Miss Universe: ನಿಮಗೆ ಮದುವೆಯಾಗಿದೆಯೇ? ಮಕ್ಕಳಾಗಿದ್ದಾರಾ? ಆದ್ರೂ ವಿಶ್ವ ಸುಂದರಿಯಾಗಬಹುದು!

ಈ ಬದಲಾವಣೆಯನ್ನು ನಾನು ಪ್ರಾಮಾಣಿಕವಾಗಿ ಪ್ರೀತಿಸುತ್ತೇನೆ ಎಂದು ಮಿಸ್ ಯೂನಿವರ್ಸ್ 2020 ವಿಜೇತ ಮೆಕ್ಸಿಕೋದ ಆಂಡ್ರಿಯಾ ಮೆಜಾ ತಿಳಿಸಿದ್ದಾರೆ.

ವಿಶ್ವ ಸುಂದರಿ ಹರ್ನಾಜ್ ಸಂಧು

ವಿಶ್ವ ಸುಂದರಿ ಹರ್ನಾಜ್ ಸಂಧು

 • Share this:
  ಇಡೀ ಜಗತ್ತೇ ಕಣ್ಣಿಡುವ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ವಿಶ್ವ ಸುಂದರಿ (Miss Universe) ಸೌಂದರ್ಯ ಸ್ಪರ್ಧೆಯಲ್ಲಿ ವಿವಾಹಿತ ಮಹಿಳೆಯರಿಗೆ (Married Women) ಮತ್ತು ತಾಯಂದಿರಿಗೂ (Mothers) ಸ್ಪರ್ಧಿಸಲು ಅವಕಾಶ ನೀಡಲು ನಿರ್ಧರಿಸಲಾಗಿದೆ. ಇದು ಸ್ಪಷ್ಟವಾಗಿ ಐತಿಹಾಸಿಕ ನಿರ್ಧಾರವಾಗಿದ್ದು ವಿಶ್ವ ಸುಂದರಿ ಸ್ಪರ್ಧಿಗಳ ವ್ಯಾಪ್ತಿ ಇನ್ನಷ್ಟು ಹೆಚ್ಚಲಿದೆ.  ವೈವಾಹಿಕ ಸ್ಥಿತಿ ಮತ್ತು ಪೋಷಕರಾಗಿರುವುದು ಇನ್ನು ಮುಂದೆ 2023 ರಿಂದ (Miss Universe 2023) ಪ್ರಾರಂಭವಾಗುವ ಸ್ಪರ್ಧೆಯ ಸ್ಪರ್ಧಿಗಳಿಗೆ ಅರ್ಹತೆಗೆ ಮಾನದಂಡವಾಗಿರುವುದಿಲ್ಲ. ಈ ಮೂಲಕ ವಿಶ್ವ ಸುಂದರಿ ಸ್ಪರ್ಧೆಗೆ ಭಾಗವಹಿಸುವ ಹೊಸ ಅವಕಾಶವನ್ನು ಮದುವೆಯಾದವರಿಗೆ ಮತ್ತು ಮಕ್ಕಳಾದ ಮಹಿಳೆಯರಿಗೂ ಒದಗಿಸಲು ನಿರ್ಧರಿಸಲಾಗಿದೆ. 

  ಬದಲಾವಣೆಯನ್ನು ಸ್ವಾಗತಿಸಿದ ಮಿಸ್ ಯೂನಿವರ್ಸ್ 2020
  ಮಿಸ್ ಯೂನಿವರ್ಸ್ 2020 ವಿಜೇತ ಮೆಕ್ಸಿಕೋದ ಆಂಡ್ರಿಯಾ ಮೆಜಾ ನಿಯಮ ಬದಲಾವಣೆಯನ್ನು ಶ್ಲಾಘಿಸಿದ್ದಾರೆ. ಈಗಾಗಲೇ ಇದ್ದ ನಿಯಮಗಳನ್ನು ಅವರು ಪ್ರಾಯೋಗಿಕವಾಗಿ ವಾಸ್ತವಿಕವಲ್ಲ ನಿಯಮಗಳು ಎಂದು ಕರೆದಿದ್ದು ವಿಶ್ವ ಸುಂದರಿ ಸ್ಪರ್ಧೆಗೆ ಮದುವೆಯಾದವರು ಮತ್ತು ಮಕ್ಕಳಾ ದವರಿಗೂ ಅನುಮತಿ ನೀಡಿರುವುದನ್ನು ಸ್ವಾಗತಿಸಿದ್ದಾರೆ.

  ಈ ಬದಲಾವಣೆಯನ್ನು ನಾನು ಪ್ರಾಮಾಣಿಕವಾಗಿ ಪ್ರೀತಿಸುತ್ತೇನೆ ಎಂದು ಮಿಸ್ ಯೂನಿವರ್ಸ್ 2020 ವಿಜೇತ ಮೆಕ್ಸಿಕೋದ ಆಂಡ್ರಿಯಾ ಮೆಜಾ ತಿಳಿಸಿದ್ದಾರೆ.

  ಇದನ್ನೂ ಓದಿ: Milari Chhangte Assaulted Doctor: ಡಾಕ್ಟರ್​ಗೆ ಕಪಾಳಮೋಕ್ಷ ಮಾಡಿದ ಸಿಎಂ ಮಗಳು; ಮುಖ್ಯಮಂತ್ರಿ ಕ್ಷಮೆಯಾಚನೆ

  ಹರ್ನಾಜ್ ಸಂಧು, ಸುಶ್ಮಿತಾ ಸೇನ್ ಮತ್ತು ಲಾರಾ ದತ್ತಾ  ಸಾಧನೆ
  ವಿಶ್ವ ಸುಂದರಿ ಸ್ಪರ್ಧೆಯು 160 ಕ್ಕೂ ಹೆಚ್ಚು ಪ್ರದೇಶಗಳು ಮತ್ತು ಪ್ರಪಂಚದಾದ್ಯಂತದ ದೇಶಗಳಲ್ಲಿ ಪ್ರಸಾರವಾಗುತ್ತದೆ.  ಭಾರತದ ಹರ್ನಾಜ್ ಸಂಧು 2021 ರ ವಿಶ್ವ ಸುಂದರಿ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ. ಪಂಜಾಬ್‌ನ ಹರ್ನಾಜ್ ಸಂಧು ಅವರು ಇಸ್ರೇಲ್‌ನ ಐಲಾಟ್‌ನಲ್ಲಿ ನಡೆದ 70 ನೇ ವಿಶ್ವ ಸುಂದರಿ 2021 ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.

  ಹರ್ನಾಜ್ ಸಂಧು  ಅವರಿಗಿಂತ ಮೊದಲು ಕೇವಲ ಇಬ್ಬರು ಭಾರತೀಯರು ಮಿಸ್ ಯೂನಿವರ್ಸ್ ಪ್ರಶಸ್ತಿಯನ್ನು ಗೆದ್ದಿದ್ದರು.  1994 ರಲ್ಲಿ ನಟಿ  ಸುಶ್ಮಿತಾ ಸೇನ್ ಮತ್ತು 2000 ರಲ್ಲಿ ಲಾರಾ ದತ್ತಾ ಈ ಪ್ರಶಸ್ತಿಯಲ್ಲಿ ತಮ್ಮ ಮುಡಿಗೇರಿಸಿಕೊಂಡಿದ್ದರು.

  ಮಿಜೋರಾಂ ಮಗಳಿಂದ ವೈದ್ಯರ ಮೇಲೆ ಹಲ್ಲೆ
  ವೈದ್ಯರ ಮೇಲೆ ಹಲ್ಲೆ ನಡೆಸುವ ಘಟನೆಗಳು ದೇಶದಲ್ಲಿ ಆಗಾಗ ಭಾರೀ ಸಂಚಲನ ಮೂಡಿಸುತ್ತಲೇ ಇರುತ್ತದೆ. ಇದೀಗ ಮಿಜೋರಾಂ ಮುಖ್ಯಮಂತ್ರಿ ಝೋರಂತಂಗ ಅವರ (Mizoram Chief Minister Zoramthanga) ಮಗಳು ಕ್ಲಿನಿಕ್ ಒಂದರಲ್ಲಿ ವೈದ್ಯರ ಮೇಲೆ ಹಲ್ಲೆ ನಡೆಸಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ (Milari Chhangte Assaulted Doctor) ಭಾರೀ ವೈರಲ್ ಆಗುತ್ತಿದೆ.

  ಕ್ಷಮೆ ಕೋರಿದ ಮಿಜೋರಾಂ ಮುಖ್ಯಮಂತ್ರಿ
  ಇದರಿಂದ ಭಾರೀ ಮುಜುಗರ ಅನುಭವಿಸಿರುವ ಮಿಜೋರಾಂ ಮುಖ್ಯಮಂತ್ರಿ ಝೋರಂತಂಗ ತಮ್ಮ ಮಗಳು ಮಿಲಾರಿ ಚಾಂಗ್ಟೆ (Milari Chhangte) ಪರವಾಗಿ ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದ್ದಾರೆ. ಈ ಕೃತ್ಯವನ್ನು ತಾನು ಯಾವುದೇ ರೀತಿಯಲ್ಲಿ ಸಮರ್ಥಿಸುವುದಿಲ್ಲ ಎಂದು ಮಿಜೋರಾಂ ಮುಖ್ಯಮಂತ್ರಿ ಝೋರಂತಂಗ ಹೇಳಿದ್ದಾರೆ. ಈ ಮೂಲಕ ತಮ್ಮ ಮಗಳ ಪರವಾಗಿ ಕ್ಷಮೆ ಯಾಚಿಸಿದ್ದಾರೆ.

  ಇದನ್ನೂ ಓದಿ: Viral Video: ಅವಾಚ್ಯ ಪದ, ಅಸಭ್ಯ ಸನ್ನೆಗಳಿಂದ ಭದ್ರತಾ ಸಿಬ್ಬಂದಿಯನ್ನು ನಿಂದಿಸಿದ ಮಹಿಳೆ; ವಿಡಿಯೋ ಫುಲ್ ವೈರಲ್

  ವೈದ್ಯರ ಬಗ್ಗೆ ನಮ್ಮ ಮಗಳ ವರ್ತನೆಯನ್ನು ಸಮರ್ಥಿಸಲು ಯಾವುದೇ ಕಾರಣವೂ ಇಲ್ಲ. ನಾವು ವೈದ್ಯರು ಮತ್ತು ಸಾರ್ವಜನಿಕರ ಬಳಿ ಕ್ಷಮೆ ಕೇಳುತ್ತೇವೆ ಎಂದು ಮಿಜೋರಾಂ ಮುಖ್ಯಮಂತ್ರಿ ಝೋರಂತಂಗ Instagram ನಲ್ಲಿ ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದ್ದಾರೆ.
  Published by:guruganesh bhat
  First published: