ಬೆಳ್ಳಿ ಗೆದ್ದ ಮೀರಾಬಾಯಿ ಚಾನು ತರಬೇತುದಾರ ವಿಜಯ್ ಶರ್ಮಾಗೆ 10 ಲಕ್ಷ ಬಹುಮಾನ ಘೋಷಣೆ

"ಒಲಿಂಪಿಕ್ ಪದಕ ವಿಜೇತರನ್ನು ಹಗಲು- ಇರುಳು ಎನ್ನದೇ ಅಣಿಗೊಳಿಸುವ  ತರಬೇತುದಾರರಿಗೆ ಬಹುಮಾನ ನೀಡಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ ಹಾಗೂ ಜವಾಬ್ದಾರಿ. ಕ್ರೀಡಾಪಟುಗಳಿಗೆ ದಿನ ಮಾರ್ಗದರ್ಶನ ನೀಡುವವರು ಅವರೇ. ಕ್ರೀಡಾಪಟುಗಳಂತೆಯೇ ಅವರು ಸಹ ಶ್ರಮಿಸುತ್ತಿದ್ದಾರೆ ಮತ್ತು ತ್ಯಾಗ ಮಾಡುತ್ತಿದ್ದಾರೆ"ಎಂದು ಐಒಎ ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ ಹೇಳಿದ್ದಾರೆ.

ಮೀರಾಬಾಯಿ ಚಾನು

ಮೀರಾಬಾಯಿ ಚಾನು

 • Share this:
  ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (ಐಒಎ) ಶನಿವಾರ ಒಲಿಂಪಿಕ್ ಪದಕ ವಿಜೇತರ ತರಬೇತುದಾರರಿಗೆ ನಗದು ಬಹುಮಾನವನ್ನು ಘೋಷಿಸಿದೆ.  ಟೋಕಿಯೋ ಒಲಂಪಿಕ್​ ಕ್ರೀಡಾಕೂಟದಲ್ಲಿ ಬೆಳ್ಳಿ ವಿಜೇತ ಮೀರಾಬಾಯಿ ಚಾನು ಅವರ ಐತಿಹಾಸಿಕ ಸಾಧನೆಯ ನಂತರ  ತರಬೇತುದಾರ ವಿಜಯ್ ಶರ್ಮಾ ಅವರಿಗೆ 10 ಲಕ್ಷ ರೂ ನಗದು ಬಹುಮಾನವನ್ನು ಘೋಷಿಸಲಾಗಿದೆ. ಒಲಂಪಿಕ್​ ಕ್ರೀಡಾಕೂಟದಲ್ಲಿ ಸ್ಪರ್ದಿಯು ಚಿನ್ನದ ಪದಕ ಗೆದ್ದರೆ ಅವರ ತರಬೇತುದಾರರಿಗೆ 12.5 ಲಕ್ಷ , ಕಂಚಿನ ಪದಕ ವಿಜೇತರಿಗೆ 7.5 ಲಕ್ಷ ರೂ ನೀಡಲಾಗುತ್ತದೆ ಎಂದು ಭಾರತೀಯ ಒಲಂಪಿಕ್​ ಸಂಸ್ಥೆ ತಿಳಿಸಿದೆ.

  "ಒಲಿಂಪಿಕ್ ಪದಕ ವಿಜೇತರನ್ನು ಹಗಲು- ಇರುಳು ಎನ್ನದೇ ಅಣಿಗೊಳಿಸುವ  ತರಬೇತುದಾರರಿಗೆ ಬಹುಮಾನ ನೀಡಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ ಹಾಗೂ ಜವಾಬ್ದಾರಿ. ಕ್ರೀಡಾಪಟುಗಳಿಗೆ ದಿನ ಮಾರ್ಗದರ್ಶನ ನೀಡುವವರು ಅವರೇ. ಕ್ರೀಡಾಪಟುಗಳಂತೆಯೇ ಅವರು ಸಹ ಶ್ರಮಿಸುತ್ತಿದ್ದಾರೆ ಮತ್ತು ತ್ಯಾಗ ಮಾಡುತ್ತಿದ್ದಾರೆ"ಎಂದು ಐಒಎ ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ ಹೇಳಿದ್ದಾರೆ. ಟೋಕಿಯೊ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತರಿಗೆ ತಲಾ 75 ಲಕ್ಷ ರೂ.ಗಳ ನಗದು ಪ್ರಶಸ್ತಿಯನ್ನು ನೀಡುವುದಾಗಿ ಐಒಎ ಗುರುವಾರ ಘೋಷಿಸಿತ್ತು,

  ಬೆಳ್ಳಿ ಪದಕ ವಿಜೇತರಿಗೆ 40 ಲಕ್ಷ ರೂ., ಕಂಚಿನ ವಿಜೇತರಿಗೆ 25 ಲಕ್ಷ ರೂ, ಹಾಗೂ ಟೋಕಿಯೊ ಒಲಿಂಪಿಕ್ ಕ್ರೀಡಾಕೂಟದಲ್ಲಿ ದೇಶವನ್ನು ಪ್ರತಿನಿಧಿಸುವ ಪ್ರತಿ ಕ್ರೀಡಾಪಟುವಿಗೆ 1 ಲಕ್ಷ ನೀಡಲಾಗುವುದು ಎಂದು ರಾಷ್ಟ್ರೀಯ ಕ್ರೀಡಾ ಪ್ರಾಧಿಕಾರ ಹೇಳಿದೆ.

  ಟೊಕಿಯೋ ಒಲಿಂಪಿಕ್ಸ್​​ನಲ್ಲಿ ಭಾರತ ಶುಭಾರಂಭ ಮಾಡಿತ್ತು. 49 ಕೆಜಿ ವಿಭಾಗದಲ್ಲಿ ಮೀರಾಬಾಯಿ ಬೆಳ್ಳಿ ಪದಕ ಗೆದ್ದುಕೊಂಡಿದ್ದರು. ಇದರೊಂದಿಗೆ ಭಾರತದ ಪದಕ ಬೇಟೆ ಶುರುವಾಗಿತ್ತು. ಇವರು ಪದಕ ಗೆಲ್ಲುತ್ತಿದ್ದಂತೆ ಒಲಂಪಿಕ್​ ಕ್ರೀಡಾ ಪ್ರಾಧಿಕಾರ ಸೇರಿದಂತೆ ರಾಷ್ಟ್ರೀಯ ಕ್ರೀಡಾ ಪ್ರಾಧಿಕಾರ ಪೈಪೋಟಿಗೆ ಬಿದ್ದಂತೆ ಕ್ರೀಡಾಪಟುಗಳಿಗೆ ಪ್ರಶಸ್ತಿ ಘೋಷಣೆಗೆ ನಿಂತಿವೆ.

  ಇದನ್ನೂ ಓದಿ: Tokyo Olympicsನಲ್ಲಿ ಭಾರತದ ಶುಭಾರಂಭ: ವೇಯ್ಟ್​​​ಲಿಫ್ಟಿಂಗ್​ನಲ್ಲಿ ಬೆಳ್ಳಿ ಪದಕ ಗೆದ್ದ ಮೀರಾಬಾಯಿ ಚಾನು!

  ಐಸಿಹಾಸಿಕ ಗೆಲುವು ದಾಖಲಿಸಿದ್ದ ಮೀರಾಬಾಯಿ ಚಾನು ಅವರು. ಒಲಿಂಪಿಕ್ಸ್​​​ ವೇಯ್ಟ್​​ ಲಿಫ್ಟಿಂಗ್​ ವಿಭಾಗದಲ್ಲಿ ಭಾರತಕ್ಕೆ ಇದು 2ನೇ ಪದಕವಾಗಿದೆ. ಕರ್ಣಂ ಮಲ್ಲೇಶ್ವರಿ ಬಳಿಕ ವೇಯ್ಟ್​​ ಲಿಫ್ಟಿಂಗ್​ನಲ್ಲಿ ಪದಕ ಪಡೆದ 2ನೇ ಮಹಿಳೆ ಎಂಬ ಹೆಗ್ಗಳಿಕೆಗೆ ಮೀರಾಬಾಯಿ ಚಾನು ಪಾತ್ರರಾಗಿದ್ದಾರೆ. 2000ರಲ್ಲಿ ನಡೆದ ಸಿಡ್ನಿ ಒಲಿಂಪಿಕ್ಸ್​​ನಲ್ಲಿ ಕರ್ಣಂ ಮಲ್ಲೇಶ್ವರಿ ಕಂಚಿನ ಪದಕ ಗೆದ್ದಿದ್ದರು.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: