ಪಕ್ಷ ಹಾಗೂ ತಮ್ಮ ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಆದರೆ, ಪಶ್ಚಿಮ ಬಂಗಾಳ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು ಇಂದು ಬಿಜೆಪಿ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಆದರೆ, ಈ ಪಟ್ಟಿಯಲ್ಲಿ ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಹೆಸರು ಇಲ್ಲದಿದ್ದರುವುದು ಅನೇಕರಿಗೆ ಆಘಾತಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ.

  ಈ ಹಿಂದೆ ಮಿಥುನ್ ಚಕ್ರವರ್ತಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದ ಸಂದರ್ಭದಲ್ಲಿ ಅವರು ರಾಶ್‌ಬೆಹರಿ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ ಎನ್ನಲಾಗುತ್ತಿತ್ತು. ಆದರೆ ಆ ಸ್ಥಾನಕ್ಕೆ ಕಾಶ್ಮೀರದ ಉಸ್ತುವಾರಿ ವಹಿಸಿಕೊಂಡಿದ್ದ ನಿವೃತ್ತ ಲೆಫ್ಟಿನೆಂಟ್ ಜನರಲ್ ಸುಬ್ರತಾ ಸಹಾ ಅವರನ್ನು ಬಿಜೆಪಿ  ಕಣಕ್ಕಿಳಿಸಿದೆ. ಇನ್ನು ದಕ್ಷಿಣ ಕೋಲ್ಕತ್ತದ ಸ್ಥಾನವನ್ನು ಮಿಥುನ್‌ಗೆ ಬಿಟ್ಟುಕೊಡಲಾಗುತ್ತದೆ ಎಂದು ಹೇಳಲಾಗಿತ್ತು. ಅದೇ ಕಾರಣಕ್ಕೆ ಅವರು ತಮ್ಮ ಮತದಾರರ ಗುರುತಿನ ಚೀಟಿಯ ವಿಳಾಸವನ್ನು ಮುಂಬೈನಿಂದ ಕೋಲ್ಕತ್ತಾಗೆ ವರ್ಗಾಯಿಸಿಕೊಂಡಿದ್ದರು. ಆದರೆ ಅಲ್ಲಿಯೂ ಅವರ ಹೆಸರನ್ನು ಪ್ರಕಟಿಸಿಲ್ಲ.

  ಇದನ್ನೂ ಓದಿ: Mamata Banerjee: ಸುವೇಂದು ಅಧಿಕಾರಿ ನಂದಿಗ್ರಾಮದ ಗೆಲುವಿಗಾಗಿ ಕ್ರಿಮಿನಲ್​ಗಳನ್ನು ನೇಮಕ ಮಾಡಿಕೊಳ್ಳುತ್ತಿದ್ದಾರೆ; ಮಮತಾ ಕಿಡಿ

  ಆದರೂ ಅವರು ಕಣಕ್ಕಿಳಿಯಲೇಬೇಕೆಂದು ಬಯಸಿದರೆ ಈಗಿರುವ ಅಭ್ಯರ್ಥಿಗಳ ಬದಲಿಗೆ ಅವರನ್ನು ಕಣಕ್ಕಿಳಿಸಬಹುದು. ಅಂತಿಮ ಹಂತದ ಮತದಾನಕ್ಕೆ ನಾಮಪತ್ರ ಸಲ್ಲಿಸಲು ಏಪ್ರಿಲ್ ಮಧ್ಯದವರೆಗೂ ಸಮಯವಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

  "ನಾನು ಪಕ್ಕಾ ಕೋಬ್ರಾ. ಒಂದ್ಸಲ ಕಚ್ಚಿದರೆ ಅಷ್ಟೇ, ಫಿನಿಷ್" ಎಂದು ಬಹಿರಂಗ ವೇದಿಕೆಯಲ್ಲಿ ಹೇಳಿದ್ದ ನಟ ಮಿಥುನ್ ಚಕ್ರವರ್ತಿ ಈಗ ಬಿಜೆಪಿ ಪಾಲಿಗೆ ಸ್ಟಾರ್ ಪ್ರಚಾರಕ ಅಷ್ಟೇ ಆಗಿದ್ದಾರೆ. ಮಾರ್ಚ್ 30 ರಂದು ನಂದಿಗ್ರಾಮದಲ್ಲಿ ಸುವೇಂಧು ಅಧಿಕಾರಿ ಪರವಾಗಿ ಅಮಿತ್ ಶಾ ಜೊತೆಗೂಡಿ ಮಿಥುನ್ ಚಕ್ರವರ್ತಿ ರೋಡ್‌ ಶೋ ನಡೆಸಲಿದ್ದಾರೆ ಎಂದು ಬಿಜೆಪಿ ತಿಳಿಸಿದೆ.
  Published by:MAshok Kumar
  First published: