ಫ್ಲಾಯ್ಡ್ ಹತ್ಯೆ: ಮಿನಿಯಪೊಲಿಸ್ ನಗರ ಪೊಲೀಸ್ ಇಲಾಖೆ ವಿರುದ್ಧ ನಾಗರಿಕ ಹಕ್ಕು ತನಿಖೆ

ಮಿನಿಯಪೊಲಿಸ್ ನಗರದ ಬಿಳಿ ವರ್ಣೀಯ ಪೊಲೀಸನೊಬ್ಬ ಕಪ್ಪು ವರ್ಣೀಯ ವ್ಯಕ್ತಿಯನ್ನು ಅಮಾನುಷವಾಗಿ ಕೊಂದ ಘಟನೆ ಈಗ ಅಮೆರಿಕಾದ್ಯಂತ ಬೃಹತ್ ಪ್ರತಿಭಟನೆಗಳಿಗೆ ಕಾರಣವಾಗಿದೆ. ಪೊಲೀಸ್ ಇಲಾಖೆ ವಿರುದ್ಧ ಈ ಹಿಂದೆಯೂ ಬಹಳಷ್ಟು ಬಾರಿ ವರ್ಣಭೇದದ ಆರೋಪಗಳು ಬಂದಿವೆ.

news18-kannada
Updated:June 3, 2020, 5:30 PM IST
ಫ್ಲಾಯ್ಡ್ ಹತ್ಯೆ: ಮಿನಿಯಪೊಲಿಸ್ ನಗರ ಪೊಲೀಸ್ ಇಲಾಖೆ ವಿರುದ್ಧ ನಾಗರಿಕ ಹಕ್ಕು ತನಿಖೆ
ಅಮೆರಿಕದಲ್ಲಿ ಪ್ರತಿಭಟಿಸುತ್ತಿರುವ ಕಪ್ಪುವರ್ಣೀಯ
  • Share this:
ನ್ಯೂಯಾರ್ಕ್(ಜೂ. 03): ಅಮೆರಿಕಾದ್ಯಂತ ಹಾಗೂ ವಿಶ್ವದ ಹಲವೆಡೆ ತೀವ್ರ ಪ್ರತಿಭಟನೆಗಳಿಗೆ ಕಾರಣವಾಗಿರುವ ಜಾರ್ಜ್ ಫ್ಲಾಯ್ಡ್ ಹತ್ಯೆ ಪ್ರಕರಣದಲ್ಲಿ ಮಿನಿಯಾಪೊಲಿಸ್ ನಗರದ ಪೊಲೀಸ್ ಇಲಾಖೆ ತನಿಖೆ ಎದುರಿಸುತ್ತಿದೆ. ಮಿನ್ನೆಸೊಟಾ ರಾಜ್ಯದ ಆಡಳಿತವು ಪೊಲೀಸ್ ಇಲಾಖೆ ವಿರುದ್ಧ ನಾಗರಿಕ ಹಕ್ಕು ತನಿಖೆಗೆ ಆದೇಶಿಸಿದೆ. ಅಮೆರಿಕನ್ ಕಾಲಮಾನದಲ್ಲಿ ಮಂಗಳವಾರ ಮಧ್ಯಾಹ್ನ ಮೆನ್ನೆಸೊಟಾ ರಾಜ್ಯದ ಗವರ್ನರ್ ಟಿಮ್ ವಾಲ್ಱ್ ಮತ್ತು ಮಾನವ ಹಕ್ಕು ವಿಭಾಗದ ಮುಖ್ಯಸ್ಥರು ಫ್ಲಾಯ್ಡ್ ಹತ್ಯೆ ಪ್ರಕರಣದಲ್ಲಿ ಪೊಲೀಸ್ ಇಲಾಖೆ ವಿರುದ್ಧ ದೂರು ನೀಡಿರುವುದಾಗಿ ತಿಳಿಸಿದ್ದಾರೆ.

ಮಿನ್ನೆಸೊಟಾ ರಾಜ್ಯದ ಮಾನವ ಹಕ್ಕು ಆಯುಕ್ತೆ ರೆಬೆಕಾ ಲುಸೆರೋ ಅವರು ಈ ತನಿಖೆಯ ಮುಂದಾಳತ್ವ ವಹಿಸಿದ್ದಾರೆ. ಮಿನ್ನೆಪೊಲಿಸ್ ನಗರದ ಪೊಲೀಸ್ ಇಲಾಖೆ ವಿರುದ್ಧ ಬಹಳಷ್ಟು ಜನಾಂಗೀಯ ತಾರತಮ್ಯದ ಆರೋಪಗಳಿವೆ. ಈ ಎಲ್ಲಾ ಆರೋಪಗಳ ಬಗ್ಗೆಯೂ ಕೂಲಂಕಷವಾಗಿ ತನಿಖೆಗೆ ಒಳಪಡಿಸಲಾಗುತ್ತದೆ. ಪೊಲೀಸ್ ವ್ಯವಸ್ಥೆಯಲ್ಲೇ ಏನಾದರೂ ಬದಲಾವಣೆ ತರುವ ಸಾಧ್ಯತೆ ಕುರಿತು ಮಾರ್ಗೋಪಾಯಗಳನ್ನ ಈ ತನಿಖಾ ವರದಿಯಲ್ಲಿ ನೀಡುವ ಗುರಿ ಇದೆ.

ಆಫ್ರಿಕಾ ಮೂಲದ ಕಪ್ಪು ಜನಾಂಗೀಯನಾದ ಜಾರ್ಜ್ ಫ್ಲಾಯ್ಡ್ ಇತ್ತೀಚೆಗೆ ಪೊಲೀಸ್ ಕಸ್ಟಡಿಯಲ್ಲಿದ್ದಾಗ ಮೃತಪಟ್ಟಿದ್ದರು. ಪೊಲೀಸ್ ಅಧಿಕಾರಿಯೊಬ್ಬರು ಫ್ಲಾಯ್ಡ್​ನನ್ನು ನೆಲಕ್ಕೆ ಬೀಳಿಸಿ ಆತನ ಕುತ್ತಿಗೆಯನ್ನು ಮಂಡಿಯಿಂದ ಅದುಮಿ ಉಸಿರುಗಟ್ಟಿಸಿ ಸಾಯಿಸಿದ್ದರು. ತನಗೆ ಉಸಿರಾಡಲು ಕಷ್ಟವಾಗುತ್ತಿದೆ ಎಂದು ಫ್ಲಾಯ್ಡ್ ಹೇಳುತ್ತಿದ್ದರೂ ಆ ಪೊಲೀಸ್ ಅಧಿಕಾರಿ ಮಿಸುಕಾಡಲಿಲ್ಲ. ಈ ದೃಶ್ಯವಿದ್ದ ವಿಡಿಯೋವೊಂದು ವಿವಿಧ ಮಾಧ್ಯಮಗಳಲ್ಲಿ ಪ್ರಸಾರವಾಯಿತು. ದೇಶಾದ್ಯಂತ ಬಹೃತ್ ಪ್ರತಿಭಟನೆಗಳು ಹುಟ್ಟಿಕೊಂಡವು. ಕಪ್ಪು ವರ್ಣೀಯರ ಈ ಹೋರಾಟಕ್ಕೆ ಬಹಳಷ್ಟು ಬಿಳಿವರ್ಣೀಯರೂ ಬೆಂಬಲ ನೀಡಿದ್ದಾರೆ.

ಇದನ್ನೂ ಓದಿ: ಶಾಂತಿ ಪಾಲನೆ ಮಾಡಲು ಅಮೆರಿಕನ್ ಪ್ರತಿಭಟನಾಕಾರರಿಗೆ ವಿಶ್ವಸಂಸ್ಥೆ ಮುಖ್ಯಸ್ಥರ ಮನವಿ

ಫ್ಲಾಯ್ಡ್​ನನ್ನು ಉಸಿರುಗಟ್ಟಿಸಿದ್ದ ಪೊಲೀಸ್ ಅಧಿಕಾರಿ ಡೆರೆಕ್ ಚೌವಿನ್​ನನ್ನು ಇಲಾಖೆಯಿಂದ ಉಚ್ಛಾಟಿಸಲಾಗಿದೆ. ಆತನ ವಿರುದ್ಧ ಥರ್ಡ್ ಡಿಗ್ರಿ ಮರ್ಡರ್ ಆರೋಪ ಹೊರಿಸಲಾಗಿದೆ. ಈ ಘಟನೆಯಲ್ಲಿ ಜೊತೆಯಲ್ಲದ್ದ ಇತರ ಮೂವರು ಅಧಿಕಾರಿಗಳ ಮೇಲೆ ಯಾವ ಪ್ರಕರಣವೂ ದಾಖಲಾಗಿಲ್ಲ.

ಅಮೆರಿಕದ ಪೊಲೀಸ್ ವ್ಯವಸ್ಥೆಯಲ್ಲಿ ಕಪ್ಪು ವರ್ಣೀಯರ ಬಗ್ಗೆ ತಾತ್ಸಾರ ಮನೋಭಾವ ಇದೆ ಎಂಬ ಆರೋಪ ಬಹಳಷ್ಟು ಇದೆ. ಈಗ ನಡೆಯುತ್ತಿರುವ ತನಿಖೆಯಿಂದ ಪೊಲೀಸ್ ವ್ಯವಸ್ಥೆಯಲ್ಲಿ ಏನಾದರೂ ಸುಧಾರಣೆ ಆಗಬಹುದಾ ಎಂದು ಕಾದುನೋಡಬೇಕು.

First published: June 3, 2020, 5:30 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading