ನಾಪತ್ತೆಯಾದ ಇಂಡೊನೇಷಿಯಾ ಮಹಿಳೆ ಪತ್ತೆಯಾಗಿದ್ದು ಹೆಬ್ಬಾವಿನ ಹೊಟ್ಟೆಯಲ್ಲಿ

news18
Updated:June 16, 2018, 4:37 PM IST
ನಾಪತ್ತೆಯಾದ ಇಂಡೊನೇಷಿಯಾ ಮಹಿಳೆ ಪತ್ತೆಯಾಗಿದ್ದು ಹೆಬ್ಬಾವಿನ ಹೊಟ್ಟೆಯಲ್ಲಿ
A previously captured 13-foot Burmese python is held by Capt. Shawn Meiman for the press to view before U.S. Senator Bill Nelson (D-FL) took part in a state-sponsored snake hunt, in the Everglades, Florida January 17, 2013. Python Challenge 2013 is a month-long event sponsored by the Florida Fish and Wildlife Conservation Commission offering prizes of $1,500 for the most pythons captured and $1,000 for the longest python. REUTERS/Joe Skipper (UNITED STATES - Tags: SOCIETY ENVIRONMENT ANIMALS)
news18
Updated: June 16, 2018, 4:37 PM IST
ನ್ಯೂಸ್​ 18 ಕನ್ನಡ

ಇಂಡೊನೇಷಿಯಾದಲ್ಲಿ ನಾಪತ್ತೆಯಾದ ಮಹಿಳೆಯೊಬ್ಬಳು ಹೆಬ್ಬಾವಿನ ಹೊಟ್ಟೆಯಲ್ಲಿ ಪತ್ತೆಯಾಗಿದ್ದಾಳೆ.

54 ವರ್ಷದ ವಾ ಟಿಬಾ ಎಂಬ ಮಹಿಳೆ ತರಕಾರಿ ತೋಟಕ್ಕೆ ಹೋದಾಗ ಹಾವು ಆಕೆಯನ್ನು ನುಂಗಿದೆ. 23 ಅಡಿ ಉದ್ದದ ಹಾವಿನ ಹೊಟ್ಟೆ ಹುಬ್ಬಿಕೊಂಡಿರುವುದನ್ನು ಗಮನಿಸಿದ ಗ್ರಾಮಸ್ಥರಿಗೆ ಆಕೆಯನ್ನು ನುಂಗಿದೆ ಎಂಬ ಬಗ್ಗೆ ಅನುಮಾನ ಮೂಡಿದೆ.

ಈ ಹಿನ್ನಲೆಯಲ್ಲಿ ಹಾವನ್ನು ಕೊಂದು ತೋಟದಿಂದ ಹೊರಗೆಳೆದಿದ್ದಾರೆ. ಬಳಿಕ ಅದರ ಹೊಟ್ಟೆ ಸೀಳಿ ನೋಡಿದಾಗ ಆಕೆ ಹಾವಿನದ ಹೊಟ್ಟೆಯಲ್ಲಿರುವುದು ಪತ್ತೆಯಾಗಿದೆ.

ಗುರುವಾರ ರಾತ್ರಿ ತೋಟಕ್ಕೆ ಹೋದ ಮಹಿಳೆ ನಾಪತ್ತೆಯಾಗಿದ್ದು, ಆಕೆಯ ಕುಟುಂಬಸ್ಥರು ಆಕೆಯ ಹುಡುಕಾಟ ನಡೆಸಿದ್ದರು. ಆಕೆಯನ್ನು ತಲೆಯಿಂದ ಆಕೆಯನ್ನು ತಿಂದ ಹಾವು ಆ ಪ್ರದೇಶದಿಂದ ಮೂವತ್ತು ಮೀಟರ್​ ದೂರದಲ್ಲಿ ಹೊಟ್ಟೆ ತುಂಬಿ ಆಲಸಿಯಾಗಿ ಬಿದ್ದುಕೊಂಡಿತ್ತು. ಆಕೆಯ ಮನೆಯ ಇರುವುದು ಹಾವಿಗೆ ಹೆಸರುವಾಸಿಯಾಗಿರುವ ಪ್ರದೇಶದಲ್ಲಿ ಎಂದು ತಿಳಿದುಬಂದಿದೆ.

ಇಂಡೊನೇಷಿಯಾ, ಫಿಲಿಫೈನ್ಸ್​ನಲ್ಲಿ  ಆರು ಅಡಿ ಉದ್ದದ ಹಾವುಗಳು ಕಂಡು ಬರುವುದು ಸಾಮಾನ್ಯ. ಇವುಗಳು ಸಾಮಾನ್ಯವಾಗಿ ಸಣ್ಣ ಪ್ರಾಣಿಗಳನ್ನು ತಿನ್ನುತ್ತವೆ. ಅಪರೂಪಕ್ಕೆ ಒಮ್ಮೆ ಮನುಷ್ಯರನ್ನು ತಿನ್ನುತ್ತವೆ, ಕಳೆದ ಮಾರ್ಚ್​ನಲ್ಲಿಯೂ ಸುಲವೆಸಿ ದ್ವೀಪದಲ್ಲಿ ರೈತನನ್ನು ಹೆಬ್ಬಾವು ನುಂಗಿತ್ತು.
First published:June 16, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...