ತಿರುವನಂತಪುರಂ: ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಅಕೆಯ ಮಲತಂದೆಯೇ ಅತ್ಯಾಚಾರ ಎಸಗಿ ಗರ್ಭಿಣಿಯಾಗಿಸಿದ ಘಟನೆ (Minor girl raped by step-father in Kerala) ಕೇರಳದಿಂದ ವರದಿಯಾಗಿದೆ. ಅತ್ಯಾಚಾರ ಆರೋಪಿ ತಮಿಳುನಾಡಿನವನಾಗಿದ್ದು, ಆತನನ್ನ ತಿರುವನಂತಪುರಂ ಪಲ್ಲಿಕಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅತ್ಯಾಚಾರ ಸಂತ್ರಸ್ತೆಯಾದ 13 ವರ್ಷದ ಬಾಲಕಿಯನ್ನ ಪರಿಪಲ್ಲಿಯ ಕೊಲ್ಲಂ ಸರ್ಕಾರಿ ವೈದ್ಯಕೀಯ ಕಾಲೇಜಿಗೆ (Kollam Govt Medical College) ಚೆಕಪ್ಗೆ ಹೋದಾಗ ಆ ಬಾಲಕಿ ಮೂರು ತಿಂಗಳ ಗರ್ಭಿಣಿಯಾಗಿರುವುದು ತಿಳಿದುಬಂದಿದೆ. ಆ ಬಳಿಕ ಆಕೆಯ ಮಲತಂದೆ ಅತ್ಯಾಚಾರ ಎಸಗಿದ್ದು ಈಕೆ ಗರ್ಭವತಿಯಾಗಲು ಕಾರಣ ಎಂಬ ವಿಚಾರವೂ ಬೆಳಕಿಗೆ ಬಂದಿದೆ.
ಈ ವಿಚಾರ ಬಹಿರಂಗವಾಗುತ್ತಿದ್ದಂತೆಯೇ ಆರೋಪಿಯು ತಮಿಳುನಾಡಿಗೆ ಪರಾರಿಯಾಗುತ್ತಾನೆ. ಅಷ್ಟೇ ಅಲ್ಲ, ಅಲ್ಲಿಂದ ತನ್ನ ಸ್ನೇಹಿತರ ಸಹಾಯದಿಂದ ಅರಬ್ ನಾಡಿಗೆ ಹೋಗಲು ಪ್ಲಾನ್ ಮಾಡಿರುತ್ತಾನೆ.
ಇತ್ತ, ಪರಿಪಳ್ಳಿ ಮೆಡಿಕಲ್ ಕಾಲೇಜು ಘಟನೆ ಬಗ್ಗೆ ಮಾಹಿತಿ ಬಂದ ಬಳಿಕ ಪ್ರಕರಣ ದಾಖಲಿಸಿಕೊಂಡ ಪಲ್ಲಿಕ್ಕಲ್ ಠಾಣೆ ಪೊಲೀಸರು ತನಿಖೆ ಆರಂಭಿಸುತ್ತಾರೆ. ಆರೋಪಿ ತಮಿಳುನಾಡಿನಲ್ಲಿರುವ ಸುಳಿವು ಸಿಕ್ಕುತ್ತದೆ. ಕೂಡಲೇ ಕಾರ್ಯಾಚರಣೆಗೆ ಇಳಿದು ಆತನನ್ನು ಬಂಧಿಸಿ ಕೇರಳಕ್ಕೆ ಕರೆತರುತ್ತಾರೆ.
ಆರೋಪಿಯ ಮೇಲೆ ಪೋಕ್ಸೋ ಕಾಯ್ದೆ ಸೇರಿದಂತೆ ವಿವಿಧ ಸೆಕ್ಷನ್ಗಳ ಅಡಿ ಪ್ರಕರಣ ದಾಖಲಿಸಲಾಗಿದೆ. ನಿನ್ನೆ ಆರೋಪಿಯನ್ನ ಕೋರ್ಟ್ಗೆ ಹಾಜರುಪಡಿಸಲಾಯಿತು. ಆತನನ್ನ 14 ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಕೋರ್ಟ್ ಆದೇಶ ಹೊರಡಿಸಿತು.
ಮದುವೆಗೆ ಸಿದ್ಧವಾಗುತ್ತಿದ್ದ ಯುವತಿ ಮೇಲೆ ಅತ್ಯಾಚಾರ; ಮದುವೆ ಬಳಿಕ ಗರ್ಭಿಣಿ:
ಕೇರಳದಲ್ಲಿ ಇದೇ ರೀತಿಯ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಮದುವೆಗೆ ಅಣಿಯಾಗುತ್ತಿದ್ದ ಯುವತಿ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರ ಎಸಗಿ ಆಕೆ ಗರ್ಭಿಣಿಯಾಗುವಂತೆ ಮಾಡಿದ ಘಟನೆ ಮಲಪ್ಪುರಂನಲ್ಲಿ ನಡೆದಿದೆ. ಪೊಲೀಸರು 49 ವರ್ಷದ ಅನ್ಸಾರಿ ಎಂಬ ವ್ಯಕ್ತಿಯನ್ನ ಬಂಧಿಸಿದ್ಧಾರೆ.
ಯುವತಿಯ ಮೇಲೆ ಅತ್ಯಾಚಾರ ನಡೆದಿರುವ ವಿಚಾರ ಬೆಳಕಿಗೆ ಬಂದಿದ್ದು ಆಕೆ ವಿವಾಹವಾದ ಬಳಿಕ. ಮದುವೆಗೆ ಮುನ್ನ ಆರೋಪಿ ಈಕೆಯ ಮೇಲೆ ಬಾರಿ ಬಾರಿ ಅತ್ಯಾಚಾರ ಎಸಗಿದ್ದಾನೆ. ಯುವತಿಯ ವಿವಾಹ ನಿಶ್ಚಿತವಾಗಿದ್ದರೂ ಕಾಮುಕ ತನ್ನ ಕಾಮದ ಹಪಾಹಪಿಯನ್ನ ನಿಲ್ಲಿಸಿರಲಿಲ್ಲ.
ಇದನ್ನೂ ಓದಿ: Amazon ಯಡವಟ್ಟು: ಪೌಚ್ ಆರ್ಡರ್ ಮಾಡಿದ್ರೆ ಪಾಸ್ಪೋರ್ಟ್ನ್ನೇ ಕಳಿಸಿಬಿಟ್ಟಿದೆ ಅಮೇಜಾನ್... ಯಾರದ್ದು ಇದು?
ಯುವತಿ ಮದುವೆಯಾಗಿ ಗಂಡನ ಮನೆಗೆ ಹೋದ ಸ್ವಲ್ಪ ದಿನದ ಬಳಿಕ ಅಸ್ವಸ್ಥಳಾಗುತ್ತಾಳೆ. ಆಕೆಯನ್ನ ವೈದ್ಯರ ಬಳಿಕ ಕರೆದೊಯ್ಯಲಾಗುತ್ತದೆ. ಆಗ ಈಕೆ 2 ತಿಂಗಳ ಗರ್ಭಿಣಿ ಎಂಬ ವಿಚಾರ ಗೊತ್ತಾಗುತ್ತದೆ. ಈಗಷ್ಟೇ ಮದುವೆಯಾಗಿರುವ ಈಕೆ ಎರಡು ತಿಂಗಳ ಹಿಂದೆಯೇ ಗರ್ಭಿಣಿಯಾಗಿದ್ದು ಗಂಡನ ಮನೆಯವರಿಗೆ ಸಂದೇಹ ಮೂಡಿಸುತ್ತದೆ. ಆಕೆಯ ತವರಿಗೆ ವಾಪಸ್ ಕಳುಹಿಸುತ್ತಾರೆ.
ಅತ್ತ, ಈಕೆ ಗರ್ಭಿಣಿಯಾಗಲು ಕಾರಣನಾದ ಆರೋಪಿ ಅನ್ಸಾರಿಯು ಅಬಾರ್ಷನ್ ಮಾಡಿಸುತ್ತಾನೆ. ನಂತರ, ಸಂತ್ರಸ್ತೆಯ ಬಂಧುವೊಬ್ಬನೇ ಈಕೆಯನ್ನ ಅತ್ಯಾಚಾರ ಮಾಡಿದ್ಧಾನೆಂದು ಸುಳ್ಳು ಕಥೆ ಸೃಷ್ಟಿಸುತ್ತಾನೆ. ಆಗ ಮಹಿಳೆ ನಿಜ ಬಾಯಿ ಬಿಡುತ್ತಾಳೆ. ಅನ್ಸಾರಿ ವಿರುದ್ಧ ದೂರು ದಾಖಲು ಮಾಡಲಾಗುತ್ತದೆ.
ಇದನ್ನೂ ಓದಿ: Deepavali Tragedy- ಸ್ಕೂಟರ್ನಲ್ಲಿದ್ದ ಪಟಾಕಿ ಸ್ಫೋಟ: ಅಪ್ಪ ಮಗ ಸಾವು- ಮೂವರಿಗೆ ಗಾಯ
ನೆಂಟರ ಮನೆಯಲ್ಲಿದ್ದಾಗ ಮೊದಲ ಬಾರಿ ಅತ್ಯಾಚಾರ:
ಸಂತ್ರಸ್ತೆಯ ವಿವಾಹ ನಿಶ್ಚಿಯವಾಗಿದ್ಧಾಗ ಆಕೆ ಮದುವೆಯ ಸಿದ್ಧತೆಗೆಂದು ತನ್ನ ನಂಟರೊಬ್ಬರ ಮನೆಗೆ ಹೋಗಿರುತ್ತಾಳೆ. ಆಗ ಆರೋಪಿಯು ಈಕೆ ಮನೆಯಲ್ಲಿ ಒಂಟಿಯಾಗಿರುವ ಸಂದರ್ಭ ಸಿಕ್ಕು ಅತ್ಯಾಚಾರ ಎಸಗುತ್ತಾನೆ. ಇಂಥ ನೀಚ ಕೃತ್ಯ ಕೆಲವಾರು ಬಾರಿ ಪುನಾವರ್ತನೆ ಆಗುತ್ತದೆ. ಆದರೂ ಯುವತಿ ಭಯದಿಂದ ಯಾರಿಗೂ ಹೇಳುವುದಿಲ್ಲ. ನಂತರ ನಿಗದಿಯಂತೆ ಮದುವೆ ಕಾರ್ಯ ನಡೆಯುತ್ತದೆ.
ತಾನು ಮಾಡಿದ ಕೃತ್ಯವನ್ನು ಇನ್ನೊಬ್ಬರ ತಲೆಗೆ ಕಟ್ಟುವ ಪ್ರಯತ್ನ ಮಾಡಿದಾಗ ಮಹಿಳೆ ಸತ್ಯ ಬಹಿರಂಗಪಡಿಸಿದ ಕಾರಣ ಆರೋಪಿ ಅನ್ಸಾರಿ ವಿರುದ್ಧ ರೇಪ್ ಕೇಸ್ ದಾಖಲಾಗುತ್ತದೆ. ಕೊಲ್ಲಂ ಪೊಲೀಸರು ಅನ್ಸಾರಿಯನ್ನ ಬಂಧಿಸಿ ವಿಚಾರಣೆ ನಡೆಸಿದ್ಧಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ