Miss Universe 2019: ಆಫ್ರಿಕಾದ ಕೃಷ್ಣ ವರ್ಣೆಗೆ ಸಿಕ್ತು ವಿಶ್ವ ಸುಂದರಿ ಪಟ್ಟ

Miss Universe : ಕಪ್ಪು ವರ್ಣದ ತಾರತಮ್ಯದ ಸಂಪ್ರದಾಯವನ್ನು ಮುರಿಯುವುದರ ಜೊತೆಗೆ ಮಹಿಳೆಯರ ಸಬಲೀಕರಣವಾಗಬೇಕು- ಮಿಸ್​ ಯುನಿವರ್ಸ್​ ಜೊಜಿಬಿನ್​ ತುಂಜಿ

Seema.R | news18-kannada
Updated:December 9, 2019, 1:29 PM IST
Miss Universe 2019: ಆಫ್ರಿಕಾದ ಕೃಷ್ಣ ವರ್ಣೆಗೆ ಸಿಕ್ತು ವಿಶ್ವ ಸುಂದರಿ ಪಟ್ಟ
ಮಿಸ್​ ಯುನಿವರ್ಸ್​
  • Share this:
ನವದೆಹಲಿ (ಡಿ.9): ಈ ಬಾರಿಯ 2019ರ ಸಾಲಿನ ವಿಶ್ವ ಸುಂದರಿ ಕೀರಿಟವನ್ನು ದಕ್ಷಿಣ ಆಫ್ರಿಕಾದ 26 ವರ್ಷದ ಜೊಜಿಬಿನ್​ ತುಂಜಿ ಮುಡಿಗೇರಿಸಿಕೊಂಡಿದ್ದಾರೆ.

ಅಟ್ಲಾಂಟದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೋರ್ಟ್​ ರಿಕನ್​ ಹಾಗೂ ಮೆಕ್ಸಿಕನ್​ ಅಂತಿಮ ಸ್ಪರ್ಧಿಗಳನ್ನು ಹಿಂದಿಕ್ಕಿ, ತುಂಜಿ ಆಯ್ಕೆಯಾಗಿದ್ದಾರೆ.

ಇನ್ನು ತುಂಜಿ ಈ ಹಿಂದೆ ಮಿಸ್​ ಸೌತ್​ ಆಫ್ರಿಕಾ ಆಗಿ ಕೂಡ ಆಯ್ಕೆಯಾಗಿದ್ದರು. ಬೆಳ್ಳಿ ಮಿಶ್ರಿತ ನೀಲಿ ಬಣ್ಣದಲ್ಲಿ ಕಂಗೊಳಿಸಿದ ಅವರು ಈ ಪಟ್ಟಕ್ಕೆ ಸಂಭ್ರಮ ವ್ಯಕ್ತಪಡಿಸಿದ್ದಾರೆ.


ಇನ್ನು ಈ ಕುರಿತು ಮಾತನಾಡಿದ ಅವರು, ಕಪ್ಪು ವರ್ಣದ ತಾರತಮ್ಯದ ಸಂಪ್ರದಾಯವನ್ನು ಮುರಿಯುವುದರ ಜೊತೆಗೆ ಮಹಿಳೆಯರ ಸಬಲೀಕರಣವಾಗಬೇಕು ಎಂದಿದ್ದಾರೆ.



ಹುಡುಗಿಯರ ಮೈಬಣ್ಣ, ತಲೆಗೂದಲನ್ನು ಗಮನಿಸುವ ದೇಶದಲ್ಲಿ ನಾನು ಹುಟ್ಟಿದ್ದೇನೆ. ಈ ಕಿರೀಟ ಮುಡಿಗೇರಿರುವುದರಿಂದ ಈ ಸಂಪ್ರದಾಯಕ್ಕೆ ತಿಲಾಂಜಲಿ ಇಡುವ ಸಮಯ ಬಂದಿದೆ. ಮಕ್ಕಳು ನನ್ನನ್ನು ನೋಡಬೇಕು ಅವರ ಮುಖದಲ್ಲಿ ನನ್ನತನ ಪ್ರತಿಬಿಂಬಿಸಲಿದೆ ಎಂದರು.

ವಿವಿಧ ದೇಶದ 90  ಸ್ಪರ್ಧಿಗಳು ಈ ಸ್ಪರ್ಧೆಯಲ್ಲಿ ಭಾಗಿಯಾಗಿದ್ದರು.
First published:December 9, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ