ಫ್ರೆಂಚ್ ದೇಶದ ಸಬ್ಮೆರಿನ್(ಜಲಾಂತರ್ಗಾಮಿ) 50 ವರ್ಷಗಳ ಹಿಂದೆ ಕಣ್ಮರೆಯಾಗಿತ್ತು. 52 ಸಿಬ್ಬಂದಿಗಳಿದ್ದ ಈ ಸಬ್ಮೆರಿನ್ಗಾಗಿ ಫ್ರೆಂಚ್ ಸರ್ಕಾರ ಹುಡುಕಾಟ ನಡೆಸುತ್ತಲೇ ಇತ್ತು. ಈಗ ಆ ಸಬ್ಮೆರಿನ್ ಟೌಲಾನ್ ಬಂದರಿನ ಮೆಡಿಟೇರಿಯನ್ ಸಮುದ್ರ ತೀರದಲ್ಲಿ ಪತ್ತೆಯಾಗಿದೆ.
'ಈಗ ನಿರಾಳವಾಗಿದೆ. ಇದೊಂದು ಗೆಲುವು. ತಂತ್ರಜ್ಞಾನದ ಸಾಧನೆಯಾಗಿದೆ' ಎಂದು ಫ್ರೆಂಚ್ ರಕ್ಷಣಾ ಸಚಿವ ಫ್ಲೋರೆನ್ಸ್ ಪಾರ್ಲೆ ಸಂತಸ ವ್ಯಕ್ತಪಡಿಸಿದ್ದಾರೆ. "ಈ ಕ್ಷಣಕ್ಕಾಗಿ ಸಿಬ್ಬಂದಿಗಳ ಕುಟುಂಬಸ್ಥರು ತುಂಬಾ ವರ್ಷಗಳಿಂದ ಕಾಯುತ್ತಿದ್ದರು," ಎಂದು ಟ್ವೀಟ್ ಮಾಡಿದ್ದಾರೆ.
52 ಸಿಬ್ಬಂದಿಗಳನ್ನೊಳಗೊಂಡ 'ಲಾ ಮಿನರ್ವೆ' ಹೆಸರಿನ ಸಬ್ಮೆರಿನ್ 1968ರ ಜನವರಿಯಲ್ಲಿ ಕಣ್ಮರೆಯಾಗಿತ್ತು. ಫ್ರೆಂಚ್ ಸರ್ಕಾರ ಇಲ್ಲಿಯವರೆಗೆ ಸಾಕಷ್ಟು ಹುಡುಕಾಟ ನಡೆಸಿ ವಿಫಲವಾಗಿತ್ತು.
ಸಬ್ಮೆರಿನ್ನಲ್ಲಿದ್ದ 52 ಸಿಬ್ಬಂದಿಗಳ ಕುಟುಂಬಸ್ಥರಿಗೆ ವಿಷಯ ತಿಳಿಸಲಾಯಿತು. ಪ್ರತಿದಿನ ಸಿಬ್ಬಂದಿಗಳ ಸಂಬಂಧಿಕರು ತಮ್ಮವರನ್ನು ಹುಡುಕಿಕೊಡುವಂತೆ ಸರ್ಕಾರಕ್ಕೆ ಒತ್ತಡ ಹಾಕುತ್ತಿದ್ದರು. ಕುಟುಂಬಸ್ಥರ ಒತ್ತಡಕ್ಕೆ ಮಣಿದ ರಕ್ಷಣಾ ಇಲಾಖೆ ಈ ವರ್ಷದಿಂದ ಹೊಸ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು.
The wreck of the 🇫🇷 submarine La Minerve that disappeared in 1968 has been found off the Var coast in the Mediterranean thanks to the associated skills of the French Navy, Ifremer, and the 🇺🇸 ship Seabed Constructor.
Our thoughts go out to the families of the 52 missing sailors pic.twitter.com/eXPEJelT0x
— French Embassy U.S. (@franceintheus) July 22, 2019
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ