ಬಾಲಿವುಡ್ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಅವರು ನೆಟ್ವರ್ಕ್ 18 ಆಯೋಜಿಸಿರುವ ಮಿಷನ್ ಪಾನಿ ವಾಟರ್ಥಾನ್ನಲ್ಲಿ ಭಾಗಿಯಾಗಲಿದ್ದಾರೆ. ಇದೇ ಸಂದರ್ಭದಲ್ಲಿ ಅವರು 21 ಕಿ.ಮೀ. ಥ್ರೇಟ್ ಮಿಲ್ ಮೇಲೆ ನಡೆಯಲಿದ್ದಾರೆ. ಹಳ್ಳಿಗಾಡುಗಳಲ್ಲಿ ಮಹಿಳೆಯರು ಒಂದು ಕೊಡ ನೀರಿಗಾಗಿ ಹತ್ತಾರು ಕಿ.ಮೀ. ದೂರ ನಡೆದು ನೀರು ತರುವ ಸಂಕಟವನ್ನು ಅರ್ಥ ಮಾಡಿಸುವುದು ಅವರ ಉದ್ದೇಶವಾಗಿದೆ. ಮ್ಯಾರಥಾನ್ನಲ್ಲಿ ಅಥ್ಲೆಟ್ಸ್ಗಳಿಗೆ ಪ್ರತಿ ನಿಗದಿತ ಸ್ಥಳಗಳಲ್ಲಿ ನೀರು ಕೊಡಲಾಗುತ್ತದೆ. ಆದರೆ, ನಿಜ ಜೀವನದಲ್ಲಿ ಮಹಿಳೆಯರು ಪಡುವ ಕಷ್ಟವನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ ಎಂದು ಅಕ್ಷಯ್ ಕುಮಾರ್ ಹೇಳಿದ್ದಾರೆ.
ಇದಕ್ಕೂ ಮುನ್ನ ಮಾತನಾಡಿದ್ದ ಅವರು ನೀರನ್ನು ಉಳಿಸಬಹುದಾದ ಮೂರು ಸುಲಭ ಮಾರ್ಗಗಳ ಬಗ್ಗೆ ಹೇಳಿದ್ದರು. ಮನೆಗೆ ಅತಿಥಿಗಳು ಬಂದಾಗ ಅವರಿಗೆ ಮೊದಲು ನೀರನ್ನು ಕೊಡುತ್ತೇವೆ. ಹೀಗೆ ಅವರಿಗೆ ಗ್ಲಾಸಿನ ಪೂರ್ತಿ ನೀರು ಕೊಡುವ ಬದಲು ಅರ್ಧ ಗ್ಲಾಸ್ ನೀರನ್ನಷ್ಟೇ ನೀಡಬೇಕು. ಅವರಿಗೆ ಇನ್ನೂ ಬಾಯಾರಿಕೆ ಇದ್ದಾಗ ಅವರೇ ಕೇಳಿ ನೀರು ಪಡೆಯುತ್ತಾರೆ. ಇದರಿಂದ ಸಾಕಷ್ಟು ನೀರು ಉಳಿತಾಯವಾಗಲಿದೆ ಎಂದು ಹೇಳಿದ್ದರು.
ಮೂತ್ರ ವಿಸರ್ಜನೆ ಬಳಿಕ ಪ್ಲಶ್ ಮಾಡುವ ಟ್ಯಾಪ್ಗಳು ಸಣ್ಣದಾಗಿರಬೇಕು. ಇದರಿಂದ ಸಾಕಷ್ಟು ನೀರು ಉಳಿತಾಯವಾಗಲಿದೆ ಎಂದು ಅವರು ಮನವಿ ಮಾಡಿದ್ದರು. ಅವರ ಮೂರನೇ ಸಲಹೆ, ಮನೆಯಲ್ಲಿ ಸೆನ್ಸಾರ್ ಟ್ಯಾಪ್ಗಳನ್ನು ಬಳಸುವುದರಿಂದ ನೀರಿನ ಬಳಕೆ ನಿಯಂತ್ರಣದಲ್ಲಿ ಇರಲಿದೆ ಎಂದು ಅಕ್ಷಯ್ ಕುಮಾರ್ ಹೇಳಿದ್ದರು.
ಇದನ್ನು ಓದಿ: Mission Paani: ಸಿಎನ್ಎನ್-ನ್ಯೂಸ್18ನಿಂದ ಇಂದು ಮಿಷನ್ ಪಾನಿ ವಾಟರಥಾನ್; ಜಲ ಪ್ರತಿಜ್ಞೆ ಮೂಲಕ ನೀವೂ ಕೈ ಜೋಡಿಸಿ
ನೀರನ್ನು ಸಂರಕ್ಷಿಸುವ ಅಗತ್ಯತೆಯ ಬಗ್ಗೆ ಜನರನ್ನು ಉದ್ದೇಶಿಸಿ ಮಾತನಾಡಿದ ಅಕ್ಷಯ್ ಕುಮಾರ್ ಅವರು, ಜಲಸಂರಕ್ಷಣೆಯ ಅನೇಕ ಸಕಾರಾತ್ಮಕ ವಿಷಯಗಳ ಕುರಿತು ಮಾತನಾಡಿದರು. ಫಿಟ್ನೆಸ್ ಬಗ್ಗೆ ಹೆಚ್ಚು ಒತ್ತು ನೀಡುವ ಈ ನಟ ತನ್ನ ಕಠಿಣ ತರಬೇತಿ ಅವಧಿಯಲ್ಲಿ ಚೇತರಿಸಿಕೊಳ್ಳಲು ನೀರು ಹೇಗೆ ಸಹಕಾರಿಯಾಗಿದೆ ಎಂಬುದರ ಬಗ್ಗೆಯೂ ಅವರು ಒಂದು ಸೂಕ್ಷ್ಮ ನೋಟವನ್ನು ನೀಡಿದರು.
ನೀರಿನ ಸಂರಕ್ಷಣೆ ಮತ್ತು ಸ್ವಚ್ಛತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ನೆಟ್ವರ್ಕ್ 18 ಮಿಷನ್ ಪಾನಿ ಅಭಿಯಾನ ಆಯೋಜಿಸಿದೆ. ಅಮಿತಾಭ್ ಬಚ್ಚನ್, ಅಕ್ಷಯ್ ಕುಮಾರ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ಈ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ. ದೇಶಾದ್ಯಂತ ಪ್ರತಿಯೊಬ್ಬರೂ ನೀರಿನ ಮಿತ ಬಳಕೆ ಮತ್ತು ಸ್ವಚ್ಛತೆ ಕಾಯ್ದುಕೊಳ್ಳುವ ಮೂಲಕ ಈ ಅಭಿಯಾನದಲ್ಲಿ ಭಾಗಿಯಾಗಲು ಸಾಧ್ಯವಿದೆ. ಈಗಾಗಲೇ ಸಾವಿರಾರು ಜನರು ಜಲ ಪ್ರತಿಜ್ಞೆ ಮಾಡುವ ಮೂಲಕ ನೀರಿನ ಸಂರಕ್ಷಣೆಯ ಪಣ ತೊಟ್ಟಿದ್ದಾರೆ. ಇಂದು Mission Paani ವಾಟರಥಾನ್ ನಡೆಯಲಿದ್ದು, ಅನೇಕ ಸೆಲೆಬ್ರಿಟಿಗಳು ಕೂಡ ಇದರಲ್ಲಿ ಭಾಗಿಯಾಗಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ