Mission Paani: ಭಾರತದಲ್ಲಿ ಸ್ವಾಸ್ಥ್ಯ ಹಾಗೂ ನೈರ್ಮಲ್ಯ ವಿಷಯಗಳಿಗೆ ತಗಲುವ ವೆಚ್ಚ

Mission Paani: WHO ಹಾಗೂ UNICEF ಸಂಸ್ಥೆಗಳು ಜಂಟಿಯಾಗಿ ನಡೆಸಿದ ಅಧ್ಯಯನದಲ್ಲಿ ಕಂಡುಬಂದ ಅಂಶವೇನೆಂದರೆ 15% ಭಾರತೀಯರಿಗೆ ಶೌಚಾಲಯಗಳ ವ್ಯವಸ್ಥೆ ಇಲ್ಲದಿರುವುದಾಗಿದೆ.

Mission Paani

Mission Paani

 • Share this:
  Mission Paani: ಕಳಪೆ ನೈರ್ಮಲ್ಯ ಹಾಗೂ ಸ್ವಾಸ್ಥ್ಯ ಈ ಎರಡೂ ಅಂಶಗಳನ್ನು ನಿಭಾಯಿಸುವ ಕಾರ್ಯದಲ್ಲಿ ಭಾರತ ಮುಗ್ಗರಿಸುತ್ತಿದೆ. ಕಳಪೆ ನೈರ್ಮಲ್ಯವೆಂಬುದು ಬರಿ ಗ್ರಾಮೀಣ ಭಾಗಗಳಲ್ಲಿ ಮಾತ್ರವಲ್ಲದೆ ಪ್ರಸ್ತುತ ನಗರಗಳಲ್ಲೂ ತಲೆದೋರಿರುವ ಸಮಸ್ಯೆಯಾಗಿದೆ. ನೈರ್ಮಲ್ಯದಲ್ಲಿನ ನಿರ್ಲ್ಯಕ್ಷದಿಂದಾಗಿ ಸಂತಾನೋತ್ಪತ್ತಿ ಅಥವಾ ಜನನಾಂಗದ ಸೋಂಕು, ಉಸಿರಾಟ ಕಾಯಿಲೆಗಳು, ಅತಿಸಾರ, ಚರ್ಮ ವ್ಯಾಧಿಗಳು ಹಾಗೂ ವಿವಿಧ ಪರಾವಲಂಬಿ ಸೋಂಕುಗಳಿಗೆ ಜನರು ಹೆಚ್ಚು ಒಳಗಾಗುತ್ತಿದ್ದು ಇದಕ್ಕೆ ಮುಖ್ಯ ಕಾರಣ ನೈಮರ್ಲ್ಯದ ಕುರಿತಾಗಿರುವ ಅಸಡ್ಡೆಯಾಗಿದೆ.

  WHO ಹಾಗೂ UNICEF ಸಂಸ್ಥೆಗಳು ಜಂಟಿಯಾಗಿ ನಡೆಸಿದ ಅಧ್ಯಯನದಲ್ಲಿ ಕಂಡುಬಂದ ಅಂಶವೇನೆಂದರೆ 15% ಭಾರತೀಯರಿಗೆ ಶೌಚಾಲಯಗಳ ವ್ಯವಸ್ಥೆ ಇಲ್ಲದಿರುವುದಾಗಿದೆ. ಗ್ರಾಮೀಣ ಭಾಗದ 3.3% ಜನರು ಹಾಗೂ ನಗರ ಪ್ರದೇಶದ 1.7% ಜನರು ಈಗಲೂ ಸಾಕಷ್ಟು ನೈರ್ಮಲ್ಯ ಅನುಕೂಲಗಳನ್ನು ಹೊಂದಿಲ್ಲ ಎಂಬುದಾಗಿದೆ. ಇದೇ ರೀತಿಯಾಗಿ 22.4% ಗ್ರಾಮೀಣ ಭಾಗದ ಜನರು ಹಾಗೂ 1% ನಗರವಾಸಿಗಳು ಇನ್ನೂ ಬಯಲು ಶೌಚಾಲಯದ ಅಭ್ಯಾಸ ಮುಂದುವರಿಸಿದ್ದಾರೆ ಎಂಬುದು ಅಧ್ಯಯನಗಳಿಂದ ತಿಳಿದುಬಂದಿರುವ ಅಂಕಿ ಅಂಶಗಳಾಗಿವೆ.

  ಭಾರತೀಯ ಜನಸಂಖ್ಯೆಯ 1.7% ಜನರಿಗೆ ಸ್ವಾಸ್ಥ್ಯ ಕಾಪಾಡುವ ಸೌಲಭ್ಯಗಳೊಂದಿಗೆ ಸುಧಾರಣೆಯ ಅಗತ್ಯವಿದ್ದು ಜೊತೆಗೆ 2.7% ಜನರಿಗೆ ನೈರ್ಮಲ್ಯ ಸುಧಾರಣೆಯ ಸೌಲಭ್ಯಗಳನ್ನು ಹೆಚ್ಚಿಸುವ ಅಗತ್ಯವಿದೆ ಎಂದು ವರದಿಯು ತಿಳಿಸಿದೆ.

  ಸ್ವಾಸ್ಥ್ಯ ಹಾಗೂ ನೈರ್ಮಲ್ಯ ಜನರ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
  ತಾಜಾ ಮಲ ಬ್ಯಾಕ್ಟೀರಿಯಾಗಳನ್ನು ರವಾನಿಸುವ ಸಾಮರ್ಥ್ಯ ಹೊಂದಿದ್ದು ಇದರಿಂದ ಅತಿಸಾರ, ಕಾಲರಾ, ಭೇದಿ, ಹೆಪಟೈಟಿಸ್ ಎ, ಟೈಫಾಯ್ಡ್‌ ಮತ್ತು ಪೋಲಿಯೋಗಳಂತಹ ಕಾಯಿಲೆಗಳ ಹರಡುವಿಕೆ ಕಾರಣವಾಗಬಹುದು. ಮಲಗಳ ಮೇಲೆ ಕೀಟಗಳು ಕುಳಿತು ಕಾಯಿಲೆಯನ್ನು ಬೇರೆಡೆಗೆ ಹರಡಿದಾಗ ಅಥವಾ ಮಲ ಅಂತರ್ಜಾಲ ಹಾಗೂ ಬಾವಿಗಳಲ್ಲಿನ ನೀರಿನ ಮೂಲಗಳನ್ನು ಕಲುಷಿತಗೊಳಿಸಿದಾಗ ಇದು ಸಂಭವಿಸುತ್ತದೆ.

  ಕಳಪೆ ಸ್ವಾಸ್ಥ್ಯ ಹಾಗೂ ನೈರ್ಮಲ್ಯ ಆರ್ಥಿಕ ನಷ್ಟಕ್ಕೆ ಕಾರಣವಾಗಿವೆ
  ಕಳಪೆ ಸ್ವಾಸ್ಥ್ಯ ವೆಚ್ಚಗಳು ನೇರ ಹಾಗೂ ಪರೋಕ್ಷ ಅಂಶಗಳನ್ನು ಒಳಗೊಂಡಿವೆ. ನೇರ ವೆಚ್ಚಗಳ ಕಡೆಗೆ ಗಮನ ಹರಿಸಿದಾಗ ರೋಗಗಳನ್ನು ಉಪಚರಿಸುವುದು ಹಾಗೂ ಕಳಪೆ ಸ್ವಾಸ್ಥ್ಯಕ್ಕೆ ಸಂಬಂಧಿಸಿದ ಅಪಾಯಗಳಿಗೆ ಪ್ರಮುಖ ಕಾರಣವಾಗಿದ್ದು ಜೊತೆಗೆ ವೈದ್ಯಕೀಯ ಖರ್ಚು ವೆಚ್ಚಗಳನ್ನು ಹೆಚ್ಚಿಸಲಿವೆ. ಇನ್ನು ಪರೋಕ್ಷ ವೆಚ್ಚಗಳನ್ನು ನೋಡುವುದಾದರೆ ಕಾಯಿಲೆಯಿಂದ ಮತ್ತು ಘನ ತ್ಯಾಜ್ಯ ನಿರ್ವಹಿಸಲು ಪರ್ಯಾಯ ವಿಧಾನಗಳನ್ನು ಹುಡುಕುವ ಪರಿಶ್ರಮಕ್ಕೆ ವಿನಿಯೋಗವಾಗುವ ಸಮಯದಿಂದ ಸಂಭವಿಸುವ ಆದಾಯ ನಷ್ಟವನ್ನು ಒಳಗೊಂಡಿವೆ.

  2006ರ ವರದಿಯ ಪ್ರಕಾರ, ಭಾರತಕ್ಕೆ ಸ್ವಾಸ್ಥ್ಯ ಹಾಗೂ ನೈರ್ಮಲ್ಯಕ್ಕೆ ಸಂಬಂಧಿಸಿದಂತೆ ತಗಲುವ ವೆಚ್ಚ 2.44 ಲಕ್ಷ ಕೋಟಿ ರೂ. ಆಗಿದೆ. ಆರೋಗ್ಯ ಸಂಬಂಧಿತ, ನೀರಿನ ಸ್ವಚ್ಛತೆಗೆ ಸಂಬಂಧಿಸಿದಂತೆ ಹಾಗೂ ಪ್ರವಾಸಕ್ಕೆ ಸಂಬಂಧಿಸಿದ ಅಂಶಗಳಿಂದ ಉಂಟಾಗಿರುವ ನಷ್ಟಗಳಾಗಿವೆ.

  ಭಾರತದ ಆರ್ಥಿಕತೆಯ ಮೇಲೆ ಪ್ರತಿಯೊಂದು ವಿಭಾಘವು ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.

  ಆರೋಗ್ಯ ಸಂಬಂಧಿತ ಪರಿಣಾಮ:
  ಅಕಾಲಿಕ ಸಾವುಗಳು, ರೋಗಗಳಿಗೆ ಚಿಕಿತ್ಸೆ ನೀಡುವ ವೆಚ್ಚಗಳು, ಅನಾರೋಗ್ಯದಿಂದ ಉತ್ಪಾದಕ ಸಮಯ ಕಳೆದುಹೋಗುವುದು ಮತ್ತು ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಯು ವಿನಿಯೋಗಿಸುವ ಸಮಯದಿಂದಾಗಿ ಆರೋಗ್ಯ ಸಂಬಂಧಿತ ಪರಿಣಾಮಗಳು ಉಂಟಾಗುತ್ತವೆ.

  ಆರೋಗ್ಯ ಸಂಬಂಧಿತ ನಷ್ಟಗಳಲ್ಲಿ, ಅತಿಸಾರದ ಕೊಡುಗೆ ಪ್ರಮುಖವಾದುದು ಮತ್ತು ಇದರ ಚಿಕಿತ್ಸಾ ವೆಚ್ಚವು ಹೆಚ್ಚು ಆರ್ಥಿಕ ನಷ್ಟ ಉಂಟುಮಾಡುತ್ತದೆ. ಇತರ ರೋಗಗಳನ್ನು ಪಟ್ಟಿಮಾಡುವುದಾದರೆ ಅದರಲ್ಲಿ ಮಲೇರಿಯಾ, ದಡಾರ, ಟ್ರಾಕೋಮಾ, ALRI ಸೇರಿವೆ ಮತ್ತು ಇತರ ಕಾರಣಗಳು ಆರೋಗ್ಯ ಸಂಬಂಧಿತ ನಷ್ಟದ ಮೇಲೆ ಪರಿಣಾಮ ಬೀರುತ್ತವೆ.

  ನೀರು-ಸಂಸ್ಕರಣೆಯ ಪರಿಣಾಮ:

  ನೀರಿನ ಸಂಬಂಧಿಸಿದ ನಷ್ಟಗಳಲ್ಲಿ ಮನೆಯ ನೀರನ್ನು ಸಂಸ್ಕರಿಸುವುದು, ನೀರಿನ ಬಾಟಲಿಗಳನ್ನು ಖರೀದಿಸುವುದು, ದೂರದಿಂದ ನೀರು ತರುವ ವೆಚ್ಚ ಮತ್ತು ಪೈಪ್ ನೀರು ಪಡೆಯುವ ವೆಚ್ಚಗಳು ಸೇರಿವೆ.

  ಮನೆಯ ನೀರು ಹಾಗೂ ಕುಡಿಯುವ ನೀರನ್ನು ಸಂಸ್ಕರಿಸುವುದು ಪ್ರಮುಖ ಪರಿಣಾಮವಾಗಿವೆ.

  ಪ್ರವೇಶ ಸಮಯ ಪರಿಣಾಮ:
  ಸಾರ್ವಜನಿಕ ಶೌಚಾಲಯಗಳನ್ನು ಬಳಸುವುದರಿಂದ ಅಥವಾ ಬಯಲು ಪ್ರದೇಶಗಳ ಬಳಕೆ ಹಾಗೂ ಶಾಲೆ ಮತ್ತು ಕಚೇರಿಯಲ್ಲಿ ಶೌಚಾಲಯಗಳು ಇಲ್ಲದಿರುವ ಕಾರಣ ಪ್ರವೇಶ ಸಮಯ ನಷ್ಟಗಳು ಉಂಟಾಗುತ್ತವೆ.

  ಪ್ರವಾಸೋದ್ಯಮ ಪರಿಣಾಮ:
  ಪ್ರವಾಸ ಸ್ಥಳಗಳಲ್ಲಿ ಶೌಚಾಲಯಗಳ ವ್ಯವಸ್ಥೆ ಇಲ್ಲದಿರುವುದು ಹೆಚ್ಚಿನ ವಿದೇಶಿ ಪ್ರವಾಸಿಗರಲ್ಲಿ ಅನಾರೋಗ್ಯಕ್ಕೆ ಕಾರಣವಾಗಿವೆ. ಇವುಗಳು ಪ್ರವಾಸೋದ್ಯಮ ಆದಾಯಗಳು ಹಾಗೂ ಭಾರತೀಯ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತವೆ. ಪ್ರವಾಸೋದ್ಯಮ ಗಳಿಕೆಗಳ ನಷ್ಟ ಹಾಗೂ ಪ್ರವಾಸಿಗರ ಅನಾರೋಗ್ಯಕ್ಕೆ ಕಾರಣವಾದ ನಷ್ಟಗಳಾಗಿವೆ. ವರದಿಗಳ ಪ್ರಕಾರ, ಈ ನಾಲ್ಕು ವಿಭಾಗಗಳ ನಷ್ಟವು ಜಿಡಿಪಿಯ 6.4%ಗೆ ಸಮನಾಗಿದೆ ಎಂದಾಗಿದೆ.

  ಶಾಲೆ ತ್ಯಜಿಸಿದವರ ಮೇಲೆ ಕಳಪೆ ಸ್ವಾಸ್ಥ್ಯದ ಪರಿಣಾಮ:
  ಐದು ಶಾಲೆಗಳಲ್ಲಿ ಎರಡು ಶಾಲೆಗಳು ಹುಡುಗಿಯರಿಗಾಗಿ ಪ್ರತ್ಯೇಕ ಶೌಚಾಲಯಗಳನ್ನು ಹೊಂದಿಲ್ಲ. ಕಳಪೆ ಸ್ವಾಸ್ಥ್ಯದಿಂದಾಗಿ ಶಾಲೆಗಳಲ್ಲಿ ಕಡಿಮೆ ಹಾಜರಾತಿ, ಶಾಲೆ ತ್ಯಜಿಸುವುದು, ಕಡಿಮೆ ಸಾಕ್ಷರತೆಯ ದರಗಳು ಅದರಲ್ಲೂ ವಿಶೇಷವಾಗಿ ವಿದ್ಯಾರ್ಥನಿಯರಲ್ಲಿ ಈ ಅಂಶ ಹೆಚ್ಚಾಗಿ ಕಂಡುಬಂದಿದೆ. ಇದರಿಂದಾಗಿ ಪ್ರತಿ ವರ್ಷ ಶಾಲೆ ತ್ಯಜಿಸುವವರಲ್ಲಿ 23% ಹುಡುಗಿಯರೇ ಆಗಿದ್ದಾರೆ.

  ಮಕ್ಕಳ ಮೇಲೆ ನಡೆಸಿದ ಕ್ಷಿಪ್ರ ಸಮೀಕ್ಷೆ ವರದಿಯು ತಿಳಿಸಿರುವ ಅಂಶವೆಂದರೆ 22% ಶಾಲೆಗಳು ಹುಡುಗಿಯರಿಗಾಗಿ ಪ್ರತ್ಯೇಕ ಶೌಚಾಲಯಗಳನ್ನು ಹೊಂದಿಲ್ಲ ಎಂಬುದಾಗಿದೆ ಮತ್ತು 58% ನರ್ಸರಿ ಅಂಗನವಾಡಿಗಳು ಶೌಚಾಲಯಗಳನ್ನು ಹೊಂದಿಲ್ಲ ಎಂಬುದಾಗಿದೆ.

  ಕೊನೆಯ ಮಾತು:
  100 ದಶಲಕ್ಷಕ್ಕೂ ಹೆಚ್ಚು ಶೌಚಾಲಯಗಳನ್ನು ನಿರ್ಮಿಸಲಾಗಿದ್ದು, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸ್ವಾಸ್ಥ್ಯ ಮತ್ತು ನೈರ್ಮಲ್ಯ ಸಮಸ್ಯೆಗಳು ಹೆಚ್ಚು ಆಳವಾಗಿ ಬೇರೂರಿವೆ. ಸ್ವಚ್ಛ ಭಾರತ ಅಭಿಯಾನವು ಪ್ರಚಾರಗಳನ್ನು ಉತ್ತೇಜಿಸಲು ಪ್ರೋತ್ಸಾಹಿಸಿದ್ದು, ದೇಶಾದ್ಯಂತ ಜಾಹೀರಾತುಗಳು ಹಾಗೂ ನೈರ್ಮಲ್ಯ ಭಿತ್ತಿಪತ್ರಗಳ ಮೂಲಕ ಸೆಲೆಬ್ರಿಟಿಗಳೊಂದಿಗೆ ಸಹಕರಿಸುತ್ತಿದೆ.

  ನ್ಯೂಸ್ 18 ಹಾಗೂ ಹಾರ್ಪಿಕ್ ಇಂಡಿಯಾದ ಉಪಕ್ರಮವಾಗಿರುವ ಮಿಷನ್ ಪಾನಿಯ ಭಾಗವಾಗುವ ಮೂಲಕ ನೀವು ಕೂಡ ಭಾರತದಲ್ಲಿ ಸ್ವಾಸ್ಥ್ಯ ಹಾಗೂ ನೈರ್ಮಲ್ಯ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವಲ್ಲಿ ಕೈ ಜೋಡಿಸಬಹುದು. ನೀವು ಮಾಡುವ ಸಣ್ಣ ಸಹಕಾರವು ವಿಶ್ವದ ಮೇಲೆ ಬಹುವ್ಯಾಪಕ ಪರಿಣಾಮವನ್ನುಂಟು ಮಾಡಬಹುದು.

  https://www.news18.com/mission-paani/ ಗೆ ಲಾಗಿನ್ ಮಾಡಿ ಚಳುವಳಿಗೆ ಸೇರಿಕೊಳ್ಳಿ.
  Published by:Sharath Sharma Kalagaru
  First published: