news18-kannada Updated:January 26, 2021, 8:34 PM IST
ಮಿಷನ್ ಪಾನಿ ವಾಟರಥಾನ್
ನೀರಿನ ಸಂರಕ್ಷಣೆ ಮತ್ತು ಸ್ವಚ್ಛತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ನೆಟ್ವರ್ಕ್ 18 ಹಾಗೂ ಹಾರ್ಪಿಕ್ ಇಂಡಿಯಾ ಇಂದು Mission Paani Waterthon. ಹಮ್ಮಿಕೊಂಡಿದೆ. ಈ ಅಭಿಯಾನಕ್ಕೆ ಅಮಿತಾಭ್ ಬಚ್ಚನ್, ಅಕ್ಷಯ್ ಕುಮಾರ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ಕೂಡ ಕೈ ಜೋಡಿಸಿದ್ದಾರೆ. ದೇಶಾದ್ಯಂತ ಪ್ರತಿಯೊಬ್ಬರೂ ನೀರಿನ ಮಿತ ಬಳಕೆಯ ಮೂಲಕ ಮತ್ತು ಸ್ವಚ್ಛತೆಯನ್ನು ಕಾಯ್ದುಕೊಳ್ಳುವ ಮೂಲಕ ಈ ಅಭಿಯಾನದಲ್ಲಿ ಭಾಗಿಯಾಗಿದ್ದಾರೆ.. ಈಗಾಗಲೇ ಸಾವಿರಾರು ಜನರು ಜಲ ಪ್ರತಿಜ್ಞೆ ಮಾಡುವ ಮೂಲಕ ನೀರಿನ ಸಂರಕ್ಷಣೆಯ ಪಣ ತೊಟ್ಟಿದ್ದಾರೆ. ಇಂದು Mission Paani ವಾಟರಥಾನ್ ನಡೆಯುತ್ತಿದ್ದು, ಅನೇಕ ಸೆಲೆಬ್ರಿಟಿಗಳು ಭಾಗಿಯಾಗಲಿದ್ದಾರೆ.
ಗಣರಾಜ್ಯೋತ್ಸವದ ದಿನವಾದ ಇಂದು 8 ಗಂಟೆಗಳ ಕಾಲ ಮಿಷನ್ ಪಾನಿ ಕಾರ್ಯಕ್ರಮ ನಡೆಯುತ್ತಿದೆ. ಈ ಕಾರ್ಯಕ್ರಮ ನೆಟ್ವರ್ಕ್ 18 ಟಿವಿ ಮತ್ತು ಡಿಜಿಟಲ್ ಚಾನೆಲ್ನಲ್ಲಿ ಪ್ರಸಾರವಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಜಲ ಸಂರಕ್ಷಣೆ, ಜಲ ಬಿಕ್ಕಟ್ಟು, ನೀರಿನ ಸ್ವಚ್ಛತಾ ಆಂದೋಲನದ ಬಗ್ಗೆ ಹಲವು ಗಣ್ಯರು ಮತ್ತು ತಜ್ಞರು ಮಾಹಿತಿ ನೀಡಲಿದ್ದಾರೆ ಮತ್ತು ಸಲಹೆ ನೀಡಲಿದ್ದಾರೆ.
ಕಾರ್ಯಕ್ರಮದಲ್ಲಿ ಹೆಸರಾಂತ ಡ್ಯಾನ್ಸರ್ಸ್, ಮಲ್ಲಿಕಾ ಸಾರಾಭಾಯ್, ಇಶಾ ಡಿಯೋಲ್ ಮತ್ತು ಇನ್ನೂ ಅನೇಕರ ಪ್ರದರ್ಶನಗಳು ಇವೆ. ಈ ಸಂದರ್ಭದಲ್ಲಿ ಸ್ವರತ್ಮಾ ಮತ್ತು ಜನಪ್ರಿಯ ಭಾರತೀಯ ಜಾನಪದ ರಾಕ್ ಬ್ಯಾಂಡ್ಗಳು, ಅವರ ಭಾವಪೂರ್ಣ ಮಧುರ ಕಂಠದಿಂದ ನೀರು ಮತ್ತು ನೈರ್ಮಲ್ಯದ ಕಾರಣಗಳನ್ನು ಹಾಡಿನ ಮೂಲಕ ಪ್ರಸ್ತುತಪಡಿಸಲಿದ್ದಾರೆ. ಇಂಡಿ ಪಾಪ್ನ ಸೂಪರ್ಸ್ಟಾರ್ಗಳಲ್ಲಿ ಒಬ್ಬರಾದ ಶಾನ್ ಅವರ ವೈಶಿಷ್ಟ್ಯಪೂರ್ಣ ಪ್ರದರ್ಶನ ಹಾಗೂ ಮಿಷನ್ ಪಾನಿಯ ಪ್ರಚಾರ ರಾಯಭಾರಿ ಅಕ್ಷಯ್ ಕುಮಾರ್ ಅವರ ವಿಶೇಷ ಪ್ರದರ್ಶನ ಸೇರಿದಂತೆ ಇತರ ಪ್ರಮುಖ ಕಾರ್ಯಕ್ರಮಗಳು ಮಿಷನ್ ಪಾನಿ ವಾಟರ್ಥಾನ್ನಲ್ಲಿ ಇರಲಿವೆ. ಈ ಕಾರ್ಯಕ್ರಮವನ್ನು ನೀವು ನೇರವಾಗಿ ಇಲ್ಲಿ ವೀಕ್ಷಿಸಬಹುದು.
ನೀರಿನ ಸ್ವಚ್ಛತೆ ಮತ್ತು ಜಲ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಮಿಷನ್ ಪಾನಿ ಅಭಿಯಾನದ ಬಗ್ಗೆ ಸರ್ಕಾರ ಹಾಗೂ ಅಧಿಕಾರಿಗಳ ಗಮನ ಸೆಳೆಯಲು ಕೂಡ ವೇದಿಕೆ ನಿರ್ಮಿಸಲಾಗಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಹರ್ಷವರ್ಧನ್, ರೆಕಿಟ್ ಬೆಕಿನ್ಸರ್ ಸಿಇಓ ಲಕ್ಷ್ಮಣ ನರಸಿಂಹನ್, ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಕೂಡ ಮಿಷನ್ ಪಾನಿ ಅಭಿಯಾನದ ಸಮಾರಂಭದಲ್ಲಿ ಉಪಸ್ಥಿತಿರಲಿದ್ದಾರೆ. ಹೆಚ್ಚಿನ ಮಾಹಿತಿಗೆ
www.news18.com/mission-paani ವೆಬ್ಸೈಟ್ ಕ್ಲಿಕ್ ಮಾಡಿ.
Published by:
HR Ramesh
First published:
January 26, 2021, 8:32 PM IST