ಹವಾಮಾನ ಬದಲಾವಣೆಯು ವಾಸ್ತವ. ಆದರೂ ನಾವು ನಮ್ಮ ಭೋಗ ಮತ್ತು ಆರಾಮದಾಯಕ ಜೀವನಶೈಲಿಯ ಹವಾಮಾನ ಬದಲಾವಣೆ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಒಪ್ಪಿಕೊಳ್ಳಲು ಅನೇಕರು ತಯಾರಿಲ್ಲ. ಹವಾಮಾನ ಬದಲಾವಣೆಯ ಬಗ್ಗೆ ಜನರಿಗೆ ಅರಿವು ಮತ್ತು ಕಾಳಜಿ ವಹಿಸುವುದು ಕೇವಲ ಬಿಳಿ ಕೋಟ್ ಧರಿಸಿದ ಹಳೆಯ ವಿಜ್ಞಾನಿಗಳ ಕರ್ತವ್ಯವಲ್ಲ. ನಮ್ಮ ಯುವ ಪೀಳಿಗೆ ಭವಿಷ್ಯದಲ್ಲಿ ಈ ಭೂಮಿಯ ವಾಸಿಗಳಾಗಿರುವುದರಿಂದ ಯುವ ಪೀಳಿಗೆ ಇಲ್ಲಿ ಭಾಗವಹಿಸಬೇಕಾಗಿದೆ. ಈ ಕಠಿಣ ವಿಷಯದ ಬಗ್ಗೆ ಭಾರತದ ಬಾಲ ಪರಿಸರ ಕಾರ್ಯಕರ್ತೆ ಲಿಸಿಪ್ರಿಯಾ ಕಂಗುಜಮ್ ಅವರು ಜವಾಬ್ದಾರಿಯನ್ನು ವಹಿಸಿಕೊಂಡಿರುವ ಒಂದು ಉದಾಹರಣೆಯಾಗಿ ನೋಡಬಹುದು.
ಕಂಗುಜಮ್ ವಿಶ್ವದ ಕಿರಿಯ ಪರಿಸರ ಕಾರ್ಯಕರ್ತರಲ್ಲಿ ಒಬ್ಬರು. ಗ್ರೇಟಾ ಥನ್ಬರ್ಗ್ ಅವರು ವಿಶ್ವ ನಾಯಕರನ್ನು ಧೈರ್ಯದಿಂದ ಎದುರಿಸಿ ವಿಶ್ವದ ಗಮನ ಸೆಳೆದರೆ, ಕಂಗುಜಮ್ ಅವರ ಕೊಡುಗೆಗಳನ್ನು ಹೆಚ್ಚಾಗಿ ನಮ್ಮ ದೇಶದಲ್ಲಿಯೇ ಕಡೆಗಣಿಸಲಾಗುತ್ತಿದೆ. ಅವರು 2019 ರಲ್ಲಿ ಸ್ಪೇನ್‌ನ ಮ್ಯಾಡ್ರಿಡ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಹವಾಮಾನ ಸಮ್ಮೇಳನದಲ್ಲಿ (ಸಿಒಪಿ 25) ಭಾಗವಹಿಸಲು ಆಯ್ಕೆಯಾದಾಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿದರು. ಅವರ ಐತಿಹಾಸಿಕ ಭಾಷಣದ ಸಮಯದಲ್ಲಿ ಅವರಿಗೆ ಕೇವಲ 8 ವರ್ಷ ವಯಸ್ಸು. ಮತ್ತು ನಮ್ಮ ಗ್ರಹವನ್ನು ಉಳಿಸಲು ಜಗತ್ತಿಗೆ ಅವರು ಮಾಡಿದ ಮನವಿ ಎಲ್ಲರ ಮನಮುಟ್ಟುವಂತಿತ್ತು.
ಪರಿಸರ ಜಾಗೃತಿ ಮೂಡಿಸಲು ಆಕೆ ಸತತ ಎರಡು ವರ್ಷಗಳಿಂದ ಅಭಿಯಾನ ನಡೆಸಿದ್ದರು. ಮತ್ತು ಶಾಲೆಗಳಲ್ಲಿ ಹವಾಮಾನ ಬದಲಾವಣೆಯ ಸಾಕ್ಷರತೆಯನ್ನು ಕಡ್ಡಾಯಗೊಳಿಸಬೇಕೆಂದು ಮ್ಯಾಡ್ರಿಡ್‌ನ ಸಿಒಪಿ 25 ನಲ್ಲಿ ಮಾಡಿದ ಭಾಷಣದಲ್ಲಿ ಸಲಹೆ ನೀಡಿದ್ದರು. ಈ ಘಟನೆಯು ವಿಶ್ವದ ಇಂಗಾಲದ ಮಾರುಕಟ್ಟೆಗಳಿಗೆ ಸಂಬಂಧಿಸಿದ ಚರ್ಚೆಯ ಸುತ್ತ ಕೇಂದ್ರೀಕೃತವಾಗಿತ್ತು ಮತ್ತು ಅನೇಕ ಕಾರ್ಯಕರ್ತರನ್ನು ತಮ್ಮ ಪರಿಣತಿಯನ್ನು ಹಂಚಿಕೊಳ್ಳಲು ಆಹ್ವಾನಿಸಲಾಯಿತು.
ಆಟವಾಡಬೇಕಾದ ಬಾಲಕಿ, ಶಾಲೆಗೆ ಹೋಗಬೇಕಾದ ಬಾಲಕಿ ಯಾಕೆ ಇಲ್ಲಿಗೆ ಬಂದಿದ್ದಾಳೆ. ಯಾಕೆಂದರೆ ವಿಶ್ವದ ನಾಯಕರಿಗೆ ಗೊತ್ತು ಆಕೆ ಹುಟ್ಟುವ ಮೊದಲೇ ಹವಾಮಾನ ಬದಲಾಗಿದೆ ಎಂದು ಆಕೆ ಪ್ರಶ್ನೆಯನ್ನು ಎತ್ತಿದ್ದಳು. ಇಂಗಾಲದ ಹೊರಸೂಸುವಿಕೆ ಪ್ರಮಾಣ ಕಡಿಮೆಗೊಳಿಸುವುದು, ಹೆಚ್ಚು ಸುಸ್ಥಿರ ಚೌಕಟ್ಟುಗಳನ್ನು ರಚಿಸುವುದು ಮತ್ತು ನಮ್ಮ ಗ್ರಹದ ವೈವಿಧ್ಯತೆಯನ್ನು ಕಾಪಾಡುವ ತುರ್ತು ಅಗತ್ಯದ ಬಗ್ಗೆ ಅವರು ಅಂದಿನ ಭಾಷಣದಲ್ಲಿ ಪ್ರಮುಖವಾಗಿ ಚರ್ಚಿಸಿದ್ದರು.
If we spend all the money spending on war on finding environmental answers, ending poverty and giving education then what a wonderful place this earth would be! Plz protect our environment and save our future. 🙏🏻 pic.twitter.com/vlNakYGr9H
— Licypriya Kangujam (@LicypriyaK) December 10, 2019
ಇದನ್ನು ಓದಿ: Mission Paani: ಗ್ರಾಮಗಳಲ್ಲಿ ಮಳೆ ನೀರು ಕೊಯ್ಲು ಮೂಲಕ ಭಗೀರಥರಾದ ಮಾಜಿ ಸೇನಾ ನಾಯಕ
ಪರಿಸರ ಉಳಿಸುವಿಕೆ ಆಕೆ ಧ್ಯೇಯವು 6 ನೇ ವಯಸ್ಸಿನಿಂದ ಪ್ರಾರಂಭವಾಯಿತು. ದಿ ಹಿಂದೂಗೆ ನೀಡಿದ ಸಂದರ್ಶನದಲ್ಲಿ, ವಿಪತ್ತು ಅಪಾಯವನ್ನು ಕಡಿಮೆ ಮಾಡುವ ಕುರಿತಾದ ಸಭೆಯಲ್ಲಿ ಆಕೆ ಹೇಗೆ ಪ್ರಭಾವ ಬೀರಿದ್ದಾಳೆಂದು ವಿವರಿಸಿದ್ದಳು ಮತ್ತು ನಾವು ನಮ್ಮ ಗ್ರಹಕ್ಕೆ ಏನು ಮಾಡುತ್ತಿದ್ದೇವೆ ಮತ್ತು ಹೇಗೆ ನಾವು ಅದನ್ನು ನಾಶಪಡಿಸುತ್ತಿದ್ದೇವೆ. ನೈಸರ್ಗಿಕ ವಿಪತ್ತುಗಳಿಂದಾಗಿ ಆಗುತ್ತಿರುವ, ಆಗಲಿರುವ ಅಪಾಯಗಳ ಬಗ್ಗೆ ವಿವರಿಸಿದ್ದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ಸಂಸದರ ಗಮನ ಸೆಳೆಯುವ ಆಶಯದೊಂದಿಗೆ ಕಂಗುಜಮ್ ವಾರಗಳವರೆಗೆ ಸಂಸತ್ತಿನ ಹೊರಗೆ ಪ್ರತಿಭಟನೆಗೆ ಕುಳಿತರು. ಇಂಗಾಲದ ಹೊರಸೂಸುವಿಕೆಯನ್ನು ನಿಯಂತ್ರಿಸಬೇಕು ಮತ್ತು ಹವಾಮಾನ ಬದಲಾವಣೆ ನಿಯಂತ್ರಿಸುವ ಕಾನೂನನ್ನು ಅಂಗೀಕರಿಸಬೇಕು ಎಂಬ ಪ್ಲಕಾರ್ಡ್ಗಳನ್ನು ಹಿಡಿದು ವಾರಗಳವರೆಗೆ ಸಂಸತ್ ಭವನದ ಮುಂದೆ ಪ್ರತಿಭಟನೆ ನಡೆಸಿದ್ದರು.
ಆದರೆ, ಆಕೆ ಧ್ವನಿ ದೆಹಲಿಯಲ್ಲಿ ಯಾರಿಗೂ ಕೇಳಿಸಲಿಲ್ಲ. ಸರ್ಕಾರಕ್ಕೆ ಷೇರುಗಳು ಮತ್ತು ಮತಗಳಲ್ಲಿ ಹೆಚ್ಚಿನ ಆಸಕ್ತಿಯಿದೆ ಹೊರತುಭೂಮಿಯ ಬಗ್ಗೆಯಾಗಲಿ, ಪರಿಸರದ ಬಗ್ಗೆಯಾಗಲಿ ಇಲ್ಲ ಎಂದು ಹೇಳಿದ್ದಳು. ಆದರೆ, ಭೂಮಿಯನ್ನು ನಷ್ಟ ಮಾಡಿಕೊಂಡರೆ ಅದು ಷೇರು ಮಾರುಕಟ್ಟೆಯಲ್ಲಿ ಷೇರುಗಳನ್ನು ಕಳೆದುಕೊಂಡಂತೆ ಅಥವಾ ಮತಗಳನ್ನು ಕಳೆದುಕೊಂಡಂತೆ ಅಲ್ಲ. ಅದು ಇಡೀ ಮನುಕುಲದ ಭವಿಷ್ಯ, ಪ್ರಾಣಿಗಳು, ಮರಗಳು, ಸಾಗರಗಳು ಪ್ರತಿಯೊಂದನ್ನು ಕಳೆದುಕೊಂಡಂತೆ ಎಂದು ವಿವರಿಸಿದ್ದಳು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ