Relationship: ಮನೆಗೆ ಬರುತ್ತಿದ್ದ ಅಪ್ರಾಪ್ತ ಅಳಿಯನ ಮೇಲೆ 35ರ ಅತ್ತೆಗೆ ಲವ್, ಗಂಡ, ಮಕ್ಕಳಿಗೆ ಗುಡ್​ಬೈ!

ಇತ್ತೀಚೆಗೆ ಕರಂಗೋ ಬಡಾ ನಿವಾಸಿಯಾದ ಅವರ ಅಪ್ರಾಪ್ತ ಸೋದರಳಿಯ ಮನೆಗೆ ಭೇಟಿ ನೀಡಲಾರಂಭಿಸಿದ್ದ. ಈ ವೇಳೆ ಇಬ್ಬರ ನಡುವೆ ಆತ್ಮೀಯತೆ ಹೆಚ್ಚಾಗಿ ಇಬ್ಬರ ನಡುವೆ ಪ್ರೇಮಾಂಕುರವಾಗಿದೆ. ಇಬ್ಬರ ಪ್ರೀತಿ-ಸಂಬಂಧ ಎಷ್ಟು ಗಾಢವಾಯಿತು ಎಂದರೆ ಅತ್ತೆ ಗಂಡನ ಜೊತೆಗಿನ ಸಂಬಂಧ ಕಡಿದು, ಅಪ್ರಾಪ್ತನೊಡನೆ ಬಾಳಲು ನಿರ್ಧರಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಜೈಪುರ(ಸೆ.17): ಪ್ರೀತಿ ಕುರುಡು ಎಂದು ಹೇಳಲಾಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತಹ ಪ್ರಕರಣ ರಾಜಸ್ಥಾನದ ಚುರು ಜಿಲ್ಲೆಯ ಸದರ್ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಇಲ್ಲಿ ಅಪ್ರಾಪ್ತ ಬಾಲಕ ತನ್ನ 35 ವರ್ಷದ ಅತ್ತೆಯ ಪ್ರೀತಿಯಲ್ಲಿ ಬಿದ್ದಿದ್ದಾನೆ. ಮಹಿಳೆಯ ಪತಿಗೆ ಈ ವಿಷಯ ತಿಳಿದಾಗ ವಿಷಯ ಬಿಗಡಾಯಿಸಿ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಸದರ್ ಪೊಲೀಸ್ ಠಾಣೆಯಲ್ಲಿ ಪತಿಯ ಈ ಬಗ್ಗೆ ದೂರು ದಾಖಲಿಸಿದ್ದಾನೆ. ಈ ಪ್ರಕರಣ ಚುರುವಿನ ಬಿನಾಸರ್​ನಲ್ಲಿ ನಡೆದಿದೆ. ನೇಶಲ್ ಮೂಲದ ಮಹಿಳೆ ಜೊತೆ 10 ವರ್ಷಗಳ ಹಿಂದೆ ಮದುವೆಯಾಗಿರುವುದಾಗಿ ಪತಿ ಹೇಳಿದ್ದಾನೆ. ತಮಗೆ ಇಬ್ಬರು ಮಕ್ಕಳೂ ಇದ್ದಾರೆ ಎಂದಿದ್ದಾರೆ. ಇತ್ತೀಚೆಗೆ ಕರಂಗೋ ಬಡಾ ನಿವಾಸಿಯಾದ ಅವರ ಅಪ್ರಾಪ್ತ ಸೋದರಳಿಯ ಮನೆಗೆ ಭೇಟಿ ನೀಡಲಾರಂಭಿಸಿದ್ದ. ಈ ವೇಳೆ ಇಬ್ಬರ ನಡುವೆ ಆತ್ಮೀಯತೆ ಹೆಚ್ಚಾಗಿ ಇಬ್ಬರ ನಡುವೆ ಪ್ರೇಮಾಂಕುರವಾಗಿದೆ. ಇಬ್ಬರ ಪ್ರೀತಿ-ಸಂಬಂಧ ಎಷ್ಟು ಗಾಢವಾಯಿತು ಎಂದರೆ ಅತ್ತೆ ಗಂಡನ ಜೊತೆಗಿನ ಸಂಬಂಧ ಕಡಿದು, ಅಪ್ರಾಪ್ತನೊಡನೆ ಬಾಳಲು ನಿರ್ಧರಿಸಿದ್ದಾರೆ.

  ಇದನ್ನೂ ಓದಿ: ಮಗಳು ಅರೆಸ್ಟ್.. ತಾಯಿಯ ಕೊಲೆಗೆ ಆಕೆಯ 3ನೇ ಗಂಡನೊಂದಿಗೆ ಕೈ ಜೋಡಿಸಿದ್ದಳಾ?

  ಪತಿ-ಪತ್ನಿಯ ನಡುವೆ ವಿಚ್ಛೇದನವಾಗಿಲ್ಲ

  ಕೆಲವು ದಿನಗಳ ಹಿಂದೆ ತನ್ನ ಸೋದರಳಿಯನನ್ನು ಮದುವೆಯಾಗಿದ್ದೇನೆ, ಇನ್ಮುಂದೆ ತಾನು ಅವನೊಂದಿಗೇ ಇರುವುದಾಗಿ ಪತ್ನಿ ಹೇಳಿದ್ದಳೆಂದು ಸಂತ್ರಸ್ತ ಪತಿ ಹೇಳಿದ್ದಾರೆ. ಸಂತ್ರಸ್ತನ ಪ್ರಕಾರ, ಇಬ್ಬರ ನಡುವೆ ಇದುವರೆಗೆ ಯಾವುದೇ ವಿಚ್ಛೇದನವಾಗಿಲ್ಲ. ಈ ಸಂಬಂಧ ಸದರ್ ಪೊಲೀಸ್ ಠಾಣೆಗೂ ದೂರು ನೀಡಲಾಗಿದೆ. ಮದುವೆ ಕಾನೂನು ಪ್ರಕಾರ ಸರಿಯಲ್ಲ ಎಂದು ಪತಿ ಹೇಳಿದ್ದಾರೆ.

  ಅರ್ಥೈಸಲು ಯತ್ನಿಸಿದ ಕುಟುಂಬ

  ಕುಟುಂಬ ಸದಸ್ಯರು ಮಹಿಳೆ ಮತ್ತು ಅಪ್ರಾಪ್ತ ಹುಡುಗನನ್ನು ಮದುವೆಯಾಗದಂತೆ ಮನವೊಲಿಸಲು ಪ್ರಯತ್ನಿಸಿದರು, ಆದರೆ ಇಬ್ಬರೂ ಒಟ್ಟಿಗೆ ವಾಸಿಸುವ ತಮ್ಮ ನಿರ್ಧಾರವನ್ನು ಬದಲಿಸಲಿಲ್ಲ. ತಾವಿಬ್ಬರೂ ಬದುಕುವುದಾದರೂ, ಸಾಯುವುದಾದರೂ ಒಟ್ಟಿಗೆಯೇ ಎಂದು ಮಹಿಳೆ ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಆಕೆ ತನ್ನ ಮೊದಲ ಪತಿಯೊಂದಿಗೆ ಹೋಗಲು ನಿರಾಕರಿಸಿದ್ದಾಳೆ.

  ಇದನ್ನೂ ಓದಿ: ಯುವತಿ ಕೊಲೆ, ಯುವಕ ನೇಣು; ಪ್ರೇಮ ವಿಚಾರಕ್ಕೆ ನಡೆಯಿತಾ ಘೋರ ದುರಂತ..!

  ಕಾನೂನಾತ್ಮಕವಾಗಿ ಈ ಸಂಬಂಧ ಮಾನ್ಯವಾಗಿಲ್ಲ

  ಈ ಸಂಬಂಧದಲ್ಲಿ ಸಾಮಾಜಿಕ ನಷ್ಟ ಮಾತ್ರವಲ್ಲ, ಅತ್ತೆ ಮತ್ತು ಸೋದರಳಿಯನ ನಡುವೆ ಭಾರೀ ಪ್ರಮಾಣದ ವಯಸ್ಸಿನ ಅಂತರವೂ ಇದೆ. ವಿವಾಹಿತ ಪೂನಂಗೆ 35 ವರ್ಷವಾದರೆ, ಸೋದರಳಿಯನಿಗೆ ಕೇವಲ 17 ವರ್ಷ.

  ಹಳೆ ಲವ್​​​ಸ್ಟೋರಿ.. ಹೊಸ ಕೊಲೆ.. ಇಬ್ಬರಿಗೂ ಹುಡುಗಿ ಸಿಗದಿದ್ದರೂ ಬಿತ್ತು ಹೆಣ!

  ಇದೊಂದು ಕೊಲೆ ಹುಚ್ಚು ಪ್ರೀತಿಯ ಕಥೆ ಹೇಳ್ತಿದೆ.  ರುಕ್ಮೀಣಿ ನಗರದ ನಿವಾಸಿ ನೋಹಾನ್ ಧಾರವಾಡ್ಕರ್ (23) ಜ.9ರಂದು ಬೆಳಗಾವಿ ಹೊರ ವಲಯದ ಗಾಂಧಿನಗರದ ಬಳಿ ರಾಷ್ಟ್ರೀಯ ಹೆದ್ದಾರಿ 4ರ ಪಕ್ಕದ ಪಾಳುಬಿದ್ದ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದ. ಕೂಡಲೇ ಸ್ಥಳಕ್ಕೆ ತೆರಳಿದ ಮಾಳಮಾರುತಿ ಪೊಲೀಸರು ಸ್ಥಳವನ್ನ ಪರಿಶೀಲನೆ ನಡೆಸಿ ಶವವನ್ನ ಆಸ್ಪತ್ರೆಗೆ ರವಾನೆ ಮಾಡಿರುತ್ತಾರೆ. ನಗರ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ಕೂಡ ಸ್ಥಳಕ್ಕೆ ಭೇಟಿ ನೀಡಿ ಅಂದು ಮಾಹಿತಿಯನ್ನ ಪಡೆದುಕೊಂಡಿರುತ್ತಾರೆ. ಕೇಸ್ ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರು ಮದುವೆಗೆ ಹೆಣ್ಣು ಹುಡುಕುತ್ತಿದ್ದ ನೋಹಾನ್ ಕೊಲೆಯಾಗಿದ್ದು ಯಾಕೆ ಅಂತಾ ತನಿಖೆ ಆರಂಭಿಸಿರುತ್ತಾರೆ. ಕಳೆದ 24ಗಂಟೆಯಲ್ಲೇ ಮೂರು ಜನ ಆರೋಪಿಗಳನ್ನ ಬಂಧಿಸಿದ್ದು, ಬಂಧಿತರೆಲ್ಲರೂ ನೋಹಾನ್ ನ ಗೆಳೆಯರೇ ಎಂಬುವುದು ಖಚಿತವಾಗಿದೆ.
  Published by:Precilla Olivia Dias
  First published: