HOME » NEWS » National-international » MISSION PAANI WATERTHON WATCH THE LIVE TELECAST OF CNN NEWS18 JAL PRATIGYA DIWAS HERE SCT

Mission Paani: ಸಿಎನ್​ಎನ್​-ನ್ಯೂಸ್​18ನಿಂದ ಇಂದು ಮಿಷನ್ ಪಾನಿ ವಾಟರಥಾನ್​; ಜಲ ಪ್ರತಿಜ್ಞೆ ಮೂಲಕ ನೀವೂ ಕೈ ಜೋಡಿಸಿ

Mission Paani Waterthon: ಗಣರಾಜ್ಯೋತ್ಸವ ದಿನವಾದ ಇಂದು 8 ಗಂಟೆಗಳ ಕಾಲ ಮಿಷನ್ ಪಾನಿ ವಾಟರಥಾನ್ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮ ನೆಟ್​ವರ್ಕ್ 18 ಟಿವಿ ಮತ್ತು ಡಿಜಿಟಲ್ ಚಾನೆಲ್​ನಲ್ಲಿ ಪ್ರಸಾರವಾಗಲಿದೆ.

Sushma Chakre | news18-kannada
Updated:January 26, 2021, 2:29 PM IST
Mission Paani: ಸಿಎನ್​ಎನ್​-ನ್ಯೂಸ್​18ನಿಂದ ಇಂದು ಮಿಷನ್ ಪಾನಿ ವಾಟರಥಾನ್​; ಜಲ ಪ್ರತಿಜ್ಞೆ ಮೂಲಕ ನೀವೂ ಕೈ ಜೋಡಿಸಿ
ಮಿಷನ್ ಪಾನಿ ವಾಟರಥಾನ್
  • Share this:
ಮುಂಬೈ (ಜ. 26): ನೀರಿನ ಸಂರಕ್ಷಣೆ ಮತ್ತು ಸ್ವಚ್ಛತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮಿಷನ್ ಪಾನಿ ಅಭಿಯಾನಕ್ಕೆ ಅಮಿತಾಭ್ ಬಚ್ಚನ್, ಅಕ್ಷಯ್ ಕುಮಾರ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ಕೂಡ ಕೈ ಜೋಡಿಸಿದ್ದಾರೆ. ದೇಶಾದ್ಯಂತ ಪ್ರತಿಯೊಬ್ಬರೂ ನೀರಿನ ಮಿತ ಬಳಕೆಯ ಮೂಲಕ ಮತ್ತು ಸ್ವಚ್ಛತೆಯನ್ನು ಕಾಯ್ದುಕೊಳ್ಳುವ ಮೂಲಕ ಈ ಅಭಿಯಾನದಲ್ಲಿ ಭಾಗಿಯಾಗಲು ಸಾಧ್ಯವಿದೆ. ಈಗಾಗಲೇ ಸಾವಿರಾರು ಜನರು ಜಲ ಪ್ರತಿಜ್ಞೆ ಮಾಡುವ ಮೂಲಕ ನೀರಿನ ಸಂರಕ್ಷಣೆಯ ಪಣ ತೊಟ್ಟಿದ್ದಾರೆ. ಇಂದು Mission Paani ವಾಟರಥಾನ್ ನಡೆಯಲಿದ್ದು, ಅನೇಕ ಸೆಲೆಬ್ರಿಟಿಗಳು ಕೂಡ ಇದರಲ್ಲಿ ಭಾಗಿಯಾಗಲಿದ್ದಾರೆ.

ಗಣರಾಜ್ಯೋತ್ಸವದ ದಿನವಾದ ಇಂದು 8 ಗಂಟೆಗಳ ಕಾಲ ಮಿಷನ್ ಪಾನಿ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮ ನೆಟ್​ವರ್ಕ್ 18 ಟಿವಿ ಮತ್ತು ಡಿಜಿಟಲ್ ಚಾನೆಲ್​ನಲ್ಲಿ ಪ್ರಸಾರವಾಗಲಿದೆ. ಈ ಕಾರ್ಯಕ್ರಮದಲ್ಲಿ ಜಲ ಸಂರಕ್ಷಣೆ, ಜಲ ಬಿಕ್ಕಟ್ಟು, ನೀರಿನ ಸ್ವಚ್ಛತಾ ಆಂದೋಲನದ ಬಗ್ಗೆ ಹಲವು ಗಣ್ಯರು ಮತ್ತು ತಜ್ಞರು ಮಾಹಿತಿ ನೀಡಲಿದ್ದಾರೆ ಮತ್ತು ಸಲಹೆ ನೀಡಲಿದ್ದಾರೆ.

ಮಿಷನ್ ಪಾನಿ ಸಿಎನ್​ಎನ್​ ನ್ಯೂಸ್​18 ಮತ್ತು ಹಾರ್ಪಿಕ್ ಇಂಡಿಯಾದ ಅಭಿಯಾನವಾಗಿದೆ. ಭಾರತದ ಜೀವಜಲವಾದ ನೀರಿನ ಮೂಲಗಳನ್ನು ಸಂರಕ್ಷಿಸುವ ಮತ್ತು ಆರೋಗ್ಯಕರವಾದ ಜೀವನ ನಡೆಸುವ ಬಗ್ಗೆ ಅರಿವು ಮೂಡಿಸುವುದು ಈ ಅಭಿಯಾನದ ಮುಖ್ಯ ಉದ್ದೇಶ. ನೀವು ಕೂಡ ಜಲ ಪ್ರತಿಜ್ಞೆ ಮಾಡುವ ಮೂಲಕ ಈ ಅಭಿಯಾನದಲ್ಲಿ ಜೊತೆಯಾಗಬಹುದು. ಮಿಷನ್ ಪಾನಿ ವಾಟರಥಾನ್ ನೇರ ಪ್ರಸಾರ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ.

ಇಂದು ನಡೆಯಲಿರುವ ಮಿಷನ್ ಪಾನಿ ವಾಟರಥಾನ್​ನಲ್ಲಿ ಮಲ್ಲಿಕಾ ಸಾರಾಭಾಯಿ ಮುಂತಾದ ಖ್ಯಾತ ಕಲಾವಿದರಿಂದ ಶಾಸ್ತ್ರೀಯ ನೃತ್ಯ ಇರಲಿದೆ. ಇಶಾ ಡಿಯೋಲ್ ಮುಂತಾದ ಖ್ಯಾತ ನಟರು ಕೂಡ ಪಾಲ್ಗೊಳ್ಳಲಿದ್ದಾರೆ. ಹಾಗೇ, ಭಾರತೀಯ ಜಾನಪದ ತಂಡವಾದ ಸ್ವರಾತ್ಮದಿಂದ ಜಾನಪದ ಗಾಯನ, ಭಾರತದ ಪಾಪ್ ಗಾಯಕ ಶಾನ್ ಅವರಿಂದ ಗಾಯನವಿರಲಿದೆ. ಇದರ ಜೊತೆಗೆ ಮಿಷನ್ ಪಾನಿ ಅಭಿಯಾನದ ರಾಯಭಾರಿಯಾಗಿರುವ ಬಾಲಿವುಡ್ ನಟ ಅಕ್ಷಯ್ ಕುಮಾರ್ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ನೀರಿನ ಸ್ವಚ್ಛತೆ ಮತ್ತು ಜಲ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಮಿಷನ್ ಪಾನಿ ಅಭಿಯಾನದ ಬಗ್ಗೆ ಸರ್ಕಾರ ಹಾಗೂ ಅಧಿಕಾರಿಗಳ ಗಮನ ಸೆಳೆಯಲು ಕೂಡ ವೇದಿಕೆ ನಿರ್ಮಿಸಲಾಗಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಹರ್ಷವರ್ಧನ್, ರೆಕಿಟ್ ಬೆಕಿನ್ಸರ್ ಸಿಇಓ ಲಕ್ಷ್ಮಣ ನರಸಿಂಹನ್, ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಕೂಡ ಮಿಷನ್ ಪಾನಿ ಅಭಿಯಾನದ ಸಮಾರಂಭದಲ್ಲಿ ಉಪಸ್ಥಿತಿರಲಿದ್ದಾರೆ. ಹೆಚ್ಚಿನ ಮಾಹಿತಿಗೆ www.news18.com/mission-paani ವೆಬ್​ಸೈಟ್​ ಕ್ಲಿಕ್ ಮಾಡಿ.

ಇದನ್ನೂ ಓದಿ: Mission Paani: ಶಾಲೆಗಳಲ್ಲಿ ಪರಿಸರ ಬದಲಾವಣೆ ಸಾಕ್ಷರತೆ ಕಡ್ಡಾಯಗೊಳಿಸಲು ಯುವ ಪರಿಸರ ಕಾರ್ಯಕರ್ತೆಯ ಸಲಹೆ

ಅಂದಹಾಗೆ, ಮಿಷನ್ ಪಾನಿ ಅಭಿಯಾನದ ಜೊತೆ ಕೈಜೋಡಿಸಿದ ಜಲ ಯೋಧರು ಮತ್ತು ಸ್ವಚ್ಛತೆ, ನೀರಿನ ಸಂರಕ್ಷಣೆಗೆ ಅವರ ಪ್ರಯತ್ನಗಳ ಬಗ್ಗೆ ಅನೇಕ ಜನರು ಆಸಕ್ತರಾಗಿದ್ದಾರೆ. ಅವರಿಂದ ಸ್ಫೂರ್ತಿಗೊಂಡು ಅನೇಕರು ತಮ್ಮ ಊರುಗಳಲ್ಲಿ ಜಲ ಸಂರಕ್ಷಣೆಯ ಅರಿವು ಮೂಡಿಸುವ ಹಾಗೂ ನೀರಿನ ಸ್ವಚ್ಛತೆ ಮತ್ತು ಸಂರಕ್ಷಣೆಗೆ ತಮ್ಮ ಕೈಲಾದ ಸಹಾಯ ಮಾಡುವ ಕೆಲಸಕ್ಕೆ ಮುಂದಾಗಿದ್ದಾರೆ.ಈಗಾಗಲೇ ಲೆಫ್ಟಿನೆಂಟ್ ಕೊ. ಎಸ್​.ಜಿ. ದಳವಿ ಮಳೆನೀರಿನ ಸಂರಕ್ಷಣೆ ಮಾಡುವುದು ಹೇಗೆಂಬ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಹಾಗೇ, ಅಮಲಾ ರೂಯ ದೇಶಾದ್ಯಂತ ಆಕಾರ್ ಟ್ರಸ್ಟ್​ ಮೂಲಕ ಕುಡಿಯುವ ನೀರಿನ ಕೆರೆಗಳನ್ನು ಸ್ಥಾಪಿಸಿ, ನೀರಿನ ಅಭಾವ ನೀಗಿಸಲು ಹೋರಾಡುತ್ತಿದ್ದಾರೆ. ರಾಜಸ್ಥಾನದ ಅನೇಕ ಭಾಗಗಳಲ್ಲಿ 300ಕ್ಕೂ ಹೆಚ್ಚು ಚೆಕ್ ಡ್ಯಾಂಗಳನ್ನು ನಿರ್ಮಿಸಿ, 180ಕ್ಕೂ ಅಧಿಕ ಹಳ್ಳಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದಾರೆ. ಅತ್ಯಂತ ಕಿರಿಯ ಸಾಮಾಜಿಕ ಕಾರ್ಯಕರ್ತರಾದ ಲಿಸಿಪ್ರಿಯ ಕಂಜುಗಮ್, ನೈನಾ ಲಾಲ್ ಕಿದ್ವಾಯಿ ಮುಂತಾದವರು ತಮ್ಮ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದು ಮಾತ್ರವಲ್ಲದೆ ಭಾರತದ ಜಲಕ್ಷಾಮದ ಬಗ್ಗೆಯೂ ಜನರಿಗೆ ಜಾಗೃತಿ ಮೂಡಿಸುತ್ತಿದ್ದಾರೆ.

ಜಲ ಸಂರಕ್ಷಣೆಯನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಮಿಷನ್ ಪಾನಿ ಅಭಿಯಾನದಲ್ಲಿ ಇಡೀ ದೇಶದ ಜನರು ಪಾಲ್ಗೊಂಡರೆ ಅದು ಅರ್ಥಪೂರ್ಣವೆನಿಸಿಕೊಳ್ಳಲಿದೆ. ನಾವು ದಿನನಿತ್ಯ ಬಳಸುವ ನೀರಿನ ಪ್ರಾಮುಖ್ಯತೆಯನ್ನು ನಾವು ಅರ್ಥ ಮಾಡಿಕೊಂಡು, ಬೇರೆಯವರಿಗೂ ತಿಳಿಸಿದರೆ ಮುಂದಿನ ಪೀಳಿಗೆಗೆ ಶುದ್ಧ ನೀರು ಉಳಿಯುತ್ತದೆ. ಇದರಲ್ಲಿ ಸಾವಿರಾರು ಜನರು ಸ್ವಯಂಪ್ರೇರಿತರಾಗಿ ಜೊತೆಯಾಗಿದ್ದಾರೆ ಹಾಗೇ, ಹಲವು ಬಾಲಿವುಡ್ ಸೆಲಬ್ರಿಟಿಗಳು ಕೂಡ ಜಲ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.
Published by: Sushma Chakre
First published: January 26, 2021, 2:27 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories