ಲೈಂಗಿಕ ಕಿರುಕುಳ ಆರೋಪದ ಬೆನ್ನಲ್ಲೇ ದಕ್ಷಿಣ ಕೊರಿಯಾ ಅಧ್ಯಕ್ಷೀಯ ಅಭ್ಯರ್ಥಿಯ ಮೃತದೇಹ ಪತ್ತೆ

ಸಿಯೋಲ್​ನ ಮಾಜಿ ಉದ್ಯೋಗಿ ಬುಧವಾರ ಪಾರ್ಕ್​​ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಿದ್ದರು. ಅವರು ನನಗೆ ನಿರಂತರವಾಗಿ ಲೈಂಗಿಕ ಕಿರುಕುಳ ನೀಡಿದ್ದರು ಎಂದು ದೂರು ನೀಡಿದ ವ್ಯಕ್ತಿ ಹೇಳಿಕೊಂಡಿದ್ದರು. ಇದು ಭಾರೀ ಚರ್ಚೆಗೆ ಕಾರಣವಾಗಿತ್ತು.

news18-kannada
Updated:July 10, 2020, 8:00 AM IST
ಲೈಂಗಿಕ ಕಿರುಕುಳ ಆರೋಪದ ಬೆನ್ನಲ್ಲೇ ದಕ್ಷಿಣ ಕೊರಿಯಾ ಅಧ್ಯಕ್ಷೀಯ ಅಭ್ಯರ್ಥಿಯ ಮೃತದೇಹ ಪತ್ತೆ
ಸಿಯೋಲ್​ನ ಮಾಜಿ ಉದ್ಯೋಗಿ ಬುಧವಾರ ಪಾರ್ಕ್​​ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಿದ್ದರು. ಅವರು ನನಗೆ ನಿರಂತರವಾಗಿ ಲೈಂಗಿಕ ಕಿರುಕುಳ ನೀಡಿದ್ದರು ಎಂದು ದೂರು ನೀಡಿದ ವ್ಯಕ್ತಿ ಹೇಳಿಕೊಂಡಿದ್ದರು. ಇದು ಭಾರೀ ಚರ್ಚೆಗೆ ಕಾರಣವಾಗಿತ್ತು.
  • Share this:
ಸಿಯೊಲ್​ (ಜು.10): ದಕ್ಷಿಣ ಕೊರಿಯಾದ ಅಧ್ಯಕ್ಷೀಯ ಚುನಾವಣೆಗೆ ಸಮರ್ಥ ಅಭ್ಯರ್ಥಿ ಎಂದೇ ಗುರುತಿಸಲ್ಪಟ್ಟಿದ್ದ ಸಿಯೊಲ್​ನ​ ಮೇಯರ್​ ಪಾರ್ಕ್​ ವನ್​ ಸೂನ್​ ವಿರುದ್ಧ ಬುಧವಾರ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿತ್ತು. ಈ ಬೆನ್ನಲ್ಲೇ ಅವರು ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಹೀಗಾಗಿ ಇದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಸಿಯೊಲ್​ನ ಮಾಜಿ ಉದ್ಯೋಗಿ ಬುಧವಾರ ಪಾರ್ಕ್​​ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಿದ್ದರು. ಅವರು ನನಗೆ ನಿರಂತರವಾಗಿ ಲೈಂಗಿಕ ಕಿರುಕುಳ ನೀಡಿದ್ದರು ಎಂದು ದೂರು ನೀಡಿದ ವ್ಯಕ್ತಿ ಹೇಳಿಕೊಂಡಿದ್ದರು. ಇದು ಭಾರೀ ಚರ್ಚೆಗೆ ಕಾರಣವಾಗಿತ್ತು.

ಈ ಆರೋಪ ಕೇಳಿ ಬಂದ ಬೆನ್ನಲ್ಲೇ ಪಾರ್ಕ್​​ಗಾಗಿ ಎಲ್ಲ ಕಡೆಗಳಲ್ಲಿ ಹುಡುಕಾಟ ನಡೆದಿತ್ತು. ಅನೇಕರು ಪಾರ್ಕ್​ ತಲೆಮರಿಸಿಕೊಂಡಿದ್ದಾರೆ ಎಂದೇ ಭಾವಿಸಿದ್ದರು. ಆದರೆ, ಗುಡ್ಡವೊಂದರ ಮೇಲೆ ಪಾರ್ಕ್​​ ಶವ ಪತ್ತೆ ಆಗಿದೆ. ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದು ಇನ್ನೂ ಸಾಭೀತಾಗಿಲ್ಲ.

ಒಂದೊಮ್ಮೆ ಇದು ಆತ್ಮಹತ್ಯೆ ಎಂದಾರೆ, ದಕ್ಷಿಣ ಕೊರಿಯಾದ ಇಷ್ಟು ವರ್ಚಸ್ಸು ಹೊಂದಿರುವ ರಾಜಕಾರಣಿಯೋರ್ವ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಇತ್ತೀಚೆಗೆ ಇದೇ ಮೊದಲು ಎಂದಾಗುತ್ತದೆ. 2009ರಲ್ಲಿ ದಕ್ಷಿಣ ಕೊರಿಯಾದ ಮಾಜಿ ಅಧ್ಯಕ್ಷ ರೋ ಮು ಹ್ಯುನ್​ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿ ಬಂದಿತ್ತು. ಹೀಗಾಗಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು.

Published by: Rajesh Duggumane
First published: July 10, 2020, 8:00 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading