Mission Paani - ಜಲಕ್ಷಾಮದ ಸ್ಪಷ್ಟ ಸುಳಿವು; ಎಚ್ಚೆತ್ತುಕೊಳ್ಳದಿದ್ದರೆ ಸಂಕಷ್ಟ ಕಟ್ಟಿಟ್ಟ ಬುತ್ತಿ

ಹವಾಮಾನ ಬದಲಾವಣೆ, ಮಳೆ ವ್ಯತ್ಯಾಸ, ಪ್ರವಾಹ ಇತ್ಯಾದಿ ಹಲವು ರೀತಿಯ ನೈಸರ್ಗಿಕ ಅವಘಡಗಳನ್ನ ನಾವು ನೈಸರ್ಗಿಕ ಸಮಸ್ಯೆ ಎಂದು ಭಾವಿಸುತ್ತೇವೆ. ಆದರೆ ಇವು ಮುಂದಾಗುವ ಜಲಕ್ಷಾಮದ ಸುಳಿವು ನೀಡುತ್ತವೆ ಎಂಬುದನ್ನು ಅರಿತುಕೊಳ್ಳಬೇಕು.

ಜಲ ಸಂರಕ್ಷಣೆ

ಜಲ ಸಂರಕ್ಷಣೆ

 • News18
 • Last Updated :
 • Share this:
  ಜಲಬಿಕ್ಕಟ್ಟು ಇರುವುದಕ್ಕೆ ಸೂಚ್ಯಕವಾಗಿ ನಮ್ಮ ಬಳಿ ಹಲವು ದಾಖಲೆ, ಅಂಕಿ-ಅಂಶಗಳು ಇವೆ. ಆದರೆ, ಇವುಗಳಿಗಿಂತ ಪೂರ್ವದಲ್ಲೇ ವಿವಿಧ ರೀತಿಯಲ್ಲಿ ಜಲಕ್ಷಾಮದ ಸುಳಿವುಗಳು ಹಲವು ಬಾರಿ ತೋರಿದ್ದವು. ಇವುಗಳನ್ನ ನಾವು ನೈಸರ್ಗಿಕ ಅವಘಡಗಳೆಂದು ತಪ್ಪಾಗಿ ಭಾವಿಸಿದ್ದೇ ಹೆಚ್ಚು. ಅಥವಾ ಋತು ವ್ಯತ್ಯಾಸದಿಂದ ಆದ ಬೆಳವಣಿಗೆ ಎಂದೇ ನಂಬಿಕೊಂಡೆವು. ಆದರೆ, ಇವೆಲ್ಲವೂ ನಮ್ಮ ಜಲ ಸಂಪನ್ಮೂಲ ಬತ್ತಿಹೋಗುತ್ತಿರುವುದರ ಸುಳಿವು ಎಂಬುದನ್ನು ನಾವು ಬಹಳ ಬೇಗ ಅರ್ಥ ಮಾಡಿಕೊಳ್ಳಬೇಕಿತ್ತು.

  ಆರ್ಥಿಕ ಕೊರತೆ:

  ಜಲ ಬಿಕ್ಕಟ್ಟಿಗೆ ರಚನಾತ್ಮಕ ದೌರ್ಬಲ್ಯವೂ ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ. ಇದೇ ಕಾರಣಕ್ಕೆ ವಿಪುಲ ನೀರು ಇರುವ ಪ್ರದೇಶಗಳಲ್ಲೂ ಜನರು ನೀರಿಗಾಗಿ ಪರದಾಡುವುದನ್ನು ನೋಡುತ್ತೇವೆ. ಸಮರ್ಪಕ ನೀರು ಸರಬರಾಜು ವ್ಯವಸ್ಥೆ ಮತ್ತು ನಿರ್ವಹಣೆ ಇಲ್ಲದಿದ್ದಾಗ ನೀರಿನ ಅತಿ ಅನುಭೋಗವಾಗಿ ನೀರಿನ ಸಂಕಷ್ಟದ ಸ್ಥಿತಿಗೆ ಎಡೆ ಮಾಡಿಕೊಡುತ್ತದೆ.

  ಹವಾಮಾನ ಏರುಪೇರು:

  ಇದ್ದಕ್ಕಿದ್ದಂತೆ ವಿಪರೀತ ವಾತಾವರಣ ಸ್ಥಿತಿ ನಿರ್ಮಾಣ ಆಗುವುದನ್ನು ನಾವು ನೋಡಿರುತ್ತೇವೆ. ಇದಕ್ಕೆ ಹವಾಮಾನ ಬದಲಾವಣೆ ಕಾರಣ ಇರಬಹುದು ಎಂಬು ನಂಬುತ್ತೇವೆ. ಆದರೆ, ಪರಿಸರದ ಅಸಮತೋಲನದಿಂದ ಹೀಗಾಗಿರಬಹುದು ಎಂಬುದರ ಸುಳಿವೂ ಅದರಲ್ಲಿರುತ್ತದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ನೆರೆ ಭಾಗಗಳ ಅತಿಯಾದ ಕಾಂಕ್ರಿಟೀಕರಣ ಇತ್ಯಾದಿ ಕಾರಣದಿಂದ ಪ್ರವಾಹ ಸ್ಥಿತಿ ಉದ್ಭವವಾಗುತ್ತದೆ. ಮಳೆ ಕ್ಷೀಣಿಸಿದಾಗ ಸಹಜ ಜಲ ಚಕ್ರದಲ್ಲಿ ವ್ಯತ್ಯಾಸವಾಗುತ್ತದೆ. ಅಂತರ್ಜಲ ತಗ್ಗುತ್ತದೆ.

  ಇದನ್ನೂ ಓದಿ: mission paani: ನೀರಿನ ಸಂರಕ್ಷಣೆಯನ್ನು ದೈನಂದಿನ ಜೀವನದ ಭಾಗವನ್ನಾಗಿಸುವ ಅಭ್ಯಾಸವನ್ನು ಬೆಳೆಸುವ ಸಮಯವಿದು!

  ಆಯ್ಕೆಗಳ ಕೊರತೆ:

  ಹವಾಮಾನ ಅಪಾಯ ಮತ್ತು ಜಲ ಅಭದ್ರತೆ ಎರಡೂ ಸೇರಿ ಅಧಿಕ ಜನಸಂಖ್ಯೆಯಲ್ಲಿ ಬಡತನಕ್ಕೆ ಕಾರಣವಾಗುತ್ತವೆ. ಹಣ ಸಂಪಾದನೆಗೆ ಮಾರ್ಗ ಹುಡುಕುವ ಬದಲು ದೈನಂದಿನ ಬದುಕಿಗೆ ನೀರಿಗಾಗಿ ಬವಣೆ ಪಡುವುದರಲ್ಲೇ ಹೆಚ್ಚಿನ ಸಮಯ ವ್ಯಯವಾಗುತ್ತದೆ. ಸಿಕ್ಕ ನೀರೂ ಕೂಡ ಕಲುಷಿತಗೊಂಡಿರುವಂಥದ್ದಾಗಿದ್ದು, ಅದರಿಂದ ಅನಾರೋಗ್ಯ ಇತ್ಯಾದಿ ತೊಂದರೆಗಳು ಕಾಡುತ್ತವೆ. ಹಾಗೆಯೇ, ಜನರ ಆರೋಗ್ಯ ಮತ್ತು ಶೌಚ ಕೊರತೆಯಿಂದ ವಾತಾವರಣ ಮತ್ತೆ ಕಲುಷಿತಗೊಂಡು ಬಡತನದ ವಿಷ ವರ್ತುಲ ನಿರ್ಮಾಣವಾಗುತ್ತದೆ.

  ಭಾರತದ ಜನರು ಮತ್ತು ಆಡಳಿತಗಾರರು ಈ ಎಚ್ಚರಿಕೆಯ ಸೂಚನೆಗಳನ್ನ ಅರಿತುಕೊಂಡು ದುರ್ಬಲ ಸಮುದಾಯಗಳಲ್ಲಿ ಜಲ ಸಂರಕ್ಷಣೆಯ ಅರಿವು ಮೂಡಿಸಬೇಕು, ಮತ್ತು ಸಮರ್ಪಕ ಶೌಚ ವ್ಯವಸ್ಥೆ ಜಾರಿ ಮಾಡಬೇಕು. ಈ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿದರೆ ಒಟ್ಟಾರೆ ಜಲ ಬಿಕ್ಕಟ್ಟಿನತ್ತ ಯಶಸ್ವಿ ಮೊದಲ ಹೆಜ್ಜೆ ಇರಿಸಿದಂತಾಗುತ್ತದೆ.

  ಮಿಷನ್ ಪಾನಿ (Mission Paani) ಎಂಬುದು ನ್ಯೂಸ್18 ಮತ್ತು ಹಾರ್ಪಿಕ್ ಇಂಡಿಯಾ (Harpic India) ಕೈಗೊಂಡಿರುವ ಅಭಿಯಾನವಾಗಿದೆ. ನೀರಿನ ಕೊರತೆ ಮತ್ತು ಶೌಚದ ಸಮಸ್ಯೆಗೆ ಪರಿಹಾರ ಹುಡುಕುವ ಕೆಲಸ ಮಾಡುತ್ತಿದೆ. ನೀರಿನ ಉಳಿತಾಯ ಮತ್ತು ಸ್ವಚ್ಛತೆಗೆ ನೀವು ಜಲ ಪ್ರತಿಜ್ಞೆ ಪಡೆದು ಈ ಮಹಾಪರಿವರ್ತನೆಯಲ್ಲಿ ಭಾಗಿಯಾಗಿರಿ. ಹೆಚ್ಚಿನ ವಿವರಕ್ಕೆ ಈ ಲಿಂಕ್ www.news18.com/mission-paani ಕ್ಲಿಕ್ ಮಾಡಿ.
  Published by:Vijayasarthy SN
  First published: