• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Priyanka Gandhi| ರಾಮ ಮಂದಿರ ಟ್ರಸ್ಟ್​ ಮೇಲೆ ಭ್ರಷ್ಟಾಚಾರದ ಆರೋಪ; ಇದು ದಾನ-ನಂಬಿಕೆಗೆ ಅವಮಾನ ಎಂದ ಪ್ರಿಯಾಂಕ ಗಾಂಧಿ

Priyanka Gandhi| ರಾಮ ಮಂದಿರ ಟ್ರಸ್ಟ್​ ಮೇಲೆ ಭ್ರಷ್ಟಾಚಾರದ ಆರೋಪ; ಇದು ದಾನ-ನಂಬಿಕೆಗೆ ಅವಮಾನ ಎಂದ ಪ್ರಿಯಾಂಕ ಗಾಂಧಿ

ಪ್ರಿಯಾಂಕಾ ಗಾಂಧಿ.

ಪ್ರಿಯಾಂಕಾ ಗಾಂಧಿ.

2 ಕೋಟಿ ರೂ. ಗೆ ಒಂದು ಜಮೀನು ಖರೀದಿ ಮಾಡಿ, ಕೇವಲ 5 ನಿಮಿಷಗಳ ಅಂತರದಲ್ಲಿ ಚಂಪತ್‍ರಾಯ ನೇತೃತ್ವದಲ್ಲಿ ರಾಮಜನ್ಮಭೂಮಿ ಟ್ರಸ್ಟ್‌‌ ಅದೇ ಜಮೀನನ್ನು 18.5 ಕೋಟಿ ರೂ.ಗಳಿಗೆ ಖರೀದಿಸಿದೆ ಎಂದು ಸಂಜಯ್‍ಸಿಂಗ್‍ ದಾಖಲೆಗಳ ಸಮೇತ ಅಪಾದನೆ ಮಾಡಿದ್ದಾರೆ.

  • Share this:

ನವ ದೆಹಲಿ (ಜೂನ್. 14); ಶತಮಾನಗಳಿಂದ ಇತ್ಯರ್ಥವಾದಗ ರಾಮ ಜನ್ಮಭೂಮಿ ವಿವಾದಕ್ಕೆ ಸುಪ್ರೀಂ ಕೋರ್ಟ್​ ಪೂರ್ಣ ವಿರಾಮ ಇಡುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ರಾಮ ಮಂದಿರ ನಿರ್ಮಾಣಕ್ಕೆ ಕಳೆದ ವರ್ಷ ಭೂಮಿ ಪೂಜೆ ನೆರವೇರಿಸಿ ದ್ದರು. ಅಲ್ಲದೆ, ದೇವಾಲಯ ನಿರ್ಮಾಣಕ್ಕೆ ಅಯೋಧ್ಯೆಯ ರಾಮ ಜನ್ಮಭೂಮಿ ಟ್ರಸ್ಟ್ ಅನ್ನು ನಿರ್ಮಿಸಿ, ದೇಶದಾದ್ಯಂತ ದೇಣಿಗೆ ಸಂಗ್ರಹಿಸಲಾಗಿತ್ತು. ರಾಮ ಜನ್ಮಭೂಮಿ ಹೆಸರಿನಲ್ಲಿ ಅಯೋಧ್ಯೆ ಯಲ್ಲಿ ಅಪಾರ ಭೂಮಿಯನ್ನೂ ಖರೀದಿ ಮಾಡಲು ಟ್ರಸ್ಟ್​ ಮುಂದಾಗಿತ್ತು. ಆದರೆ, ಹೀಗೆ ಖರೀದಿ ಮಾಡಲಾದ ಭೂಮಿ ಹೆಸರಿನಲ್ಲಿ ನಿರಂತರವಾಗಿ ಭ್ರಷ್ಟಾಚಾರದ ಆರೋಪಗಳು ಕೇಳಿ ಬರುತ್ತಲೇ ಇದೆ. ಈ ಬಗ್ಗೆ ಸೋಮವಾರ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, "ಭಕ್ತರ ದೇಣಿಗೆ ದುರುಪಯೋಗಪಡಿಸಿ ಕೊಳ್ಳುವುದು ಅಧರ್ಮ ಮತ್ತು ಪಾಪವಾಗಿದ್ದು, ಇದು ಭಕ್ತರ ನಂಬಿಕೆಗೆ ಮಾಡಿದ ಅಪಮಾನವಾಗಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.



ರಾಮ ಜನ್ಮಭೂಮಿ ಟ್ರಸ್ಟ್​ ಭ್ರಷ್ಟಾಚಾರದ ಬಗ್ಗೆ ಟ್ವೀಟ್ ಮೂಲಕ ಕಿಡಿಕಾರಿರುವ ಪ್ರಿಯಾಂಕ ಗಾಂಧಿ, "ನಂಬಿಕೆ ಮತ್ತು ಭಕ್ತಿಯಿಂದ ಭಾರತದ ಕೋಟ್ಯಂತರ ಜನರು ತಮ್ಮ ದೇಣಿಗೆಯನ್ನು ರಾಮ ಜನ್ಮಭೂಮಿಯಲ್ಲಿ ದೇವಾಲಯ ನಿರ್ಮಾಣಕ್ಕೆಂದು ದೇವರಿಗೆ ಅರ್ಪಣೆ ಮಾಡಿದ್ದರು. ಆದರೆ, ದೇವರ ಹೆಸರಿನ ಆ ದಾನದ ಹಣವನ್ನು ಟ್ರಸ್ಟ್​ ಹೀಗೆ ದುರುಪಯೋಗಪಡಿಸಿಕೊಳ್ಳುವುದು ಅಧರ್ಮ, ಪಾಪ, ಅವರ ನಂಬಿಕೆಗೆ ಮಾಡಿದ ಅಪಮಾನವಾಗಿದೆ" ಎಂದು ಪ್ರಿಯಾಂಕ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.


ಆಮ್‍ ಆದ್ಮಿ ಪಕ್ಷದ ರಾಜ್ಯಸಭಾ ಸದಸ್ಯ ಸಂಜಯ ಸಿಂಗ್‍ ಮತ್ತು ಸಮಾಜವಾದಿ ಪಕ್ಷದ ಮಾಜಿ ಶಾಸಕ ಪವನ್‍ ಪಾಂಡೆ ಭಾನುವಾರ ಪ್ರತ್ಯೇಕ ಪತ್ರಿಕಾಗೋಷ್ಠಿ ನಡೆಸಿ ರಾಮ ಜನ್ಮಭೂಮಿ ಟ್ರಸ್ಟ್‌ ಭೂ ದಂಧೆ ನಡೆಸುತ್ತಿದೆ ಎಂದು ಆರೋಪ ಮಾಡಿದ್ದರು.


2 ಕೋಟಿ ರೂ. ಗೆ ಒಂದು ಜಮೀನು ಖರೀದಿ ಮಾಡಿ, ಕೇವಲ 5 ನಿಮಿಷಗಳ ಅಂತರದಲ್ಲಿ ಚಂಪತ್‍ರಾಯ ನೇತೃತ್ವದಲ್ಲಿ ರಾಮಜನ್ಮಭೂಮಿ ಟ್ರಸ್ಟ್‌‌ ಅದೇ ಜಮೀನನ್ನು 18.5 ಕೋಟಿ ರೂ.ಗಳಿಗೆ ಖರೀದಿಸಿದೆ ಎಂದು ಸಂಜಯ್‍ಸಿಂಗ್‍ ದಾಖಲೆಗಳ ಸಮೇತ ಅಪಾದನೆ ಮಾಡಿದ್ದಾರೆ. ತದನಂತರ ಈ ವಿವಾದ ದೇಶದಾದ್ಯಂತ ದೊಡ್ಡ ಮಟ್ಟದ ಚರ್ಚೆಗೆ ಮತ್ತು ಅಸಮಾಧಾನಕ್ಕೆ ಕಾರಣವಾಗಿತ್ತು.


ಇದನ್ನೂ ಓದಿ: RIP Sanchari Vijay: ಸಂಚಾರ ನಿಲ್ಲಿಸಿದ ಸ್ಯಾಂಡಲ್​ವುಡ್​ ನಟ ವಿಜಯ್: ಕಂಬನಿ ಮಿಡಿದ ಕಿಚ್ಚ ಸುದೀಪ್​..!


ಅಯೋಧ್ಯೆಯ ರಾಮ ಮಂದಿರಕ್ಕೆ ಭೂಮಿ ಖರೀದಿಸುವಾಗ ಕೋಟ್ಯಂತರ ಮೊತ್ತದ ಆರ್ಥಿಕ ಅಕ್ರಮಗಳು ನಡೆದಿವೆ ಎಂದು ಸಮಾಜವಾದಿ ಪಕ್ಷದ ಮಾಜಿ ಶಾಸಕ ಪವನ್ ಪಾಂಡೆ ಕೂಡ ಭಾನುವಾರ ಆರೋಪಿಸಿದ್ದಾರೆ.


ಏಕಕಾಲದಲ್ಲಿ ನಡೆದ ಪತ್ರಿಕಾಗೋಷ್ಠಿಗಳಲ್ಲಿ, (ಲಕ್ನೋದಲ್ಲಿ ಸಂಜಯ ಸಿಂಗ್ ಮತ್ತು ಅಯೋಧ್ಯೆಯಲ್ಲಿ ಪವನ್‍ ಪಾಂಡೆ) ಎರಡು ಭೂ ಖರೀದಿ ಒಪ್ಪಂದಗಳ ಪ್ರತಿಗಳನ್ನು ಮಾಧ್ಯಮಗಳಿಗೆ ನೀಡಲಾಗಿದೆ.


ಇದನ್ನೂ ಓದಿ: ಕುಟುಂಬದಲ್ಲಿ ಕೊರೊನಾದಿಂದ ಮೃತಪಟ್ಟ ಒಬ್ಬರಿಗೆ ₹1 ಲಕ್ಷ ಪರಿಹಾರ : ಸಿಎಂ ಯಡಿಯೂರಪ್ಪ ಘೋಷಣೆ


ಈ ಹಿಂದೆ ಕೆಲ ಅನಾಮಧೇಯ ವ್ಯಕ್ತಿಗಳು ನಕಲಿ ಚೆಕ್​ ಬಳಕೆ ಮಾಡಿ ರಾಮ ಮಂದಿರ ಟ್ರಸ್ಟ್​ನಿಂದ ದೊಡ್ಡ ಮೊತ್ತದ ಹಣ ವಿತ್​ಡ್ರಾ ಮಾಡಿದ್ದರು. ನಂತರ ಪೊಲೀಸರ ವಶವಾಗಿದ್ದರು. ಆದರೆ, ಇದೀಗ ರಾಮ ಜನ್ಮಭೂಮಿ ಟ್ರಸ್ಟ್​ನಲ್ಲಿರುವವರೇ ಹಣದ ದುರ್ಬಳಕೆಗೆ ಮುಂದಾಗಿರುವುದು ದೇಶದಾದ್ಯಂತ ಹಲವರ ಅಸಮಾಧಾನಕ್ಕೆ ಕಾರಣವಾಗಿದೆ.


ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

top videos
    First published: