Mission Paani: ನೀರಿನ ಸಂರಕ್ಷಣೆ ಪ್ರತಿಯೊಬ್ಬರ ಬದುಕಿನ ಮಂತ್ರವಾಗಲಿ!

ಉತ್ತಮ ರೂಢಿಗಳು ಕೇವಲ ನಮ್ಮ ಸಮಾಧಾನಕ್ಕಾಗಿ ಇರಬಾರದು. ನಮ್ಮ ಸಮಾಜ ಹಾಗೂ ಬದುಕನ್ನು ಸುಂದರಗೊಳಿಸುವಂತಿರಬೇಕು ಹಾಗೂ ಬದುಕನ್ನು ನೆಮ್ಮದಿಯಾಗಿಸುವಂತಿರಬೇಕು. ನೀರು ಸಾರ್ವಜನಿಕ ಸಂಪತ್ತು ಎಂದು ಅರಿತು ಮುಂದಿನ ಸುಂದರ ಬದುಕಿಗಾಗಿ ವಿವೇಕತನದಿಂದ ನಡೆಯೋಣ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಪ್ರಪಂಚದಾದ್ಯಂತದ ಎಲ್ಲಾ ಜೀವಿಗಳಿಗೂ ನೀರು ಅತಿ ಮುಖ್ಯವಾದದು. ಜಗತ್ತಿನಲ್ಲಿ ಮಾನವರಿಗೆ  ಶುದ್ಧ ಕುಡಿಯುವ ನೀರಿನ ಲಭ್ಯತೆ ಇರುವುದು ಶೇ. 3ರಷ್ಟು ಮಾತ್ರ. ಆದ ಕಾರಣ ಅಮೂಲ್ಯವಾದ ನೈಸರ್ಗಿಕ ಸಂಪನ್ಮೂಲವಾದ ನೀರನ್ನು ಸಂರಕ್ಷಿಸುವ ಅವಶ್ಯಕತೆ ಇನ್ನೂ ಹೆಚ್ಚಾಗಿದೆ. ನಾವು ಸಾಮಾನ್ಯವಾಗಿ ನೀರನ್ನು ಕುಡಿಯುವುದರ ಜೊತೆಗೆ ಅನೇಕ ದಿನನಿತ್ಯದ ಚಟುವಟಿಕೆಗಳಿಗೆ ಸರಾಗವಾಗಿ ಬಳಸುತ್ತೇವೆ. ಆದ್ದರಿಂದ ಈ ದಿನ ಮಾತ್ರವಲ್ಲ ಪ್ರತಿ ದಿನ, ವರ್ಷ, ಪೀಳಿಗೆಗೂ ನೈಸರ್ಗಿಕ ಸಂಪನ್ಮೂಲವನ್ನು ಉಳಿಸುವುದು ಅತ್ಯಗತ್ಯವಾಗಿದೆ. 

  ನೀರು ಮಾನವನ ಆರೋಗ್ಯವನ್ನು ಕಾಪಾಡುವ ಅವಶ್ಯಕವಾದ ಜೀವ ಹನಿ. ಹಾಗಾಗಿ ನೀರನ್ನು ಬಳಸುವುದರ ಜೊತೆಗೆ ಮಾನವನು ನೀರಿನ ನಿರ್ವಹಣೆಯ ಅರಿವು ಬೆಳೆಸಿಕೊಂಡಾಗ ಅನಾಯಾಸವಾಗಿ ನೀರನ್ನು ಸಂರಕ್ಷಿಸಬಹುದು. ಇದು ಕೇವಲ ಒಂದು ದಿನದ ಕಾಯಕವಾಗದೆ ಪ್ರತಿಜ್ಞೆಯಾದಾಗ ಮಾತ್ರ ನೀರಿನ ನಿರ್ವಹಣೆ ಸುಲಭ ಹಾಗೂ ಆರಾಮದಾಯಕ.  ಶುದ್ಧ ಕುಡಿಯುವ ನೀರು ಮತ್ತು ತ್ಯಾಜ್ಯ ವಸ್ತುಗಳ ನಿರ್ವಹಣಾ ಪದ್ಧತಿಗಳ ನಿರ್ವಹಣೆ ಕಲಿತು ಬೆಳೆಸಿಕೊಂಡರೆ ನಾವು ಅಂದುಕೊಂಡ ಅಂದರೆ ನೀರಿನ ಸಂರಕ್ಷಣೆ ಎಂಬ ನಮ್ಮ ಗುರಿಯನ್ನು ಸುಲಭವಾಗಿ ತಲುಪಬಹುದು. ಅಲ್ಲದೇ ನಮ್ಮ ಈ ಧ್ಯೇಯಕ್ಕೆ ಪ್ರತಿ ಮನೆಗಳು, ಸಮುದಾಯಗಳು, ಆರೋಗ್ಯ ಕೇಂದ್ರಗಳು, ಶಾಲೆಗಳು ಮತ್ತು ಇತರ ಸಾರ್ವಜನಿಕ ಸ್ಥಳಗಳು ಕೈ ಜೋಡಿಸಿದರೆ ಈ ಕೆಲಸ ಇನ್ನು ಉತ್ತಮವಾಗುವುದು.

  ಪ್ರತಿ ವರ್ಷ, ಕಲುಷಿತ ನೀರು, ಅಸಮರ್ಪಕ ನೈರ್ಮಲ್ಯದಿಂದ ಉಂಟಾಗುವ ಕಾಯಿಲೆಗಳಿಂದ ಸಾವಿರಾರು ಜನರು ಸಾವಿನ ಕದ ತಟ್ಟುತ್ತಿದ್ದಾರೆ. ಅಲ್ಲದೇ ಪ್ರಪಂಚದಾದ್ಯಂತ ಶತಕೋಟಿ ಜನರು ಶುದ್ಧ ಕುಡಿಯುವ ನೀರಿನ ಕೊರತೆ ಎದುರಿಸುತ್ತಿದ್ದಾರೆ. ವಿಶ್ವದ ಅರ್ಧದಷ್ಟು ಜನಸಂಖ್ಯೆಯು ನೈರ್ಮಲ್ಯ ರಹಿತ ಪ್ರದೇಶಗಳಲ್ಲಿ ಬದುಕುತ್ತಿದ್ದಾರೆ. ಮಹಿಳೆಯರು, ನಿರ್ದಿಷ್ಟವಾಗಿ, ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಶುದ್ಧ ಕುಡಿಯುವ ನೀರಿನ ಕೊರತೆ ಒಂದು ದೊಡ್ಡ ಸಮಸ್ಯೆಯಾಗಿಯೇ ಉಳಿದುಕೊಂಡಿದೆ. ವಾಸ್ತವವಾಗಿ, ಪ್ರತಿ ವರ್ಷ ನೂರಾರು ಮಕ್ಕಳು ನೀರಿನಿಂದ ಹರಡುವ ರೋಗಗಳಿಂದ ತಮ್ಮ ಜೀವವನ್ನು ಕಳೆದುಕೊಳ್ಳುತ್ತಿದ್ದಾರೆ.

  ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಬಹುಪಾಲು ಜನರು ತೀವ್ರ ಬಡತನದಲ್ಲಿದ್ದು, ಕೃಷಿ ಹಾಗೂ ಇನ್ನಿತರೆ ಕೆಲಸಗಳನ್ನು ತಮ್ಮ ಜೀವನೋಪಾಯಕ್ಕಾಗಿ ಬೇರೆ ವಿಧಿಯಿಲ್ಲದೆ ಮಾಡುತ್ತಿದ್ದಾರೆ. ಈ ಜನರ ಯೋಗಕ್ಷೇಮವು ಸಹ ನಮ್ಮ ನೈಸರ್ಗಿಕ ಪರಿಸರದೊಂದಿಗೆ ಬೆಸೆದುಕೊಂಡಿದೆ. ಜೊತೆಗೆ ನೀರಿನ ಕೊರತೆಯು ಪರಿಸರ ನಾಶ ಮತ್ತು ಹವಾಮಾನ ಬದಲಾವಣೆಗೂ ಪರೋಕ್ಷವಾಗಿ ಕಾರಣವಾಗುತ್ತದೆ. ಶುದ್ಧ ಕುಡಿಯುವ ನೀರು, ಪರಿಸರದ ಸ್ವಚ್ಛತೆ ಇವೆಲ್ಲವೂ ಮಾನವನ ಬದುಕನ್ನು, ಆರೋಗ್ಯವಾಗಿರಿಸುತ್ತದೆ. ಸ್ವಸ್ಥ ಸಮಾಜದ ಜೊತೆಗೆ ಸ್ವಸ್ಥ ಆರೋಗ್ಯದ ನಿರ್ಮಾಣಕ್ಕೂ ಕಾರಣವಾಗುತ್ತದೆ. ಹಾಗಾಗಿ ಕೆಲವನ್ನು ಬದುಕಲ್ಲಿ ಅಳವಡಿಸಿಕೊಂಡಲ್ಲಿ ಬದುಕು ಸರಾಗವಾಗಿ ನೀರಿನ ಕೊರತೆಯಾಗದಂತೆ ತಪ್ಪಿಸಬಹುದು.

  ಇದನ್ನು ಓದಿ: Mission Paani: ನಾವು ಕುಡಿಯುವ ನೀರು ಸ್ವಚ್ಛವಾಗಿದೆ ಎಂದು ಖಚಿತಪಡಿಸಿಕೊಳ್ಳುವುದು ಹೇಗೆ?

  • ನೀರಿನ ಮೂಲಗಳಾದ ಕೆರೆ, ಹಳ್ಳ, ಕೊಳ್ಳ, ನದಿ ಇವುಗಳ ನಿರ್ವಹಣೆ ಮತ್ತು ದುರಸ್ತಿ ಬಗ್ಗೆ ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ.

  • ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ಮೂಲಗಳನ್ನು ಅಭಿವೃದ್ಧಿಪಡಿಸುವುದು ಅವಶ್ಯಕ. ಹೊಸ ಬಾವಿಗಳು ಮತ್ತು ಬೋರ್‌ವೆಲ್‌ಗಳನ್ನು ಕೊರೆಯಲು ಸ್ಥಳೀಯ ಸಮುದಾಯಗಳು ಕೈಜೋಡಿಸಬೇಕು.

  • ಕೆಲವು ನೀರಿನ ಮೂಲಗಳು ಅಸ್ತಿತ್ವದಲ್ಲಿದ್ದರೂ, ಅವುಗಳು ಜನರ ಉಪಯೋಗಕ್ಕೆ ಬರುವುದಿಲ್ಲ. ಅಂತಹವುಗಳನ್ನು ಗುರುತಿಸಿ ಸರಿಪಡಿಸಬೇಕು. ಜಾನುವಾರುಗಳಿಗೆ ನೀರಿನ ತೊಟ್ಟಿಗಳನ್ನು ನಿರ್ಮಿಸುವುದು ಮತ್ತು ನೀರಿನ ಟ್ಯಾಂಕ್‍ಗಳನ್ನು ನಿರ್ಮಿಸುವುದು ಮತ್ತು ಸರಿಪಡಿಸುವುದು ಇವೆಲ್ಲವೂ ಶುದ್ಧ ನೀರಿನ ಪೂರೈಕೆಗೆ ಉತ್ತಮ ವ್ಯವಸ್ಥೆಗಳಾಗುತ್ತದೆ.

  • ಮನೆಗಳು, ಶಾಲೆಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಲು ಮತ್ತು ಸರಿಪಡಿಸಲು ಸಮುದಾಯಗಳಿಗೆ ಅಧಿಕಾರ ನೀಡಬಹುದು.

  • ನೀರಿನ ಮೂಲಸೌಕರ್ಯ ಯೋಜನೆಗಳಿಗೆ ಸಾರ್ವಜನಿಕ ಸಂಪನ್ಮೂಲಗಳನ್ನು ಸ್ಥಳೀಯ ಅಥವಾ ರಾಜ್ಯ ಸರ್ಕಾರಗಳು ಬಳಸಿದಾಗ ನೈರ್ಮಲ್ಯ ನಿರ್ಮಾಣ ಸುಲಭದಾಯಕವಾಗುತ್ತದೆ.

  • ಸ್ಥಳೀಯ ಸಮುದಾಯಗಳು ಹನಿ ನೀರಾವರಿ ಮತ್ತು ಮಳೆ ಕೊಯ್ಲು ಯೋಜನೆಗಳಂತಹ ನೀರಿನ ಸಂರಕ್ಷಣಾ ತಂತ್ರಗಳನ್ನು ಕಾರ್ಯಗತಗೊಳಿಸುವುದು ಸಹ ನೈರ್ಮಲ್ಯ ನಿರ್ವಹಣೆಗೆ ಸಹಾಯ ಮಾಡುತ್ತದೆ. ಈ ರೀತಿಯಾಗಿ, ನೀರಿನ ಬಳಕೆಯನ್ನು ಯೋಚನರಹಿತವಾಗಿ ಮಾಡಿದರೆ ಹನಿ ಹನಿಗೂಡಿದರೆ ಹಳ್ಳ ಎಂಬಂತೆ ಸಣ್ಣ ಸಣ್ಣ ಕೆಲಸಗಳ ಮೂಲಕ ದೊಡ್ಡ ಗುರಿ ತಲುಪಲು ಉತ್ತಮ ದಾರಿಯಾಗುತ್ತದೆ.



  ಉತ್ತಮ ರೂಢಿಗಳು ಕೇವಲ ನಮ್ಮ ಸಮಾಧಾನಕ್ಕಾಗಿ ಇರಬಾರದು. ನಮ್ಮ ಸಮಾಜ ಹಾಗೂ ಬದುಕನ್ನು ಸುಂದರಗೊಳಿಸುವಂತಿರಬೇಕು ಹಾಗೂ ಬದುಕನ್ನು ನೆಮ್ಮದಿಯಾಗಿಸುವಂತಿರಬೇಕು. ನೀರು ಸಾರ್ವಜನಿಕ ಸಂಪತ್ತು ಎಂದು ಅರಿತು ಮುಂದಿನ ಸುಂದರ ಬದುಕಿಗಾಗಿ ವಿವೇಕತನದಿಂದ ನಡೆಯೋಣ.
  Published by:HR Ramesh
  First published: