Miss Universe: 21 ವರ್ಷಗಳ ಬಳಿಕ ಭಾರತಕ್ಕೆ ಒಲಿದ ಭುವನ ಸುಂದರಿ ಪಟ್ಟ, ಮಿಸ್ ಯೂನಿವರ್ಸ್ ಆಗಿ ಹೊರ ಹೊಮ್ಮಿದ ಹರ್ನಾಜ್ ಸಂಧು

Miss Universe 2021: ಇಸ್ರೇಲ್ ನ ದಕ್ಷಿಣ ಈಲಿಯಟ್ ನಲ್ಲಿ ನಡೆದ 70ನೇ ಆವೃತ್ತಿಯ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಅಂತಿಮ ಹಂತಕ್ಕೆ ತಲುಪಿದ್ದ ಹರ್ನಾಜ್ ಸಂಧು, ತಮ್ಮ ತಮ್ಮ ಪ್ರತಿಸ್ಪರ್ಧಿಗಳಾಗಿದ್ದ ಪರಗ್ವೆ ಮತ್ತು ದಕ್ಷಿಣ ಆಫ್ರಿಕಾದ ಸುಂದರಿಯರನ್ನು ಹಿಂದಿಕ್ಕಿ 2021ರ ಮಿಸ್ ಯೂನಿವರ್ಸ್ ಕಿರೀಟವನ್ನ ತಮ್ಮದಾಗಿಸಿಕೊಂಡ್ರು

ಹರ್ನಾಜ್ ಸಂಧು

ಹರ್ನಾಜ್ ಸಂಧು

 • Share this:
  ಭಾರತದ(India) ಮಹಿಳೆಯರ(Women) ವಿಶ್ವದ(World) ಯಾವ ರಾಷ್ಟ್ರದ ಮಹಿಳೆಯರಿಗೂ ಕಡಿಮೆ ಇಲ್ಲ ಎನ್ನುವುದು ಮತ್ತೆ ಸಾಬೀತಾಗಿದೆ.. ಸುಶ್ಮಿತಾ ಸೇನ್(Sushmita sen), ಲಾರಾ ದತ್ತಾ (Lara data) ಮಿಸ್ ಯೂನಿವರ್ಸ್(Miss Universe) ಪಟ್ಟ ಅಲಂಕರಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಗೌರವ ಹೆಚ್ಚಿಸಿದ ಹಲವು ವರ್ಷಗಳ ಬಳಿಕ ಮತ್ತೆ ಭಾರತಕ್ಕೆ ಮಿಸ್ ಯೂನಿವರ್ಸ್ ಕಿರೀಟ ಒಲಿದು ಬಂದಿದೆ. ಹೌದು 70ನೇ ಆವೃತ್ತಿಯ 2021ರ ಮಿಸ್ ಯೂನಿವರ್ಸ್ ಆಗಿ ಭಾರತೀಯ ಚಲುವೆ ಹರ್ನಾಜ್ ಸಂಧು ಹೊರ ಹೊಮ್ಮಿದ್ದಾರೆ.. ಈ ಮೂಲಕ ಭುವನ ಸುಂದರಿ ಪಟ್ಟ ಅಲಂಕರಿಸಿದ ಮೂರನೇ ಭಾರತೀಯ ಮಹಿಳೆ ಎನ್ನುವ ಖ್ಯಾತಿಗೆ ಹರ್ನಾಜ್ ಸಂಧು ಪಾತ್ರರಾಗಿದ್ದಾರೆ.

  ಇಸ್ರೇಲ್ ನಲ್ಲಿ ಭಾರತೀಯ ಚೆಲುವೆಗೆ ಒಲಿದ ಭುವನ ಸುಂದರಿ ಪಟ್ಟ

  ಇಸ್ರೇಲ್ ನ ದಕ್ಷಿಣ ಈಲಿಯಟ್ ನಲ್ಲಿ ನಡೆದ 70ನೇ ಆವೃತ್ತಿಯ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಅಂತಿಮ ಹಂತಕ್ಕೆ ತಲುಪಿದ್ದ ಹರ್ನಾಜ್ ಸಂಧು, ತಮ್ಮ ತಮ್ಮ ಪ್ರತಿಸ್ಪರ್ಧಿಗಳಾಗಿದ್ದ ಪರಗ್ವೆ ಮತ್ತು ದಕ್ಷಿಣ ಆಫ್ರಿಕಾದ ಸುಂದರಿಯರನ್ನು ಹಿಂದಿಕ್ಕಿ 2021ರ ಮಿಸ್ ಯೂನಿವರ್ಸ್ ಕಿರೀಟವನ್ನ ತಮ್ಮದಾಗಿಸಿಕೊಂಡ್ರು.. ಇನ್ನೂ 2020ರ ಮಾಜಿ ಭುವನ ಸುಂದರಿ, ಮೆಕ್ಸಿಕೋದ ಆಂಡ್ರಿಯಾ ಮೆಜಾ ಅವರು ಹಾಲಿ ವಿಜೇತೆ ಹರ್ನಾಜ್ ಕೌರ್ ಅವರಿಗೆ ಕಿರೀಟ ತೊಡಿಸಿ ಸಂಭ್ರಮಿಸಿದ್ರು. ಇನ್ನೂ ಮಿಸ್ ಯೂನಿವರ್ಸ್ ಸ್ಥಾನ ಭಾರತದ ಪಾಲಾದ್ರೆ ಪೆರುಗ್ವೆಯ ನಾಡಿಯ ಫೆರೇರಾ ಮೊದಲ ರನ್ನರ್ ಆಪ್ ಆದ್ರೆ, ದಕ್ಷಿಣ ಆಫ್ರಿಕಾದ ಲಲೆಲಾ ಮಸ್ವಾನೆ ಸೆಕೆಂಡ್ ರನ್ನರ್ ಆಪ್ ಆಗಿ ಹೊರ ಹೊಮ್ಮಿದ್ದಾರೆ.
  ಇದನ್ನೂ ಓದಿ: ಬ್ಯೂಟಿಕ್ವೀನ್​ ನೀವಾಗಬೇಕಾ? ಮಿಸ್​ ಲಿವಾ 2021 ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ!

  ಯಾರು ಈ ಭುವನ ಸುಂದರಿ ಹರ್ನಾಜ್ ಸಂಧು..?

  ಭಾರತದ ರೂಪದರ್ಶಿ ಹಾಗೂ ನಟಿಯಾಗಿರುವ ಹರ್ನಾಜ್ ಸಂಧು ಪಂಜಾಬಿ ಮೂಲದವರು ಕೇವಲ 21ನೇ ವಯಸ್ಸಿಗೆ ಮಿಸ್ ಯೂನಿವರ್ಸ್ ಆಗಿ ಆಯ್ಕೆಯಾಗುವ ಮೂಲಕ ಇಡೀ ವಿಶ್ವದ ಗಮನ ಸೆಳೆದಿದ್ದಾರೆ. 2021ರ ಅಕ್ಟೋಬರ್‌ನಲ್ಲಿ ನಡೆದ ಮಿಸ್ ಯೂನಿವರ್ಸ್ ಇಂಡಿಯಾ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆಯುವ ಮೂಲಕ ಮಿಸ್ ಯೂನಿವರ್ಸ್ ಸ್ಪರ್ಧೆಗೆ ಆಯ್ಕೆಯಾಗಿದ್ದರು. 21 ವರ್ಷದ ಹರ್ನಾಜ್, ಪ್ರಸ್ತುತ ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಓದುತ್ತಿದ್ದಾರೆ. ಟೈಮ್ಸ್ ಫ್ರೆಶ್ ಫೇಸ್ ಸ್ಪರ್ಧೆಯಲ್ಲಿ 2017ರಲ್ಲಿ ಭಾಗವಹಿಸುವುದರೊಂದಿಗೆ ಹರ್ನಾಜ್ ತಮ್ಮ
  ಪ್ರಯಾಣ ಆರಂಭಿಸಿದ್ದರು. ಫೆಮಿನಾ ಮಿಸ್ ಇಂಡಿಯಾ ಪಂಜಾಬ್ 2019 ಸೇರಿದಂತೆ ಹಲವು ಸೌಂದರ್ಯ ಸ್ಪರ್ಧೆಗಳಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಫೆಮಿನಾ ಮಿಸ್ ಇಂಡಿಯಾ 2019ರಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದರು. ಜೊತೆಗೆ ಕೆಲವು ಪಂಜಾಬಿ ಸಿನಿಮಾಗಳಲ್ಲಿ ನಟಿಯಾಗಿ ಹರ್ನಾಜ್ ಸಂಧು ಅಭಿನಯಿಸಿದ್ದಾರೆ.

  ಹರ್ನಾಜ್ ಗೆ ಪ್ರಶಸ್ತಿ ತಂದು ಕೊಟ್ಟ ಪ್ರಶ್ನೆ

  ಹರ್ನಾಜ್​ ಸಂಧು ಅವರಿಗೆ ಸ್ಪರ್ಧೆಯಲ್ಲಿ ಮೊದಲ ಮೂರು ಸುತ್ತಿನ ಭಾಗವಾಗಿ ಇಂದು ಯುವತಿಯರು ಎದುರಿಸುತ್ತಿರುವ ಒತ್ತಡಗಳನ್ನು ಹೇಗೆ ಎದುರಿಸಬೇಕು? ಹಾಗೂ ನಿಮ್ಮ ಸಲಹೆಗಳೇನು ಎಂದು ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಉತ್ತರಿಸಿದ ಹರ್ನಾಜ್​ ಸಂಧು ಇಂದಿನ ಯುವ ಜನತೆ ಎದುರಿಸುತ್ತಿರುವ ದೊಡ್ಡ ಸಮಸ್ಯೆ ಎಂದರೆ ಅದು ಆತ್ಮವಿಶ್ವಾಸ ಅವರ ಅವರ ಮೇಲೆ ಇರುವ ನಂಬಿಕೆಯ ಕೊರತೆ. ಇತರರು ಏನೆಂದುಕೊಳ್ಳುತ್ತಾರೊ ಎನ್ನುವ ದುಗುಢ ಭಾವದಿಂದೇ ಇಂದಿಯ ಯುವಜನತೆ ತಾವು ಮಾಡುವ ಕೆಲಸದಿಂದ ವಿಮುಖರಾಗುತ್ತಿದ್ದಾರೆ ಎಂದರು.

  ಇದನ್ನೂ ಓದಿ: ಮಿಸ್​ ಯೂನಿವರ್ಸ್​ ಕಿರೀಟ ಮುಡಿಗೇರಿಸಿಕೊಂಡ ಮೆಕ್ಸಿಕೋ ಮೂಲದ ಆ್ಯಂಡಿಯಾ ಮೆಜಾ!

  ಜತಗೆ ಸಲಹೆಯಾಗಿ  ಅದರ ಬದಲು ಬೇರೆಯವರೊಂದಿಗೆ ಹೊಂದಾಣಿಕೆ ಮಾಡುವುದನ್ನು ನಿಲ್ಲಿಸಿ, ನಿಮಗೇ ನಿಮ್ಮದೇ ಅದ ಜೀವನವಿದೆ, ಕನಸಿದೆ. ಅದರೆಡೆಗೆ ಗಮನ ನೀಡಿ. ಪ್ರಪಂಚದಲ್ಲಿ ಅನೇಕ ಸಂಗತಿಗಳು ನಡೆಯುತ್ತಿರುತ್ತವೆ. ಅದನ್ನು ಚರ್ಚಿಸಿ. ನಿಮ್ಮ ಕನಸಿಗೆ ನೀವೇ ಧ್ವನಿಯಾಗಬೇಕು.  ನನ್ನನ್ನು ನಾನು ಹೆಚ್ಚು ನಂಬುತ್ತೇನೆ ಅದರಿಂದಲೇ ನಾನು ಇಂದು ಈ ಸ್ಥಾನದಲ್ಲಿದ್ದೇನೆ ಎಂದು ಸಲಹೆ ನೀಡುವ ಮೂಲಕ ತೀರಪುಗಾರರ ಪ್ರಶ್ನೆಗೆ ಹರ್ನಾಜ್​ ಸಂಧು ಉತ್ತರಿಸಿದ್ದಾರೆ.
  ಭಾರತಕ್ಕೆ ಇದು 3ನೇ ಮಿಸ್ ಯೂನಿವರ್ಸ್ ಪ್ರಶಸ್ತಿ

  ಮಿಸ್ ಯೂನಿವರ್ಸ್ ಸ್ಪರ್ಧೆ 1952ರಲ್ಲಿ ಆರಂಭವಾಗಿತ್ತು. ಆದರೆ ಭಾರತಕ್ಕೆ ಮೊದಲ ಬಾರಿ ಭುವನ ಸುಂದರಿ ಕಿರೀಟ ಒಲಿದಿದ್ದು 42 ವರ್ಷಗಳ ಬಳಿಕ. 1994ರಲ್ಲಿ ನಟಿ ಸುಷ್ಮಿತಾ ಸೇನ್ ಅವರು ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಗೆದ್ದ ಮೊದಲ ಭಾರತೀಯ ಮಹಿಳೆ ಎನಿಸಿದ್ದರು. ಅವರ ಬಳಿಕ ಲಾರಾ ದತ್ತಾ ಕಿರೀಟ ಧರಿಸಿದ್ದರು.
  Published by:ranjumbkgowda1 ranjumbkgowda1
  First published: