• Home
  • »
  • News
  • »
  • national-international
  • »
  • ಮೂವರು ಸ್ನೇಹಿತರಿಂದ 10 ವರ್ಷದ ಬಾಲಕನ ಅತ್ಯಾಚಾರ, ರಾಕ್ಷಸ ಕೃತ್ಯಕ್ಕೆ ನಲುಗಿದ ಹುಡುಗ ಸಾವು!

ಮೂವರು ಸ್ನೇಹಿತರಿಂದ 10 ವರ್ಷದ ಬಾಲಕನ ಅತ್ಯಾಚಾರ, ರಾಕ್ಷಸ ಕೃತ್ಯಕ್ಕೆ ನಲುಗಿದ ಹುಡುಗ ಸಾವು!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Delhi Rape Case: ದೆಹಲಿಯ ಸೀಲಂಪುರ್ ಪ್ರದೇಶದಲ್ಲಿ 10 ವರ್ಷದ ಮಗುವಿನ ಮೇಲೆ ಆತನ ಮೂವರು ಸ್ನೇಹಿತರು ಅದ್ಯಾವ ಪರಿಯಾಗಿ ದೌರ್ಜನ್ಯವೆಸಗಿದ್ದಾರೆಂದರೆ, ಈ ರಾಕ್ಷಸ ಕೃತ್ಯಕ್ಕೆ ನಲುಗಿದ ಬಾಲಕ ಸಾವನ್ನಪ್ಪಿದ್ದಾನೆ. 10 ರಿಂದ 12 ವರ್ಷದೊಳಗಿನ ಮೂವರು ಸ್ನೇಹಿತರು 10 ವರ್ಷದ ಬಾಲಕನ ಮೇಲೆ ಅಸ್ವಾಭಾವಿಕ ಅತ್ಯಾಚಾರ ಎಸಗಿದ್ದಾರೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಮುಂದೆ ಓದಿ ...
  • Share this:





    ನವದೆಹಲಿ(ಅ.03): ದೇಶದ ರಾಜಧಾನಿ ದೆಹಲಿಯಲ್ಲಿ (New Delhi) ಈಗ ಹೆಣ್ಮಕ್ಕಳ ಜೊತೆಗೆ ಹುಡುಗರು ಕೂಡ ಸುರಕ್ಷಿತವಾಗಿಲ್ಲ. ದೆಹಲಿಯಲ್ಲಿ ಮಗುವಿನ ಮೇಲೆ ಅಸ್ವಾಭಾವಿಕ ಅತ್ಯಾಚಾರವೆಸಗಿದ (Rape) ಭೀಕರ ಘಟನೆಯೊಂದು ಬೆಳಕಿಗೆ ಬಂದಿದೆ. ಸೀಲಾಂಪುರ ಪ್ರದೇಶದಲ್ಲಿ, 10 ವರ್ಷದ ಮಗುವಿಗೆ ಆತನ ಮೂವರು ಸ್ನೇಹಿತರು ಬಹಳಷ್ಟು ಚಿತ್ರಹಿಂಸೆ ನೀಡಿದ್ದಾರೆ, ಇದರ ಪರಿಣಾಮ ಬಾಲಕ ಸಾವನ್ನಪ್ಪಿದ್ದಾನೆ. ಮೂವರು ಆರೋಪಿಗಳು 10 ರಿಂದ 12 ವರ್ಷ ವಯಸ್ಸಿನವರಾಗಿದ್ದು, ಮೂವರೂ ತಮ್ಮ 10 ವರ್ಷದ ಸ್ನೇಹಿತನೊಂದಿಗೆ ಅಸ್ವಾಭಾವಿಕ ಅತ್ಯಾಚಾರ ಎಸಗಿದ್ದಾರೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.


    ಸುದ್ದಿ ಸಂಸ್ಥೆ ಎಎನ್‌ಐ ಪ್ರಕಾರ, ದುರ್ವರ್ತನೆಯಿಂದಾಗಿ ಬಾಲಕ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಯನ್ನು ಸೆಪ್ಟೆಂಬರ್ 18 ರಂದು ಹೇಳಲಾಗುತ್ತಿದೆ. ಇಬ್ಬರು ಆರೋಪಿ ಬಾಲಕರನ್ನು ಪೊಲೀಸರು ಬಂಧಿಸಿದ್ದು, ಮೂರನೆ ಬಾಲಕನಿಗಾಗಿ ಶೋಧ ಮುಂದುವರಿದಿದೆ. ಮೂವರು ಆರೋಪಿಗಳು ಅಪ್ರಾಪ್ತ ವಯಸ್ಸಿನವರಾಗಿರುವುದರಿಂದ ಅವರ ಗುರುತು ಬಹಿರಂಗಪಡಿಸಲು ಪೊಲೀಸರು ನಿರಾಕರಿಸಿದ್ದಾರೆ.


    ಇದನ್ನು ಓದಿ: ದೇವ್ರಿಗೆ ನನ್ನ ಬ್ರಾ ಸೈಜ್​ನದ್ದೇ ಚಿಂತೆ ಎಂದಿದ್ದ ನಟಿಗೆ ಸಂಕಷ್ಟ, ಶ್ವೇತಾ ವಿರುದ್ಧ ದಾಖಲಾಯ್ತು ಎಫ್​ಐಆರ್​!


    ನಿರ್ಭಯಾಳಂತಹ ಮಾಡಿದ ಕ್ರೌರ್ಯವನ್ನೇ ಆರೋಪಿಗಳು 10 ವರ್ಷದ ಅಮಾಯಕನ ಜೊತೆ ಮಾಡಿದ್ದಾರೆ ಎಂದು ಮಾಧ್ಯಮ ವರದಿಯಲ್ಲಿ ಹೇಳಲಾಗುತ್ತಿದೆ. ಮೊದಲು ಮೂವರು ಸ್ನೇಹಿತರು ಸೇರಿ ಅಮಾಯಕನ ಮೇಲೆ ಅಸ್ವಾಭಾವಿಕ ಅತ್ಯಾಚಾರ ಎಸಗಿ ನಂತರ ಆತನ ಖಾಸಗಿ ಅಂಗಕ್ಕೆ ರಾಡ್ ಹಾಕಿದ್ದು, ಇದರಿಂದ ಅಮಾಯಕ ತೀವ್ರವಾಗಿ ಗಾಯಗೊಂಡಿದ್ದಾನೆ ಎಂದು ಹೇಳಲಾಗಿದೆ. ಇದಾದ ಬಳಿಕ ಸಂತಯ್ರಸ್ತ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಚಿಕಿತ್ಸೆ ಪಡೆಯುತ್ತಿ. ಆದರೀಗ ಆತ ಸಾವನ್ನಪ್ಪಿರುವ ವಿಚಾರವನ್ನು ದೆಹಲಿ ಪೊಲೀಸರೇ ಖಚಿತಪಡಿಸಿದ್ದಾರೆ.


    ಅಣ್ಣನ ಮಗಳ ಮೇಲೆ ತಮ್ಮನ ಕೆಟ್ಟ ದೃಷ್ಟಿ: ಚಿಕ್ಕಪ್ಪನ ಅಟ್ಟಹಾಸಕ್ಕೆ ಗರ್ಭಿಣಿಯಾದ ಮುಗ್ಧೆ


    17 ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿ ಗರ್ಭಿಣಿಯಾಗಿಸಿದ ಆರೋಪದ ಮೇಲೆ 31 ವರ್ಷದ ವ್ಯಕ್ತಿಯನ್ನು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. TOI ವರದಿಯ ಪ್ರಕಾರ, ಸಂತ್ರಸ್ತೆ ಒಂಬತ್ತನೇ ತರಗತಿಯ ನಂತರ ಶಾಲೆ ಬಿಟ್ಟು ಮನೆಯಲ್ಲಿದ್ದಳು. ಅಲ್ಲದೇ ಆಕೆ ಕಳೆದ ಮೂರು ವರ್ಷಗಳಿಂದ ತನ್ನ ಚಿಕ್ಕಪ್ಪ ಮತ್ತು ಚಿಕ್ಕಮ್ಮನೊಂದಿಗೆ ವಾಸಿಸುತ್ತಿದ್ದಾಳೆ ಎಂದು ಸ್ಥಳೀಯ ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆಶಾ ಕಾರ್ಯಕರ್ತೆಯೊಬ್ಬರು ಗ್ರಾಮಕ್ಕೆ ಭೇಟಿ ನೀಡಿದಾಗ ಸಂತ್ರಸ್ತೆಯ ಹೊಟ್ಟೆ ಉಬ್ಬಿರುವುದು ಕಂಡು ಬಂದಿದೆ. ಈ ಬಗ್ಗೆ ವಿಚಾರಿಸಿದಾಗ ಕುಟುಂಬದೊಳಗಿನ ಲೈಂಗಿಕ ದೌರ್ಜನ್ಯದ ಘಟನೆ ಮುನ್ನೆಲೆಗೆ ಬಂದಿದೆ.


    ವಿಚಾರಣೆ ವೇಳೆ ಸಂತ್ರಸ್ತೆ ಫೆಬ್ರವರಿ ತಿಂಗಳ ಒಂದು ರಾತ್ರಿ ಮನೆಯಲ್ಲಿ ಎಲ್ಲರೂ ಮಲಗಿದ್ದಾಗ ಆರೋಪಿ ಚಿಕ್ಕಪ್ಪ ಡ್ರಾಯಿಂಗ್ ರೂಮಿನಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ತಿಳಿಸಿದ್ದಾಳೆ. ಆರೋಪಿ ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದರು. ಯಾರಿಗಾದರೂ ತಿಳಿಸಿದರೆ ಮನೆಯಿಂದ ಹೊರ ಹಾಕುತ್ತಿವುದಾಗಿ ಹೆಸರಿಸಿದ್ದರು ಎಂದಿದ್ದರು ಎನ್ನಲಾಗಿದೆ. ಚಿಕ್ಕಪ್ಪನಿಗೆ ಹೆದರಿ ಸಂತ್ರಸ್ತೆ ಯಾರಿಗೂ ಏನನ್ನೂ ಹೇಳಲಿಲ್ಲ. ಸಂತ್ರಸ್ತೆಯ ಪ್ರಕಾರ, ಆರೋಪಿ ಆಕೆಯ ಮೇಲೆ ಕನಿಷ್ಠ ಐದು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.


    ಇದನ್ನು ಓದಿ: ಗಂಡ ಇದ್ರೂ `ಆ’ ನಟನ ಜೊತೆ ನಮಿತಾ ಖುಲ್ಲಂ ಖುಲ್ಲಾ? ಮ್ಯಾಟರ್​ ತಿಳಿದು ರಾಂಗ್​ ಆದ ಪತಿ!


    ಸಂತ್ರಸ್ತೆಯ ಹೇಳಿಕೆಯ ನಂತರ, ಆಶಾ ಕಾರ್ಯಕರ್ತೆ ಬಾಲಕಿಯ ಗರ್ಭಧಾರಣೆಯ ಪರೀಕ್ಷೆಯನ್ನು ನಡೆಸಿದಾಗ ಅವಳು ಗರ್ಭಿಣಿಯಾಗಿದ್ದಾಳೆ ಎಂದು ತಿಳಿದುಬಂದಿದೆ. ಆಶಾ ಕಾರ್ಯಕರ್ತೆಯು ಪೊಲೀಸರಿಗೆ ನೀಡಿದ ಮಾಹಿತಿಯ ನಂತರ, ಆರೋಪಿಯ ವಿರುದ್ಧ ಪೋಕ್ಸೊ ಕಾಯ್ದೆಯ ವಿವಿಧ ನಿಬಂಧನೆಗಳು ಮತ್ತು ಐಪಿಸಿ ಸೆಕ್ಷನ್ 376 (2) (ಎಫ್), 376 (2) (ಎನ್), 506 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.




    Published by:Precilla Olivia Dias
    First published: