ದೇಶದ ಆರ್ಥಿಕತೆ ಹದಗೆಟ್ಟ ಹಿನ್ನೆಲೆ; ಖರ್ಚು ಕಡಿಮೆ ಮಾಡುವಂತೆ ಹಣಕಾಸು ಇಲಾಖೆ ಸೂಚನೆ

ದೇಶದ ಆರ್ಥಿಕತೆ ಪಾತಾಳಮುಖಿ ಆಗಿರುವುದರಿಂದ ಕೇಂದ್ರ ಸರ್ಕಾರದ ಎಲ್ಲಾ ಸಚಿವಾಲಯಗಳಿಗೆ ಪತ್ರ ಬರೆದಿರುವ ಹಣಕಾಸು ಇಲಾಖೆ 'ವೆಚ್ಚ ಕಡಿತಗೊಳಿಸಿ' ಎಂದು ಸೂಚನೆ ನೀಡಿದೆ.

ನಿರ್ಮಲಾ ಸೀತಾರಾಮನ್

ನಿರ್ಮಲಾ ಸೀತಾರಾಮನ್

  • Share this:
ನವದೆಹಲಿ(ಸೆ. 03): ಕೊರೋನಾ ಬರುವ ಮುನ್ನವೇ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿತ್ತು. ಕೊರೋನಾ ಮತ್ತು ಲಾಕ್​​ಡೌನ್​​ ಕಾರಣಗಳಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ. ಆರ್ಥಿಕ ಬಿಕ್ಕಟ್ಟು ಸಿಕ್ಕಾಪಟ್ಟೆ ಆಗಿರುವ ಹಿನ್ನಲೆಯಲ್ಲಿ ತಡವಾಗಿ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ ಈಗ ಖರ್ಚು ಕಡಿಮೆ ಮಾಡಲೊರಟಿದೆ.

ದೇಶದ ಆರ್ಥಿಕತೆ ಪಾತಾಳಮುಖಿ ಆಗಿರುವುದರಿಂದ ಕೇಂದ್ರ ಸರ್ಕಾರದ ಎಲ್ಲಾ ಸಚಿವಾಲಯಗಳಿಗೆ ಪತ್ರ ಬರೆದಿರುವ ಹಣಕಾಸು ಇಲಾಖೆ 'ವೆಚ್ಚ ಕಡಿತಗೊಳಿಸಿ' ಎಂದು ಸೂಚನೆ ನೀಡಿದೆ.

ತಮ್ಮ ಇಲಾಖೆಯ ಕೆಲಸ ಕಾರ್ಯಗಳನ್ನು ಪ್ರಚಾರ ಮಾಡುವುದರ ಭಾಗವಾಗಿ ಹೊಸ ವರ್ಷಕ್ಕೆ ಕ್ಯಾಲೆಂಡರ್ ಮಾಡಲಾಗುತ್ತಿತ್ತು. ಡೈರಿಗಳನ್ನು ಪ್ರಿಂಟ್ ಹಾಕಿಸಿ ಹಂಚಲಾಗುತ್ತಿತ್ತು.

ಅಕ್ರಮ ಮರಳು ಸಾಗಾಣಿಕೆ ಪ್ರಕರಣ: ಚಾಮರಾಜನಗರ ಡಿವೈಎಸ್ಪಿ ಮೋಹನ್ ಅಮಾನತು

ಅದೇ ರೀತಿ ಗ್ರೀಟಿಂಗ್ ಕಾರ್ಡ್, ಕಾಫಿ ಟೇಬಲ್‌ ಬುಕ್ಸ್ ಗಳನ್ನು ಮುದ್ರಿಸಿ ವಿತರಿಸಲಾಗುತ್ತಿತ್ತು. ಆದರೀಗ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಇಂಥ ಎಲ್ಲಾ ಚಟುವಟಿಕೆಗಳನ್ನು ಸ್ಥಗಿತಗೊಳಿಸುವಂತೆ ಕೇಂದ್ರ ಹಣಕಾಸು ಇಲಾಖೆಯ ಸುತ್ತೋಲೆ ತಿಳಿಸಿದೆ.

ಈ‌ ರೀತಿ ದುಬಾರಿ ಖರ್ಚನ್ನು ತಡೆಹಿಡಿದು ಅದರ ಬದಲಾಗಿ ಡಿಜಿಟಲ್ ಫಾರ್ಮೆಟ್ ಗಳಲ್ಲಿ ಪ್ರಚಾರ ಮಾಡಿ, ಡಿಜಿಟಲ್ ಗ್ರೀಟಿಂಗ್ಸ್ ಕಳಿಸಿ. ಇ ಬುಕ್ಸ್, ಇ ಕ್ಯಾಲೆಂಡರ್ ಗೆ ಆದ್ಯತೆ ಕೊಡಿ ಎಂದು ಸಲಹೆ ನೀಡಲಾಗಿದೆ. ಇದು ಒಂದು ಸಣ್ಣ ಉಪಕ್ರಮವಾಗಿದ್ದು ಆರ್ಥಿಕತೆ ಸಹಜ ಸ್ಥಿತಿಗೆ ಬರಲು ಕೇಂದ್ರ ಸರ್ಕಾರ ಇನ್ನೂ ಹಲವು ಪರಿಣಾಮಕಾರಿಯಾದ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.
Published by:Latha CG
First published: