Mission Paani: ನೀರಿನ ಸಂರಕ್ಷಣೆಯ ಹಲವು ಪ್ರಯೋಜನಗಳು ಮತ್ತು ಅವಶ್ಯಕತೆ

ತ್ಯಾಜ್ಯ ನೀರಿನ ಬಳಕೆಯನ್ನು ಕಡಿಮೆ ಮಾಡುವುದರಿಂದ, ನಾವು ನಮ್ಮ ಸಮಾಜದಲ್ಲಿ ಕಾರ್ಯನಿರ್ವಹಿಸುವ ತುರ್ತುಸೇವೆಗಳಾದ ಅಗ್ನಿಶಾಮಕ ದಳ, ಆಸ್ಪತ್ರೆಗಳು ಮತ್ತು ಹೆಚ್ಚಿನ ಸೇವೆಗಳಿಗೆ ಸಹಕರಿಸಿದಂತಾಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ನವದೆಹಲಿ(ಮಾ.20): ಭೂಮಿಯ ಮೇಲ್ಮೈಯ ಶೇ. 70 ರಷ್ಟು ಭಾಗ ನೀರಿನಿಂದ ಕೂಡಿದೆ. ಅದರೆ ಶುದ್ಧ ಕುಡಿಯಲು ಬಳಸಬಹುದಾದ ನೀರು ಕೇವಲ ಶೇ.3 ರಷ್ಟು ಮಾತ್ರವೇ ಲಭ್ಯವಿದೆ. ಇಷ್ಟಾದರೂ ನಮ್ಮ ಜನರು ನೀರಿನ ಸರಿಯಾದ ಉಪಯೋಗದ ಬಗ್ಗೆ ಅರಿವಿಲ್ಲದಿರುವುದು ಬೇಸರದ ಸಂಗತಿ. "ನೀರು" ನವೀಕರಿಸಬಹುದಾದ ಸಂಪನ್ಮೂಲವಾಗಿದ್ದು, ಇತ್ತೀಚಿನ ಮಾನವನಿಂದ ಪ್ರಕೃತಿಯ ಮೇಲೆ ಆಗುತ್ತಿರುವ ದೌರ್ಜನ್ಯದಿಂದಾಗಿ ಪ್ರಕೃತಿ ವಿಕೋಪ ಹೆಚ್ಚಾಗಿದೆ. ನೀರಿನ ಅಭಾವ ತಲೆದೋರಿದೆ. ಇದರಿಂದ ದಿನಗಳಲ್ಲಿ ನೀರಿನ ಸಂಕಷ್ಟ ಎದರಿಸುವ ಪರಿಸ್ಥಿತಿ ಬಂದೊದಗಿದೆ.

  ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿರುವುದರಿಂದ, ದೇಶದ ಪ್ರತಿಯೊಬ್ಬ ಪ್ರಜೆಗಳಿಗೆ ನೀರಿನ ಲಭ್ಯತೆಯನ್ನು ಭಾರತವು ಖಚಿತಪಡಿಸಿಕೊಳ್ಳುವುದರಲ್ಲಿ ಆಶ್ಚರ್ಯವೇನಿಲ್ಲ. ಇದು ಮೂಲಭೂತ ಅವಶ್ಯಕತೆಯಾಗಿದೆ. ಆದರೆ ಭಾರತದಲ್ಲಿ ಸುಮಾರು 75 ಪ್ರತಿಶತದಷ್ಟು ಕುಟುಂಬಗಳು ತಾವು ವಾಸಿಸುವ ಪ್ರದೇಶದಲ್ಲಿ ಕುಡಿಯುವ ನೀರನ ಸೌಲಭ್ಯವನ್ನು ಹೊಂದಿಲ್ಲ.

  ಆದ್ದರಿಂದ, ನೀರಿನ ಸಂರಕ್ಷಣೆ ನಮಗೆ ಮುಖ್ಯವಾಗಿದೆ. ಭೂಮಿಯಲ್ಲಿ ಸೀಮಿತ ಪ್ರಮಾಣದ ನೀರು ಮಾತ್ರ ಲಭ್ಯವಿದೆ ಮತ್ತು ಅದನ್ನು ಸುರಕ್ಷಿತ ಬಳಕೆಗಾಗಿ ರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಸೀಮಿತ ಪ್ರಮಾಣದ ಸಂಪನ್ಮೂಲ ಪೂರೈಕೆಯನ್ನು ಬಳಸಿಕೊಂಡು ನೀರಿನ ಸಂರಕ್ಷಣೆಯ ಅವಶ್ಯ. ನೀರನ್ನು ಹೇಗೆ ಸಂರಕ್ಷಿಸಬೇಕು ಮತ್ತು ಅದನ್ನು ಸರಿಯಾಗಿ ಬಳಸುವುದು ಎಂಬುದರ ಬಗ್ಗೆ ಸ್ವಲ್ಪ ಅರಿವಿನೊಂದಿಗೆ, ಪ್ರತಿಯೊಬ್ಬರೂ ತಮ್ಮ ಜವಬ್ದಾರಿ ಹಾಗೂ ಕೊಡುಗೆಯನ್ನು ನೀಡಬಹುದು. ಈ ವಿಚಾರವನ್ನು ಕೇವಲ ವಿಜ್ಞಾನಿಗಳು ಅಥವಾ ಪರಿಸರವಾದಿಗಳ ಮೇಲೆ ಬಿಡಬಹುದಾದ ಕೆಲಸವಲ್ಲ. ಇದು ಸಮಾಜದ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ. ಏಕೆಂದರೆ ನಮ್ಮಲ್ಲಿ ಪ್ರತಿಯೊಬ್ಬರೂ ನಮ್ಮ ಜೀವನವನ್ನು ಮುಂದುವರಿಸಲು ನೀರಿನ ಮೇಲೆ ಅವಲಂಬಿತರಾಗಿದ್ದೇವೆ.

  Coronavirus: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಲ್ಲದ ಕೊರೋನಾ ಅಟ್ಟಹಾಸ

  ಜಾಗತಿಕ ಪರಿಣಾಮವನ್ನು ಉಂಟುಮಾಡುವ ನೀರಿನ ಸಂರಕ್ಷಣೆಯ ಕೆಲವು ವಿಧಾನಗಳು ಇಲ್ಲಿವೆ:

  ನೀರಿನ ಸೀಮಿತ ಸಂಪನ್ಮೂಲಗಳನ್ನು ಉಳಿಸುವ ಒಂದೇ ಗುರಿಯೊಂದಿಗೆ ಜನರು ಮತ್ತು ಸಮಾಜವು ಒಗ್ಗೂಡಿದರೆ, ಬರ ಮತ್ತು ನೀರಿನ ಕೊರತೆಯ ಪರಿಣಾಮಗಳನ್ನು ತಡೆಗಟ್ಟಬಹುದು.

  ಕೈಗಾರಿಕರಣ, ಜನಸಂಖ್ಯಾ ಸ್ಪೋಟದಿಂದಾಗಿ ಮೀತಿ ಮೀರಿ ನೀರಿನ ಬಳಕೆಯಾಗುತ್ತಿದೆ. ನೀರು ಯಾವಾಗಲೂ ಶಾಶ್ವತವಾಗಿ ಲಭ್ಯವಿರುತ್ತದೆ ಎಂಬ ಭರವಸೆ ಇಲ್ಲ. ಆದಾಗ್ಯೂ, ನೀರು ಅಂತಿಮವಾಗಿ ನೈಸರ್ಗಿಕ ಚಕ್ರದ ಮೂಲಕ ನೀರು ಭೂಮಿಗೆ ಮರಳುತ್ತದೆ. ಅದು ಯಾವಾಗಲೂ ಒಂದೇ ಸ್ಥಳಕ್ಕೆ ಅಥವಾ ಅದೇ ಪ್ರಮಾಣದಲ್ಲಿ ಮತ್ತು ಗುಣಮಟ್ಟದ ಮೂಲಕ ಹಿಂತಿರುಗುವುದಿಲ್ಲ. ಆದ್ದರಿಂದ, ಕನಿಷ್ಠ ಪ್ರಮಾಣದ ನೀರನ್ನು ಬಳಸುವುದು ಮತ್ತು ಸಂಪನ್ಮೂಲಗಳ ಉಪಯೋಗ ಮಾಡುವುದರ ಮೂಲಕ, ಪರಿಹಾರದ ಮಾರ್ಗವನ್ನು ಕಂಡುಕೊಳ್ಳಬಹುದಾಗಿದೆ.

  ನೀರನ್ನು ಉಳಿಸುವ ಮತ್ತೊಂದು ಪ್ರಯೋಜನವೆಂದರೆ, ಇದರಿಂದ ಪರಿಸರಕ್ಕೂ ಸಹಾಯ ಮಾಡುತ್ತದೆ. ನಮ್ಮ ನೀರಿನ ಬಳಕೆಯನ್ನು ಕಡಿಮೆ ಮಾಡುವುದರ ಮೂಲಕ, ಅದನ್ನು ಮನೆಗಳು, ವ್ಯವಹಾರಗಳು, ಹೊಲಗಳು ಮತ್ತು ಸಮುದಾಯಗಳಿಗೆ ಸಂಸ್ಕರಿಸಲು ಮತ್ತು ತಲುಪಿಸಲು ಖರ್ಚು ಮಾಡಿದ ಶಕ್ತಿಯನ್ನು ಮತ್ತು ಇಂಧನವನ್ನು ಕಡಿಮೆ ಮಾಡಲು ನಾವು ಸಹಾಯ ಮಾಡಬಹುದು. ಇದು ಮಾಲಿನ್ಯವನ್ನು ಕಡಿಮೆ ಮಾಡಲು ಮತ್ತು ಇಂಧನ ಸಂಪನ್ಮೂಲಗಳನ್ನು ಸಂರಕ್ಷಿಸಲು
  ಇದರಿಂದ ಸಹಾಯವಾಗಲಿದೆ.

  ತ್ಯಾಜ್ಯ ನೀರಿನ ಬಳಕೆಯನ್ನು ಕಡಿಮೆ ಮಾಡುವುದರಿಂದ, ನಾವು ನಮ್ಮ ಸಮಾಜದಲ್ಲಿ ಕಾರ್ಯನಿರ್ವಹಿಸುವ ತುರ್ತುಸೇವೆಗಳಾದ ಅಗ್ನಿಶಾಮಕ ದಳ, ಆಸ್ಪತ್ರೆಗಳು ಮತ್ತು ಹೆಚ್ಚಿನ ಸೇವೆಗಳಿಗೆ ಸಹಕರಿಸಿದಂತಾಗುತ್ತದೆ.

  ಇನ್ನೂ ಹೆಚ್ಚಿನ ಇಂತಹ ಪ್ರಯತ್ನಗಳನ್ನು ಮಾಡಲು, ಮಿಷನ್ ಪಾನಿ ಉಪಕ್ರಮಕ್ಕಾಗಿ ನ್ಯೂಸ್ 18 ಹಾರ್ಪಿಕ್ ಇಂಡಿಯಾದೊಂದಿಗೆ ಸಹಕರಿಸಿದೆ, ಇದು ನೀರಿನ ಸರಿಯಾದ ರೀತಿಯಲ್ಲಿ ಉಪಯೋಗಿಸುವ ಕಡೆಗೆ ಜನರನ್ನು ಪ್ರೋತ್ಸಾಹಿಸುವ ಪ್ರಯತ್ನವಾಗಿದೆ.
  Published by:Latha CG
  First published: