Cream Bun: ಬನ್​ನಲ್ಲಿ ಕ್ರೀಂ ಇಲ್ಲ ಎಂದು ಬೇಕರಿ ಮಾಲೀಕನ ಕೈ ಮುರಿದ ಪುಂಡರು

ಬನ್ ಒಳಗಡೆ ಕಡಿಮೆ ಕ್ರೀಂ ಇದ್ದ ಕಾರಣ ಸಿಟ್ಟಾದ ಯುವಕರ ಗುಂಪೊಂದು ಬೇಕರಿ ಮಾಲೀಕನ ಕೈ ಮುರಿದ ಘಟನೆ ಕೇರಳದ ಕೊಟ್ಟಾಯಂನಲ್ಲಿ ನಡೆದಿದೆ. 95 ವರ್ಷದ ವೃದ್ಧ ಸೇರಿದಂತೆ 5 ಜನರಿಗೆ ಥಳಿಸಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೊಟ್ಟಾಯಂ(ಮೇ.27): ಇತ್ತೀಚಿನ ದಿನಗಳಲ್ಲಿ ನಡೆಯುವ ಅಪರಾರಧಗಳಲ್ಲಿ ಅತ್ಯಂತ ಕ್ಷುಲ್ಲಕ ಕಾರಣಗಳು ತನಿಖೆತ ವೇಳೆಗೆ ಬೆಳಕಿಗೆ ಬರುತ್ತದೆ. ಅನ್ನ ಮಾಡದ್ದಕ್ಕೆ ಹೆಂಡತಿಯ ಕೊಲೆ, ಹೆಂಡತಿ ಮಟನ್ ಸಾರು ಮಾಡದ್ದಕ್ಕೆ ಗಂಡನಿಗೆ ಸಿಟ್ಟು ಇಂಥಹ ಸಿಲ್ಲಿ ವಿಚಾರಗಳು ದೊಡ್ಡ ಅಪರಾಧದಲ್ಲಿ ಕೊನೆಯಾಗುತ್ತದೆ. ಇದೇ ರೀತಿಯಾಗಿ ಚಿಕ್ಕಪುಟ್ಟ ಕಾರಣಗಳಿಗಾಗಿ ಕೊಲೆಯಂತಹ (Murder) ಅಪರಾಧಗಳು (Crime) ನಡೆಯುತ್ತವೆ. ಬನ್ ಒಳಗಡೆ ಕಡಿಮೆ ಕ್ರೀಂ ಇದ್ದ ಕಾರಣ ಸಿಟ್ಟಾದ ಯುವಕರ ಗುಂಪೊಂದು ಬೇಕರಿ ಮಾಲೀಕನ ಕೈ ಮುರಿದ ಘಟನೆ ಕೇರಳದ ಕೊಟ್ಟಾಯಂನಲ್ಲಿ (Kottayam) ನಡೆದಿದೆ. 95 ವರ್ಷದ ವೃದ್ಧ ಸೇರಿದಂತೆ 5 ಜನರಿಗೆ ಥಳಿಸಲಾಗಿದೆ. ವೃದ್ಧ ತಣ್ಣಗಿನ ಟೀ (Tea) ಕುಡಿದ ಕಾರಣಕ್ಕಾಗಿ ಅವರ ಮೇಲೆಯೂ ಹಲ್ಲೆ ಮಾಡಲಾಗಿದೆ. ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ (Hospital) ದಾಖಲಿಸಿದ್ದಾರೆ. ಕೊಟ್ಟಾಯಂ ಮಾರವನ್ ತುರುತ್ತು ಸ್ಥಳೀಯ ನಿವಾಸಿಗಳಾದ 6 ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಸ್ವೀಟ್​ಬನ್​ಗಳಲ್ಲಿ ಸಾಮಾನ್ಯವಾಗಿ ಕ್ರೀಂ ತುಂಬಿರಲಾಗುತ್ತದೆ. ಆದರೆ ಇಷ್ಟೇ ಪ್ರಮಾಣದಲ್ಲಿ ಎಂದೇನಿಲ್ಲ. ಒಂದಷ್ಟು ಪ್ರಮಾಣದಲ್ಲಿ ಕ್ರೀಂ ತುಂಬಿಸಿರಲಾಗುತ್ತದೆ. ಕೆಲವೊಮ್ಮೆ ಕ್ರೀಂ ಸ್ವಲ್ಪ ರಫ್ ಆಗಿ ಬದಲಾಗುತ್ತದೆ. ಆದರೆ ಕೊಟ್ಟಾಯಂನಲ್ಲಿ ಯುವಕರು ಬನ್​ನಲ್ಲಿ ಕ್ರೀಂ ಕಡಿಮೆಯಾಗಿದೆ ಎಂದೇ ಸಿಟ್ಟಾಗಿದ್ದಾರೆ.

ಇಂಥದ್ದೇ ಒಂದು ಘಟನೆಯಲ್ಲಿ ಯುವ ದಂಪತಿ ಮಧ್ಯೆ ನಡೆದ ಜಗಳ ಕೊಲೆಯಲ್ಲಿ ಕೊನೆಯಾಗಿದೆ. ಅನ್ನಕ್ಕಾಗಿ (Rice) ಪತಿ ಜಗಳ ಮಾಡಿ ಹೆಂಡತಿಯನ್ನೇ ಹೊಡೆದು ಕೊಂದಿದ್ದಾನೆ.

ಮರದ ಕೋಲಿನಿಂದ ಹೊಡೆದು ಕೊಲೆ

ಭಿವಾಂಡಿ ಥಾಣೆಯ ಭಿವಂಡಿಯಲ್ಲಿ ಮಂಗಳವಾರ ರಾತ್ರಿ 23 ವರ್ಷದ ವ್ಯಕ್ತಿಯೊಬ್ಬ ಅನ್ನ ಬೇಯಿಸಲಿಲ್ಲ ಎಂಬ ಕಾರಣಕ್ಕೆ 20 ವರ್ಷದ ಪತ್ನಿಯನ್ನು ಮರದ ಕೋಲಿನಿಂದ ಹೊಡೆದು ಕೊಂದಿದ್ದಾನೆ. 23 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ. ಆರೋಪಿಯನ್ನು ನಿಜಾಂಪುರದ ಖೋನಿ ಗ್ರಾಮದ ಬಲರಾಮ್ ಚೌಧರಿ ಚಾಲ್ ನಿವಾಸಿ ಮತ್ತು ಸ್ಕ್ರ್ಯಾಪ್ ಡೀಲರ್ ಎಂದು ಗುರುತಿಸಲಾಗಿದೆ.

ಒಂದು ವರ್ಷದ ಹಿಂದೆಯಷ್ಟೇ ಮದುವೆಯಾಗಿದ್ದ ಜೋಡಿ

ವಾಘಮಾರೆ ಒಂದು ವರ್ಷದ ಹಿಂದೆ ಜ್ಯೋತ್ಸ್ನಾಳನ್ನು ಮದುವೆಯಾಗಿದ್ದರು. ಸಣ್ಣಪುಟ್ಟ ವಿಚಾರಗಳಿಗೆ ದಂಪತಿ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತು ಎಂದು ನಿವಾಸಿಗಳು ತಿಳಿಸಿದ್ದಾರೆ.

ಪ್ರಕರಣದ ತನಿಖಾಧಿಕಾರಿ ಪೊಲೀಸ್ ಇನ್ಸ್‌ಪೆಕ್ಟರ್ ಅತುಲ್ ಲಾಂಬೆ, “ಆರೋಪಿ ಮಂಗಳವಾರ ಮನೆಗೆ ಹೋಗಿ ಅನ್ನದ ವಿಚಾರದಲ್ಲಿ ಪತ್ನಿಯೊಂದಿಗೆ ಜಗಳವಾಡಿದ್ದಾನೆ. ಕ್ಷಣಾರ್ಧದಲ್ಲಿ, ಅವರು ಸಾಯುವವರೆಗೂ ಮರದ ಕೋಲಿನಿಂದ ಅವಳನ್ನು ಹೊಡೆಯಲು ಪ್ರಾರಂಭಿಸಿದರು. ಗದ್ದಲದಿಂದ ನೆರೆಹೊರೆಯವರು ಮಧ್ಯಪ್ರವೇಶಿಸಿದರು. ಆದರೆ ಅವರಿಗೆ ಜ್ಯೋತ್ಸ್ನಾ ರಕ್ತದ ಮಡುವಿನಲ್ಲಿ ಕಂಡುಬಂದರು. ಅವರು ಆರೋಪಿಗಳನ್ನು ಹಿಡಿದಿಟ್ಟು, ನಮಗೆ ಕರೆ ಮಾಡಿ ಮಾಹಿತಿ ನೀಡಿದರು ಎಂದಿದ್ದಾರೆ.

ಇದನ್ನೂ ಓದಿ: Crime News: 25 ವರ್ಷ ಜೊತೆಯಾಗಿ ಸಂಸಾರ ಮಾಡಿದ ಗಂಡನ ಕೊಲ್ಲಲು ಸುಪಾರಿ ಕೊಟ್ಟ ಹೆಂಡತಿ! ಕಾರಣ?ಮೃತದೇಹದ ಮರಣೋತ್ತರ ಪರೀಕ್ಷೆಯಲ್ಲಿ ಮೃತರ ತಲೆ, ಹೊಟ್ಟೆ ಮತ್ತು ಬೆನ್ನುಮೂಳೆಯಲ್ಲಿ ಅನೇಕ ಗಾಯಗಳಾಗಿರುವುದು ತಿಳಿದುಬಂದಿದೆ.

ಮಟನ್ ಸಾರಿಗಾಗಿ ಕಾಲ್

ಮಧ್ಯ ರಾತ್ರಿ ಕಂಟ್ರೋಲ್ ರೂಂಗೆ ಕಾಲ್ ಮಾಡಿದ ನವೀನ್‌ ಎಂಬಾತನನ್ನು ಮರುದಿನ ಮನೆಗೇ ಬಂದು ಪೊಲೀಸರು ಅರೆಸ್ಟ್ ಮಾಡಿದ್ದರೆ. ಅಷ್ಟಕ್ಕೂ 100 ನಂಬರ್‌ಗೆ ಕಾಲ್ ಮಾಡಿ ಆತ ದೂರು ಕೊಟ್ಟಿದ್ದು ತನ್ನ ಹೆಂಡತಿ ಬಗ್ಗೆ!

Dowry Torcher: ಬಾಣಲೆಯಲ್ಲಿ ಕುದಿಯುತ್ತಿದ್ದ ಎಣ್ಣೆ ತೆಗೆದು ಅಡುಗೆ ಮಾಡ್ತಿದ್ದ ಹೆಂಡ್ತಿ ಮೇಲೆ ಸುರಿದ

ಒಂದಲ್ಲ, 6 ಬಾರಿ ಕಾಲ್ ಮಾಡಿ ಪೊಲೀಸರಿಗೆ ಟಾರ್ಚರ್

ಹೇಳಿ ಕೇಳಿ ಈ ನವೀನ್ ಕುಡುಕನಾಗಿದ್ದ. ಕಂಠ ಪೂರ್ತಿ ಮದ್ಯ ಕುಡಿದು, ಮಧ್ಯರಾತ್ರಿ ಪೊಲೀಸರಿಗೇ ಟಾರ್ಚರ್ ಕೊಟ್ಟಿದ್ದ. ಒಂದಲ್ಲ, ಎರಡಲ್ಲ, 6 ಬಾರಿ ಪೊಲೀಸ್ ಕಂಟ್ರೋಲ್ ರೂಂಗೆ ಕಾಲ್ ಮಾಡಿ ಕಿರಿಕಿರಿ ಮಾಡಿದ್ದ. ನನ್ನ ಹೆಂಡತಿಯನ್ನು ನೀವು ಅರೆಸ್ಟ್ ಮಾಡಲೇ ಬೇಕು ಅಂತ ವಾದ ಮಾಡಿದ್ದ. ಆತನ ದೂರು ಕೇಳಿ ಪೊಲೀಸರೇ ಒಮ್ಮೆ ದಂಗಾಗಿದ್ದರು.
Published by:Divya D
First published: