MissionPaani: ನೀರಿನ ಮಹತ್ವದ ಬಗ್ಗೆ ತಿಳಿಸಿದ ಕೋತಿ: ನಾಳಿನ ಒಳಿತಿಗಾಗಿ ಇಂದೇ ಜಾಗೃತರಾಗಿ

MissionPaani: ಸಾಮಾನ್ಯವಾಗಿ ಪ್ರತಿಯೊಂದು ಊರಲ್ಲೂ ಸಾರ್ವಜನಿಕ ನಲ್ಲಿಗಳಿಂದ ನೀರು ಪೋಲಾಗುವುದನ್ನು ಕಾಣುತ್ತೇವೆ. ನಾವು ಕಂಡರೂ ಕಾಣದಂತೆ ವರ್ತಿಸುತ್ತೇವೆ. ಇಲ್ಲಿ ನಮಗೆ ಅದು ಸಮಸ್ಯೆ ಎಂದು ಅನಿಸುವುದೇ ಇಲ್ಲ.

ಕೋತಿ

ಕೋತಿ

  • Share this:
ನೀರು ಒಂದು ಅತ್ಯಂತ ವಿರಳವಾದ ಸಂಪನ್ಮೂಲ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೂ ನಮ್ಮ ನಿರ್ಲಕ್ಷ್ಯ ಇಂದು ನೀರಿಗಾಗಿ ಹಾಹಾಕಾರ ಪಡುವಂತೆ ಮಾಡಿದೆ ಎಂದರೆ ತಪ್ಪಾಗಲಾರದು. ಅದರಲ್ಲೂ ಇಪ್ಪತ್ತೊಂದನೆಯ ಶತಮಾನದಲ್ಲಿ ದೇಶ ಮತ್ತು ದೇಶಗಳ ನಡುವೆ ಜಲ ಸಂಪನ್ಮೂಲಗಳ ವಿಚಾರವಾಗಿ ದೊಡ್ಡ ಹೋರಾಟವೇ ನಡೆಯಲಿದೆ ಎನ್ನಲಾಗುತ್ತಿದೆ.

ಹವಾಮಾನ ಇಲಾಖೆಯ ಪ್ರಕಾರ, ಭಾರತದಲ್ಲಿ ಈ ವಾರ ಸರಾಸರಿಗಿಂತ ಶೇಕಡಾ 42 ರಷ್ಟು ಹೆಚ್ಚಿನ ಮಳೆಯಾಗಿದೆ. ಇದರಿಂದ ಹಲವು ಕಡೆ ಬರದ ಆತಂಕ ಕಡಿಮೆಯಾಗಿದೆ. ಆದರೆ ಇನ್ನೊಂದೆಡೆ ದೇಶದ ಅನೇಕ ಕಡೆ ಮಳೆಯಿಲ್ಲದೆ ನೀರಿನ ಸಮಸ್ಯೆ ಗಂಭೀರವಾಗಿ ತಲೆದೂರಿದೆ. ಇದೇ ಪರಿಸ್ಥಿತಿ ಮುಂದಿನ ದಿನಗಳಲ್ಲಿ ದೇಶದ ಎಲ್ಲಾ ಭಾಗಗಳಿಗೂ ವ್ಯಾಪಿಸಲಿದೆ ಎನ್ನಲಾಗುತ್ತಿದೆ. ಹೀಗಾಗಿ ನೀರಿನ ಸಂರಕ್ಷಣೆ ಮತ್ತು ನೀರನ್ನು ಏಕೆ ವ್ಯರ್ಥ ಮಾಡಬಾರದು ಎಂದು ಜನರಿಗೆ ತಿಳಿಸುವ ಅವಶ್ಯಕತೆಯಿದೆ.

ಸಾಮಾನ್ಯವಾಗಿ ಪ್ರತಿಯೊಂದು ಊರಲ್ಲೂ ಸಾರ್ವಜನಿಕ ನಲ್ಲಿಗಳಿಂದ ನೀರು ಪೋಲಾಗುವುದನ್ನು ಕಾಣುತ್ತೇವೆ. ನಾವು ಕಂಡರೂ ಕಾಣದಂತೆ ವರ್ತಿಸುತ್ತೇವೆ. ಇಲ್ಲಿ ನಮಗೆ ಅದು ಸಮಸ್ಯೆ ಎಂದು ಅನಿಸುವುದೇ ಇಲ್ಲ. ಏಕೆಂದರೆ ಅದರಿಂದ ನಿಮಗೆ ಯಾವುದೇ ತೊಂದರೆ ಇಲ್ಲ ಎಂಬ ಭಾವನೆ. ಆದರೆ ನೆನಪಿಟ್ಟುಕೊಳ್ಳಿ ಹನಿ ಹನಿ ಸೇರಿದರೆ ಮಾತ್ರ ಹಳ್ಳ. ಇಂದು ಪೋಲಾಗುವ ನೀರು ನಾಳೆಗೆ ಬೇಕಾಗುತ್ತದೆ. ಎಲ್ಲೋ ಒಂದು ಕಡೆ ನೀರನ್ನು ವಿನಾಕಾರಣ ವ್ಯರ್ಥ ಮಾಡಿದರೆ, ನಾಳೆ ಅದೇ ನೀರನ್ನು ಹಣ ಕೊಟ್ಟು ಖರೀದಿಸುವಂತಹ ಪರಿಸ್ಥಿತಿ ಬರಬಹುದು.

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಭಾರೀ ವೈರಲ್ ಆಗಿತ್ತು. ಆ ವಿಡಿಯೋ ವೈರಲ್ ಆಗಲು ಮುಖ್ಯ ಕಾರಣ ನೀರು. ಹೌದು, ಮನುಷ್ಯನಿಗೆ ಇರಬೇಕಾದ ಜಾಗೃತಿ ಕೋತಿಯಲ್ಲಿತ್ತು. ಸಾರ್ವಜನಿಕ ನೀರಿನ ಟ್ಯಾಪ್​ ಮೂಲಕ ಬಾಯಾರಿಕೆ ನೀಗಿಸಿಕೊಂಡ ಮಂಗ ನಲ್ಲಿಯನ್ನು ಮುಚ್ಚಿ ಹೋಗಿತ್ತು. ಅದರಲ್ಲೂ ಮುಖ್ಯವಾಗಿ ನೀರು ಕುಡಿದ ತಕ್ಷಣವೇ  ಟ್ಯಾಪ್ ಮುಚ್ಚಿ ಕೋತಿ ನೀರು ಪೋಲಾಗದಂತೆ ನೋಡಿಕೊಂಡಿತು. ಈ ವಿಡಿಯೋ ಭಾರೀ ವೈರಲ್ ಆಗಿದ್ದಲ್ಲದೆ, ನೀರಿನ ಮಹತ್ವವನ್ನು ಮಂಗನಿಂದ ಕಲಿಯಬೇಕೆಂದು ಹೇಳಲಾಗಿತ್ತು.ಭಾರತದ ಪರಿಸ್ಥಿತಿ:
2001ರಲ್ಲಿ ಭಾರತದಲ್ಲಿ ತಲಾ ನೀರಿನ ಲಭ್ಯತೆಯು  1,816 ಕ್ಯೂಬಿಕ್ ಇತ್ತು. ಇದುವೇ 2011 ರಲ್ಲಿ 1,545 ಕ್ಯೂಬಿಕ್ ಮೀಟರ್‌ಗೆ ಇಳಿದಿದೆ. ಇದೇ ರೀತಿಯ ಪರಿಸ್ಥಿತಿಗಳು ಮುಂದುವರಿದರೆ, 2025 ರ ಹೊತ್ತಿಗೆ, ತಲಾ ನೀರಿನ ಲಭ್ಯತೆಯು ವರ್ಷಕ್ಕೆ 1,345 ಕ್ಯೂಬಿಕ್ ಮೀಟರ್‌ಗೆ ಇಳಿಯುವ ಸಾಧ್ಯತೆಯಿದೆ.

256 ಜಿಲ್ಲೆಗಳಲ್ಲಿ ಮತ್ತು 1,592 ಬ್ಲಾಕ್‌ಗಳಲ್ಲಿ ಯೋಜನೆ ಪ್ರಾರಂಭ:
ಈಗಾಗಲೇ ಜಲ ಸಂರಕ್ಷಣೆಗಾಗಿ ಜಲಶಕ್ತಿ ಸಚಿವಾಲಯವು ಹಲವು ಯೋಜನೆಗಳನ್ನು ಪ್ರಾರಂಭಿಸಿದೆ. ಈ ಯೋಜನೆಯನ್ನು 256 ಜಿಲ್ಲೆಗಳಲ್ಲಿ ಮತ್ತು 1,592 ಬ್ಲಾಕ್‌ಗಳಲ್ಲಿ ಆರಂಭಿಸಲಾಗಿದೆ. ಅಲ್ಲಿ ಅಂತರ್ಜಲದ ಬಳಕೆ ಮತ್ತು ಅದನ್ನು ಹೆಚ್ಚಿಸುವ ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಗಿದೆ.

'ಭಾರತದಲ್ಲಿ ಅರ್ಧದಷ್ಟು ಜನರು ನೀರಿನ ಸಮಸ್ಯೆಗೆ ಒಳಗಾಗಿದ್ದಾರೆ. ನಾವು ಬೃಹತ್ ಆಂದೋಲನವನ್ನು ಪ್ರಾರಂಭಿಸಿ ಮುಂದಿನ ತಲೆಮಾರುಗಳಿಗೆ ನೀರನ್ನು ಸಂರಕ್ಷಿಸಿಕೊಳ್ಳಬೇಕು. ಪ್ರಸ್ತುತ ನಾವು ಶೇ.8 ರಷ್ಟು ಮಾತ್ರ ಮಳೆ ನೀರನ್ನು ಉಳಿಸುತ್ತಿದ್ದೇವೆ. ಇದರ ಶೇಕಡಾವಾರು ಪ್ರಮಾಣವನ್ನು ಹೆಚ್ಚಿಸುವ ಕಾರ್ಯಗಳು ನಡೆಯಬೇಕಿದೆ' ಎಂದು ಜಲಶಕ್ತಿ ಸಚಿವರಾದ ಶೇಖಾವತ್ ತಿಳಿಸಿದ್ದಾರೆ.

 
First published: