ಉತ್ತರ ಪ್ರದೇಶ: 15 ದಿನಗಳ ಹಿಂದೆ ನಾಪತ್ತೆಯಾಗಿದ್ದ ಬಾಲಕಿ ಕೊಳೆತ ಸ್ಥಿತಿಯಲ್ಲಿ ಪತ್ತೆ!

ಕಾನ್ಪುರದ ದೆಹತ್​ ಜಿಲ್ಲೆಯ 15 ವರ್ಷದ ಬಾಲಕಿ 15 ದಿನಗಳ ಹಿಂದೆ ಕಾಣೆ ಆಗಿದ್ದಳು. ಈ ಬಗ್ಗೆ ಆಕೆಯ ಪಾಲಕರು ದೂರು ಕೂಡ ನೀಡಿದ್ದರು. ಈಗ ಈ ಬಾಲಕಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ ಆಗಿದೆ. ಈ ಸಾವು ಸಾಕಷ್ಟು ಅನುಮಾನಗಳನ್ನು ಹುಟ್ಟು ಹಾಕಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಕಾನ್ಪುರ (ಅಕ್ಟೋಬರ್ 4):  ದೇಶಾದ್ಯಂತ ಸುದ್ದಿಯಾಗಿರುವ ಉತ್ತರ ಪ್ರದೇಶದ ಹಾಥರಸ್ ಅತ್ಯಾಚಾರ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆದೇಶಿಸಿದ್ದಾರೆ. ಶನಿವಾರ ನಡೆದ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳ ಸಭೆಯ ಬಳಿಕ ಸಿಎಂ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ಬೆನ್ನಲ್ಲೇ ಉತ್ತರ ಪ್ರದೇಶದಲ್ಲಿ ಮತ್ತೊಂದು ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. 15 ದಿನಗಳ ಹಿಂದೆ ಕಾಣೆಯಾಗಿದ್ದ ಬಾಲಕಿಯೊಬ್ಬಳು ಶವವಾಗಿ ಪತ್ತೆಯಾಗಿದ್ದಾಳೆ. ಈ ಕೊಲೆಗೆ ಕಾರಣವೇನು ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  ಕಾನ್ಪುರದ ದೆಹತ್​ ಜಿಲ್ಲೆಯ 15 ವರ್ಷದ ಬಾಲಕಿ 15 ದಿನಗಳ ಹಿಂದೆ ಕಾಣೆ ಆಗಿದ್ದಳು. ಈ ಬಗ್ಗೆ ಆಕೆಯ ಪಾಲಕರು ದೂರು ಕೂಡ ನೀಡಿದ್ದರು. ಈಗ ಈ ಬಾಲಕಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ ಆಗಿದೆ. ಈ ಸಾವು ಸಾಕಷ್ಟು ಅನುಮಾನಗಳನ್ನು ಹುಟ್ಟು ಹಾಕಿದೆ.

  ಬಾಲಕಿಯ ಗ್ರಾಮದಿಂದ 500 ಮೀಟರ್​ ದೂರದಲ್ಲಿ ಈ ಶವ ಸಕ್ಕಿದೆ. ಗ್ರಾಮಸ್ಥರು ಕಾಡಿಗೆ ತೆರಳಿದ್ದಾಗ ಪ್ರಾಣಿಗಳು ತಿಂದು ಬಿಟ್ಟ ಶವವೊಂದನ್ನು ಕಂಡು ಬೆಚ್ಚಿ ಬಿದ್ದಿದ್ದರು. ಇದು ಕೊಳೆತು ಹೋಗಿತ್ತು. ತಕ್ಷಣಕ್ಕೆ ಈ ಬಗ್ಗೆ ಪೊಲೀಸರಿಗೆ ಮಾಹಿತಿ ರವಾನೆ ಮಾಡಲಾಗಿತ್ತು. ಪೊಲೀಸರು ಬಂದು ಪರಿಶೀಲಿಸಿದಾಗ 15 ದಿನಗಳ ಹಿಂದೆ ಕಳೆದು ಹೋಗಿದ್ದ ಬಾಲಕಿಯ ಶವ ಇದು ಎಂಬುದು ತಿಳಿದು ಬಂದಿದೆ.

  ಇದನ್ನೂ ಓದಿ: ಭಾರತದಲ್ಲಿ ಶನಿವಾರ 75,829 ಕೊರೋನಾ ಪ್ರಕರಣಗಳು ಪತ್ತೆ

  ಈ ಕೊಲೆಗೆ ಆಸ್ತಿ ವಿಚಾರ ಕಾರಣ ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಬಾಲಕಿಯ ಅಂಕಲ್​ ಈಕೆಯನ್ನು ಅಪಹರಿಸಿ ಕೊಲೆ ಮಾಡಿದ್ದಾನೆ ಎನ್ನಲಾಗುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಈಗಾಗಲೇ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಯಾವ ರೀತಿಯಲ್ಲಿ ಈಕೆಯನ್ನು ಕೊಲೆ ಮಾಡಲಾಗಿದೆ ಎನ್ನುವ ವಿಚಾರ ಇನ್ನಷ್ಟೇ ತಿಳಿದು ಬರಬೇಕಿದೆ.
  Published by:Rajesh Duggumane
  First published: