• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • ಆಕ್ಸಿಜನ್ ಸಿಲಿಂಡರ್​​​​​ ಹೊತ್ತ ಟ್ರಕ್ ಹೈಜಾಕ್ ಮಾಡಿ ಹಣಕ್ಕಾಗಿ ಬೇಡಿಕೆಯಿಟ್ಟ ಖದೀಮರು..!

ಆಕ್ಸಿಜನ್ ಸಿಲಿಂಡರ್​​​​​ ಹೊತ್ತ ಟ್ರಕ್ ಹೈಜಾಕ್ ಮಾಡಿ ಹಣಕ್ಕಾಗಿ ಬೇಡಿಕೆಯಿಟ್ಟ ಖದೀಮರು..!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಚಿನ್ನ-ಬೆಳ್ಳಿ-ಹಣದ ಹಿಂದೆ ಬಿದ್ದಿದ್ದ ದುಷ್ಕರ್ಮಿಗಳು ಈಗ ಆಕ್ಸಿಜನ್​ ಸಿಲಿಂಡರ್​ಗಳ ಹಿಂದೆ ಬಿದ್ದಿದ್ದಾರೆ. ಇಂದಿನ ಪರಿಸ್ಥಿತಿಗೆ ಹಿಡಿದ ಕೈಗನ್ನಡಿ ಇದು ಎಂದರೆ ತಪ್ಪಾಗಲಾರದು.

  • Share this:

ಲಖನೌ: ಕೊರೋನಾ 2ನೇ ಅಲೆ ಕರಾಳತೆ ದೇಶವನ್ನು ಎಂಥ ಪರಿಸ್ಥಿತಿಗೆ ತಂದು ನಿಲ್ಲಿಸಿದೆ ಎಂಬುವುದಕ್ಕೆ ಈ ಘಟನೆಯೇ ಸಾಕ್ಷಿ. ಇಷ್ಟು ದಿನ ಹಣಕ್ಕಾಗಿ ದುಷ್ಕರ್ಮಿಗಳು ಚಿನ್ನ-ಬೆಳ್ಳಿ ಕದಿಯುತ್ತಿದ್ದರು. ಕಿಡ್ನ್ಯಾಪ್​​ ಮಾಡಿ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದರು. ಈಗ ಕೊರೋನಾ ಸೋಂಕಿತರಿಗೆ ಅತ್ಯಗತ್ಯವಾಗಿರುವ ಆಮ್ಲಜನಕದ ಸಿಲಿಂಡರ್​ಗಳಿದ್ದ ಟ್ರಕ್​​ನ್ನು ಖದೀಮರು ಹೈಜಾಕ್​ ಮಾಡಿದ್ದಾರೆ. ಆಕ್ಸಿಜನ್​​ ಸಿಲಿಂಡರ್​ಗಳನ್ನು ವಾಪಸ್​ ಮಾಡಬೇಕಾದರೆ ಹಣ ಕೊಡಿ ಎಂದು ಬ್ಲ್ಯಾಕ್​ಮೇಲ್​ ಮಾಡಿದ್ದಾರೆ. ಕಳ್ಳತನ ಈಗ ಚಿನ್ನ-ಬೆಳ್ಳಿಯನ್ನು ದಾಟಿ ಆಕ್ಸಿಜನ್​​​​​​​​ ಸಿಲಿಂಡರ್​​ನ ಮುಟ್ಟಿದೆ. ಜನರನ್ನು ಒತ್ತೆಯಾಳಗಿಸಿಕೊಂಡು ಹಣಕ್ಕಾಗಿ ಡಿಮ್ಯಾಂಡ್​ ಮಾಡುತ್ತಿದ್ದ ಅಪಹರಣಕಾರರ ಈಗಿನ ಅಸ್ತ್ರ ಆಕ್ಸಿಜನ್​ ಸಿಲಿಂಡರ್​ ಆಗಿದೆ.


ದೇಶದೆಲ್ಲೆಡೆ ಆಕ್ಸಿಜನ್​ಗಾಗಿ ಹಾಹಾಕಾರ ಸೃಷ್ಟಿಯಾಗಿರೋದೇ ಇದಕ್ಕೆ ಕಾರಣ. ಸೋಂಕಿತರ ಜೀವ ಉಳಿಸೋ ಆಮ್ಲಜನಕದ ಸಿಲಿಂಡರ್​ಗೆ ಎಲ್ಲೆಲ್ಲೂ ಬೇಡಿಕೆ ಇದೆ. ಇದನ್ನೇ ಬಂಡವಾಳ ಮಾಡಿಕೊಂಡ ಖದೀಮರು ದೆಹಲಿಯಿಂದ ಉತ್ತರಾಖಂಡ್​ನ ಅಲ್ಮೋರಗೆ ಸಾಗಿಸಲಾಗುತ್ತಿದ್ದ 50 ಆಕ್ಸಿಜನ್​ ಸಿಲಿಂಡರ್​ಗಳಿದ್ದ ಟ್ರಕನ್ನು ಹೈಜಾಕ್​ ಮಾಡಿದ್ದಾರೆ. ಉತ್ತರಪ್ರದೇಶದ ಶಿಹಾನಿ ಗೇಟ್​​ ಪ್ರದೇಶದಲ್ಲಿ ಟ್ರಕನ್ನು ಅಡ್ಡಗಟ್ಟಿದ ಖದೀಮರ ಗ್ಯಾಂಗ್​ ಚಾಲಕನ ಸಮೇತ ವಾಹನವನ್ನು ಹೈಜಾಕ್​ ಮಾಡಿದೆ. ಈ ವೇಳೆ ಟ್ರಕ್​​ ಚಾಲಕ ಅಮೋದ್​ ಮೇಲೆ ಹಲ್ಲೆ ನಡೆಸಿದ್ದಾರೆ.


ಆಸ್ಪತ್ರೆಗೆ ಆಕ್ಸಿಜನ್​ ಸಿಲಿಂಡರ್​ಗಳನ್ನು ಸಾಗಿಸುತ್ತಿದ್ದು, ಸೋಂಕಿತರಿಗೆ ತುಂಬಾನೇ ಅಗತ್ಯವಿದೆ. ದಯೆ ತೋರಿ ನನ್ನನ್ನು ಹೋಗಲು ಬಿಡಿ ಎಂದು ಚಾಲಕ ಅಮೋದ್​ ಪರಿಪರಿಯಾಗಿ ಕೇಳಿಕೊಂಡರು ಖದೀಮರು ಕೇಳಿಲ್ಲ. ಕರುಣೆಯೇ ಇಲ್ಲದೇ ಆಕ್ಸಿಜನ್​ ಸಿಲಿಂಡರ್​ಗಳನ್ನು ಒತ್ತೆಯಾಗಿ ಇರಿಸಿಕೊಂಡಿದ್ದಾರೆ. ಸಿಲಿಂಡರ್​​ ಪೂರೈಕೆ ಮಾಡುತ್ತಿದ್ದ ಮಾಲೀಕನಿಗೆ ಕರೆ ಮಾಡಿ ಟ್ರಕನ್ನು ಬಿಡುಗಡೆ ಮಾಡಬೇಕಾದರೆ 1 ಲಕ್ಷ ಹಣ ಕಳುಹಿಸಿ ಎಂದು ಬೇಡಿಕೆ ಇಟ್ಟಿದ್ದಾರೆ.


ಟ್ರಕ್​ ಚಾಲಕನ ಮೇಲೆ ಹಲ್ಲೆ ನಡೆಸಿ ಅದನ್ನು ವಿಡಿಯೋ ಮಾಡಿ ಮಾಲೀಕನಿಗೆ ಕಳುಹಿಸಿದ್ದಾರೆ. ಟ್ರಕ್​, ಚಾಲಕ ಹಾಗೂ ಸಿಲಿಂಡರ್​ಗಳು​ ಬೇಕೆಂದರೆ ಕೂಡಲೇ ಹಣ ಕಳುಹಿಸಬೇಕು ಎಂದು ಬೆದರಿಸಿದ್ದಾರೆ. ನಂತರ ಖದೀಮರ ಗ್ಯಾಂಗ್​ ಚಾಲಕ ಅಮೋದನನ್ನು ಮೀರತ್​ ರಸ್ತೆ ಬಳಿ ಬಿಟ್ಟು ಹಣಕ್ಕೆ ವ್ಯವಸ್ಥೆ ಮಾಡಿಕೊಂಡು ಬಂದು ಟ್ರಕನ್ನು ಬಿಡಿಸಿಕೊಂಡು ಹೋಗಿ ಎಂದಿದ್ದಾರೆ. ಟ್ರಕ್​ ಚಾಲಕ ಕೂಡಲೇ ಸ್ಥಳೀಯ ಪೊಲೀಸ್​ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾನೆ.


ಇದನ್ನೂ ಓದಿ: Karnataka Lockdown: ನಡುರಸ್ತೆಯಲ್ಲೇ ಬೈಕ್ ಸವಾರರಿಗೆ ಬಸ್ಕಿ; ಸುಮ್​​ಸುಮ್ನೆ ಆಚೆ ಬಂದ್ರೆ ತಗ್ಲಾಕೊತೀರಾ ಹುಷಾರ್!


ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೂಡಲೇ ಕಾರ್ಯಚರಣೆ ನಡೆಸಿ ಖದೀಮರನ್ನು ಪತ್ತೆ ಹಚ್ಚಿದ್ದಾರೆ. ತಕ್ಷಣಕ್ಕೆ ಟ್ರಕನ್ನು ದೆಹಲಿಗೆ ಕಳುಹಿಸಿಕೊಟ್ಟು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಟಿಂಕು, ಜಿತೇಂದ್ರ ಕುಮಾರ್​ ಸಿಂಗ್​, ಚೌಹಾಣ್​ ಎಂದು ಗುರುತಿಸಲಾಗಿದೆ. ಸದ್ಯ ದೇಶದಲ್ಲಿ ಅತ್ಯಂತ ಅಮೂಲ್ಯವಾದ ವಸ್ತು ಆಕ್ಸಿಜನ್​ ಸಿಲಿಂಡರ್​. ಅದಕ್ಕಾಗೇ ಚಿನ್ನ-ಬೆಳ್ಳಿ-ಹಣದ ಹಿಂದೆ ಬಿದ್ದಿದ್ದ ದುಷ್ಕರ್ಮಿಗಳು ಈಗ ಆಕ್ಸಿಜನ್​ ಸಿಲಿಂಡರ್​ಗಳ ಹಿಂದೆ ಬಿದ್ದಿದ್ದಾರೆ. ಇಂದಿನ ಪರಿಸ್ಥಿತಿಗೆ ಹಿಡಿದ ಕೈಗನ್ನಡಿ ಇದು ಎಂದರೆ ತಪ್ಪಾಗಲಾರದು.

Published by:Kavya V
First published: