ನವದೆಹಲಿ: ಹುಡುಗಿಯೊಬ್ಬಳು (Girl) ತನ್ನ ಮೇಲೆ ಅತ್ಯಾಚಾರವೆಸಗಿದ್ದಕ್ಕೆ ಆರೋಪಿ ತಾಯಿಗೆ (Accused Mother) ಶಿಕ್ಷೆ ನೀಡಿದ್ದಾಳೆ. ಈಶಾನ್ಯ ದೆಹಲಿಯ (Delhi) ಘೋಂಡಾ (Gonda) ಪ್ರದೇಶದಲ್ಲಿ ಹುಡುಗಿಯೊಬ್ಬಳು ತನ್ನ ಮೇಲೆ ಅತ್ಯಾಚಾರವೆಸಗಿದ ಕಾಮುಕನ ವಿರುದ್ಧ ಸೇಡು ತೀರಿಸಿಕೊಳ್ಳುವ ಸಲುವಾಗಿ ಆತನ ತಾಯಿಗೆ ಗುಂಡು ಹಾರಿಸಿ ಹತ್ಯೆಗೈಯ್ಯಲು ಯತ್ನಿಸಿದ್ದಾಳೆ. ಇದೀಗ ಮಹಿಳೆಗೆ ಜಿಟಿಬಿ ಆಸ್ಪತ್ರೆಯಲ್ಲಿ (GTD Hopital) ಚಿಕಿತ್ಸೆ ನೀಡಲಾಗುತ್ತಿದ್ದು, ಪೊಲೀಸರು ಹುಡುಗಿಯನ್ನು ಬಂಧಿಸಿದ್ದಾರೆ. 16 ರಿಂದ 17 ವರ್ಷದ ಹುಡುಗಿ 2021ರಲ್ಲಿ ತನ್ನ ಮೇಲೆ ಅತ್ಯಾಚಾರವೆಸಗಿದ್ದವನ ವಿರುದ್ಧ ಪೊಲೀಸರಿಗೆ (Police) ದೂರು ನೀಡಿದ್ದಳು. ಆದರೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆ ತನಗಾದ ಅನ್ಯಾಯದ ನೋವಿಗೆ ಸೇಡು ತೀರಿಸಿಕೊಳ್ಳಲು ಆರೋಪಿಯ ತಾಯಿಯ ಮೇಲೆ ಗುಂಡು ಹಾರಿಸಿದ್ದಾಳೆ.
ಹಲ್ಲೆಗೊಳಗಾದ ಮಹಿಳೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ
ಸದ್ಯ ಹಲ್ಲೆಯಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹಿಳೆಯನ್ನು ಉತ್ತರ ಘೋಂಡಾದ ಸುಬಾಷ್ ಮೊಹಲ್ಲಾದ ನಿವಾಸಿ, 50 ವರ್ಷದ ಖುರ್ಷೀದಾ ಎಂದು ಗುರುತಿಸಲಾಗಿದೆ.
ಶನಿವಾರ ಸಂಜೆ ಸುಭಾಷ್ ಮೊಹಲ್ಲಾದಲ್ಲಿ ಮಹಿಳೆಗೆ ಗುಂಡು ಹಾರಿಸಿದ್ದ ಹುಡುಗಿ
ಇನ್ನೂ ಈ ಘಟನೆ ಕುರಿತಂತೆ ಪ್ರತಿಕ್ರಿಯಿಸಿದ ಪೊಲೀಸರು, ಶನಿವಾರ ಸಂಜೆ 5:30ರ ಸುಮಾರಿಗೆ ಸುಭಾಷ್ ಮೊಹಲ್ಲಾದಲ್ಲಿ ಹುಡುಗಿಯೊಬ್ಬಳು ಮಹಿಳೆ ಮೇಲೆ ಗುಂಡು ಹಾರಿಸಿರುವುದಾಗಿ ಭಜನಪುರ ಪೊಲೀಸ್ ಠಾಣೆಗೆ ಮಾಹಿತಿ ದೊರೆಯಿತು. ನಂತರ ಕೂಡಲೇ ಸ್ಥಳಕ್ಕೆ ಆಗಮಿಸಿದ ಸ್ಟೇಷನ್ ಹೌಸ್ ಆಫೀಸರ್ ಸೇರಿದಂತೆ ಪೊಲೀಸ್ ತಂಡವು ಗಾಯಗೊಂಡ ಮಹಿಳೆಯನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಜಿಟಿಬಿ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ತಿಳಿಸಿದ್ದಾರೆ.
ಕಿರಾಣಿ ಅಂಗಡಿ ನಡೆಸುತ್ತಿದ್ದ ಆರೋಪಿ ತಾಯಿ
ಹಲ್ಲೆಗೊಳಗಾದ ಆರೋಪಿ ತಾಯಿ ಖುರ್ಷೀದಾ ಕಿರಾಣಿ ಅಂಗಡಿ ನಡೆಸುತ್ತಿದ್ದಳು. ಹೀಗೆ ಶನಿವಾರ ಸಂಜೆ ಅಂಗಡಿಗೆ ಬಂದ ಹುಡುಗಿ ಏಕಾಏಕಿ ಮಹಿಳೆ ಮೇಲೆ ಗಂಡು ಹಾರಿಸಿ ಕೊಲೆ ಮಾಡಲು ಯತ್ನಿಸಿದ್ದಾಳೆ. ಆರೋಪಿ ಹುಡುಗಿ ತನ್ನ ಮೇಲೆ ಅತ್ಯಾಚಾರ ನಡೆದಿರುವುದಾಗಿ 2021ರಲ್ಲಿ ಸೆಕ್ಷನ್ 328 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಳು ಎಂದು ತನಿಖೆ ವೇಳೆ ತಿಳಿದುಬಂದಿದೆ. ಅಲ್ಲದೇ ಖುರ್ಷೀದಾ ಪುತ್ರನ ವಿರುದ್ಧ ನಾಲ್ಕು ಪೋಕ್ಸೊ ಪ್ರಕರಣವಲ್ಲದೇ ಭಾರತೀಯ ದಂಡ ಸಂಹಿತೆಯ 376 (ಅತ್ಯಾಚಾರ) ಅಡಿಯಲ್ಲಿ ಕೇಸುಗಳಿವೆ ಎಂದು ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದ ಬಿಜೆಪಿ ನಾಯಕ
ಇತ್ತೀಚೆಗಷ್ಟೇ ಮಧ್ಯಪ್ರದೇಶದ ಬೆತುಲ್ನಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಬಿಜೆಪಿ ನಾಯಕ ರಮೇಶ್ ಗುಲ್ಹಾನೆಯನ್ನು ನ್ಯಾಯಾಲಯ ಜೈಲಿಗೆ ಕಳುಹಿಸಿದೆ. ಅತ್ಯಾಚಾರ ಪ್ರಕರಣ ಸದ್ದು ಮಾಡುತ್ತಿದ್ದಂತೆಯೇ, ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಾಗಿತ್ತು. ಅಲ್ಲದೇ ಕೋಪಗೊಂಡ ಜನರು ಆರೋಪಿಯ ಕಾರಿಗೆ ಬೆಂಕಿ ಹಚ್ಚಿದ್ದರು.
ಆರೋಪಿಯನ್ನು ನ್ಯಾಯಾಲಯಕ್ಕೆ ಒಪ್ಪಿಸಿ ಜೈಲಿಗೆ ಅಟ್ಟಿದ ಪೊಲೀಸ್ರು
ಆರೋಪಿ ವಿರುದ್ಧ ಕೊತ್ವಾಲಿ ಪೊಲೀಸರು ಈ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿದ್ದರು. ನಂತರ ಆರೋಪಿಯೇ ಮಂಗಳವಾರ ಶರಣಾಗಿದ್ದಾನೆ. ಬೇತುಲ್ ಕೊತ್ವಾಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಡಿ ಆರೋಪಿ ರಮೇಶ್ ಗುಲ್ಹಾನೆಯನ್ನು ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು, ಅಲ್ಲಿಂದ ಆತನನ್ನು ಜೈಲಿಗೆ ಕಳುಹಿಸಲಾಯಿತು.
ಇದನ್ನೂ ಓದಿ: Inspiring Story: 12ನೇ ವಯಸ್ಸಿನಲ್ಲಿ ಅತ್ಯಾಚಾರ, ಮನೆಯಲ್ಲೂ ಛೀಮಾರಿ! ಇಂದು ಏಷ್ಯಾದ ನಂಬರ್ 1 ಶ್ರೀಮಂತ ಟ್ರಾನ್ಸ್ಜೆಂಡರ್!
ಆರೋಪಿ ರಮೇಶ ಗುಲ್ಹಾನೆ ಹಿಟ್ಟಿನ ಗಿರಣಿ ನಿರ್ವಾಹಕನಾಗಿದ್ದು, ಪುರಸಭೆಯಲ್ಲಿ (ಬೇತುಲ್) ನಾಯಕನೂ ಆಗಿದ್ದಾನೆ. ಆರೋಪಿ ಎಂಟು ವರ್ಷಗಳ ಹಿಂದೆ ಬಿಜೆಪಿ ಟಿಕೆಟ್ನಲ್ಲಿ ಕೌನ್ಸಿಲರ್ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದ. ಸದ್ಯ ಆರೋಪಿ ಸಕ್ರಿಯವಾಗಿರಲಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ