Mission Paani: ಮಿಷನ್​ ಪಾನಿ ಆಂದೋಲನಕ್ಕೆ ಇಂದು ಮುಂಬೈನಲ್ಲಿ ಚಾಲನೆ; ಅಮಿತಾಭ್​ ಬಚ್ಚನ್​ ಸೇರಿ ಹಲವು ಗಣ್ಯರು ಭಾಗಿ

Mission Paani Launch Today: ನೆಟ್ವರ್ಕ್​18ನ ಉಪ ಕಾರ್ಯಕಾರಿ ಸಂಪಾದಕ ಆನಂದ್​ ನರಸಿಂಹನ್​ ಮಿಷನ್​ ಪಾನಿ ಕಾರ್ಯಕ್ರಮವನ್ನು ನಿರ್ವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಪ್ರಮುಖ ಚರ್ಚೆಗಳು ನಡೆಯಲಿದ್ದು, ಅಮಿತಾಭ್​ ಬಚ್ಚನ್​ ಸೇರಿ ಅನೇಕ ಗಣ್ಯರು ಪಾಲ್ಗೊಳ್ಳುತ್ತಿದ್ದಾರೆ.

Rajesh Duggumane | news18-kannada
Updated:August 27, 2019, 12:08 PM IST
Mission Paani: ಮಿಷನ್​ ಪಾನಿ ಆಂದೋಲನಕ್ಕೆ ಇಂದು ಮುಂಬೈನಲ್ಲಿ ಚಾಲನೆ; ಅಮಿತಾಭ್​ ಬಚ್ಚನ್​ ಸೇರಿ ಹಲವು ಗಣ್ಯರು ಭಾಗಿ
ಮಿಷನ್​ ಪಾನಿ
Rajesh Duggumane | news18-kannada
Updated: August 27, 2019, 12:08 PM IST
ಮುಂಬೈ (ಆ.27): ಭಾರತ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಲ್ಲಿ ನೀರಿನ ಕೊರತೆಯೂ ಒಂದು. ನೀತಿ ಆಯೋಗದ ಇತ್ತೀಚಿನ ವರದಿ ಪ್ರಕಾರ 2020ರ ವೇಳೆಗೆ ಭಾರತದ 21 ನರಗಳಲ್ಲಿ ಅಂತರ್ಜಲ ಸಂಪೂರ್ಣವಾಗಿ ಬತ್ತಿ ಹೋಗಲಿದೆ. ನೀರಿನ ಅಗತ್ಯತೆ ಬಗ್ಗೆ ಜಾಗೃತಿ ಮೂಡಿಸಲು ಹಾರ್ಪಿಕ್​ ಮತ್ತು ನ್ಯೂಸ್​18 ಸಹಭಾಗಿತ್ವದಲ್ಲಿ ‘ಮಿಷನ್​ ಪಾನಿ’ (#MissionPaani) ಆಂದೋಲನಕ್ಕೆ ಚಾಲನೆ ನೀಡಲಾಗುತ್ತಿದೆ. ಇಂದು ಮಧ್ಯಾಹ್ನ 1;30ಕ್ಕೆ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ.

ನೆಟ್ವರ್ಕ್​18ನ ಉಪ ಕಾರ್ಯಕಾರಿ ಸಂಪಾದಕ ಆನಂದ್​ ನರಸಿಂಹನ್​ ಮಿಷನ್​ ಪಾನಿ ಕಾರ್ಯಕ್ರಮವನ್ನು ನಿರ್ವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಪ್ರಮುಖ ಚರ್ಚೆಗಳು ನಡೆಯಲಿದ್ದು, ಮುಖ್ಯ ಗಣ್ಯರು ಪಾಲ್ಗೊಳ್ಳುತ್ತಿದ್ದಾರೆ.

ಮಿಷನ್​ ಪಾನಿ ಆಂದೋಲನದ ಪ್ರಚಾರ ರಾಯಭಾರಿ ಅಮಿತಾಭ್​ ಬಚ್ಚನ್​, ದಕ್ಷಿಣಾ ಏಷ್ಯಾದ ಆರ್​ಬಿ ಹೈಜಿನ್​ ಮತ್ತು ಹೋಮ್​ನ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿರುವ ನರಸಿಂಹನ್​ ಈಶ್ವರ್​, ಕೇಂದ್ರ ರಸ್ತೆ ಸಾರಿಗೆ ಸಚಿವ ನಿತೀನ್​ ಗಡ್ಕರಿ, ಸಚಿವ ಗಂಜೇಂದ್ರ ಸಿಂಗ್​, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಇಶಾ ಫೌಂಡೇಶನ್​ ಸ್ಥಾಪಕ ಜಗ್ಗಿ ವಾಸುದೇವ್​ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ನೀರಿನ ಪ್ರತಿ ಹನಿಯೂ ಅತ್ಯಂತ ಅಮೂಲ್ಯ. ಇಂದು ನೀರಿನ ಪ್ರಮಾಣ ದಿನೇದಿನೇ ಕಡಿಮೆ ಆಗುತ್ತಲೇ ಹೋಗುತ್ತಿದೆ. ಸದ್ಯ ಅತ್ಯಂತ ಜಾಗೃತೆಯಿಂದ ನೀರು ಬಳಕೆ ಮಾಡಬೇಕಿದೆ. ಹಾಗಾಗಿ ನೀರಿನ್ನು ಉಳಿಸಬೇಕೆಂದು ಜನರಲ್ಲಿ ಅರಿವು ಮೂಡಿಸುವ ಸಲುವಾಗಿ, ನ್ಯೂಸ್​​-18 ಸಂಸ್ಥೆ ಮಿಷನ್​ ಪಾನಿ ಎಂಬ ಅಭಿಯಾನ ಹಮ್ಮಿಕೊಂಡಿದೆ. 'ನಾಳೆಯ ಒಳಿತಿಗಾಗಿ ಜಲ ಸಂರಕ್ಷಣೆ (ಮಿಷನ್​​ ಪಾನಿ)' ಎಂಬ ಹೆಸರಿನಲ್ಲಿ ಕ್ಯಾಂಪೇನ್​​ ಮಾಡಲಾಗುತ್ತಿದೆ.

ಇದನ್ನೂ ಓದಿ: MissionPaani: ನಾಳೆಯ ಒಳಿತಿಗಾಗಿ ನ್ಯೂಸ್​​-18 ಜಲ ಸಂರಕ್ಷಣೆ ಅಭಿಯಾನ

ಭಿಯಾನದ ಉದ್ದೇಶವೇ ನೀರನ್ನು ಮಿತವಾಗಿ ಬಳಸಿ, ಜನರ ಬದುಕು ಹಸನಾಗಲು ಸಾಧ್ಯವಾಗಿಸುವುದು. ಸದ್ಯ ಸುರಿಯಬಹುದಾದ ಮಳೆ ಭೂಮಿಯ ಮೇಲ್ಭಾಗವನ್ನು ತಂಪಾಗಿಸಬಹುದು. ಆದರೆ, ನೀರನ್ನು ಮಿತವಾಗಿ ಬಳಸಿ, ನಮ್ಮ ಹಳ್ಳಿ ಪಟ್ಟಣ ಮತ್ತು ನಗರಗಳು ಎದುರಿಸುತ್ತಿರುವ ನೀರಿನ ಬವಣೆ ತಗ್ಗಿಸಬೇಕಿರುವುದು ನಮ್ಮ ಹೊಣೆ. ಆದ್ದರಿಂದ ನೀವು ಕೂಡ, ನ್ಯೂಸ್​​-18 ಜಲ ಸಂರಕ್ಷಣೆ ಅಭಿಯಾನದ ಭಾಗವಾಗಬೇಕು ಎಂಬುದು ನಮ್ಮ ಆಶಯ.

First published:August 27, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...