ಕಳೆದ ವಾರ ಛತ್ತೀಸಗಢದ ಸುಕ್ಮಾ ಹಾಗೂ ಬಿಜಾಪುರ ಜಿಲ್ಲೆಯ ಗಡಿಯಲ್ಲಿ ಭದ್ರತಾ ಪಡೆ ಹಾಗೂ ಮಾವೋವಾದಿಗಳ ನಡುವೆ ಮಾರಕ ಎನ್ಕೌಂಟರ್ ನಡೆದಿತ್ತು. ಈ ದಾಳಿಯ ಬಳಿಕ ಇಬ್ಬರು ಸ್ಥಳೀಯ ಪತ್ರಕರ್ತರು ಸೋಮವಾರ ಮಾತನಾಡಿ, ಗೌಪ್ಯ ನಂಬರ್ನಿಂದ ತಮಗೆ ಕರೆ ಬಂದಿದ್ದು, ಅವರು ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ನ ಕಮಾಂಡೊ ಒಬ್ಬರನ್ನು ಮಾವೋವಾದಿಗಳು ಸೆರೆಯಾಳಾಗಿ ಇರಿಸಿಕೊಂಡಿರುವುದಾಗಿ ಹೇಳಿರುವುದಾಗಿ ತಿಳಿಸಿದ್ದಾರೆ.
ಕಮಾಂಡೋ ಸುರಕ್ಷಿತವಾಗಿದ್ದಾರೆ. ಮತ್ತು ಅವರಿಗೆ ಯಾವುದೇ ತರಹದ ತೊಂದರೆಯಾಗಿಲ್ಲ ಎಂದು ಕಾಲರ್ ಹೇಳಿದ್ದಾರೆಂದು ಪತ್ರಕರ್ತರು ತಿಳಿಸಿದ್ದಾರೆ. ತರೇಮ್ ಭಾಗದ ಕಾಡಿನಲ್ಲಿ ದಾಳಿ ವೇಳೆ ಕಮಾಂಡೋ ತಪ್ಪಿಸಿಕೊಂಡ ಎರಡು ದಿನಗಳ ಬಳಿಕ ಈ ಬೆಳವಣಿಗೆ ನಡೆದಿದೆ.
ಶನಿವಾರ, ಕುಖ್ಯಾತ ಮಾವೋವಾದಿ ತಂಡದ ಕಮಾಂಡರ್ ಮಾದ್ವಿ ಹಿಡ್ಮಾ ನೇತೃತ್ವ ವಹಿಸಿರಬಹುದು ಎಂದು ಶಂಕಿಸಲಾಗಿರುವ 600 ಸದಸ್ಯರ ಮಾವೋವಾದಿಗಳು ಬಲಿಷ್ಠ ತಂಡ ಭದ್ರತಾ ಪಡೆಯ ಮೇಲೆ ದಾಳಿ ನಡೆಸಿ, 22 ಭದ್ರತಾ ಸಿಬ್ಬಂದಿಯನ್ನು ಭೀಕರವಾಗಿ ಹತ್ಯೆ ಮಾಡಿದ್ದರು. ಎಡಪಂಥೀಯ ಉಗ್ರವಾದಿಗಳು ನಡೆಸಿದ ಅತ್ಯಂತ ಭೀಕರ ದಾಳಿ ಇದಾಗಿದೆ.
ಕಾಲರ್ ತನ್ನ ಹೆಸರು ಮತ್ತು ಗುರುತನ್ನು ಹೇಳಲಿಲ್ಲ. ಕಮಾಂಡೋನನ್ನು ಎರಡು-ಮೂರು ದಿನಗಳಲ್ಲಿ ಬಿಡುಗಡೆ ಮಾಡುವುದಾಗಿ ಮಾವೋವಾದಿಗಳು ಹೇಳಿದ್ದಾಗಿ ಕಾಲರ್ ತಿಳಿಸಿದ್ದಾರೆ ಎಂದು ಕರೆ ಸ್ವೀಕರಿಸಿದ ಇಬ್ಬರು ಪತ್ರಕರ್ತರಲ್ಲಿ ಒಬ್ಬರಾದ ಗಣೇಶ್ ಮಿಶ್ರಾ ಹೇಳಿದ್ದಾರೆ. ಇವರು ಹಾಲಿ ಬಿಜಾಪುರ ಪ್ರೆಸ್ ಕ್ಲಬ್ನ ಅಧ್ಯಕ್ಷರಾಗಿದ್ದಾರೆ.
ಸುಕ್ಮಾದಲ್ಲಿ ನವಭಾರತ ಮಾಧ್ಯಮ ಸಂಸ್ಥೆಯಲ್ಲಿ ಪತ್ರಕರ್ತರಾಗಿರುವ ರಾಜಾ ಸಿಂಗ್ ರಾಥೋರ್ ಅವರು ಸಹ ಕರೆ ಸ್ವೀಕರಿಸಿರುವುದಾಗಿ ಹೇಳಿದ್ದಾರೆ. ಆದರೆ, ತಮಗೆ ಕರೆ ಮಾಡಿದವರು ತಮ್ಮನ್ನು ಹಿಡ್ಮಾ ಎಂದು ಗುರುತಿಸಿಕೊಂಡಿರುವುದಾಗಿ ತಿಳಿಸಿದ್ದಾರೆ. ತಪ್ಪಿಸಿಕೊಂಡಿರುವ ಸೈನಿಕ ತಮ್ಮ ವಶದಲ್ಲಿದ್ದಾರೆ ಇದ್ದಾರೆ. ಮತ್ತು ಅವರು ಸುರಕ್ಷಿತವಾಗಿದ್ದಾರೆ. ಸೈನಿಕನ ಮಾಹಿತಿ ಹಾಗೂ ಫೋಟೋಗಳನ್ನು ಶೀಘ್ರದಲ್ಲಿ ಹಂಚಿಕೊಳ್ಳಲಾಗುವುದು ಎಂದು ತಿಳಿಸಿದ್ದಾಗಿ ರಾಥೋರ್ ಹೇಳಿದ್ದಾರೆ.
ಇದನ್ನು ಓದಿ: Naxal Encounter - ಛತ್ತೀಸ್ಗಡ ನಕ್ಸಲ್ ದಾಳಿ: ಭದ್ರತಾ ಪಡೆಯ 22 ಮಂದಿ ಬಲಿ – ಒಬ್ಬ ಯೋಧ ಇನ್ನೂ ನಾಪತ್ತೆ
ಛತ್ತೀಸಗಢದ ಮಾವೋಪೀಡಿತ ಬಸ್ತಾರ್ ಪ್ರದೇಶದ ಬಿಜಾಪುರ್ ಅರಣ್ಯ ಪ್ರದೇಶದಲ್ಲಿ ಕಳೆದ ವಾರ ಭದ್ರತಾ ಪಡೆ ಮತ್ತು ನಕ್ಸಲರ ಮಧ್ಯೆ ನಡೆದ ಗುಂಡಿನ ಕಾಳಗದಲ್ಲಿ ಸಾಕಷ್ಟು ಸಾವು ನೋವು ಸಂಭವಿಸಿದೆ. ಭದ್ರತಾ ಪಡೆಗಳಿಗೆ ಸೇರಿದ 22 ಮಂದಿ ಬಲಿಯಾದರೆ 12 ಮಂದಿ ಗಾಯಗೊಂಡಿದ್ಧಾರೆ. ಹಲವು ನಕ್ಸಲರು ಈ ಎನ್ಕೌಂಟರ್ನಲ್ಲಿ ಮೃತಪಟ್ಟಿದ್ದರು. ಇನ್ನೂ ಕೆಲ ಯೋಧರು ನಾಪತ್ತೆಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ