HOME » NEWS » National-international » MINISTER WANTED 100 CRORE A MONTH WHAT SACKED MUMBAI TOP COP PARAM BIR SINGHS LETTER SAYS MAK

ತಿಂಗಳಿಗೆ 100 ಕೋಟಿ ಲಂಚ ಸಂಗ್ರಹಕ್ಕೆ ಸೂಚಿಸಿದ್ದರಾ ಮಹಾರಾಷ್ಟ್ರ ಗೃಹ ಸಚಿವ?; ಪರಮ್ ಬೀರ್ ಸಿಂಗ್ ಪತ್ರದಲ್ಲೇನಿದೆ?

ಗೃಹ ಸಚಿವರು ಸಚಿನ್ ವಾಜೆ ಅವರಿಗೆ ತಿಂಗಳಿಗೆ 100 ಕೋಟಿಗಳನ್ನು ಸಂಗ್ರಹಿಸುವ ಗುರಿ ನೀಡಿದ್ದರು. ಗುರಿ ಸಾಧಿಸಲು ಸುಮಾರು 1,750 ಬಾರ್, ರೆಸ್ಟೋರೆಂಟ್ ಮತ್ತು ಇತರ ಅಂಗಡಿ ಮುಂಗಟ್ಟುಗಳನ್ನು ಗುರಿಯಾಗಿಸಿಕೊಳ್ಳಲು ಹೇಳಿದ್ದರು ಎಂದು ಹಿರಿಯ ಅಧಿಕಾರಿ ಪರಮ್ ಬೀರ್ ಸಿಂಗ್ ಆರೋಪಿಸಿದ್ದಾರೆ.

news18-kannada
Updated:March 21, 2021, 3:56 PM IST
ತಿಂಗಳಿಗೆ 100 ಕೋಟಿ ಲಂಚ ಸಂಗ್ರಹಕ್ಕೆ ಸೂಚಿಸಿದ್ದರಾ ಮಹಾರಾಷ್ಟ್ರ ಗೃಹ ಸಚಿವ?; ಪರಮ್ ಬೀರ್ ಸಿಂಗ್ ಪತ್ರದಲ್ಲೇನಿದೆ?
ಅನಿಲ್ ದೇಶ್​ಮುಖ್, ಹಿರಿಯ ಪೊಲೀಸ್​ ಅಧಿಕಾರಿ ಪರಮ್ ಬೀರ್ ಸಿಂಗ್.
  • Share this:
ಮುಂಬೈ (ಮಾರ್ಚ್​ 21); ಮಹಾರಾಷ್ಟ್ರದ ಶಿವಸೇನೆ ಸರ್ಕಾರ ಇದೀಗ ಮತ್ತೊಂದು ಎಡವಟ್ಟಿಗೆ ಸಿಲುಕಿಕೊಂಡಿದೆ. ಮುಂಬೈನ ನಿರ್ಗಮಿತ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್, ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್‌ಮುಖ್ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದು, ಗೃಹ ಸಚಿವರು "ತಿಂಗಳಿಗೆ 100 ಕೋಟಿ ರೂಪಾಯಿ ಲಂಚದ ಹಣ ಸಂಗ್ರಹಿಸವಂತೆ ಪೊಲೀಸ್​ ಅಧಿಕಾರಿಗಳಿಗೆ ಸೂಚಿಸಿದ್ದರು" ಎಂದು ಆರೋಪಿಸುವ ಮೂಲಕ ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ. ರಾಜ್ಯದ ಹಿರಿಯ ಐಪಿಎಸ್ ಅಧಿಕಾರಿಯೂ ಆಗಿರುವ ಪರಮ್ ಬೀರ್ ಸಿಂಗ್ ಮುಖ್ಯಮಂತ್ರಿಗೆ ಪತ್ರ ಬರೆಯುವ ಮೂಲಕ ಈ ಆರೋಪವನ್ನು ಮುಂದಿಟ್ಟಿದ್ದು, ಇದೀಗ ಮಹಾರಾಷ್ಟ್ರದ ಪ್ರಮುಖ ವಿರೋಧ ಪಕ್ಷವಾದ ಬಿಜೆಪಿ ಗೃಹ ಸಚಿವ ಅನಿಲ್ ದೇಶ್​ಮುಖ್​ ರಾಜೀನಾಮೆಗೆ ಆಗ್ರಹಿಸಿದೆ.

ಇತ್ತೀಚೆಗೆ ಮುಂಬೈ ಮಹಾನಗರದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರ ಮನೆಯ ಬಳಿ ಪತ್ತೆಯಾದ ಸ್ಫೋಟಕ ಕಾರಿನ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಪೊಲೀಸ್ ಅಧಿಕಾರಿ ಸಚಿನ್ ವಾಜೆ ವಿರುದ್ಧದ ತನಿಖೆಯಲ್ಲಿ, ಅಸಮರ್ಪಕ ತನಿಖೆ ಎಂದು ಐಪಿಎಸ್ ಅಧಿಕಾರಿ ಪರಮ್ ಬೀರ್ ಸಿಂಗ್ ಅವರನ್ನು ಗೃಹ ರಕ್ಷಕ ದಳಕ್ಕೆ ವರ್ಗಾಯಿಸಲಾಗಿತ್ತು. ಹೀಗಾಗಿ ಅಸಮಾಧಾನಗೊಂಡಿರುವ ಪರಮ್​ ಬೀರ್​ ಸಿಂಗ್ ಮುಖ್ಯಮಂತ್ರಿಗೆ ಅನಿಲ್​ ದೇಶ್​ಮುಖ್ ವಿರುದ್ಧ ಪತ್ರ ಬರೆದಿದ್ದಾರೆ.

ಈ ಪತ್ರದಲ್ಲಿ, "ಮುಂಬೈ ಪೊಲೀಸರ ಅಪರಾಧ ವಿಭಾಗದ ಅಪರಾಧ ಗುಪ್ತಚರ ಘಟಕದ ಮುಖ್ಯಸ್ಥರಾಗಿದ್ದ ಸಚಿನ್ ವಾಜೆ ಅವರನ್ನು ಮಹಾರಾಷ್ಟ್ರದ ಗೌರವಾನ್ವಿತ ಗೃಹ ಸಚಿವ ಅನಿಲ್ ದೇಶ್‌ಮುಖ್ ಅವರು ಕಳೆದ ಕೆಲವು ತಿಂಗಳುಗಳಲ್ಲಿ ಹಲವಾರು ಬಾರಿ ತಮ್ಮ ಅಧಿಕೃತ ನಿವಾಸ ದಯಾನೇಶ್ವರಕ್ಕೆ ಕರೆದಿದ್ದರು. ಗೃಹ ಸಚಿವರು ಹಣ ಸಂಗ್ರಹಿಸಲು ಪದೇ ಪದೇ ಸೂಚನೆ ನೀಡುತ್ತಿದ್ದರು" ಎಂದು ಪತ್ರದಲ್ಲಿ ಆರೋಪಿಸಲಾಗಿದೆ.

"ಮಾನ್ಯ ಗೃಹ ಸಚಿವರು ಸಚಿನ್ ವಾಜೆ ಅವರಿಗೆ ತಿಂಗಳಿಗೆ 100 ಕೋಟಿಗಳನ್ನು ಸಂಗ್ರಹಿಸುವ ಗುರಿ ನೀಡಿದ್ದರು. ಗುರಿ ಸಾಧಿಸಲು, ಮಾನ್ಯ ಗೃಹ ಸಚಿವರು ವಾಜೆ ಅವರಿಗೆ ಸುಮಾರು 1,750 ಬಾರ್, ರೆಸ್ಟೋರೆಂಟ್ ಮತ್ತು ಇತರ ಅಂಗಡಿ ಮುಂಗಟ್ಟುಗಳನ್ನು ಗುರಿಯಾಗಿಸಿಕೊಳ್ಳಲು ಹೇಳಿದ್ದರು. ಮುಂಬೈನಲ್ಲಿ ಮತ್ತು ಪ್ರತಿಯೊಂದರಿಂದ ತಲಾ 2-3 ಲಕ್ಷವನ್ನು ಸಂಗ್ರಹಿಸಿದರೆ, ಮಾಸಿಕ-40-50 ಕೋಟಿ ಸಂಗ್ರಹವನ್ನು ಸಾಧಿಸಬಹುದಾಗಿದೆ. ಉಳಿದ ಸಂಗ್ರಹವನ್ನು ಇತರರಿಂದ ಮಾಡಬಹುದೆಂದು ಮಾನ್ಯ ಗೃಹ ಸಚಿವರು ಸೂಚಿಸಿದ್ದರು" ಎಂದು ಪರಮ್ ಬೀರ್‌ ಸಿಂಗ್ ಆರೋಪಿಸಿದ್ದಾರೆ.

ಇದನ್ನೂ ಓದಿ: PM Modi: ಕೊರೋನಾ ಸೋಂಕಿನಿಂದ ಶೀಘ್ರ ಗುಣಮುಖರಾಗುಂತೆ ಪಾಕ್​ ಪ್ರಧಾನಿಗೆ ಹಾರೈಸಿದ ಮೋದಿ

"ವಾಜೆ ಅದೇ ದಿನ ನನ್ನ ಕಚೇರಿಗೆ ಬಂದು ಎಲ್ಲವನ್ನು ನನಗೆ ತಿಳಿಸಿದರು. ಈ ಚರ್ಚೆಯಿಂದ ನಾನು ಆಘಾತಕ್ಕೊಳಗಾಗಿದ್ದೆ ಮತ್ತು ಪರಿಸ್ಥಿತಿಯನ್ನು ಹೇಗೆ ಎದುರಿಸಬೇಕೆಂದು ಯೋಚಿಸುತ್ತಿದ್ದೆ" ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಅದರೆ, ಐಪಿಎಸ್ ಅಧಿಕಾರಿ ಪರಮ್ ಬೀರ್‌ ಸಿಂಗ್ ಆರೋಪವನ್ನು ಸುಳ್ಳು ಎಂದಿರುವ ಗೃಹ ಸಚಿವ ಅನಿಲ್ ದೇಶ್‌ಮುಖ್, ಮಾನನಷ್ಟ ಮೊಕದ್ದಮೆ ಹೂಡುವುದಾಗಿ ತಿಳಿಸಿದ್ದಾರೆ. “ಪರಮ್ ಬೀರ್ ಸಿಂಗ್, ತನ್ನನ್ನು ಉಳಿಸಿಕೊಳ್ಳಲು ಈ ಸುಳ್ಳು ಆರೋಪವನ್ನು ಮಾಡಿದ್ದಾರೆ. ಮುಂದಿನ ಕಾನೂನು ಕ್ರಮಗಳಿಂದ ತನ್ನನ್ನು ರಕ್ಷಿಸಿಕೊಳ್ಳಲು ಇಂತಹ ಮಾತುಗಳನ್ನು ಆಡಿದ್ದಾರೆ" ಎಂದು ತಿಳಿಸಿದ್ದಾರೆ.
Published by: MAshok Kumar
First published: March 21, 2021, 3:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories