HOME » NEWS » National-international » MISSION PAANI HOW TO ENSURE YOUR DRINKING WATER IS CLEAN AND SAFE FROM WATER BORNE DISEASES STG LG

Mission Paani: ನಾವು ಕುಡಿಯುವ ನೀರು ಸ್ವಚ್ಛವಾಗಿದೆ ಎಂದು ಖಚಿತಪಡಿಸಿಕೊಳ್ಳುವುದು ಹೇಗೆ?

ಮಕ್ಕಳನ್ನು ಒರೆಸುವ ಬಟ್ಟೆಗಳು ಅಥವಾ ವೈಪ್‌ಗಳು ಅಥವಾ ಪ್ಲಾಸ್ಟಿಕ್ ಟ್ಯಾಂಪೂನ್ ಲೇಪಕಗಳಂತಹ ನಾನ್‌ ಡೀಗ್ರೇಡಬಲ್‌ ಉತ್ಪನ್ನಗಳನ್ನು ಫ್ಲಶ್ ಮಾಡಬೇಡಿ. ಇದರಿಂದ ಒಳಚರಂಡಿ ಸಂಸ್ಕರಣಾ ಪ್ರಕ್ರಿಯೆಗೆ ಅಡ್ಡಿಯಾಗಬಹುದು ಮತ್ತು ಬೀಚ್‌ಗಳನ್ನು ಹಾಗೂ ನೀರನ್ನು ಗಲೀಜು ಮಾಡಿದಂತಾಗುತ್ತದೆ ಅಥವಾ ಅದರಲ್ಲಿ ಕಸ ಹಾಕಿದಂತಾಗುತ್ತದೆ.

news18-kannada
Updated:March 22, 2021, 2:25 PM IST
Mission Paani: ನಾವು ಕುಡಿಯುವ ನೀರು ಸ್ವಚ್ಛವಾಗಿದೆ ಎಂದು ಖಚಿತಪಡಿಸಿಕೊಳ್ಳುವುದು ಹೇಗೆ?
ಪ್ರಾತಿನಿಧಿಕ ಚಿತ್ರ
  • Share this:
ನವದೆಹಲಿ(ಮಾ.22): ಮಾರ್ಚ್ 22, ಇಂದು ವಿಶ್ವ ಜಲ ದಿನ. ಆದರೆ, ಭಾರತೀಯರು ಕುಡಿಯುವ ನೀರು ಎಷ್ಟು ಸ್ವಚ್ಛವಾಗಿದೆ ಗೊತ್ತಾ..? ದೇಶದ ಜನಸಂಖ್ಯೆಯ ಶೇಕಡಾ 50 ಕ್ಕಿಂತಲೂ ಕಡಿಮೆ ಜನರು ಸುರಕ್ಷಿತವಾಗಿ ನಿರ್ವಹಿಸುವ ಕುಡಿಯುವ ನೀರು ಅಥವಾ ಸ್ವಚ್ಛ ಕುಡಿಯುವ ನೀರು ಹೊಂದಿದ್ದಾರೆ ಎಂದು ಯುನಿಸೆಫ್‌ನ ಇತ್ತೀಚಿನ ಅಧ್ಯಯನವು ಕಂಡುಕೊಂಡಿದೆ. ಅಲ್ಲದೆ, ಭಾರತದಲ್ಲಿ ನೀರಿನಿಂದ ಹರಡುವ ರೋಗಗಳು ವರ್ಷಕ್ಕೆ ಸುಮಾರು 600 ಮಿಲಿಯನ್ ಡಾಲರ್‌ಗಳಷ್ಟು ಆರ್ಥಿಕ ಹೊರೆ ಹೊಂದಿರುತ್ತವೆ ಎಂದು ಅಂದಾಜಿಸಲಾಗಿದೆ. ನೀರಿನ ಮಾಲಿನ್ಯ ಒಂದು ಸಂಕೀರ್ಣ ಸಮಸ್ಯೆಯಾಗಿದ್ದು, ರೋಗಕಾರಕಗಳು ಮತ್ತು ರಾಸಾಯನಿಕ ಮಾಲಿನ್ಯ ಎರಡೂ ಪ್ರಮುಖ ಸವಾಲುಗಳಾಗಿವೆ.

ಕಲುಷಿತಗೊಂಡ ಕುಡಿಯುವ ನೀರಿನ ಮೂಲಕ ಹಲವು ರೋಗಗಳು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಪ್ರೋಟೋಜೋವಾ, ವೈರಸ್‌ಗಳು, ಬ್ಯಾಕ್ಟೀರಿಯಾಗಳು ಮತ್ತು ಕರುಳಿನ ಪ್ಯಾರಸೈಟ್‌ಗಳಂತಹ ರೋಗಕಾರಕ ಸೂಕ್ಷ್ಮಜೀವಿಗಳಿಂದ ಕಾಲರಾ, ಟೈಫಾಯಿಡ್, ಅತಿಸಾರ, ಹೆಪಟೈಟಿಸ್ ಎ ಯಂತಹ ರೋಗಗಳಿಗೆ ಕಾರಣವಾಗಬಹುದು. ಕೆಲವು ಪ್ರದೇಶಗಳಲ್ಲಿ ಶುದ್ಧ ಕುಡಿಯುವ ನೀರಿನ ಪೂರೈಕೆ ಒಂದು ಸವಾಲಾಗಿದೆ. ಆದರೂ, ಇನ್ನು

ಕೆಲವೊಮ್ಮೆ ವೈಯಕ್ತಿಕ ಕಳಪೆ ನೈರ್ಮಲ್ಯ ಅಭ್ಯಾಸಗಳು ಸಹ ಮಾಲಿನ್ಯಕ್ಕೆ ಕಾರಣವಾಗುತ್ತವೆ.

ಈ ನೀರಿನ ಮಾಲಿನ್ಯವು ಮೂಲದಲ್ಲಿ ಅಥವಾ ಕೊಳಚೆ ನೀರಿನ ಮಾರ್ಗಗಳಿಗೆ ಸಮೀಪದಲ್ಲಿರುವ ಕೊಳವೆಗಳ ಮೂಲಕ ನೀರನ್ನು ರವಾನಿಸುವಾಗಲೂ ಸಂಭವಿಸಬಹುದು. ಇದರಿಂದ ಒಳಚರಂಡಿಯನ್ನು ಕುಡಿಯುವ ನೀರಿನೊಂದಿಗೆ ಸೇರಿಕೊಳ್ಳಬಹುದು ಮತ್ತು ರೋಗವನ್ನು ಉಂಟುಮಾಡುವ ಸೂಕ್ಷ್ಮಜೀವಿಗಳಿಂದ ಕಲುಷಿತಗೊಳ್ಳುತ್ತದೆ.

Maski Bypoll: ಮಸ್ಕಿ ಉಪ ಚುನಾವಣೆಯಿಂದ ದೂರ ಉಳಿದ ಶಿವನಗೌಡ ನಾಯಕ

ನೀರಿನಿಂದ ಹರಡುವ ರೋಗಗಳನ್ನು ನಿವಾರಿಸುವ ಮಾರ್ಗಗಳನ್ನು ತಡೆಗಟ್ಟುವುದು ಹೀಗೆ..

1. ನೀರು ಸುರಕ್ಷಿತ ಮೂಲದಿಂದ ಬಂದಿದೆಯೇ ಎಂದು ಖಚಿತಪಡಿಸಿಕೊಳ್ಳುವುದು ಮತ್ತು ಕುದಿಸಿದ ನೀರನ್ನು ಕುಡಿಯುವಂತಹ ಅನುಮಾನಗಳಿದ್ದಲ್ಲಿ ನೀರಿನ ಸಂಸ್ಕರಣಾ ಕ್ರಮಗಳನ್ನು ಕೈಗೊಳ್ಳುವುದು. ನೀರನ್ನು ಬಾಯಿಲ್‌ ಮಾಡುವುದು ಅಥವಾ ಕುದಿಯುವಿಕೆಯನ್ನು ಪ್ಯಾಥೋಜನ್‌ ರಿಡಕ್ಷನ್‌ ವಿಧಾನವಾಗಿ ಬಳಸಬಹುದು. ಅದು ಎಲ್ಲಾ ರೋಗಕಾರಕಗಳನ್ನು ಕೊಲ್ಲುತ್ತದೆ.2. ನೀರಿನಿಂದ ಹರಡುವ ರೋಗಗಳಿಂದ ತಪ್ಪಿಸಿಕೊಳ್ಳಲು ತಿನ್ನುವ ಮೊದಲು ಮತ್ತು ಮಲವಿಸರ್ಜನೆಯ ನಂತರ ಕೈಗಳನ್ನು ಸೋಪ್ ಮತ್ತು ನೀರಿನಿಂದ ಚೆನ್ನಾಗಿ ತೊಳೆಯುವುದು ಅತ್ಯಗತ್ಯವಾಗಿದೆ.

3. ಕಲುಷಿತವಾಗುವುದನ್ನು ತಪ್ಪಿಸಲು ಎಲ್ಲಾ ಸಮಯದಲ್ಲೂ ನೀರನ್ನು ಮುಚ್ಚಿಡಿ. ಕಂಟೇನರ್‌ಗಳಿಂದ ನೀರನ್ನು ಪಡೆಯಲು ಲೋಟ ಮುಂತಾದ ವಸ್ತುಗಳನ್ನು ಬಳಸಿ.

4. ಹಲವಾರು ರೋಗಗಳಿಗೆ ಒಳಗಾಗುವುದನ್ನು ತಪ್ಪಿಸಿಕೊಳ್ಳಲು ಸ್ವಚ್ಛ ಪರಿಸರವನ್ನು ಕಾಪಾಡಿಕೊಳ್ಳುವುದು ಸಹ ಅವಶ್ಯಕವಾಗಿದೆ.

ನಮ್ಮ ಹೆಚ್ಚಿನ ಕುಡಿಯುವ ನೀರು ಅಂತರ್ಜಲ ರೂಪಗಳು ಮತ್ತು ನದಿಗಳಿಂದ ಬಂದಿರುವುದರಿಂದ, ಕುಡಿಯುವ ನೀರಿನ ಸುರಕ್ಷತೆ ಮತ್ತು ನೈರ್ಮಲ್ಯವನ್ನು ಖಾತ್ರಿಪಡಿಸುವ ಮೊದಲ ಹೆಜ್ಜೆ ನೈಸರ್ಗಿಕ ನೀರಿನ ಮೂಲಗಳನ್ನು ಸ್ವಚ್ಛವಾಗಿಡುವುದು. ಈ ಹಿನ್ನೆಲೆ ಹೆಚ್ಚುತ್ತಿರುವ ನೀರಿನ ಮಾಲಿನ್ಯ ಸವಾಲಿಗೆ ಕೊಡುಗೆ ನೀಡದಿರಲು ನೀವು ಎಚ್ಚರವಹಿಸುವ ಕೆಲವು ವಿಧಾನಗಳು ಹೀಗಿವೆ:

1. ನಿಮ್ಮ ಶೌಚಾಲಯವು ಕಸದ ಬುಟ್ಟಿ ಅಲ್ಲ..!
ಮಕ್ಕಳನ್ನು ಒರೆಸುವ ಬಟ್ಟೆಗಳು ಅಥವಾ ವೈಪ್‌ಗಳು ಅಥವಾ ಪ್ಲಾಸ್ಟಿಕ್ ಟ್ಯಾಂಪೂನ್ ಲೇಪಕಗಳಂತಹ ನಾನ್‌ ಡೀಗ್ರೇಡಬಲ್‌ ಉತ್ಪನ್ನಗಳನ್ನು ಫ್ಲಶ್ ಮಾಡಬೇಡಿ. ಇದರಿಂದ ಒಳಚರಂಡಿ ಸಂಸ್ಕರಣಾ ಪ್ರಕ್ರಿಯೆಗೆ ಅಡ್ಡಿಯಾಗಬಹುದು ಮತ್ತು ಬೀಚ್‌ಗಳನ್ನು ಹಾಗೂ ನೀರನ್ನು ಗಲೀಜು ಮಾಡಿದಂತಾಗುತ್ತದೆ ಅಥವಾ ಅದರಲ್ಲಿ ಕಸ ಹಾಕಿದಂತಾಗುತ್ತದೆ.

2. ಸಿಂಕ್ ಕೆಳಗೆ ಹೋಗುವುದರ ಬಗ್ಗೆ ಜಾಗರೂಕರಾಗಿರಿ
ಬಣ್ಣ, ಬಳಸಿದ ತೈಲ, ರಾಸಾಯನಿಕ ಕ್ಲೀನರ್‌ಗಳು ಅಥವಾ ಪ್ರಶ್ನಾರ್ಹವಾದ ಇತರ ಮನೆಯ ಉತ್ಪನ್ನಗಳು ಸೋಡಿಯಂ ಹೈಪೋಕ್ಲೋರೈಟ್, ಅಮೋನಿಯಾ ಮತ್ತು ಫಾರ್ಮಾಲ್ಡಿಹೈಡ್‌ನಂತಹ ವಿಷಕಾರಿ ಪದಾರ್ಥಗಳನ್ನು ಹೊಂದಿರುವುದರಿಂದ ಅವುಗಳು ನೀರಿನ ಸಿಂಕ್‌ ಒಳಗೆ ಹೋಗದಂತೆ ನೋಡಿಕೊಳ್ಳಿ.

3. ಬಯೋಡೀಗ್ರೇಡಬಲ್‌ ಶುಚಿಗೊಳಿಸುವ ವಸ್ತುಗಳನ್ನು ಬಳಸಿ
ಸಾವಿರಾರು ರಾಸಾಯನಿಕಗಳನ್ನು ಶುಚಿಗೊಳಿಸುವ ಉತ್ಪನ್ನಗಳಿಂದ ಹೊಳೆಗಳು ಮತ್ತು ನದಿಗಳಲ್ಲಿ ತೊಳೆದು ಆಹಾರ ಸರಪಳಿಗೆ ಪ್ರವೇಶಿಸಲಾಗುತ್ತದೆ. ಆದ್ದರಿಂದ ನೀವು ಜೈವಿಕ ವಿಘಟನೀಯ ಅಥವಾ ಬಯೋಡೀಗ್ರೇಡಬಲ್‌ ಶುಚಿಗೊಳಿಸುವ ವಸ್ತುಗಳನ್ನು ಬಳಸಿದಾಗ, ನೀವು ನೀರಿನ ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳುತ್ತೀರಿ.

4. ರಂಜಕವನ್ನು ಹೊಂದಿರುವ ಹುಲ್ಲುಹಾಸಿನ ರಸಗೊಬ್ಬರಗಳನ್ನು ಬಳಸದಿರಿ..!
ಟರ್ಫ್ ಹುಲ್ಲಿಗೆ ಅಗತ್ಯವಿಲ್ಲದ ರಂಜಕವನ್ನು ಹೆಚ್ಚಾಗಿ ಮಳೆಯಿಂದ ಹತ್ತಿರದ ಜಲಮೂಲಗಳಿಗೆ ಕೊಂಡೊಯ್ಯಲಾಗುತ್ತದೆ ಅಥವಾ ವರ್ಗಾವಣೆಯಾಗುತ್ತದೆ. ಈ ರಂಜಕದಿಂದ ಪರಿಸರದ ಮೇಲೆ ಗಂಭೀರ ಸಮಸ್ಯೆಗಳನ್ನು ಉಂಟುಮಾಡುತ್ತದೆ.
Youtube Video

ನೀರಿನ ಕೊಯ್ಲು ಮತ್ತು ಸಂಪನ್ಮೂಲಗಳ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ News18, ಹಾರ್ಪಿಕ್ ಜೊತೆಗೆ ಮಿಷನ್ ಪಾನಿ (Mission Paani) ಅಭಿಯಾನವನ್ನು ಪ್ರಾರಂಭಿಸಿದೆ. ಪ್ರತಿಯೊಬ್ಬರಿಗೂ ನೈಸರ್ಗಿಕ ಸಂಪನ್ಮೂಲವನ್ನು ಸಂರಕ್ಷಿಸುವ ಉದ್ದೇಶವನ್ನು ಈ ಉಪಕ್ರಮ ಹೊಂದಿದೆ.
Published by: Latha CG
First published: March 22, 2021, 2:24 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories